ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 1/15 ಪು. 32
  • ಎಲ್ಲವೂ ದೈವಿಕ ಪ್ರಕಟನೆಗಳೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಲ್ಲವೂ ದೈವಿಕ ಪ್ರಕಟನೆಗಳೋ?
  • ಕಾವಲಿನಬುರುಜು—1997
ಕಾವಲಿನಬುರುಜು—1997
w97 1/15 ಪು. 32

ಎಲ್ಲವೂ ದೈವಿಕ ಪ್ರಕಟನೆಗಳೋ?

ಪವಿತ್ರ ಬೈಬಲನ್ನು ಪ್ರೇರಿಸಿದ ದೇವರ ಆತ್ಮವು, ಕೆಲವರು ಪವಿತ್ರವೆಂದೆಣಿಸುವ ಇತರ ಪುಸ್ತಕಗಳನ್ನು ಪ್ರೇರಿಸುವುದಕ್ಕೂ ಕಾರಣವಾಗಿದೆಯೋ? (2 ತಿಮೊಥೆಯ 3:16) ಈ ಪ್ರಶ್ನೆಯು ಇಟಲಿಯ ಜೆಸ್ಯುಯಿಟ್‌ ಪತ್ರಿಕೆ (ಲಾ ಚಿವಿಲ್ಟಾ ಕಾಟೋಲಿಕಾ)ಯಿಂದ ಎಬ್ಬಿಸಲ್ಪಟ್ಟಿತು. ಅದು “[ವ್ಯಾಟಿಕನ್‌] ರಾಜ್ಯದ ಕಾರ್ಯದರ್ಶಿ ಇಲಾಖೆಯ ಉಸ್ತುವಾರಿಯ ಕೆಳಗೆ ಪ್ರಕಾಶಿಸಲ್ಪಟ್ಟು, ಹೀಗೆ ಕ್ಯಾಥೊಲಿಕ್‌ ಕ್ಷೇತ್ರಗಳಲ್ಲಿ ಅಧಿಕೃತವೆಂದೆಣಿಸಲ್ಪಟ್ಟಿತು.

“ದೇವರು, ಪವಿತ್ರ ಆತ್ಮದ ಕ್ರಿಯೆಯ ಮುಖಾಂತರ ವಾಕ್ಯದ ಬೀಜವನ್ನು ಯೆಹೂದ್ಯೇತರ ಮತ್ತು ಕ್ರೈಸ್ತೇತರ ಸಂಪ್ರದಾಯದ ಕೆಲವು ಪವಿತ್ರ ಪುಸ್ತಕಗಳಲ್ಲಿಯೂ ಚೆದರಿಸಿದನು,” ಎಂಬುದಾಗಿ ಆ ಜೆಸ್ಯುಯಿಟ್‌ ಪತ್ರಿಕೆಯು ಹೇಳಿತು. ಜೆಸ್ಯುಯಿಟ್‌ರಿಗಾದರೋ, ಸೊರೊಆಸ್ಟರಿಯನ್‌ ಅವೆಸ್ಟ ಅಥವಾ ಕನ್‌ಫ್ಯೂಷಿಯನ್‌ ನಾಲ್ಕು ಪುಸ್ತಕಗಳಂಥ “ಪವಿತ್ರ” ಪುಸ್ತಕಗಳು, “ಪವಿತ್ರ ಆತ್ಮದ ಅಲ್ಪಸ್ವಲ್ಪ ಪ್ರಭಾವವಿದ್ದವರಿಂದ” ಬರೆಯಲ್ಪಟ್ಟವು. “ಆದುದರಿಂದ, ಒಂದಿಷ್ಟು ‘ದೈವಿಕ ಪ್ರಕಟನೆ’ಯು ಅವುಗಳಲ್ಲಿ ಅಡಕವಾಗಿದೆ.”

ಆದರೂ ಲೇಖನವು ಸ್ಪಷ್ಟೀಕರಣವನ್ನು ಮಾಡುತ್ತದೆ. “ಅಂಥ ಪವಿತ್ರ ಪುಸ್ತಗಳು ಒಳಗೊಂಡಿರುವ ಎಲ್ಲ ವಿಷಯಗಳೂ ದೇವರ ವಾಕ್ಯವಾಗಿರುವುದಿಲ್ಲ” ಎಂದು ಅದು ಹೇಳುತ್ತದೆ. ಈ ಪುಸ್ತಕಗಳನ್ನು ಬರೆದವರು, ತಾವು ಜೀವಿಸಿ, ಕ್ರಿಯೆಗೈದ “ಬಹುದೇವತಾರಾಧನೆಯ ಪರಿಸರದ ಅಥವಾ ತಾತ್ತ್ವಿಕ ಪರಿಸರದ ಪ್ರಭಾವವನ್ನು ಅನುಭವಿಸಿ”ದ್ದಿರಬಹುದು ಎಂದು ಕೂಡಿಸುತ್ತದೆ. ಲಾ ರೆಪೂಬ್‌ಲಿಕಾ ಎಂಬ ಇಟಲಿಯ ವಾರ್ತಾಪತ್ರಿಕೆಗಾಗಿರುವ ವ್ಯಾಟಿಕನ್‌ ವಿಷಯಗಳ ಬಾತ್ಮಿದಾರರಾದ ಮಾರ್‌ಕೋ ಪೊಲಿಟಿಗನುಸಾರ, ಈ ನಂಬಿಕೆಯು 1986ರಲ್ಲಿ ಅಸಿಸೀಯಲ್ಲಿ ಜಾನ್‌ ಪೌಲ್‌ II ಅವರಿಂದ ಹುರುಪಿನಿಂದ ಪ್ರವರ್ಧಿಸಲ್ಪಟ್ಟಂತಹ ಹಲವಾರು ಮಿಶ್ರನಂಬಿಕೆಯ ಪ್ರಾರ್ಥನಾ ಕೂಟಗಳ ಆತ್ಮವನ್ನು ಪುನಃ ಪ್ರಾರಂಭಿಸುತ್ತಾ, “ಹಿಂದೆ ಯೋಚಿಸಲಸಾಧ್ಯವಾದ ಕ್ಯಾಥೊಲಿಕ್‌ ಚರ್ಚು ಹಾಗೂ ಮಹಾ ಐತಿಹಾಸಿಕ ಧರ್ಮಗಳ ನಡುವಿನ ಸಂಬಂಧಗಳಲ್ಲಿನ ಸಾಧ್ಯತೆಗಳನ್ನು ಅನುಮತಿಸುತ್ತದೆ.”

ಯೆಹೋವನು ಅವ್ಯವಸ್ಥೆಯ ಮತ್ತು ಗಲಿಬಿಲಿಯ ದೇವರಾಗಿರುವುದಿಲ್ಲ. (1 ಕೊರಿಂಥ 14:33) ಆದುದರಿಂದ ಆತನ ಪವಿತ್ರ ಆತ್ಮ ಅಥವಾ ಕಾರ್ಯಕಾರಿ ಶಕ್ತಿಯು, ಆತನ ವಾಕ್ಯವಾದ ಬೈಬಲಿನೊಂದಿಗೆ ಪೂರ್ಣ ಸಾಮರಸ್ಯದಲ್ಲಿರದ ಯಾವುದೇ ಪುಸ್ತಕಗಳ ಒಂದು ಭಾಗವನ್ನು ಕೂಡ ಪ್ರೇರಿಸುವುದು ಎಂಬುದರ ಕುರಿತಾಗಿ ನಾವು ಯೋಗ್ಯವಾಗಿ ತೀರ್ಮಾನಿಸಸಾಧ್ಯವಿಲ್ಲ. ವಿಭಿನ್ನ “ಧಾರ್ಮಿಕ ಸಂಪ್ರದಾಯಗಳ” ನಡುವೆ ವಿಶ್ವಕ್ರೈಸ್ತ ಸಮೀಪಿಸುವಿಕೆಗಳನ್ನು ಉತ್ತೇಜಿಸುವ ಬದಲು, “ಒಂದೇ ನಿರೀಕ್ಷೆ . . . , ಒಬ್ಬನೇ ಕರ್ತನು, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ”ವಿದೆ ಎಂದು ಕ್ರೈಸ್ತ ಅಪೊಸ್ತಲ ಪೌಲನು ಬರೆದನು.—ಎಫೆಸ 4:4, 5, NW.

ಆ “ಒಂದೇ ನಿರೀಕ್ಷೆ”ಯು ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವುದರ ಕೇಂದ್ರತತ್ತ್ವವಾಗಿರುತ್ತದೆ. ಬೈಬಲು ಸೂಕ್ತವಾಗಿಯೇ ಹೇಳುವುದು: “ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ.” (ಅ. ಕೃತ್ಯಗಳು 4:12) ಇತರ ಯಾವುದೇ “ಪವಿತ್ರ ಪುಸ್ತಕ”ವು, ದೇವರ ಉದ್ದೇಶಗಳನ್ನು ನೆರವೇರಿಸುವುದರಲ್ಲಿ ಯೇಸುವನ್ನು ಕೇಂದ್ರ ವ್ಯಕ್ತಿಯನ್ನಾಗಿ ಸಾದರಪಡಿಸುವುದಿಲ್ಲ. ಬೈಬಲನ್ನು ದೇವರ ವಾಕ್ಯವೆಂದು ನಾವು ಸ್ವೀಕರಿಸುವಲ್ಲಿ ಮಾತ್ರವೇ ಅದು ರಕ್ಷಣೆಗಾಗಿ ಯೆಹೋವ ದೇವರ ಪ್ರೀತಿಪೂರ್ವಕ ಒದಗಿಸುವಿಕೆಯ ಕುರಿತಾಗಿ ನಮಗೆ ಕಲಿಸಬಲ್ಲದು.—ಯೋಹಾನ 17:3; 1 ಥೆಸಲೊನೀಕ 2:13.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ