ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಒಬ್ಬ ವಿದ್ವಾಂಸನನ್ನು ಪ್ರಭಾವಿಸುತ್ತದೆ
ಪ್ರಾಚೀನ ಗ್ರೀಕ್ ವಿದ್ವಾಂಸ ಡಾ. ರೇಕಲ್ ಟೆನ್ ಕಾಟ ಅವರಿಗನುಸಾರ, ಡಚ್ ಬೈಬಲ್ ಭಾಷಾಂತರಗಳು ನಿರ್ದಿಷ್ಟ ಶಬ್ದಗಳನ್ನು ನಿಷ್ಕೃಷ್ಟವಾಗಿ ನಿರೂಪಿಸಲು ತಪ್ಪಿಹೋಗುತ್ತವೆ. ಉದಾಹರಣೆಗಾಗಿ, ಲೂಕ ಅಧ್ಯಾಯ 2 ರಲ್ಲಿ ನಾವು ಯೇಸುವಿನ ಬೆಳವಣಿಗೆಯ ಅನುಕ್ರಮದ ಹಂತಗಳನ್ನು ವರ್ಣಿಸಲು ಬಳಸಲಾದ ಮೂರು ವಿಭಿನ್ನ ಗ್ರೀಕ್ ಶಬ್ದಗಳನ್ನು (ಬ್ರಿಫಾಸ್, ಪೈಡ್ಯನ್ ಮತ್ತು ಪೈಯಸ್) ಕಂಡುಕೊಳ್ಳುತ್ತೇವೆ. ಈ ಶಬ್ದಗಳಲ್ಲಿ ಪ್ರತಿಯೊಂದಕ್ಕೆ ಅರ್ಥದ ಭಿನ್ನ ಛಾಯೆಗಳಿವೆ. ಹಲವಾರು ಬೈಬಲುಗಳಲ್ಲಾದರೋ, ಈ ಶಬ್ದಗಳಲ್ಲಿನ ಎರಡು ಅಥವಾ ಎಲ್ಲ ಮೂರನ್ನು ಅಸ್ಪಷ್ಟವಾಗಿಗಿ “ಮಗು” ಎಂದು ನಿರೂಪಿಸಲಾಗಿದೆ. ಸರಿಯಾದ ಭಾಷಾಂತರ ಏನಾಗಿದೆ?
ವಚನ 12 ರಲ್ಲಿರುವ ಗ್ರೀಕ್ ಶಬ್ದ ಬ್ರಿಫಾಸ್ ಅಂದರೆ “ಒಂದು ನವಜಾತ ಅಥವಾ ಶಿಶು” ಎಂದು ಡಾಕ್ಟರ್ ಟೆನ್ ಕಾಟ ವಿವರಿಸುತ್ತಾರೆ. ವಚನ 27 ರಲ್ಲಿ ಉಪಯೋಗಿಸಲಾದ ಪೈಡ್ಯನ್ ಅಂದರೆ “ಚಿಕ್ಕ ಹುಡುಗ ಅಥವಾ ಮಗು,” ಮತ್ತು ವಚನ 43 ರಲ್ಲಿ ಕಂಡುಕೊಳ್ಳಲ್ಪಟ್ಟ ಪೈಯಸ್ ಈ ಶಬ್ದವನ್ನು “ಹುಡುಗ” ಎಂದು ನಿರೂಪಿಸಬೇಕಾಗಿದೆ. ಬೇಬಲ್ ಎನ್ ವೇಟನ್ಶಾಪ್ನ (ಬೈಬಲ್ ಮತ್ತು ವಿಜ್ಞಾನ) ಮಾರ್ಚ್ 1993ರ ಸಂಚಿಕೆಯಲ್ಲಿ “ನನಗೆ ತಿಳಿದಿರುವಷ್ಟರ ಮಟ್ಟಿಗೆ ಒಂದೇ ಒಂದು ಡಚ್ ಭಾಷಾಂತರವು ಇದನ್ನು ಯಥೋಚಿತವಾಗಿ ಅಂದರೆ, ಮೂಲಗ್ರಂಥಕ್ಕೆ ಸಂಪೂರ್ಣವಾಗಿ ಹೊಂದಿಕೆಯಲ್ಲಿ ನಿರೂಪಿಸಿಲ್ಲ” ಎಂದು ಡಾಕ್ಟರ್ ಟೆನ್ ಕಾಟ ಬರೆದರು.
ಅನಂತರ, ಡಾಕ್ಟರ್ ಟೆನ್ ಕಾಟ ರಿಗೆ, ಡಚ್ಅನ್ನು ಒಳಗೂಡಿಸಿ 12 ಭಾಷೆಗಳಲ್ಲಿ ದೊರೆಯುವ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ಅನ್ನು ತೋರಿಸಲಾಯಿತು. ಅವರ ಪ್ರತಿಕ್ರಿಯೆ ಏನಾಗಿತ್ತು? “ಬ್ರಿಫಾಸ್, ಪೈಡ್ಯನ್ ಮತ್ತು ಪೈಯಸ್ ಎಂಬ ಮೂರು ಗ್ರೀಕ್ ಶಬ್ದಗಳ ವಿಭಿನ್ನ ಬಳಕೆಗೆ ಯೋಗ್ಯವಾದ ಪರಿಗಣನೆಯು ಕೊಡಲ್ಪಟ್ಟಿರುವ ಒಂದು ಡಚ್ ಬೈಬಲ್ ನಿಜವಾಗಿಯೂ ಇದೆ ಎಂಬ ವಿಷಯದಲ್ಲಿ ನನಗೆ ತುಂಬ ಆಶ್ಚರ್ಯವಾಗುತ್ತದೆ” ಎಂದು ಅವರು ಹೇಳಿದರು. ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಮೂಲ ಗ್ರೀಕ್ ಗ್ರಂಥಕ್ಕೆ ಹೊಂದಿಕೆಯಲ್ಲಿ ಈ ವಚನಗಳನ್ನು ಭಾಷಾಂತರಿಸಿದೆಯೋ? “ಸಂಪೂರ್ಣವಾಗಿ ಹೊಂದಿಕೆಯಲ್ಲಿ” ಎಂದು ಪ್ರತಿಕ್ರಿಯಿಸುತ್ತಾರೆ ಡಾಕ್ಟರ್ ಟೆನ್ ಕಾಟ.