ರಾಜ್ಯ ಘೋಷಕರು ವರದಿ ಮಾಡುತ್ತಾರೆ
“ಅವರು ಎಡೆಬಿಡದೆ ಮುಂದುವರಿದರು”
ಯೇಸು ಕ್ರಿಸ್ತನ ಮತ್ತು ಅವನ ಅಪೊಸ್ತಲರ ದಿನಗಳಿಂದ, ಧಾರ್ಮಿಕ ಮುಖಂಡರು ದೇವರ ರಾಜ್ಯದ ಸುವಾರ್ತೆಯ ಸಾರುವಿಕೆಯನ್ನು ತಡೆಗಟ್ಟಲು ಸಾಧ್ಯವಿರುವ ಎಲ್ಲಾ ಮಾಧ್ಯಮಗಳನ್ನು ಬಳಸಿದ್ದಾರೆ. “ಈ [ಯೇಸುವಿನ, NW] ಹೆಸರನ್ನು ಎತ್ತಿ ಉಪದೇಶಮಾಡಲೇ ಬಾರದೆಂದು” ಯೆರೂಸಲೇಮಿನಲ್ಲಿದ್ದ ಸ್ಥಳಿಕ ಅಧಿಕಾರಿಗಳು ಅಪೊಸ್ತಲರಿಗೆ ಪದೇ ಪದೇ ಮತ್ತು ಖಂಡಿತವಾಗಿ “ಅಪ್ಪಣೆಕೊಟ್ಟ”ರು. (ಅ. ಕೃತ್ಯಗಳು 5:27, 28, 40) ಹಾಗಿದ್ದರೂ, ಬೈಬಲಿನ ದಾಖಲೆಯು ತಿಳಿಸುತ್ತದೇನೆಂದರೆ “ದೇವರ ವಾಕ್ಯವು ಪ್ರಬಲವಾಯಿತು. ಶಿಷ್ಯರ ಸಂಖ್ಯೆಯು ಯೆರೂಸಲೇಮಿನಲ್ಲಿ ಬಹಳವಾಗಿ ಹೆಚ್ಚುತ್ತಾ ಬಂತು.”—ಅ. ಕೃತ್ಯಗಳು 6:7.
ಎರಡು ಸಾವಿರ ವರ್ಷಗಳ ಅನಂತರ ನಾವಿನ್ನೂ, ಆ ದೇಶದಲ್ಲಿ ಸತ್ಯ ಕ್ರೈಸ್ತರ ಕೆಲಸವನ್ನು ಅಡ್ಡೈಸಲು ಸ್ಥಳಿಕ ಅಧಿಕಾರಿಗಳನ್ನು ಪ್ರಭಾವಿಸುತ್ತಿರುವ ಧಾರ್ಮಿಕ ಮುಖಂಡರನ್ನು ಇಸ್ರಾಯೇಲಿನಲ್ಲಿ ಕಂಡುಕೊಳ್ಳುತ್ತೇವೆ. ಉಗ್ರಗಾಮಿ ಧಾರ್ಮಿಕ ಶಕಿಗ್ತಳಿಂದ ಹಾಕಲ್ಪಟ್ಟ ಒತ್ತಡದ ಕೆಳಗೆ, ಇಸ್ರಾಯೇಲಿನ ಟೆಲ್ ಅವೀವ್ನಲ್ಲಿರುವ ಸ್ಥಳಿಕ ಅಧಿಕಾರಿಗಳು ನವಂಬರ್ 1987 ರಲ್ಲಿ, ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನಲ್ಲಿರುವ ರಾಜ್ಯ ಸಭಾಗೃಹದಲ್ಲಿ ಕ್ರೈಸ್ತ ಕೂಟಗಳನ್ನು ನಡಿಸುವುದನ್ನು ನಿಲ್ಲಿಸುವಂತೆ ಸಾಕ್ಷಿಗಳಿಗೆ ಅಪ್ಪಣೆಕೊಟ್ಟರು. ಈ ಅಪ್ಪಣೆಯು ಅಕ್ಟೋಬರ್ 1989 ರಲ್ಲಿ ಕಾರ್ಯರೂಪಕ್ಕೆ ತರಲ್ಪಟ್ಟಿತು. ಇದರ ಅನುಸರಣೆಯಲ್ಲಿ, ಅವರ ರಾಜ್ಯ ಸಭಾಗೃಹವು ಕಾರ್ಯತಃ ಬಳಸಲ್ಪಡದೇ ಇದ್ದಾಗ ಸಾಕ್ಷಿಗಳು ಆ ವಠಾರದಲ್ಲಿ ಮೂರು ವರ್ಷಗಳ ತನಕ ಬಾಡಿಗೆಯ ಸೌಕರ್ಯಗಳಲ್ಲಿ ಕೂಡಿಬರುತ್ತಿದ್ದರು.
ಈ ಸಮಯದಷ್ಟಕ್ಕೆ, ವಿಷಯವನ್ನು ಇಸ್ರಾಯೇಲಿ ಉನ್ನತ ನ್ಯಾಯಸ್ಥಾನದ ಗಮನಕ್ಕೆ ತರಲಾಯಿತು. ದೇಶದ ನ್ಯಾಯವಾದಿ ಕಛೇರಿಯು ಸಾಕ್ಷಿಗಳಿಂದ ಸಾದರಪಡಿಸಲಾದ ವಾದವನ್ನು ಪುನರ್ವಿಮರ್ಶಿಸಿ, ಒಳಗೂಡಿದ್ದ ಕುತ್ಸಿತ ಧಾರ್ಮಿಕ ಪೂರ್ವಾಗ್ರಹದ ನೋಟದಲ್ಲಿ ಅವರ ಅಪ್ಪೀಲಿನ ವಿರುದ್ಧ ಯಾವುದೇ ಸಂಭಾವ್ಯ ಸಮರ್ಥನೆಯು ಇಲ್ಲವೆಂದು ಘೋಷಿಸಿತು. ಹೀಗೆ, ಸ್ಥಳಿಕ ಅಧಿಕಾರಿಗಳಿಗೆ, ತಮ್ಮ ನಿರ್ಣಯವನ್ನು ವಿಪರ್ಯಸ್ತಗೊಳಿಸುವುದನ್ನು ಬಿಟ್ಟು ಬೇರೆ ಯಾವ ಆಯ್ಕೆಯೂ ಇರಲಿಲ್ಲ, ಮತ್ತು ಯೆಹೋವನ ಸಾಕ್ಷಿಗಳು ಸಂತೋಷದಿಂದ ತಮ್ಮ ರಾಜ್ಯ ಸಭಾಗೃಹಕ್ಕೆ ಹಿಂದಿರುಗಿದರು.
ಆ ವರ್ಷಗಳಲ್ಲಿ ಬೈಬಲ್ ಸತ್ಯಗಳ ಸಾರುವಿಕೆಯ ಕೆಲಸವು ಇಳಿಮುಖವಾಯಿತೋ? ಇಲ್ಲವೇ ಇಲ್ಲ! ರಾಜ್ಯ ಸಭಾಗೃಹದ ಮುಚ್ಚುವಿಕೆಯ ಸಮಯದಲ್ಲಿ ಟೆಲ್ ಅವೀವ್ನಲ್ಲಿ ಎರಡು ಸಭೆಗಳಿದ್ದವು ಮತ್ತು ಹತ್ತಿರದ ಲೋಡ್ ಪಟ್ಟಣದಲ್ಲಿ ಒಂದು ಪ್ರತ್ಯೇಕ ಬೈಬಲ್ ಅಭ್ಯಾಸ ಗುಂಪಿತ್ತು. ಮೂರು ವರ್ಷಗಳ ತರುವಾಯ, ರಾಜ್ಯ ಸಭಾಗೃಹವು ಪುನಃ ತೆರೆಯಲ್ಪಟ್ಟಾಗ, ಯೆಹೋವನ ಸಾಕ್ಷಿಗಳು ನಾಲ್ಕು ಸಭೆಗಳಾಗಿ ಬೆಳೆದಿದ್ದರು, ಮತ್ತು ಬಿಅರ್ಶೀಬದಲ್ಲಿ ಒಂದು ಹೊಸ ಬೈಬಲ್ ಅಭ್ಯಾಸ ಗುಂಪು ಒಟ್ಟುಗೂಡುತ್ತಿತ್ತು.
ಇಸ್ರಾಯೇಲಿನಲ್ಲಿನ ಬೆಳೆಯುವಿಕೆಯು ಪ್ರಮುಖ ಭಾಷಾ ಗುಂಪುಗಳಾದ ಆ್ಯರಬಿಕ್ ಮತ್ತು ಹೀಬ್ರುವಿಗೆ ಸೀಮಿತಗೊಳಿಸಲ್ಪಟ್ಟಿಲ್ಲ. ಹಿಂದಿನ ಸೋವಿಯೆಟ್ ಒಕ್ಕೂಟದಿಂದ ವಲಸೆ ಬಂದವರ ಅಧಿಕ ಸಂಖ್ಯೆಯ ಜನಪ್ರವಾಹವು ಇದೆ, ಆದುದರಿಂದ ರಷ್ಯನ್ ಭಾಷೆಯನ್ನಾಡುವ ಯೆಹೋವನ ಸಾಕ್ಷಿಗಳು ಈಗ ಅವರೊಂದಿಗೆ ಸುವಾರ್ತೆಯನ್ನು ಸಾರುವುದರಲ್ಲಿ ಕಾರ್ಯಮಗ್ನರಾಗಿದ್ದಾರೆ. ರಷ್ಯನ್ ಭಾಷೆಯ ಕೆಲವು ಕೂಟಗಳು ಮೂರು ಸಭೆಗಳಲ್ಲಿ ನಡೆಯುತ್ತಿವೆ; ಇತ್ತೀಚೆಗೆ ಒಂದು ರಷ್ಯನ್ ಸಮ್ಮೇಳನಕ್ಕೆ ನೂರಕ್ಕಿಂತ ಹೆಚ್ಚು ಜನರು ಸೇರಿದರು.
ನಿಸ್ಸಂದೇಹವಾಗಿ, ಪೂರ್ವಾಗ್ರಹದ ಮತವಾದಿಗಳು, ಸತ್ಯಾರಾಧನೆಯ ವಿರುದ್ಧ ತಮ್ಮ ಚಳುವಳಿಯನ್ನು ಮುಂದುವರಿಸುವರು. ಆದರೆ, ರಾಜ್ಯ ಘೋಷಕರು ವಿರೋಧದ ಮಧ್ಯೆಯೂ, “ಎಡಬಿಡದೆ . . . ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ” ಇದ್ದ ಪ್ರಥಮ ಶತಮಾನದ ಕ್ರೈಸ್ತರನ್ನು ಅನುಕರಿಸುತ್ತಾ ಮುಂದುವರಿಯುತ್ತಾರೆ.—ಅ. ಕೃತ್ಯಗಳು 5:42.