ವಾಚಕರಿಂದ ಪ್ರಶ್ನೆಗಳು
ಗಲಾತ್ಯ 6:8 ಕ್ಕನುಸಾರವಾಗಿ, “ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು. ಆತ್ಮನನ್ನು [“ಆತ್ಮವನ್ನು,” NW] ಕುರಿತು ಬಿತ್ತುವವನು ಆತ್ಮನಿಂದ [“ಆತ್ಮದಿಂದ,” NW] ನಿತ್ಯಜೀವವನ್ನು ಕೊಯ್ಯುವನು.” ಇಲ್ಲಿರುವ “ಆತ್ಮ”ದ ಅರ್ಥವೇನು, ಮತ್ತು ನಾವು ಹೀಗೆ ಜೀವವನ್ನು ಹೇಗೆ ಕೊಯ್ಯಬಲ್ಲೆವು?
“ಆತ್ಮ” ಎಂದು ತರ್ಜುಮೆಯಾದ ಹೀಬ್ರು ಮತ್ತು ಗ್ರೀಕ್ ಶಬ್ದಗಳಿಗೆ ಇಂತಹ ಹಲವಾರು ಅರ್ಥಗಳಿವೆ: (1) ದೇವರ ಕಾರ್ಯಕಾರಿ ಶಕ್ತಿ, (2) ಮನುಷ್ಯರಲ್ಲಿ ಮತ್ತು ಪ್ರಾಣಿಗಳಲ್ಲಿರುವ ಜೀವಶಕ್ತಿ, (3) ವ್ಯಕ್ತಿಯ ಪ್ರಚೋದಕ ಮಾನಸಿಕ ಬಲ, ಮತ್ತು (4) ಆತ್ಮಿಕ ವ್ಯಕ್ತಿ, ಅಥವಾ ದೇವದೂತ. ಇವುಗಳಲ್ಲಿ ಮೊದಲನೆಯದಾದ—ದೇವರ ಕಾರ್ಯಕಾರಿ ಶಕ್ತಿಯೇ—ಗಲಾತ್ಯ 6:8 ರಲ್ಲಿ ನಾವು ಕಂಡುಕೊಳ್ಳುವ ಅರ್ಥವು.
ಗಲಾತ್ಯ ಪುಸ್ತಕದಲ್ಲಿ “ಆತ್ಮ”ದ ಪ್ರಥಮ ಪ್ರಯೋಗವನ್ನು ನಾವು ಎಲ್ಲಿ ಕಾಣುತ್ತೇವೊ, ಆ ಗಲಾತ್ಯ 3:2ನ್ನು, ಹಿನ್ನೆಲೆಯ ಮಾಹಿತಿಗಾಗಿ ಗಮನಿಸಿರಿ. ಪೌಲನು ಕ್ರೈಸ್ತರನ್ನು ಕೇಳಿದ್ದು: “ನೀವು ದೇವರಾತ್ಮನನ್ನು ಹೊಂದಿದ್ದು ನೇಮನಿಷ್ಠೆಗಳನ್ನು ಅನುಸರಿಸಿದರ್ದಿಂದಲೋ?” ಬಳಿಕ ಗಲಾತ್ಯ 3:5 ರಲ್ಲಿ, ಅವನು ಆ “ಆತ್ಮ” ವನ್ನು ಮಹತ್ಕಾರ್ಯಗಳನ್ನು ನಡಿಸುವುದರೊಂದಿಗೆ ಸಂಬಂಧಿಸುತ್ತಾನೆ. ಹೀಗೆ ಅವನು ನಿರ್ದೇಶಿಸಿದ “ಆತ್ಮ”ವು ಪವಿತ್ರ ಆತ್ಮ, ದೇವರ ಕಾರ್ಯಕಾರಿ ಶಕ್ತಿ ಆಗಿತ್ತು.
ತದನಂತರ, ಗಲಾತ್ಯ 5:16 ರಲ್ಲಿ, ಪೌಲನು ಆತ್ಮ ಮತ್ತು ಶರೀರವನ್ನು ಹೋಲಿಸಿದನು. ನಾವು ಓದುವುದು: “ನಾನು ಹೇಳುವದೇನಂದರೆ ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ; ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವದಿಲ್ಲ.” “ಶರೀರಭಾವದ ಅಭಿಲಾಷೆ” ಎಂದವನು ಹೇಳಿದ್ದು ಪಾಪಪೂರ್ಣ ಮಾನವ ಶರೀರ ಎಂಬರ್ಥದಲ್ಲಿ. ಹೀಗೆ, ಗಲಾತ್ಯ 5:19-23 ರಲ್ಲಿ, “ದೇವರಾತ್ಮನಿಂದ ಉಂಟಾಗುವ ಫಲ” ದೊಂದಿಗೆ “ಶರೀರಭಾವದ ಕರ್ಮಗಳ”ನ್ನು ಅವನು ಹೋಲಿಸಿ ಬರೆದಿದ್ದಾನೆ.
ಆದಕಾರಣ, ಗಲಾತ್ಯ 6:8 ರಲ್ಲಿ ಪಟ್ಟಿಮಾಡಲಾದ, “ಶರೀರಭಾವವನ್ನು ಕುರಿತು ಬಿತ್ತುವ” ವ್ಯಕ್ತಿಯು, “ಶರೀರಭಾವದ ಕರ್ಮಗಳ”ಲ್ಲಿ ಲೋಲುಪನಾಗುತ್ತಾ ಪಾಪಪೂರ್ಣ ಮಾನವ ಅಭಿಲಾಷೆಗಳಿಂದ ನಡಿಸಲ್ಪಡಲು ತನ್ನನ್ನು ಬಿಟ್ಟುಕೊಡುವ ವ್ಯಕ್ತಿಯಾಗಿರಲೇಬೇಕು. ಅಂತಹ ನಡವಳಿಕೆಯ ಭ್ರಷಕ್ಟಾರಕ ಪರಿಣಾಮಗಳನ್ನು ಅವನು ಅನುಭವಿಸ್ಯಾನು ಮತ್ತು ನಡವಳಿಕೆಯನ್ನು ಬದಲಾಯಿಸದೆ ಇದ್ದಲ್ಲಿ, ದೇವರ ರಾಜ್ಯದಲ್ಲಿ ಅಥವಾ ಅದರ ಕೆಳಗೆ ಖಂಡಿತವಾಗಿಯೂ ಜೀವವನ್ನು ಪಡೆಯುವುದಿಲ್ಲ.—1 ಕೊರಿಂಥ 6:9, 10.
ಸದ್ಭಕ್ತ ಕ್ರೈಸ್ತರೋಪಾದಿ ನಾವು ‘ದೇವರಾತ್ಮದ ನೋಟದೊಂದಿಗೆ ಬಿತ್ತುವವ’ ರಾಗಲು ಬಯಸಬೇಕು. ಪವಿತ್ರಾತ್ಮದ ಫಲಗಳನ್ನು ಫಲಿಸಲು ನಮಗೆ ನೆರವಾಗುತ್ತಾ, ಅದು ನಮ್ಮ ಜೀವನದಲ್ಲಿ ಸರಾಗವಾಗಿ ಕಾರ್ಯನಡಿಸುವಂತೆ ಬಿಡುವ ವಿಧಾನದಲ್ಲಿ ಜೀವಿಸುವುದು ಅದರಲ್ಲಿ ಒಳಗೊಳ್ಳುತ್ತದೆ. ಏನನ್ನು ಓದಲಿ ಅಥವಾ ಯಾವ ಟೆಲಿವಿಷನ್ ಕಾರ್ಯಕ್ರಮಗಳನ್ನು ನೋಡಲಿ ಎಂಬುದನ್ನು ನಿರ್ಣಯಿಸುವಾಗ ನಾವು ಅದನ್ನು ಮನಸ್ಸಿನಲ್ಲಿಡಬೇಕು. ಸಭಾ ಕೂಟಗಳಲ್ಲಿ ನಾವು ಗಮನಕೊಟ್ಟು ಕೇಳುವಾಗ ಮತ್ತು ಆತ್ಮ-ನಿಯುಕ್ತ ಹಿರಿಯರ ಸೂಚನೆಯನ್ನು ಅನ್ವಯಿಸಲು ಪ್ರಯತ್ನಿಸುವಾಗ, ಆತ್ಮದ ನೋಟದೊಂದಿಗೆ ಬಿತ್ತುತ್ತೇವೆ.
ರಸಕರವಾಗಿ, ನಾವು ಪವಿತ್ರಾತ್ಮಕ್ಕೆ ಹೊಂದಿಕೆಯಲ್ಲಿ ಬಿತ್ತುವಾಗ “ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವ” ಸಾಲಿನಲ್ಲಿರುವೆವು ಎಂಬ ಆಶ್ವಾಸನೆಯೊಂದಿಗೆ ಗಲಾತ್ಯ 6:8 ಕೊನೆಗೊಳಿಸಿಯದೆ. ಹೌದು, ಕ್ರಿಸ್ತನ ಪ್ರಾಯಶ್ಚಿತದ್ತ ಮೇಲೆ ಆಧಾರಿಸಿ, ದೇವರು ಪವಿತ್ರಾತ್ಮದ ಕಾರ್ಯಗತಿಯ ಮೂಲಕ ಅನಂತ ಜೀವನವನ್ನು ದಯಪಾಲಿಸಲಿರುವನು.—ಮತ್ತಾಯ 19:29; 25:46; ಯೋಹಾನ 3:14-16; ರೋಮಾಪುರ 2:6, 7; ಎಫೆಸ 1:7.