ರಕ್ತ ಪೂರಣಗಳು ಪುನಃ ಪರ್ಯಾಲೋಚಿಸಲ್ಪಡುತ್ತವೆ
ಏಯ್ಡ್ಸ್ ರೋಗದ ಈ ಕರಾಳ ಯುಗದಲ್ಲಿ, ಆಸ್ಪತ್ರೆಯ ಒಬ್ಬ ರೋಗಿಯ ಆರೋಗ್ಯಕ್ಕೆ ಅತ್ಯಂತ ದೊಡ್ಡದಾದ ಬೆದರಿಕೆಯು ಶಸ್ತ್ರಚಿಕಿತ್ಸೆಯ ಕೋಣೆಯಲ್ಲಿ ಅಡಗಿಕೊಂಡಿರಬಹುದು. “ರಕ್ತದ ಸರಬರಾಜನ್ನು ನಾವು ಸಂಪೂರ್ಣವಾಗಿ ಕ್ರಿಮಿ ಶುದ್ಧೀಕೃತಗೊಳಿಸುವ ಯಾವುದೇ ಮಾರ್ಗವಿರುವುದಿಲ್ಲ,” ಎಂದು ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಸಮಯದಿಂದ ಅಮೆರಿಕದ ನ್ಯೂ ಜರ್ಸಿಯ, ಕ್ಯಾಮ್ಡೆನ್ನಲ್ಲಿರುವ ಕೂಪರ್ ಹಾಸ್ಪಿಟಲ್-ಯೂನಿವರ್ಸಿಟಿ ಮೆಡಿಕಲ್ ಸೆಂಟರ್ನ ರಕ್ತರಹಿತ ಶಸ್ತ್ರಚಿಕಿತ್ಸೆಯ ಕೇಂದ್ರವನ್ನು ನಿರ್ದೇಶಿಸಿರುವ ಡಾ. ರಿಚರ್ಡ್ ಸ್ಪೆನ್ಸ್ ಹೇಳುತ್ತಾರೆ.
ರಕ್ತ ಪೂರಣಗಳ ಬೈಬಲ್-ಆಧಾರಿತ ನಿರಾಕರಣೆಗೆ ಪ್ರಸಿದ್ಧವಾಗಿರುವ ಯೆಹೋವನ ಸಾಕ್ಷಿಗಳಲ್ಲಿ ಅನೇಕರಿಗೆ ಈ ಕೇಂದ್ರವು ಚಿಕಿತ್ಸೆನೀಡುತ್ತದೆ ಎಂಬುದರಲ್ಲಿ ಆಶ್ಚರ್ಯವಿಲ್ಲ. (ಯಾಜಕಕಾಂಡ 17:11; ಅ. ಕೃತ್ಯಗಳು 15:28, 29) ಆದಾಗಲೂ, ರಕ್ತವನ್ನು ಪಡೆಯುವದರಿಂದ ಹೆಪಟೈಟಿಸ್, ಏಯ್ಡ್ಸ್, ಮತ್ತು ಇತರ ರೋಗಗಳನ್ನು ಪಡೆಯುವದೂ ಸೇರಿರುವ, ಸಂಭಾವ್ಯ ಅಪಾಯಗಳ ಕುರಿತಾಗಿ ಚಿಂತಿತರಾಗಿರುವ ಹಲವಾರು ಸಾಕ್ಷ್ಯೇತರ ರೋಗಿಗಳು ಸಹ ಚಿಕಿತ್ಸೆಗಾಗಿ ಆ ಕೇಂದ್ರಕ್ಕೆ ಬರುತ್ತಾರೆ. “ಏಯ್ಡ್ಸ್ ರೋಗದಲ್ಲಿನ ಏರಿಕೆಯು ರಕ್ತವನ್ನು ಪರೀಕ್ಷಿಸುವದಕ್ಕಿರುವ ಅಗತ್ಯವನ್ನು ತೋರಿಸಿದೆ” ಎಂದು ಗಮನಿಸುತ್ತದೆ ಕುರಿಯರ್-ಪೋಸ್ಟ್ ವೀಕ್ಲಿ ರಿಪೋರ್ಟ್ ಆನ್ ಸೈಎನ್ಸ್ ಆ್ಯಂಡ್ ಮೆಡಿಸಿನ್. “ಆದರೆ ಕೆಲವು ರೋಗಸ್ಥಿತಿಗಳು ಒಂದು ಪರೀಕ್ಷಾ ಪ್ರಕ್ರಿಯೆಯಿಂದ ಕಂಡುಹಿಡಿಯಲ್ಪಡದೆ ಹೋಗಬಲ್ಲವು, ಯಾಕಂದರೆ ಅದು ಒಂದು ಪರೀಕ್ಷೆಯಲ್ಲಿ ಕಂಡುಹಿಡಿಯಲ್ಪಡುವ ಮುಂಚೆ ಕೆಲವರು ಆ ವೈರಸನ್ನು ಹೊಂದಿರಸಾಧ್ಯವಿದೆ.”
ಅಂತಹ ಅಪಾಯಗಳ ಕಾರಣದಿಂದ, ಆ ರಕ್ತರಹಿತ ಶಸ್ತ್ರಚಿಕಿತ್ಸಾ ಕೇಂದ್ರವು, ರಕ್ತ ಪೂರಣಗಳಿಗಿರುವ ಅನ್ಯಮಾರ್ಗಗಳನ್ನು—ಕೆಲವು ಸಾಕ್ಷಿಗಳು ನಿರ್ದಿಷ್ಟ ಸಂದರ್ಭಗಳಲ್ಲಿ ಅನಾಕ್ಷೇಪಣೀಯವಾಗಿ ಕಂಡುಕೊಳ್ಳಬಹುದಾದ ರೋಗಿಯ ಸ್ವಂತ ರಕ್ತವನ್ನು ಪುನಃ ಒಳಸೇರಿಸುವದನ್ನು ಒಳಗೊಂಡು—ಬಳಸುತ್ತದೆ.a ಇನ್ನೊಂದು ಚಿಕಿತ್ಸೆಯು, ರೋಗಿಯ ರಕ್ತದ ಉತ್ಪಾದನೆಯನ್ನು ಉದ್ರೇಕಿಸುವ ಔಷಧಗಳ ಉಪಯೋಗವನ್ನು ಒಳಗೂಡುತ್ತದೆ. ಇದಕ್ಕೆ ಕೂಡಿಸಿ, ಪೂರಣದ ರಕ್ತದ ಅಗತ್ಯವಿಲ್ಲದೇ ಆಮ್ಲಜನಕದ ಸಾಗುವಿಕೆಗೆ ಸಹಾಯ ಮಾಡಲು ಒಂದು ಸಿಂತೆಟಿಕ್ ರಕ್ತದ ಬದಲಿಯನ್ನು ಸಂದರ್ಭಾನುಸಾರವಾಗಿ ಉಪಯೋಗಿಸಲಾಗುತ್ತದೆ. “ಯೆಹೋವನ ಸಾಕ್ಷಿಗಳು ಅತ್ಯುತ್ತಮವಾದ ವೈದ್ಯಕೀಯ ಆರೈಕೆಯನ್ನು ಬಯಸುತ್ತಾರೆ, ಆದರೆ ಪೂರಣಗಳಿಗೆ ಅವರು ಅನ್ಯಮಾರ್ಗಗಳನ್ನು ಬಯಸುತ್ತಾರೆ” ಎಂದು ಡಾ. ಸ್ಪೆನ್ಸ್ ಹೇಳುತ್ತಾರೆ.
ತಮ್ಮ ಧಾರ್ಮಿಕ ನಂಬಿಕೆಗಳನ್ನು ಗೌರವಿಸುವ ವೈದ್ಯರಿಂದ ತಾವು ಪಡೆದಿರುವ ಸಹಕಾರ ಮತ್ತು ನೆರವಿಗಾಗಿ ಯೆಹೋವನ ಸಾಕ್ಷಿಗಳು ಕೃತಜ್ಞರಾಗಿದ್ದಾರೆ. ಫಲಸ್ವರೂಪವಾಗಿ, ಅವರು ನಿಜವಾಗಿಯೂ “ಅತ್ಯುತ್ತಮ ವೈದ್ಯಕೀಯ ಆರೈಕೆ” ಯನ್ನು ಪಡೆದಿದ್ದಾರೆ ಮತ್ತು ಯೆಹೋವ ದೇವರ ಮುಂದೆ ಒಂದು ಶುದ್ಧ ಮನಸ್ಸಾಕ್ಷಿಯನ್ನು ಕಾಪಾಡಿಕೊಂಡಿದ್ದಾರೆ.—2 ತಿಮೊಥೆಯ 1:3.
[ಅಧ್ಯಯನ ಪ್ರಶ್ನೆಗಳು]
a ಈ ಪ್ರಕ್ರಿಯೆ ಮತ್ತು ಒಂದು ವೈಯಕ್ತಿಕ, ಶುದ್ಧಾಂತಃಕರಣದ ನಿರ್ಣಯವನ್ನು ಮಾಡುವುದರಲ್ಲಿ ಒಳಗೂಡಿರುವ ಅಂಶಗಳ ಒಂದು ವಿವರಣಾತ್ಮಕ ಚರ್ಚೆಯು, 1989ರ ಮಾರ್ಚ್ 1ರ, ದ ವಾಚ್ಟವರ್ನ ಪುಟಗಳು 30-1 ರಲ್ಲಿದೆ.