ಅವರು ಅದನ್ನು ಓದುವ ಸಮಯ ಮತ್ತು ಪ್ರಯೋಜನ ಪಡೆಯುವ ವಿಧ
ಬೆಳಗ್ಗೆ ಬೇಗನೆ:
ತಮ್ಮ ಮನೆಯ ಹೊರಗೆ ಕೆಲಸಮಾಡುವ ಒಬ್ಬ ವಿವಾಹಿತ ದಂಪತಿಗಳಿಬ್ಬರೂ, ಪ್ರತಿ ಬೆಳಗ್ಗೆ ಕೇವಲ ಹತ್ತು ನಿಮಿಷಗಳು ಮುಂಚಿತವಾಗಿ ಏಳಲು ಮತ್ತು ಅವಸರದಿಂದ ಮನೆಯನ್ನು ಬಿಡುವ ಮೊದಲು ಆ ಸಮಯವನ್ನು ಒಟ್ಟಿಗೆ ಬೈಬಲನ್ನು ಓದಲಿಕ್ಕೆ ಬಳಸಲು ನಿರ್ಧರಿಸಿದರು. ಅವರು ಓದುವಂತಹ ವಿಷಯವು, ಮನೆಯನ್ನು ಬಿಟ್ಟ ತರುವಾಯ ಹಿತಕರವಾದ ಸಂಭಾಷಣೆಗೆ ಒಂದು ಆಧಾರವನ್ನು ಒದಗಿಸುತ್ತದೆ.
ನೈಜಿರಿಯದಲ್ಲಿರುವ ಒಬ್ಬ ಹಿರಿಯನು, ತನ್ನ ಮನೆವಾರ್ತೆಯಲ್ಲಿ ಕುಟುಂಬ ಬೈಬಲ್ ವಾಚನಕ್ಕಾಗಿ, ದೇವಪ್ರಭುತ್ವ ಶುಶ್ರೂಷಾ ಶಾಲೆಗಾಗಿ ರೂಪಿಸಲ್ಪಟ್ಟ ಕಾರ್ಯಕ್ರಮವನ್ನು ಆಧಾರದೋಪಾದಿ ಉಪಯೋಗಿಸುತ್ತಾನೆ. ಸಾಮಾನ್ಯವಾಗಿ ಬೆಳಗ್ಗೆ ದೈನಿಕ ವಚನದ ತಮ್ಮ ಚರ್ಚೆಯ ತರುವಾಯ, ಪ್ರತಿದಿನ ಅದರ ಒಂದು ಭಾಗವನ್ನು ಅವರು ಓದುತ್ತಾರೆ. ನೇಮಿತ ಭಾಗದಲ್ಲಿ ಸ್ವಲ್ಪವನ್ನು ಓದುವುದರಲ್ಲಿ ಸರತಿಯನ್ನು ತೆಗೆದುಕೊಳ್ಳುವಂತೆ ಮಕ್ಕಳು ಕೇಳಿಕೊಳ್ಳಲ್ಪಡುತ್ತಾರೆ. ನಂತರ ಓದಲ್ಪಟ್ಟ ವಚನಗಳ ಮೇಲೆ ಪ್ರಶ್ನೆಗಳನ್ನು ಕೇಳುವಂತೆ ಅವರು ಆಮಂತ್ರಿಸಲ್ಪಡುತ್ತಾರೆ.
ಜಪಾನಿನಲ್ಲಿರುವ ಒಬ್ಬಾಕೆ ಗೃಹಿಣಿಯು 1985 ರಿಂದ ವರ್ಷಕ್ಕೊಮ್ಮೆ ಸಂಪೂರ್ಣ ಬೈಬಲನ್ನು ಓದಿದ್ದಾಳೆ. ಪ್ರತಿ ದಿನ ಬೆಳಗ್ಗೆ 5 ಗಂಟೆಗೆ ಆರಂಭಿಸುತ್ತಾ, ಆಕೆಯ ಕಾರ್ಯಕ್ರಮವು 20 ರಿಂದ 30 ನಿಮಿಷಗಳ ವರೆಗೆ ಓದುವುದಾಗಿದೆ. ಪ್ರಯೋಜನಗಳ ಕುರಿತು ಆಕೆ ಹೇಳುವುದು: “ನನ್ನ ನಂಬಿಕೆಯು ಬಲಗೊಳಿಸಲ್ಪಟ್ಟಿದೆ. ನನ್ನ ಅಸ್ವಸ್ಥತೆಯನ್ನು ಮರೆಯುವಂತೆ ಮತ್ತು ಪ್ರಮೋದವನದ ನಿರೀಕ್ಷೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸುವಂತೆ ಅದು ನನಗೆ ಸಹಾಯ ಮಾಡುತ್ತದೆ.”
ಮೂವತ್ತು ವರ್ಷಗಳಿಂದ ಒಬ್ಬ ಪಯನೀಯರಳಾಗಿದ್ದರೂ, ಯಾರ ಗಂಡನು ಸಾಕ್ಷಿಯಾಗಿಲವ್ಲೊ, ಆ ಸಹೋದರಿಯು ತನ್ನ ಬೈಬಲ್ ವಾಚನವನ್ನು ಮಾಡಲು ಪ್ರತಿ ಬೆಳಗ್ಗೆ ಐದು ಗಂಟೆಗೆ ಏಳುತ್ತಾಳೆ. ವಾಚನಕ್ಕಾಗಿ ಆಕೆಯ ಕಾರ್ಯಕ್ರಮವು, ಹೀಬ್ರು ಶಾಸ್ತ್ರಗಳಿಂದ ಸುಮಾರು ನಾಲ್ಕು ಪುಟಗಳು, ಕ್ರೈಸ್ತ ಗ್ರೀಕ್ ಶಾಸ್ತ್ರಗಳಿಂದ ಒಂದು ಅಧ್ಯಾಯ, ಮತ್ತು ಜ್ಞಾನೋಕ್ತಿಗಳಿಂದ ಒಂದು ವಚನದ ವಾಚನವನ್ನು ಕೇಳಿಕೊಳ್ಳುತ್ತದೆ. ಆಕೆ 1959 ರಿಂದ ಪ್ರತಿ ವರ್ಷ ಸಂಪೂರ್ಣ ಬೈಬಲನ್ನು ಓದಿದ್ದಾಳೆ. ಆಕೆ ಹೇಳುವುದು: “ನನ್ನ ವಾಚನದ ಫಲಿತಾಂಶವಾಗಿ, ಯೆಹೋವನಿಂದ ಪ್ರೀತಿಸಲ್ಪಡುವ ಅನಿಸಿಕೆ ನನಗಾಗಿದೆ . . . ನಾನು ಉತ್ತೇಜನ, ಸಾಂತ್ವನ, ಮತ್ತು ತಿದ್ದುಪಾಟನ್ನು ಪಡೆಯುತ್ತೇನೆ.” ಆಕೆ ಕೂಡಿಸುವುದು: “ಬೈಬಲಿನ ವಾಚನವು, ಪ್ರತಿದಿನ ನನ್ನ ಜೀವನದ ಸ್ಪ್ರಿಂಗನ್ನು ಯೆಹೋವನಿಂದ ಬಿಗಿ ಮಾಡಿಸುವಂತಿದೆ.”
ಯೆಹೋವನ ಸಾಕ್ಷಿಗಳ ಚಟುವಟಿಕೆಯು ನಿಷೇಧಿಸಲ್ಪಟ್ಟಿರುವ ಒಂದು ದೇಶದಲ್ಲಿ ಸತ್ಯವನ್ನು ಕಲಿತ ಒಬ್ಬ ಸಹೋದರಿಗೆ, ಆಕೆಯ ವಿಶ್ವಾಸವನ್ನು ವಿರೋಧಿಸುವ ಗಂಡನೂ ಇದ್ದಾನೆ. ಆಕೆ ತನ್ನ ಬೈಬಲ್ ವಾಚನವನ್ನು ಸೋಮವಾರದಿಂದ ಶುಕ್ರವಾರದ ತನಕ, ಬೆಳಗ್ಗೆ 6 ಗಂಟೆಯಿಂದ 7 ಗಂಟೆಯ ನಡುವೆ ಮಾಡಲು ಶಕ್ತಳಾಗಿದಾಳ್ದೆ. ಇದು ಆಕೆಗೆ ಆಂತರಿಕ ಬಲವನ್ನು ನೀಡಿದೆ. ಆಕೆಯ ವಾಚನ ಆಕೆಯನ್ನು ಹೇಗೆ ಪ್ರಭಾವಿಸಿದೆ ಎಂಬುದರ ಕುರಿತು ಪುನರಾಲೋಚಿಸುತ್ತಾ ಆಕೆ ಹೇಳುವುದು: “ಯೆಹೋವನನ್ನು ಮತ್ತು ಯೇಸುವನ್ನು ಪ್ರೀತಿಸಲು ಮತ್ತು ಯೆಹೋವನ ವಾಗ್ದಾನಗಳು ವಿಫಲವಾಗುವುದಿಲ್ಲ ಎಂಬುದನ್ನು ಅರಿಯುತ್ತಾ, ಸಮಸ್ಯೆಗಳು ಮತ್ತು ಕಷ್ಟಗಳು ಇರುವಾಗಲೂ ಸಂತೋಷದಿಂದ ಜೀವಿಸಲು ನಾವು ಕಲಿಯುತ್ತೇವೆ.”
ಪಯನೀಯರ್ ಸೇವಾ ಶಾಲೆಯನ್ನು ಹಾಜರಾಗಿದ್ದ ಒಬ್ಬಾಕೆ ಸಹೋದರಿಯು, ಬೈಬಲ್ ವಾಚನವನ್ನು ದೈನಿಕ ರೂಢಿಯನ್ನಾಗಿ ಮಾಡುವುದರ ಕುರಿತು ನೀಡಲ್ಪಟ್ಟ ಸಲಹೆಯ ಅನುಸಾರ ಕ್ರಿಯೆಗೈಯಲು ನಿರ್ಧರಿಸಿದಳು. ಮೊದಲು, ಅದನ್ನು ಆಕೆ ಬೆಳಗ್ಗೆ 5 ಗಂಟೆಯಿಂದ 6 ಗಂಟೆಯ ನಡುವೆ ಮಾಡಲು ಶಕ್ತಳಾದಳು. ಕೆಲಸದ ಬದಲಾವಣೆಯು ಅದನ್ನು ಅಡ್ಡೈಸಿದಾಗ, ರಾತ್ರಿ 9 ರಿಂದ 10 ಗಂಟೆಯ ನಡುವಿನ ಸಮಯಕ್ಕೆ ಆಕೆ ಬದಲಾಯಿಸಿದಳು. ಇತರ ಸವಾಲನ್ನೊಡ್ಡುವ ಸನ್ನಿವೇಶಗಳು ಎದ್ದಾಗ, ಆಕೆ ಹೇಳುವುದು, “ಪರಿಸ್ಥಿತಿಗಳನುಸಾರ ನನ್ನ ವೇಳಾಪಟ್ಟಿಯನ್ನು ನಾನು ಸರಿಹೊಂದಿಸುತ್ತಾ ಇದ್ದೆ.”
ಬೆಳಗ್ಗೆ ಕಳೆದ ತರುವಾಯ:
ಬ್ರೆಸಿಲ್ ಬೆತೆಲ್ ಕುಟುಂಬದ ಸದಸ್ಯರಾಗಿರುವ ಇಬ್ಬರು ಒಡಹುಟ್ಟಿದ ಸಹೋದರಿಯರಿಗೆ, ಪ್ರತಿದಿನ ಮಧ್ಯಾಹ್ನದ ಊಟದ ತರುವಾಯ ಸುಮಾರು 20 ನಿಮಿಷಗಳ ವರೆಗೆ ಬೈಬಲನ್ನು ಒಟ್ಟಿಗೆ ಓದುವ ರೂಢಿಯಿದೆ. ಸಂಪೂರ್ಣ ಬೈಬಲನ್ನು ಅವರು ಸುಮಾರು 25 ಬಾರಿ ಓದಿದ್ದಾರೆ; ಆದರೂ ಅವರು ಬರೆಯುವುದು; “ಯಾವಾಗಲೂ ಏನಾದರೂ ಹೊಸದನ್ನು ನಾವು ಕಂಡುಕೊಳ್ಳುತ್ತೇವೆ, ಆದುದರಿಂದ ಬೈಬಲ್ ವಾಚನವು ಎಂದಿಗೂ ಏಕ ರೀತಿಯದಾಗ್ದುವುದಿಲ್ಲ.”
ಜಪಾನಿನ ಒಬ್ಬ ಅವಿವಾಹಿತ ಸಹೋದರಿಯು, ಸಾಕ್ಷಿಯೋಪಾದಿ ಬೆಳೆಸಲ್ಪಟ್ಟಿದ್ದರೂ ಶಾಸ್ತ್ರಗಳು ಆಕೆಗೆ ಚೆನ್ನಾಗಿ ತಿಳಿದಿರಲಿಲ್ಲವೆಂದು ಗ್ರಹಿಸಿದಳು; ಆಕೆ ಪಯನೀಯರಳಾದಾಗ, ಬೈಬಲನ್ನು ಕ್ರಮವಾಗಿ ಓದಲು ನಿರ್ಧರಿಸಿದಳು. ಈಗ ಆಕೆ ಪ್ರತಿ ವಾರಕ್ಕೆ ಒಂದು ದಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಂಚರಿಸುವಾಗ, ದೇವಪ್ರಭುತ್ವ ಶುಶ್ರೂಷಾ ಶಾಲೆಗಾಗಿರುವ ವಾಚನವನ್ನು ಮಾಡುತ್ತಾಳೆ. ನಂತರ ಮನೆಯಲ್ಲಿ ಆಕೆ ಹೆಚ್ಚಿನ ಸಂಶೋಧನೆಯನ್ನು ಮಾಡುತ್ತಾಳೆ. ವಾರದ ಅಂತ್ಯದೊಳಗೆ, ಪುಸ್ತಕಗಳನ್ನು ಅವುಗಳು ಬರೆಯಲ್ಪಟ್ಟಿರುವ ಕ್ರಮಾನುಸಾರವಾಗಿ ಆರಿಸುತ್ತಾ, ಹೆಚ್ಚಿನ ಬೈಬಲ್ ವಾಚನವನ್ನು ಆಕೆ ಮಾಡುತ್ತಾಳೆ.
ಸಂಪೂರ್ಣ ಬೈಬಲನ್ನು ಈಗಾಗಲೇ ಮೂರು ಬಾರಿ ಓದಿರುವ 13 ವರ್ಷ ಪ್ರಾಯದ ಒಬ್ಬ ಹುಡುಗನು, ಸದ್ಯಕ್ಕೆ ಶಾಲೆಯಿಂದ ಮನೆಗೆ ಬಂದ ಮೇಲೆ ಪ್ರತಿದಿನ ಒಂದು ಅಧ್ಯಾಯವನ್ನು ಓದುತ್ತಿದ್ದಾನೆ. “ಯೆಹೋವನಿಗಾಗಿ ಅಧಿಕ ಪ್ರೀತಿಯ ಅನಿಸಿಕೆ ಉಂಟಾಗುವಂತೆ” ಇದು ತನಗೆ ಸಹಾಯ ಮಾಡಿದೆ ಎಂದು ಅವನು ಹೇಳುತ್ತಾನೆ.
ಕೆಲಸಮಾಡುವ ಒಬ್ಬ ಪುರುಷ, ಹಿರಿಯ, ಗಂಡ, ಮತ್ತು ತಂದೆಯೋಪಾದಿ ಬಹಳ ಕಾರ್ಯಮಗ್ನ ವೇಳಾಪಟ್ಟಿಯಿರುವ ಒಬ್ಬ ಸಾಕ್ಷಿಯು, ರೈಲುಗಾಡಿಯಲ್ಲಿ ಕೆಲಸಕ್ಕಾಗಿ ಸಂಚರಿಸುವಾಗ ಬೈಬಲ್ ಆಡಿಯೊಕ್ಯಾಸೆಟ್ಗಳನ್ನು ಆಲಿಸುತ್ತಾನೆ. ನಂತರ ಮನೆಯಲ್ಲಿ ಅದೇ ವಿಷಯದ ತನ್ನ ವೈಯಕ್ತಿಕ ವಾಚನವನ್ನು ಮಾಡುತ್ತಾನೆ.
ತನ್ನ ವೈಯಕ್ತಿಕ ವಾಚನದ ಜೊತೆಗೆ, ಫ್ರಾನ್ಸ್ನಲ್ಲಿರುವ ಒಬ್ಬ ಪಯನೀಯರಳು ಊಟಗಳನ್ನು ತಯಾರಿಸುವಾಗ, ವಾಹನವನ್ನು ಓಡಿಸುವಾಗ ಕಷ್ಟಕರ ಸಮಯಗಳನ್ನು ತಾಳಿಕೊಳ್ಳುವಾಗ, ಅಥವಾ ಕೇವಲ ಆನಂದಕ್ಕಾಗಿ, ಬೈಬಲ್ ಆಡಿಯೊಕ್ಯಾಸೆಟ್ಗಳನ್ನು ಆಲಿಸುತ್ತಾಳೆ.
ಪ್ರತಿ ದಿನ ಏನಾದರೂ ಆತ್ಮಿಕವಾದದ್ದನ್ನು ತೆಗೆದುಕೊಳ್ಳುವಂತೆ ತನ್ನ ತಾಯಿ ಒತ್ತಾಯಿಸಿದಳೆಂದು ಮತ್ತು ಯಾವಾಗಲೂ ಅದೇ ಸಮಯದಲ್ಲಲ್ಲದ್ದಿದರೂ ಅವನು ಮೂರು ವರ್ಷ ಪ್ರಾಯದವನಾಗಿದ್ದ ಸಮಯದಿಂದ ಬೈಬಲನ್ನು ಪ್ರತಿನಿತ್ಯವೂ ಓದುತ್ತಿದ್ದಾನೆಂದು ಜಪಾನಿನ 21 ವರ್ಷ ಪ್ರಾಯದ ಪಯನೀಯರನು ಜ್ಞಾಪಿಸಿಕೊಳ್ಳುತ್ತಾನೆ. ಆ ದಿನಕ್ಕಾಗಿ ಅವನು ಆರಿಸಿದ ಭಾಗವನ್ನು ಓದಿದ ಬಳಿಕ, ಮುಖ್ಯ ವಚನಗಳನ್ನು ಪುನಃ ಓದುವುದನ್ನು ಅವನು ಖಚಿತಪಡಿಸಿಕೊಳ್ಳುತ್ತಾನೆ, ಮತ್ತು ತಾನು ಓದಿರುವ ವಿಷಯವನ್ನು ಮಾನಸಿಕವಾಗಿ ವಿಮರ್ಶಿಸಲು, ಅವನು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತಾನೆ.
ಇನ್ನೊಬ್ಬ ಸಾಕ್ಷಿ, ಒಬ್ಬ ಪಯನೀಯರ್, ಕಳೆದ 12 ವರ್ಷಗಳಲ್ಲಿ ಸಂಪೂರ್ಣ ಬೈಬಲನ್ನು ಸುಮಾರು ಹತ್ತು ಬಾರಿ ಓದಿದ್ದಾಳೆ. ಆಕೆಯ ಗಂಡ ಒಬ್ಬ ಅವಿಶ್ವಾಸಿಯಾಗಿದ್ದಾನೆ, ಆದುದರಿಂದ ವಾಚನವನ್ನು ಆಕೆ ಮಧ್ಯಾಹ್ನಕ್ಕೆ ಇಟ್ಟುಕೊಳ್ಳುತ್ತಾಳೆ.
ಸಾಯಂಕಾಲ:
ಮಲಗುವ ಮೊದಲು ಪ್ರತಿ ರಾತ್ರಿ ತನ್ನ ಬೈಬಲಿನಿಂದ ಓದುವ ಜಪಾನಿನ ಒಬ್ಬ ಹಿರಿಯನೂ ಕ್ರಮದ ಪಯನೀಯರನೂ, ಇದನ್ನು ಕಳೆದ ಎಂಟು ವರ್ಷಗಳಿಂದ ಮಾಡಿದ್ದಾನೆ. ಅವನು ಹೇಳುವುದು: “ಯೆಹೋವನು ಹೇಗೆ ಯೋಚಿಸುತ್ತಾನೆ, ವಿಷಯಗಳ ಕುರಿತು ಆತನಿಗೆ ಹೇಗನಿಸುತ್ತದೆ, ಮತ್ತು ಸನ್ನಿವೇಶಗಳನ್ನು ಆತನು ಹೇಗೆ ನಿರ್ವಹಿಸುತ್ತಾನೆ ಎಂಬ ವಿಷಯಗಳನ್ನು ಸೂಚಿಸುವ ವಚನಗಳನ್ನು ನಾನು ವಿಶೇಷವಾಗಿ ಇಷ್ಟಪಡುತ್ತೇನೆ. ಈ ವಚನಗಳ ಮೇಲೆ ಮನನ ಮಾಡುವ ಮೂಲಕ, ಯೆಹೋವನ ಆಲೋಚನೆಯನ್ನು ನನ್ನ ಆಲೋಚನೆಯನ್ನಾಗಿ ಮಾಡಿಕೊಳ್ಳಲು ಮತ್ತು ನನ್ನ ಕ್ರೈಸ್ತ ಸಹೋದರಸಹೋದರಿಯರಿಗೆ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ನೆರವನ್ನೀಯುವಂತೆ ಸಹಾಯಿಸಲ್ಪಟ್ಟಿದ್ದೇನೆ.”
ಫ್ರಾನ್ಸ್ನ ಒಬ್ಬ ಹಿರಿಯನು 1979 ರಿಂದ ಪ್ರತಿ ಸಾಯಂಕಾಲ ಬೈಬಲನ್ನು ಒಂದು ತಾಸಿನ ವರೆಗೆ ಓದುತ್ತಿದ್ದಾನೆ. ಹೋಲಿಕೆಗಾಗಿ ಅವನ ಮುಂದೆ ಅನೇಕವೇಳೆ ಐದು ಅಥವಾ ಆರು ಭಾಷಾಂತರಗಳು ಇರುತ್ತವೆ. ತನ್ನ ಜಾಗರೂಕ ವಾಚನವು “ಬೈಬಲ್ ಜ್ಞಾನವನ್ನು ಪ್ರತಿದಿನದ ಸನ್ನಿವೇಶಗಳಿಗೆ ಹೇಗೆ ಅನ್ವಯಿಸಬೇಕು” ಎಂಬುದನ್ನು ವಿವೇಚಿಸುವಂತೆ ಅವನಿಗೆ ಸಹಾಯ ಮಾಡಿದೆ ಎಂದು ಅವನು ಹೇಳುತ್ತಾನೆ. ಶಾಸ್ತ್ರಗಳಿಂದ ಸಲಹೆಯನ್ನು ಕೊಡುವಾಗ ಹೆಚ್ಚು ಪರಿಣಾಮಕಾರಿಯಾಗಿರುವಂತೆ ಇದು ಅವನಿಗೆ ಸಹಾಯ ಮಾಡಿದೆ.
ಕಳೆದ 28 ವರ್ಷಗಳಿಂದ, ನೈಜಿರಿಯದಲ್ಲಿರುವ ಒಬ್ಬ ಸಹೋದರನು, ಮರುದಿನ ಬೆಳಗ್ಗೆ ಚರ್ಚೆಗಾಗಿ ಪ್ರತಿನಿತ್ಯ ಶಾಸ್ತ್ರವಚನಗಳನ್ನು ಪರೀಕ್ಷಿಸುವುದು ಎಂಬ ಪುಸ್ತಕದಲ್ಲಿ ಒದಗಿಸಲ್ಪಟ್ಟ ಶಾಸ್ತ್ರ ವಚನವನ್ನು ಸಾಯಂಕಾಲದಲ್ಲಿ ಓದುವ ರೂಢಿಯನ್ನು ಮಾಡಿಕೊಂಡಿದ್ದಾನೆ. ಅದರೊಂದಿಗೆ, ವಚನವು ತೆಗೆಯಲ್ಪಟ್ಟಿರುವ ಸಂಪೂರ್ಣ ಅಧ್ಯಾಯವನ್ನು ಅವನು ಬೈಬಲಿನಿಂದ ಓದುತ್ತಾನೆ. ಅವನು ಮದುವೆಯಾದ ತರುವಾಯ, ವಿಷಯವನ್ನು ಓದುವ ಮತ್ತು ಚರ್ಚಿಸುವ ಈ ರೂಢಿಯನ್ನು ತನ್ನ ಹೆಂಡತಿಯೊಂದಿಗೆ ಮುಂದುವರಿಸಿದನು.
ಯಾರ ಹೆತ್ತವರು ಸಾಕ್ಷಿಗಳಾಗಿಲ್ಲವೊ ಅಂತಹ ಒಬ್ಬ ಹದಿವಯಸ್ಕಳು, ಪ್ರತಿ ರಾತ್ರಿ ಮಲಗುವ ಮೊದಲು ಐದರಿಂದ ಹತ್ತು ನಿಮಿಷಗಳ ತನಕ ಓದುವುದನ್ನು ಒಂದು ರೂಢಿಯನ್ನಾಗಿ ಮಾಡಿದ್ದಾಳೆ. ಆಕೆಗೆ ಅವು ಅಮೂಲ್ಯ ನಿಮಿಷಗಳಾಗಿವೆ, ಮತ್ತು ಆಕೆ ವಾಚನದ ಮೊದಲು ಹಾಗೂ ನಂತರ ಪ್ರಾರ್ಥಿಸುತ್ತಾಳೆ. ಬೈಬಲ್ ಬರಹಗಾರರಲ್ಲಿ ಪ್ರತಿಯೊಬ್ಬರು ದಾಖಲು ಮಾಡುವಂತೆ ಯೆಹೋವನು ನಿರ್ದೇಶಿಸಿದ ಸಂದೇಶವನ್ನು ತಿಳಿಯುವುದು ಆಕೆಯ ಗುರಿಯಾಗಿದೆ.
ಬೆತೆಲ್ ಸೇವೆಯಲ್ಲಿರುವ ಒಬ್ಬ ವಿವಾಹಿತ ಸಹೋದರನು, ಕಳೆದ ಎಂಟು ವರ್ಷಗಳ ಸಮಯದಲ್ಲಿ, ವರ್ಷಕ್ಕೊಮ್ಮೆ ಬೈಬಲನ್ನು ಓದಿ ಮುಗಿಸಿದ್ದಾನೆ. ರಾತ್ರಿ ಮಲಗುವ ಮೊದಲು 20 ರಿಂದ 30 ನಿಮಿಷಗಳ ವರೆಗೆ ಅವನು ಓದುತ್ತಾನೆ. ಅವನು ಬಹಳ ದಣಿದಿದ್ದರೂ, ವಾಚನವನ್ನು ಮಾಡದೆ ಅವನು ಮಲಗುವುದಾದರೆ, ಅವನಿಗೆ ನಿದ್ದೆ ಬರುವುದಿಲ್ಲವೆಂದು ಅವನು ಕಂಡುಕೊಳ್ಳುತ್ತಾನೆ. ಅವನು ಎದ್ದು ಆ ಆತ್ಮಿಕ ಅಗತ್ಯವನ್ನು ಪೂರೈಸಲೇಬೇಕು.