“ನಾವೆಲ್ಲರೂ ಒಂದೇ ಕುಟುಂಬಕ್ಕೆ ಸೇರಿರುವವರು”
ಇತ್ತೀಚೆಗಿನ ವರ್ಷಗಳಲ್ಲಿ ಧಾರ್ಮಿಕ ಪೂರ್ವಾಗ್ರಹ ಮತ್ತು ಜಾತಿವಾದವು ಭೂಸುತ್ತಲೂ ಹರಡಿದೆ. ಕುಲಸಂಬಂಧವಾದ ಭಿನ್ನತೆಗಳು, ಕೊಲ್ಲುವಿಕೆಗಳು, ಕ್ರೂರವಾದ ಯಾತನೆ ಮತ್ತು ಇತರ ನಾಚಿಕೆಗೇಡಿ ಘೋರ ಕೃತ್ಯಗಳನ್ನು ಹೊತ್ತಿಸಿವೆ. ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ನಿಂದ ಬಂದ ಒಂದು ವರದಿಗನುಸಾರ, ಮಾನವ ಹಕ್ಕುಗಳ ಉಲ್ಲಂಘನೆಗಳು, 2.3 ಕೋಟಿಗಿಂತಲೂ ಹೆಚ್ಚು ಜನರನ್ನು ಲೋಕವ್ಯಾಪಕವಾಗಿ 1994ರಲ್ಲಿ ತಮ್ಮ ಮನೆಗಳಿಂದ ಓಡಿಹೋಗುವಂತೆ ಒತ್ತಾಯಿಸಿದವು.
ಕೇವಲ ರುಆಂಡದಲ್ಲೇ, ಸುಮಾರು 5,00,000 ಜನರು ಹತಿಸಲ್ಪಟ್ಟರು ಮತ್ತು 20,00,000ಕ್ಕಿಂತಲೂ ಹೆಚ್ಚಿನ ಇತರ ಜನರು, ಟೂಟ್ಸಿ ಮತ್ತು ಹೂಟುಗಳ ನಡುವಿನ ಹಿಂಸಾಚಾರವು ಹೊರಚಿಮ್ಮಿದ ನಂತರ ನಿರಾಶ್ರಿತರಾದರು. “ಶಸ್ತ್ರಾಸ್ತ್ರಗಳನ್ನು ಹೊರಲು ಅವರ ನಿರಾಕರಣೆಗಾಗಿ ಯೆಹೋವನ ಸಾಕ್ಷಿಗಳು ವಿಶೇಷವಾಗಿ ಹಿಂಸಿಸಲ್ಪಟ್ಟರು” ಎಂಬುದಾಗಿ ಬೆಲ್ಜಿಯನ್ ವಾರ್ತಾಪತ್ರವಾದ ಲೇ ಸ್ವೈರ್ ವರದಿಸುತ್ತದೆ. ಯೆಹೋವನ ಸಾಕ್ಷಿಗಳು ಶಸ್ತ್ರಸಜ್ಜಿತ ಘರ್ಷಣೆಗಳಲ್ಲಿ ಒಳಗೊಳ್ಳುವುದಿಲ್ಲ. ಹಾಗಿದ್ದರೂ, ಅವರಲ್ಲಿ ನೂರಾರು ಮಂದಿ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟರು. ಇದು ನಮಗೆ, ಯೇಸು ತನ್ನ ಶಿಷ್ಯರಿಗೆ ಹೇಳಿದ ಮಾತುಗಳನ್ನು ನೆನಪಿಗೆ ತರುತ್ತದೆ: “ನೀವು ಲೋಕದ ಕಡೆಯವರಲ್ಲದೆ ಇರುವದರಿಂದಲೂ . . . ಲೋಕವು ನಿಮ್ಮ ಮೇಲೆ ದ್ವೇಷಮಾಡುತ್ತದೆ.”—ಯೋಹಾನ 15:19.
ಒಂದು ಸಾಕ್ಷಿ ಕುಟುಂಬವು—ಯ್ಯೂಸಾನ್ ಟಾಬಾನಾ, ಅವನ ಹೆಂಡತಿ, ಮತ್ತು ಇಬ್ಬರು ಮಕ್ಕಳು—ರಾಜಧಾನಿ ಕಿಗಾಲಿಯಲ್ಲಿ ಜೀವಿಸುತ್ತಿತ್ತು. ಯ್ಯೂಸಾನ್ ತನ್ನ ನೆರೆಹೊರೆಯವರಿಗೆ ಕ್ರೈಸ್ತ ತಾಟಸ್ಥ್ಯದ ವಿಷಯವನ್ನು ವಿವರಿಸುತ್ತಿದ್ದಾಗ, ಬೆಚ್ಚಗಿನ ವಾತಾವರಣಗಳಲ್ಲಿ ಹುಲುಸಾಗಿ ಬೆಳೆಯುವ, ಒಂದು ಹಬ್ಬುವ ಬಳ್ಳಿಯಾದ, ಬೂಗನ್ವಿಲಿಯದ ಕುರಿತಾಗಿ ಅನೇಕ ಸಲ ಮಾತಾಡುತ್ತಿದ್ದನು.—ಮತ್ತಾಯ 22:21.
“ಇಲ್ಲಿ ಕಿಗಾಲಿಯಲ್ಲಿ, ಬೂಗನ್ವಿಲಿಯ, ಕೆಂಪು, ನಸುಗೆಂಪು, ಮತ್ತು ಕೆಲವೊಮ್ಮೆ ಬಿಳಿ ಹೂವುಗಳನ್ನು ಉತ್ಪಾದಿಸುತ್ತದೆ” ಎಂದು ಯ್ಯೂಸಾನ್ ವಿವರಿಸುತ್ತಿದ್ದನು. “ಆದರೂ ಅವುಗಳೆಲ್ಲವು ಒಂದೇ ಕುಟುಂಬಕ್ಕೆ ಸೇರಿದವುಗಳಾಗಿವೆ. ಮಾನವರೊಂದಿಗೆ ಇದೇ ರೀತಿಯಾಗಿರುತ್ತದೆ. ನಾವು ವಿಭಿನ್ನ ಜಾತಿಗಳು, ಚರ್ಮದ ಬಣ್ಣ, ಅಥವಾ ಕುಲಸಂಬಂಧವಾದ ಹಿನ್ನಲೆಯವರಾಗಿರಬಹುದಾದರೂ, ನಾವೆಲ್ಲರೂ ಒಂದೇ ಕುಟುಂಬಕ್ಕೆ—ಮಾನವಕುಲದ ಕುಟುಂಬಕ್ಕೆ—ಸೇರಿರುವವರು.”
ದುರಂತಮಯವಾಗಿ, ಅವರ ಶಾಂತಪೂರ್ಣ ಸ್ವಭಾವ ಮತ್ತು ತಟಸ್ಥ ನಿಲುವಿನ ಹೊರತೂ, ಟಾಬಾನಾ ಕುಟಂಬವು ಒಂದು ರಕ್ತದಾಹಿ ದೊಂಬಿಯಿಂದ ಕೊಲೆಗೈಯಲ್ಪಟ್ಟಿತು. ಆದರೂ, ಅವರು ನಂಬಿಗಸ್ತರಾಗಿ ಸತ್ತರು. ಅಂತಹವರಿಗೆ ಮಾಡಿರುವ ತನ್ನ ವಾಗ್ದಾನವನ್ನು ಯೆಹೋವ ದೇವರು ಪೂರೈಸುವನೆಂದು ನಾವು ನಿಶ್ಚಿತರಾಗಿರಸಾಧ್ಯವಿದೆ, ಮತ್ತು ಅವರು ಎಲ್ಲಿ ಪೂರ್ವಾಗ್ರಹವು ಇನ್ನು ಮುಂದೆ ಇಲ್ಲದಿರುವುದೊ ಆ ಒಂದು ಲೋಕವನ್ನು ಸ್ವಾಸ್ಥ್ಯವಾಗಿ ಪಡೆಯಲು, ಪುನರುತ್ಥಾನಗೊಳಿಸಲ್ಪಡುವರು. (ಅ. ಕೃತ್ಯಗಳು 24:15) ಆಗ, ಟಾಬಾನಾ ಕುಟುಂಬವು, ಇತರರೊಂದಿಗೆ ಸೇರಿ “ಶಾಂತಿಯ ಸಮೃದ್ಧಿಯಲ್ಲಿ ಅಪೂರ್ವ ಆನಂದವನ್ನು ಕಂಡುಕೊಳ್ಳು”ವುದು.—ಕೀರ್ತನೆ 37:11, NW.