ಗ್ರೀಸ್ನಲ್ಲಿರುವ ಯೆಹೋವನ ಸಾಕ್ಷಿಗಳಿಗೆ ಇನ್ನೊಂದು ವಿಜಯ
ಅಕ್ಟೋಬರ್ 6, 1995ರಂದು, ಆ್ಯಥೆನ್ಸ್ನಲ್ಲಿನ ಮೂರು ನ್ಯಾಯಾಧೀಶರುಗಳುಳ್ಳ ಕೋರ್ಟಿನಲ್ಲಿ, ಯೆಹೋವನ ಸಾಕ್ಷಿಗಳ ಇಬ್ಬರು ಪೂರ್ಣ ಸಮಯದ ಶುಶ್ರೂಷಕರನ್ನೊಳಗೊಂಡ ಒಂದು ಶಾಸನಬದ್ಧ ಮೊಕದ್ದಮೆಯು ಆಲಿಸಲ್ಪಟ್ಟಿತು. ಆರೋಪವು ಮತಪರಿವರ್ತನೆಯ ಕುರಿತಾಗಿತ್ತು ಹಾಗೂ ಸಾಕ್ಷಿಗಳು ಪೊಲೀಸ್ ಅಧಿಕಾರಿಯೊಬ್ಬನ ಮನೆಯನ್ನು ಸಂದರ್ಶಿಸಿದ ಬಳಿಕ, ಅವನಿಂದ ಈ ದಾವೆ ಹೂಡಲ್ಪಟ್ಟಿತ್ತು.
ಅಧ್ಯಕ್ಷತೆ ವಹಿಸಿದ ನ್ಯಾಯಾಧೀಶೆಯಿಂದ ಕೇಳಲ್ಪಟ್ಟ ಪ್ರಶ್ನೆಗಳು, ಅವರು ಯೆಹೋವನ ಸಾಕ್ಷಿಗಳ ಕೆಲಸದಲ್ಲಿ ಬಹಳ ಆಸಕ್ತರಾಗಿದ್ದರೆಂದು ತೋರಿಸಿದವು. ಉದಾಹರಣೆಗೆ, ಅವರು ಕೇಳಿದ್ದು: “ಎಷ್ಟು ಸಮಯದಿಂದ ನೀವು ಈ ಕೆಲಸವನ್ನು ಮಾಡುತ್ತಿದ್ದೀರಿ? ವರುಷಗಳಿಂದ ಜನರು ನಿಮ್ಮನ್ನು ಹೇಗೆ ಉಪಚರಿಸುತ್ತಿದ್ದಾರೆ? ನಿಮ್ಮ ಕೆಲಸಕ್ಕೆ ಯಾವ ರೀತಿಯ ಪ್ರತಿಕ್ರಿಯೆಯಿತ್ತು? ನೀವು ಜನರ ಬಳಿಗೆ ಹೋಗಿ ಏನು ಹೇಳುತ್ತೀರಿ?” ಕೊಡಲ್ಪಟ್ಟ ಉತ್ತಮ ಸಾಕ್ಷಿಯನ್ನು, ಕೋರ್ಟಿನಲ್ಲಿ ಉಪಸ್ಥಿತರಿದ್ದವರೆಲ್ಲರು ಶ್ರದ್ಧೆಯಿಂದ ಆಲಿಸಿದರು.
ಸಾಕ್ಷಿಗಳ ಆಶ್ಚರ್ಯಕ್ಕೆ, ಅಭಿಯೋಕ್ತಿ ವಕೀಲರು ಸಹ ಅವರ ಪರವಾಗಿ ಮಾತನಾಡಿದರು. ಅವರು, ತಮ್ಮ ಮುಕ್ತಾಯದ ಭಾಷಣದಲ್ಲಿ ಸೂಚಿಸಿದ್ದು, “ಯೆಹೋವನ ಸಾಕ್ಷಿಗಳಿಗೆ, ಅವರ ದೇವರಲ್ಲಿ ಭರವಸೆಯಿಡುವಂತೆಯೂ, ಆರಾಧಿಸುವಂತೆಯೂ ಮಾತ್ರವಲ್ಲ ಅವರ ನಂಬಿಕೆಯನ್ನು ಮನೆಯಿಂದ ಮನೆಗೆ, ಸಾರ್ವಜನಿಕ ಸ್ಥಳಗಳಲ್ಲಿ, ಬೀದಿಗಳಲ್ಲಿ, ಸಾರುವ ಹಾಗೂ ಬಯಸುವುದಾದರೆ ಅವರ ಪತ್ರಿಕೆಯನ್ನು ಉಚಿತವಾಗಿ ಹಂಚುವಂತಹ ಸಂವಿಧಾನಾತ್ಮಕ ಹಕ್ಕಿದೆ.” ಅಭಿಯೋಕ್ತಿ ವಕೀಲರು, ಕೋರ್ಟುಗಳು ಮತ್ತು ಕೌನ್ಸಿಲ್ ಆಫ್ ಸ್ಟೇಟ್ ಹೊರಡಿಸಿದ ವಿವಿಧ ಬಿಡುಗಡೆಯ ತೀರ್ಮಾನಗಳನ್ನು ಉಲ್ಲೇಖಿಸಿದರು. ಅವರು, ಮಾನವ ಹಕ್ಕುಗಳ ಯೂರೋಪಿಯನ್ ಕೋರ್ಟ್ನಿಂದ ಯೆಹೋವನ ಸಾಕ್ಷಿಗಳ ಪರವಾಗಿ ನಿರ್ಣಯಿಸಲ್ಪಟ್ಟ, ಕೋಕೀನಾಕೀಸ್ ಹಾಗೂ ಗ್ರೀಸ್ ನಡುವಿನ ಮೊಕದ್ದಮೆಯನ್ನೂ ಉಲ್ಲೇಖಿಸಿದರು.a ಅಭಿಯೋಕ್ತಿ ಎಚ್ಚರಿಸಿದ್ದು, “ದಯವಿಟ್ಟು ಗಮನಿಸಿರಿ, ಈ ಮೊಕದ್ದಮೆಯಲ್ಲಿ ಗ್ರೀಸ್ ದಂಡವನ್ನೂ ಕೊಟ್ಟಿತು. ಆದುದರಿಂದ, ಅಂತಹ ಮೊಕದ್ದಮೆಗಳನ್ನು ತೀರ್ಮಾನಿಸುವಂತೆ ಕೇಳಿಕೊಳ್ಳಲ್ಪಟ್ಟಾಗ ನಾವು ಬಹಳ ಜಾಗರೂಕರಾಗಿರಬೇಕು. ವಾಸ್ತವವಾಗಿ, ಮೊದಲಾಗಿ ಈ ಮೊಕದ್ದಮೆಗಳು ಕೋರ್ಟ್ಗಳಿಗೆ ತರಲ್ಪಡಲೇಬಾರದು.”
ಅಭಿಯೋಕ್ತಿಯ ಭಾಷಣದ ನಂತರ, ಸಾಕ್ಷಿಗಳ ವಕೀಲರಿಗೆ ಹೇಳಲು ಹೆಚ್ಚೇನೂ ಉಳಿದಿರಲಿಲ್ಲ. ಆದರೂ, ಅವರು ಈ ಸಂದರ್ಭವನ್ನು, ಮತಪರಿವರ್ತನೆಯ ನಿಯಮವು ಸಂವಿಧಾನದ ವಿರುದ್ಧವಾಗಿದೆ ಹಾಗೂ ಅದು ಒಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರೀಸನ್ನು ಪೇಚಾಟಕ್ಕೆ ಹಾಕಿದೆ ಎಂಬುದನ್ನು ಒತ್ತಿ ಹೇಳಲು ಉಪಯೋಗಿಸಿದರು.
ಅಧ್ಯಕ್ಷ ನ್ಯಾಯಾಧೀಶೆ ಇತರ ಇಬ್ಬರು ನ್ಯಾಯಾಧೀಶರ ಕಡೆಗೆ ನೋಟಹರಿಸಿದರು. ಮತ್ತು ಆ ಸಹೋದರ ಸಹೋದರಿ ಸರ್ವಾನುಮತದಿಂದ ಬಿಡುಗಡೆಗೊಳಿಸಲ್ಪಟ್ಟರು. ಒಂದು ಗಂಟೆ ಹತ್ತು ನಿಮಿಷಗಳ ಕಾಲಾವಧಿಯ ಆ ವಿಚಾರಣೆಯು, ಯೆಹೋವನ ಹೆಸರಿಗೂ ಆತನ ಜನರಿಗೂ ಒಂದು ವಿಜಯವಾಗಿತ್ತು.
ಕೋಕೀನಾಕೀಸ್ ಮೊಕದ್ದಮೆಯು, ಮಾನವ ಹಕ್ಕುಗಳ ಯೂರೋಪಿಯನ್ ಕೋರ್ಟಿನಲ್ಲಿ ಆಲಿಸಲ್ಪಟ್ಟ ನಂತರ, ಇದು ಮತಪರಿವರ್ತನೆಯ ಮೊಕದ್ದಮೆಗಳನ್ನೊಳಗೊಂಡಿರುವ ನಾಲ್ಕನೇ ಬಿಡುಗಡೆಯಾಗಿದೆ. ಗ್ರೀಸ್ನಲ್ಲಿರುವ ಯೆಹೋವನ ಸಾಕ್ಷಿಗಳು, ತಮ್ಮ ಸಾರುವಿಕೆಗೆ ಸಂಬಂಧಿಸಿರುವ ಸಮಸ್ಯೆಗಳು ಈಗ ಕಾರ್ಯತಃ ಇಲ್ಲದೆ ಹೋಗಿರುವುದಕ್ಕಾಗಿ ಮತ್ತು ಅಡ್ಡಿಯಿಲ್ಲದೆ ಕೆಲಸವನ್ನು ಮುಂದುವರಿಸಸಾಧ್ಯವಿರುವುದಕ್ಕಾಗಿ ಸಂತೋಷಿಸುತ್ತಾರೆ.
[ಅಧ್ಯಯನ ಪ್ರಶ್ನೆಗಳು]