ಶಾಂತಿಯು ಸಾಧ್ಯವೊ?
“ಎಲ್ಲಿಯಾದರೂ ಒಂದು ಯುದ್ಧವು ಯಾವಾಗಲೂ ಇದ್ದೇ ಇರುವುದು. ಮಾನವಕುಲದ ಕುರಿತಾದ ಶೋಚನೀಯ ಸತ್ಯತೆಯು ಅದೇ ಆಗಿದೆ.” ನ್ಯೂಸ್‌ವೀಕ್ ಪತ್ರಿಕೆಯಲ್ಲಿ, ಒಬ್ಬ ವಾಚಕನಿಂದ ಬಂದ ಪತ್ರವೊಂದರಲ್ಲಿ ಈ ನಿರಾಶಾವಾದಿ ನೋಟವು ತೋರಿಬಂತು. ನೀವು ಅದರೊಂದಿಗೆ ಸಮ್ಮತಿಸುತ್ತೀರೊ? ಯುದ್ಧವು ಅನಿವಾರ್ಯವೂ ಶಾಂತಿಯು ಅಸಾಧ್ಯವೂ ಆಗಿದೆಯೊ? ಇತಿಹಾಸದ ವಾಸ್ತವಾಂಶಗಳಿಂದ ನಾವು ನಿರ್ಣಯಿಸುವುದಾದರೆ, ಈ ಎರಡೂ ಪ್ರಶ್ನೆಗಳಿಗೆ ಹೌದು ಎಂದು ಉತ್ತರಿಸದೇ ಇರುವುದು ಕಷ್ಟಕರ. ದಾಖಲೆಗಳು ಇಡಲ್ಪಟ್ಟಿರುವ ಸಮಯದಂದಿನಿಂದ, ಮಾನವಕುಲವು ಒಂದರ ನಂತರ ಒಂದು ಯುದ್ಧದಲ್ಲಿ ಸಿಕ್ಕಿಕೊಂಡಿರುತ್ತದೆ ಮತ್ತು ಮನುಷ್ಯರು ಒಬ್ಬರನ್ನೊಬ್ಬರು ಕೊಲ್ಲುವ ಹೆಚ್ಚು ಕಾರ್ಯಕಾರಿ ವಿಧಗಳನ್ನು ವಿಕಸಿಸಿದಂತೆ ಸಂಘರ್ಷಗಳು ಹೆಚ್ಚೆಚ್ಚು ವಿನಾಶಕಾರಿಯಾದವು.
20ನೆಯ ಶತಮಾನವು ಇದಕ್ಕೆ ಹೊರತಾಗಿಲ್ಲ. ನಿಜವಾಗಿಯೂ ಅದು, ಎಂದೂ ನಡಿಸಲ್ಪಟ್ಟಿರುವ ಯುದ್ಧಗಳಲ್ಲಿ ಅತಿ ರಕ್ತಮಯವಾದ ಯುದ್ಧಗಳನ್ನು ಪ್ರತ್ಯಕ್ಷವಾಗಿ ನೋಡಿದೆ, ಆದರೆ ಅದು ಯಾವುದೋ ಹೊಸ ವಿಷಯವನ್ನು ಕೂಡ ನೋಡಿದೆ. ಐವತ್ತು ವರ್ಷಗಳ ಹಿಂದೆ ಅಮೆರಿಕವು ಜಪಾನಿನ ಮೇಲೆ ಎರಡು ಪರಮಾಣು ಬಾಂಬುಗಳನ್ನು ಎಸೆಯುವ ಮೂಲಕ ನ್ಯೂಕ್ಲಿಯರ್ ಯುಗವನ್ನು ಒಳಸೇರಿಸಿತು. ಅಂದಿನಿಂದ ಐದು ದಶಕಗಳಲ್ಲಿ, ಮಾನವಜಾತಿಯನ್ನು ಎಷ್ಟೋ ಹೆಚ್ಚು ಸಲ ನಾಶಮಾಡಬಲ್ಲ ನ್ಯೂಕ್ಲಿಯರ್ ಶಸ್ತ್ರಗಳ ಬೃಹತ್ ಸಂಗ್ರಹಗಳನ್ನು ರಾಷ್ಟ್ರಗಳು ಕಟ್ಟಿವೆ. ನ್ಯೂಕ್ಲಿಯರ್ ಶಸ್ತ್ರಗಳ ಅಸ್ತಿತ್ವವು ಅಂತಿಮವಾಗಿ, ಯುದ್ಧವನ್ನು ಮಾಡುವುದರಿಂದ ಮನುಷ್ಯರನ್ನು ಹೆದರಿಸಿಬಿಡುವುದೊ? ವಾಸ್ತವಾಂಶಗಳು ಆ ಪ್ರಶ್ನೆಗೆ ಉತ್ತರವನ್ನು ಒದಗಿಸುತ್ತವೆ. 1945ರಂದಿನಿಂದ—ಇನ್ನೂ ಹೆಚ್ಚಿನ ನ್ಯೂಕ್ಲಿಯರ್ ಬಾಂಬುಗಳು ಎಸೆಯಲ್ಪಟ್ಟಿರದಿದ್ದರೂ—ಅನೇಕ ಲಕ್ಷಾಂತರ ಮಂದಿ ಯುದ್ಧಗಳಲ್ಲಿ ಮಡಿದಿದ್ದಾರೆ.
ಮಾನವ ಜಾತಿಯು ಇಷ್ಟು ಯುದ್ಧಗ್ರಸ್ತವಾಗಿರುವುದೇಕೆ? ಎನ್‌ಸೈಕ್ಲೊಪೀಡಿಯ ಅಮೆರಿಕಾನಾ, ಐತಿಹಾಸಿಕವಾಗಿ ಯುದ್ಧಕ್ಕೆ ನಡಿಸಿರುವ ಮಾನವ ಸಮಾಜದ ಕೆಲವು ಅಂಶಗಳನ್ನು ತಿಳಿಸುತ್ತದೆ. ಅವು, ಧಾರ್ಮಿಕ ಅಸಹಿಷ್ಣುತೆ, ಜಾತೀಯತೆ, ಸಾಂಸ್ಕೃತಿಕ ಭಿನ್ನತೆಗಳು, ವ್ಯತ್ಯಾಸಹೊಂದಿರುವ ಭಾವನಾಶಾಸ್ತ್ರಗಳು (ಸಮತಾವಾದ ಮತ್ತು ಬಂಡವಾಳಶಾಹಿಯಂಥವುಗಳು), ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಪರಮಾಧಿಕಾರದ ಬೋಧನೆ, ಆರ್ಥಿಕ ಪರಿಸ್ಥಿತಿಗಳು ಮತ್ತು ಯುದ್ಧ ಮನಸ್ಕತೆಯ ಒಂದು ಜನಸಾಮಾನ್ಯ ಸ್ವೀಕರಣೆಯನ್ನು ಒಳಗೂಡಿಸುತ್ತವೆ. ನೀವು ಆ ಪಟ್ಟಿಯನ್ನು ಓದುವಾಗ, ಹತ್ತಿರದ ಭವಿಷ್ಯತ್ತಿನಲ್ಲಿ ಬದಲಾಗುವ ಸಂಭಾವ್ಯತೆಯಿರುವ ಯಾವುದಾದರೂ ವಿಷಯವನ್ನು ನೀವು ನೋಡುತ್ತೀರೊ? ರಾಷ್ಟ್ರಗಳು ತಮ್ಮ ಪರಮಾಧಿಕಾರವನ್ನು ಸಂರಕ್ಷಿಸಲು ಕಡಿಮೆ ನಿರ್ಧರಿತವಾಗಿರುವವೊ? ಮನುಷ್ಯರು ಕಡಿಮೆ ಜಾತಿವಾದಿಗಳಾಗುವರೊ? ಧಾರ್ಮಿಕ ಪಕ್ಷವಾದಿಗಳು ಕಡಿಮೆ ಮತಭ್ರಾಂತರಾಗುವರೊ? ಇದು ತೀರ ಅಸಂಭವನೀಯ.
ಹೀಗಿರುವಾಗ, ಯಾವುದೊ ಒಂದು ದಿನ ವಿಷಯಗಳು ಉತ್ತಮವಾಗುವ ಮತ್ತು ಶಾಶ್ವತವಾದ ಶಾಂತಿಯಿರುವ ಯಾವುದೇ ನಿರೀಕ್ಷೆಯು ಇಲ್ಲವೊ? ಹೌದು, ನಿರೀಕ್ಷೆಯಿದೆ. ಈ ಲೋಕದ ಸಂಕ್ಷೋಭೆಯ ಹೊರತೂ, ಇಂದೂ ಶಾಂತಿಯನ್ನು ಕಂಡುಕೊಳ್ಳುವುದು ಸಾಧ್ಯ. ಲಕ್ಷಾಂತರ ಮಂದಿ ಹಾಗೆ ಮಾಡಿದ್ದಾರೆ. ಇಂಥ ಜನರಲ್ಲಿ ಕೆಲವರ ಕುರಿತಾಗಿ ನಾವು ನಿಮಗೆ ಹೇಳುವಂತೆ ಅವಕಾಶ ಕೊಡಿ ಮತ್ತು ಅವರ ಅನುಭವಗಳು ನಿಮಗೆ ಯಾವ ಅರ್ಥದಲ್ಲಿರಬಲ್ಲವು ಎಂಬುದನ್ನು ನೋಡೋಣ.
[ಪುಟ 2 ರಲ್ಲಿರುವ ಚಿತ್ರ ಕೃಪೆ]
Background cover and page 32: Reuters/Bettmann
[ಪುಟ 3 ರಲ್ಲಿರುವ ಚಿತ್ರ ಕೃಪೆ]
Reuters/Bettmann