“ಬುದ್ಧಿಸ್ವಾಸ್ಥ್ಯದ ಮೇರೆಗಳ ಆಚೆ”
“ಯುದ್ಧಗಳು ಮನುಷ್ಯರ ಮನಸ್ಸುಗಳಲ್ಲಿ ಆರಂಭವಾಗುವದರಿಂದ, ಮನುಷ್ಯರ ಮನಸ್ಸುಗಳಲ್ಲಿಯೇ ನಾವು ಶಾಂತಿಯ ಆಳುವೇರಿಗಳನ್ನು ಸ್ಥಾಪಿಸಬೇಕಾಗಿದೆ.” (ಯುಎನ್ನ ಶೈಕ್ಷಣಿಕ, ವೈಜ್ಞಾನಿಕ, ಮತ್ತು ಸಾಂಸ್ಕೃತಿಕ ಸಂಸ್ಥೆಯ ಲಿಖಿತ ಸಂವಿಧಾನ) ಮನಸ್ಸಿನಲ್ಲಿ ಈ ಹೇಳಿಕೆಯೊಂದಿಗೆ, 1993 ರಲ್ಲಿ ನಿಶಸ್ತ್ರೀಕರಣದ ಮೇಲಿನ ಒಂದು ಯುಎನ್ ಸಂಮೇಳನವನ್ನು ಹಾಜರಾಗುತ್ತಿದ್ದ 500 ಕ್ಕಿಂತ ಹೆಚ್ಚು ಪರಿಣತರು, ಅಂತಹ ಆಳುವೇರಿಗಳನ್ನು ಕಟ್ಟುವುದರಲ್ಲಿ ಧರ್ಮದ ಪಾತ್ರವನ್ನು ಪರಿಗಣಿಸಿದರು.
ಲೋಕ ಸುರಕ್ಷೆಗಾಗಿರುವ ವಕೀಲರ ಒಕ್ಕೂಟವನ್ನು ಪ್ರತಿನಿಧಿಸುತ್ತಿದ್ದ ಜಾನತನ್ ಗ್ರಾನಫ್ ಸಂಮೇಳನದ ಅಧ್ಯಕ್ಷತೆ ವಹಿಸಿದರು. ಅವರು ಅವಲೋಕಿಸಿದ್ದು: “ಸದ್ಯದ ಧಾರ್ಮಿಕ ಹಾಗೂ ಕುಲಸಂಬಂಧ ಕಲಹದ ವ್ಯಾಪ್ತಿಯು ನಾಗರಿಕ ನಡತೆಯ ಮೇರೆಗಳ ಆಚೆ, ಪ್ರಾಯಶಃ ಬುದ್ಧಿಸ್ವಾಸ್ಥ್ಯದ ಮೇರೆಗಳ ಆಚೆ ಹೋಗಿರುತ್ತದೆ.” ಸಂಮೇಳನದ ಸಮಯದಲ್ಲಿ ಜಾನ್ ಕೆನೆತ್ ಗಾಲ್ಬ್ರೇತ್ರವರ ಮಾತುಗಳು ಸೂಕ್ತವಾಗಿ ಉದ್ಧರಿಸಲ್ಪಟ್ಟಿದ್ದವು: “ಎಲ್ಲಾ ಯುದ್ಧಗಳಲ್ಲಿ ಮತ್ತು ನೈಸರ್ಗಿಕ ವಿಪತ್ತುಗಳಲ್ಲಿ ಮೊತ್ತವಾಗಿ ಕೊಲ್ಲಲ್ಪಟ್ಟಿರುವ ಜನರಿಗಿಂತ ಧರ್ಮದ ಹೆಸರಿನಲ್ಲಿ ಹೆಚ್ಚಿನ ಜನರು ಕೊಲ್ಲಲ್ಪಟ್ಟಿದ್ದಾರೆ.”
ಡಾ. ಶೇಷಗಿರಿ ರಾವ್ ಹೇಳಿದ್ದು: “ವೈದ್ಯರು ರೋಗಗಳನ್ನು ಹರಡಿಸುವುದಲ್ಲ, ಗುಣಪಡಿಸಬೇಕೆಂದು ಭಾವಿಸಲಾಗುತ್ತದೆ. ಧಾರ್ಮಿಕ ಸಂಪ್ರದಾಯಗಳು ಒಬ್ಬರು ಇನ್ನೊಬ್ಬರ ವಿರುದ್ಧ ದ್ವೇಷ ಮತ್ತು ಹಿಂಸಾತ್ಮಕ ಕಲಹವನ್ನು ಹರಡಿಸಬೇಕೆಂದು ಭಾವಿಸಲಾಗುವುದಿಲ್ಲ. ಅವು ರಾಜಿಮಾಡುವ ಶಕಿಗ್ತಳಾಗಿರುವುದು ಅವುಗಳ ಉದ್ದೇಶ. ಆಚರಣೆಯಲಿಯ್ಲಾದರೋ, ಅವು ಅನೇಕ ಸಲ ವಿಭಜಿಸುವ ಶಕಿಗ್ತಳಾಗಿ ಕಾರ್ಯನಡಿಸಿವೆ ಮತ್ತು ಇನ್ನೂ ನಡಿಸುತ್ತಿವೆ.”
“ಇಂದಿನ ಚರ್ಚುಗಳು ಯುದ್ಧದ ಒಂದು ಒಟ್ಟುಗೂಡಿದ ಖಂಡನೆಯನ್ನು ಘೋಷಿಸುತ್ತಿದ್ದಲ್ಲಿ” ಶಾಂತಿಯ ಭರವಸೆ ಕೊಡಬಹುದೆಂದು ಕೆಲವು ವರ್ಷಗಳ ಹಿಂದೆ, ಲಂಡನಿನ ಕ್ಯಾತೊಲಿಕ್ ಹೆರಾಲ್ಡ್ ಹೇಳಿಕೆಯನ್ನಿತಿತ್ತು. ಆದಾಗಲೂ, ವಾರ್ತಾಪತ್ರವು ಕೂಡಿಸಿದ್ದು: “ಇದು ಎಂದೂ ಸಂಭವಿಸಲಿಕ್ಕಿಲ್ಲವೆಂದು ನಮಗೆ ತಿಳಿದಿದೆ.” ಒಬ್ಬ ಕ್ಯಾತೊಲಿಕ್ ಸಂನ್ಯಾಸಿನಿಯು ಒಮ್ಮೆ ಹೇಳಿಕೆಯನ್ನಿತ್ತದ್ದು: “ನಾವೆಲ್ಲರೂ ಒಂದು ಮುಂಜಾನೆ ಎದ್ದು, . . . ಯೆಹೋವನ ಸಾಕ್ಷಿಗಳಂತೆಯೇ ಪುನಃ ಒಮ್ಮೆ ಶಸ್ತ್ರಗಳನ್ನು ಎತ್ತದೆ ಇರುವ ದೃಢವಾದ ನಿರ್ಣಯವನ್ನು ಮಾಡುತ್ತಿದ್ದಲ್ಲಿ ಲೋಕವು ಎಷ್ಟು ಭಿನ್ನವಾಗಿರುತ್ತಿತ್ತು!”
[ಪುಟ 32 ರಲ್ಲಿರುವ ಚಿತ್ರ ಕೃಪೆ]
Tom Haley/Sipa Press