ಡಬ್ಬಿಯೂಟ ಸಾಕ್ಷಿಕೊಡುತ್ತದೆ
ಕಳೆದ ಜನವರಿಯಲ್ಲಿ ಜಪಾನಿನ ಕೋಬಿಯಲ್ಲಿ ನಡೆದ ಭೂಕಂಪವನ್ನು ಹಿಂಬಾಲಿಸಿದ ದಿನಗಳಲ್ಲಿ, ಬಾಧಿತ ಕ್ಷೇತ್ರಗಳ ಜನರಿಗೆ ಆಹಾರವನ್ನು ಕಂಡುಕೊಳ್ಳುವುದು ಬಹಳ ಕಷ್ಟವಾಗಿತ್ತು. ಆದರೂ, ಯೆಹೋವನ ಸಾಕ್ಷಿಗಳಿಗೆ, ಅವರ ಮಿತ್ರರ ದಯೆಯ ಫಲವಾಗಿ ಪೋಷಣೆಯ ಕೊರತೆಯಾಗಲಿಲ್ಲ. ಭೂಕಂಪದ ಬಳಿಕ ಮೊದಲಿನ ಎರಡು ಅಥವಾ ಮೂರು ದಿನಗಳಲ್ಲಿ, ಹತ್ತಿರದ ಸಭೆಗಳು ಅಕ್ಕಿಯುಂಡೆಗಳನ್ನು ಒದಗಿಸಿಕೊಟ್ಟವು. ಬೇಗನೆ, ಚಿಂತನೆಯುಳ್ಳ ಮಿತ್ರರು ಡಬ್ಬಿಯೂಟಗಳನ್ನು ಒದಗಿಸತೊಡಗಿದರು. ಊಟದ ಡಬ್ಬಿಗಳಿಗೆ, ಬಾಧಿತರಿಗಾಗಿ ಚಿಂತನೆಯನ್ನು ವ್ಯಕ್ತಪಡಿಸುವ ಟಿಪ್ಪಣಿಗಳನ್ನು ಅನೇಕರು ತಗಲಿಸಿದ್ದರು. ಊಟಗಳನ್ನು ಪಡೆದವರು ಆ ಟಿಪ್ಪಣಿಗಳನ್ನು ಓದಿದಾಗ ತಮ್ಮ ಅಶ್ರುಗಳನ್ನು ತಡೆಯಲಾರದೆ ಹೋದುದರಿಂದ, ಪ್ರತಿಯೊಂದು ಊಟವು ಅವರ ಅಶ್ರುಗಳ “ಉಪ್ಪಿನಿಂದ” ರಸವತ್ತಾಗಿತ್ತು ಎಂದವರು ಹೇಳಿದರು.
ಕೊರತೆಯಲ್ಲಿದ್ದ ಇತರರೊಂದಿಗೆ ಯೆಹೋವನ ಸಾಕ್ಷಿಗಳು ತಮ್ಮ ಆಹಾರವನ್ನು ಹಂಚಿಕೊಂಡರು. ಒಬ್ಬ ಸಾಕ್ಷಿಯು, ಒಂದೇ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದ ಒಬ್ಬ ಸಾಕ್ಷಿಯೇತರ ಸಹಕರ್ಮಿಯೊಂದಿಗೆ ಕಾರಿನಲ್ಲಿ ಪಯಣಮಾಡುತ್ತಿದ್ದಾಗ ತನ್ನ ಮಧ್ಯಾಹ್ನದೂಟ ಮಾಡತೊಡಗಿದನು. ಆದುದರಿಂದ ತಾನು ಪಡೆದುಕೊಂಡಿದ್ದ ಡಬ್ಬಿಯೂಟಗಳಲ್ಲೊಂದರಲ್ಲಿ ಅವನಿಗೂ ಪಾಲುಕೊಟ್ಟನು.
“ಈ ಡಬ್ಬಿಯೂಟವನ್ನು ಎಲ್ಲಿಂದ ಖರೀದಿಸಿದಿ?” ಎಂದು ಸಹಕರ್ಮಿ ಕೇಳಿದನು. ಸಾಕ್ಷಿಗಳ ಆಪತ್ತು-ಪರಿಹಾರ ಕಾರ್ಯವನ್ನು ಸಹೋದರನು ವಿವರಿಸಿದನು. “ಎಷ್ಟೋ ದಿನಗಳಿಂದ ನಾನು ಪಲ್ಯಗಳನ್ನು ತಿಂದೇ ಇಲ್ಲ. ಸ್ವಲ್ಪವನ್ನು ಉಳಿಸಿಕೊಂಡು ನನ್ನ ಕುಟುಂಬಕ್ಕಾಗಿ ಮನೆಗೊಯ್ಯುವೆ,” ಎಂದನು ಆ ಮನುಷ್ಯನು ಗಣ್ಯತಾಪೂರ್ವಕವಾಗಿ.
ಇದು ಮೂರನೆಯ ಸಲ ಸಂಭವಿಸಿದಾಗ, ಆ ಸಹಕರ್ಮಿಯು 3,000 ಜಪಾನಿ ಯೆನ್ (ಸುಮಾರು 35 ಅಮೆರಿಕನ್ ಡಾಲರ್)ಗಳನ್ನು ಸಾಕ್ಷಿಗೆ ಕೊಟ್ಟು ಅಂದದ್ದು: “ನಿನ್ನ ಚಟುವಟಿಕೆಗಳ ಪರಿಚಯ ನನಗಿದೆ, ಆದುದರಿಂದ ನಿನ್ನ ಕಾರ್ಯಕ್ಕಾಗಿ ನಾನು ಈ ದಾನವನ್ನು ಕೊಡುವಂತೆ ಬಿಡು. ನಿನ್ನ ಊಟವನ್ನು ನನ್ನೊಂದಿಗೆ ಹಂಚಿದುದಕ್ಕಾಗಿ ನಾನು ಅಭಾರಿ. ನಿಜವಾಗಿಯೂ, ನಿನ್ನ ಮಿತ್ರರೆಲ್ಲರು ಸಜ್ಜನರೇ ಸರಿ.”