‘ಅವರು ಇತರರಿಗೆ ಸಹಾಯ ಮಾಡುವುದರಲ್ಲಿ ಆಸಕ್ತರಾಗಿದ್ದಾರೆ’
ಯೆಹೋವನ ಸಾಕ್ಷಿಗಳ ಕುರಿತಾಗಿ ನ್ಯೂ ಯಾರ್ಕ್ ಸಿಟಿ ಪೊಲೀಸನೊಬ್ಬನು ಹೀಗೆ ತಾನೇ ಹೇಳಿದನು. ಅವನು, ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದಲ್ಲಿ ಕೆಲಸಮಾಡುತ್ತಿರುವ ಪೂರ್ಣ ಸಮಯದ ಸ್ವಯಂ ಸೇವಕರಲ್ಲಿ ಒಬ್ಬಳಾಗಿರುವ ಕ್ಯಾತ್ಲೀನಳೊಂದಿಗೆ ಮಾತಾಡುತ್ತಿದ್ದನು.
ಒಂದು ಬೆಚ್ಚಗಿನ ಮತ್ತು ಪ್ರಕಾಶಮಾನವಾದ ಶರತ್ಕಾಲದ ದಿನದಂದು, ತನ್ನ ಮಧ್ಯಾಹ್ನದ ವಿರಾಮ ಸಮಯದಲ್ಲಿ, ಕ್ಯಾತ್ಲೀನಳು ಹತ್ತಿರದಲ್ಲಿದ್ದ ವಿಹಾರ ಪಥದಲ್ಲಿ ಒಂದು ಬೆಂಚಿನ ಮೇಲೆ ಕುಳಿತುಕೊಂಡಿದ್ದಳು. ಹೆಡ್ಫೋನ್ಗಳೊಂದಿಗೆ ಸಜ್ಜಿತವಾಗಿರುವ ಒಂದು ಆಡಿಯೊಕ್ಯಾಸೆಟ್ ಪ್ಲೆಯರ್ಗೆ ಅವಳು ಕಿವಿಕೊಡುತ್ತಿದ್ದಳು. ಈಸ್ಟ್ ರಿವರ್ನ ಆಚೆ ಬದಿಯಲ್ಲಿದ್ದ ಹೆಲಿಕಾಪ್ಟರ್ ನಿಲ್ದಾಣದಲ್ಲಿ, ನಗರವನ್ನು ಸಂದರ್ಶಿಸುತ್ತಿದ್ದ ಪೋಪರ ನಿರ್ಗಮನಕ್ಕಾಗಿ ತಯಾರಿಗಳು ನಡೆಯುತ್ತಿದ್ದವು. ಎಲ್ಲೆಡೆಯೂ ಭದ್ರತೆಯು ಬಿಗಿಯಾಗಿತ್ತು, ಮತ್ತು ಅನೇಕ ಪೊಲೀಸರು ವಿಹಾರ ಪಥದಲ್ಲಿ ಗಸ್ತು ತಿರುಗುತ್ತಿದ್ದರು. ಅವರಲ್ಲಿ ಒಬ್ಬನು ಕ್ಯಾತ್ಲೀನಳನ್ನು ಸಮೀಪಿಸಿ, ಅವಳು ಏನು ಮಾಡುತ್ತಿದ್ದಾಳೆಂದು ಕೇಳಿದನು. ಕ್ಯಾತ್ಲೀನ್ ಉತ್ತರಿಸಿದ್ದು: “ನಾನು ರಷ್ಯನ್ ಭಾಷೆಯ ಒಂದು ಟೇಪ್ಗೆ ಕಿವಿಗೊಡುತ್ತಿದ್ದೇನೆ. ನೋಡಿ, ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳು, ಮತ್ತು ಈ ನಗರದಲ್ಲಿ ಜೀವಿಸಲು ಬಂದಿರುವ ರಷ್ಯನ್ ಭಾಷೆಯನ್ನಾಡುವ ಜನರೊಂದಿಗೆ ದೇವರ ರಾಜ್ಯದ ಸುವಾರ್ತೆಯನ್ನು ಹಂಚಿಕೊಳ್ಳಲಿಕ್ಕಾಗಿ ನಾನು ರಷ್ಯನ್ ಭಾಷೆಯನ್ನು ಕಲಿಯಲು ಬಯಸುತ್ತೇನೆ.”
ನ್ಯೂ ಯಾರ್ಕ್ ಸಿಟಿಯಲ್ಲಿ ಒಬ್ಬ ಗಸ್ತುತಿರುಗುವ ಪೊಲೀಸ್ ಅಧಿಕಾರಿಯೋಪಾದಿ ತನ್ನ ಕಳೆದ 15 ವರ್ಷಗಳಲ್ಲಿ ತಾನು ಯೆಹೋವನ ಸಾಕ್ಷಿಗಳನ್ನು ಕ್ರಮೇಣವಾಗಿ ಮೆಚ್ಚತೊಡಗಿದ್ದೇನೆಂದು ಆ ಪೊಲೀಸನು ಪ್ರತಿಕ್ರಿಯಿಸಿದನು. ಅವನು ಹೇಳಿದ್ದು: “ಸಮುದಾಯದಲ್ಲಿರುವ ಇತರರಿಗೆ ಸಹಾಯ ಮಾಡಲು ಪ್ರಾಮಾಣಿಕವಾಗಿ ಆಸಕ್ತರಾಗಿರುವ ಸದಸ್ಯರುಳ್ಳ ಒಂದು ವ್ಯವಸ್ಥಾಪಿತ ಧರ್ಮದೋಪಾದಿ ನಾನು ಯೆಹೋವನ ಸಾಕ್ಷಿಗಳನ್ನು ಪರಿಗಣಿಸುತ್ತೇನೆ.”
ಯೆಹೋವನ ಸಾಕ್ಷಿಗಳು, ಅವರು ಮಾಡುವ ಮನೆಯಿಂದ ಮನೆಯ ಸಾರುವ ಕೆಲಸಕ್ಕಾಗಿ ಲೋಕವ್ಯಾಪಕವಾಗಿ ಪ್ರಸಿದ್ಧರಾಗಿದ್ದಾರೆ. (ಅ. ಕೃತ್ಯಗಳು 20:20) ಮಾನವಕುಲವನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೆ ಏಕಮಾತ್ರ ಪರಿಹಾರವಾಗಿ ಅವರು ದೇವರ ರಾಜ್ಯದ ಕಡೆಗೆ ಕೈತೋರಿಸುವುದಾದರೂ, ತಮ್ಮ ದಿನನಿತ್ಯದ ಜೀವಿತಗಳಲ್ಲಿ ಬೈಬಲ್ ತತ್ವಗಳನ್ನು ಅನ್ವಯಿಸಲು ಜನರನ್ನು ಉತ್ತೇಜಿಸುವ ಮೂಲಕ ಅವರು ಜನರ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತಾರೆ. ಉದಾಹರಣೆಗಾಗಿ, ಕಲಿಯಲು ನೆರವಾಗುವಂತಹ ರೀತಿಯ ಒಂದು ಪರಿಸರವನ್ನು ಮನೆಯಲ್ಲಿ ಒದಗಿಸುವಂತೆ ಸಾಕ್ಷಿಗಳು ಹೆತ್ತವರನ್ನು ಪ್ರೇರೇಪಿಸುತ್ತಾರೆ. ಒಬ್ಬ ಧಣಿಯು ಅಮೂಲ್ಯವಾದದ್ದಾಗಿ ಕಂಡುಕೊಳ್ಳುವ ಕೌಶಲ್ಯಗಳನ್ನೂ ಗುಣಗಳನ್ನೂ ಗಳಿಸುವಂತೆ ಅವರಿಗೆ ಉತ್ತೇಜಿಸುತ್ತಾ, ಅವರು ಒಬ್ಬೊಬ್ಬರಿಗೂ, ಪ್ರಾಮಾಣಿಕರೂ, ನಿಯಮಪಾಲಕರೂ ಆಗಿರುವಂತೆ ಪ್ರಚೋದಿಸುತ್ತಾರೆ.
ಹೌದು, ಸಮುದಾಯದಲ್ಲಿರುವ ಜನರ ಜೀವಿತಗಳನ್ನು ಉತ್ತಮಗೊಳಿಸುವಂತೆ ಅವರಿಗೆ ಸಹಾಯ ಮಾಡುವುದರಲ್ಲಿ ಯೆಹೋವನ ಸಾಕ್ಷಿಗಳು ತೀರ ಆಸಕ್ತರಾಗಿದ್ದಾರೆ. ಈ ಮುಂದಿನ ನೀಡಿಕೆಗೆ ಪ್ರತಿಕ್ರಿಯಿಸುವಂತೆ ನಿಮ್ಮನ್ನು ಹೃದಯೋಲ್ಲಾಸದಿಂದ ಆಮಂತ್ರಿಸಲಾಗುತ್ತದೆ.