ತೀವ್ರ ಅಸಮಾಧಾನಕ್ಕೆ ಎಡೆಗೊಡಬೇಡಿರಿ
ಯಾರಾದರೂ ನಮ್ಮ ಮನಸ್ಸು ನೋಯಿಸಿದರೆ, ತೀವ್ರ ಅಸಮಾಧಾನಗೊಳ್ಳುವುದರಿಂದ ದೂರವಿರುವುದು ಹಿಂದೆಂದಿಗಿಂತಲೂ ಹೆಚ್ಚು ಆಹ್ವಾನಿತವಾಗಿ ತೋರಬಹುದು. ಇಂತಹ ಸನ್ನಿವೇಶಗಳಿಗಾಗಿ ಬೈಬಲಿನಲ್ಲಿ ಪ್ರಾಯೋಗಿಕ ಸಲಹೆಯಿದೆ. ಅಪೊಸ್ತಲ ಪೌಲನು ಬರೆದುದು, “ಕೋಪಮಾಡಬೇಕಾದರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ.”—ಎಫೆಸ 4:26.
ಯಾರಾದರೂ ನಮಗೆ ಅನ್ಯಾಯ ಮಾಡಿದಾಗ, ಒಂದಿಷ್ಟು ಮಟ್ಟದ ಕೋಪವನ್ನು ಅನುಭವಿಸುವುದು ತೀರ ಸಾಧಾರಣವಾಗಿದೆ. “ಕೋಪಮಾಡಬೇಕಾದರೂ” ಎಂದು ಪೌಲನು ಹೇಳುವ ವಿಷಯವು, ಕೋಪವು ಕೆಲವೊಮ್ಮೆ—ಬಹುಶಃ ಅನ್ಯಾಯದ ವ್ಯವಹಾರ ಅಥವಾ ನ್ಯಾಯ ದೊರೆಯದೆಹೋದದ್ದಕ್ಕೆ ಪ್ರತಿವರ್ತನೆಯಾಗಿ—ಸೂಕ್ತವಾಗಿರಬಹುದೆಂಬುದನ್ನು ಸೂಚಿಸುತ್ತದೆ. (ಹೋಲಿಸಿ 2 ಕೊರಿಂಥ 11:29.) ಆದರೆ ಬಗೆಹರಿಸದೆ ಬಿಡಲ್ಪಟ್ಟಾಗ, ಮಹಾ ಪಾಪಕ್ಕೆ ನಡೆಸುತ್ತಾ, ನ್ಯಾಯವೆಂದು ಸಮರ್ಥಿಸಲ್ಪಟ್ಟ ಕೋಪಕ್ಕೂ ವಿಪತ್ಕಾರಕ ಪರಿಣಾಮಗಳು ಇರಬಲ್ಲವು. (ಆದಿಕಾಂಡ 34:1-31; 49:5-7; ಕೀರ್ತನೆ 106:32, 33) ಆದುದರಿಂದ, ನೀವು ಕೋಪಗೊಳ್ಳುವಂತೆ ಪ್ರಚೋದಿಸಲ್ಪಟ್ಟಾಗ ನೀವು ಏನು ಮಾಡಬಲ್ಲಿರಿ?
ಅಮುಖ್ಯ ಪಾಪಗಳನ್ನೊಳಗೊಳ್ಳುವ ಹೆಚ್ಚಿನ ವಿದ್ಯಮಾನಗಳಲ್ಲಿ, ನೀವು ಸನ್ನಿವೇಶವನ್ನು ನಿಮ್ಮ ಹೃದಯಲ್ಲಿ ಬಗೆಹರಿಸಿ “ಮೌನವಾಗಿ”ರಬಲ್ಲಿರಿ ಅಥವಾ ತಪ್ಪಿತಸ್ಥನನ್ನು ಸಮೀಪಿಸಿ ವಿವಾದವನ್ನು ಚರ್ಚಿಸಬಲ್ಲಿರಿ. (ಕೀರ್ತನೆ 4:4; ಮತ್ತಾಯ 5:23, 24) ಯಾವುದೇ ವಿಧದಲ್ಲಾಗಲಿ, ತೀವ್ರ ಅಸಮಾಧಾನವು ಕೀವುಗಟ್ಟಿ ದುರಂತದ ಫಲಿತಾಂಶಗಳನ್ನು ಉತ್ಪಾದಿಸದಂತೆ ವಿಷಯವನ್ನು ಬೇಗನೆ ಬಗೆಹರಿಸುವುದು ಅತ್ಯುತ್ತಮವಾಗಿದೆ.—ಎಫೆಸ 4:31.
ಯೆಹೋವನು ನಮ್ಮ ಪಾಪಗಳನ್ನು, ನಮ್ಮ ಅಜ್ಞಾನದ ಕಾರಣ, ನಾವು ಮಾಡಿದ್ದೇವೆಂದು ನಮಗೆ ಪ್ರಜ್ಞೆಯಿರದ ಪಾಪಗಳನ್ನು ಸಹ, ಮುಕ್ತವಾಗಿ ಕ್ಷಮಿಸುತ್ತಾನೆ. ತದ್ರೀತಿಯಲ್ಲಿ ನಾವು ಒಬ್ಬ ಜೊತೆ ಮಾನವನ ಅಮುಖ್ಯ ಪಾಪವನ್ನು ಕ್ಷಮಿಸಸಾಧ್ಯವಿಲ್ಲವೊ?—ಕೊಲೊಸ್ಸೆ 3:13; 1 ಪೇತ್ರ 4:8.
ಆಸಕ್ತಿಕರವಾಗಿ, “ಕ್ಷಮಿಸು” ಎಂಬ ಪದಕ್ಕಾಗಿರುವ ಗ್ರೀಕ್ ಪದವು ಅಕ್ಷರಾರ್ಥವಾಗಿ “ಬಿಟ್ಟುಬಿಡು” ಎಂಬುದನ್ನು ಅರ್ಥೈಸುತ್ತದೆ. ಕ್ಷಮಾಪಣೆಯು, ತಪ್ಪನ್ನು ಕಡಿಮೆಗೊಳಿಸುವುದನ್ನು ಅಥವಾ ಮನ್ನಿಸುವುದನ್ನು ನಮ್ಮಿಂದ ಕೇಳಿಕೊಳ್ಳುವುದಿಲ್ಲ. ತೀವ್ರ ಅಸಮಾಧಾನಕ್ಕೆ ಎಡೆಗೊಡುವುದು ನಿಮ್ಮ ಭಾರಕ್ಕೆ ಹೆಚ್ಚನ್ನು ಮಾತ್ರ ಕೂಡಿಸುವುದೆಂದು ಮತ್ತು ಕ್ರೈಸ್ತ ಸಭೆಯ ಐಕ್ಯವನ್ನು ಭಂಗಮಾಡುವುದೆಂದು ಗ್ರಹಿಸುತ್ತಾ, ಕೆಲವೊಮ್ಮೆ ಅದು ಕೇವಲ ಸನ್ನಿವೇಶವನ್ನು ಬಿಟ್ಟುಬಿಡುವುದನ್ನು ಒಳಗೊಳ್ಳಬಹುದು. ಇನ್ನೂ ಹೆಚ್ಚಾಗಿ, ತೀವ್ರ ಅಸಮಾಧಾನಕ್ಕೆ ಎಡೆಗೊಡುವುದು ನಿಮ್ಮ ಆರೋಗ್ಯಕ್ಕೂ ಹಾನಿಕರವಾಗಿರಸಾಧ್ಯವಿದೆ!—ಕೀರ್ತನೆ 103:9.