ನಿಮ್ಮನ್ನು ಹೃತ್ಪೂರ್ವಕವಾಗಿ ಆಮಂತ್ರಿಸಲಾಗಿದೆ
ಸುಮಾರು 1,900 ವರ್ಷಗಳ ಹಿಂದೆ ಮನುಷ್ಯನಾದ ಯೇಸು ಕ್ರಿಸ್ತನ ಮರಣವು ಮಾನವ ಇತಿಹಾಸದಲ್ಲಿ ಅತಿ ಪ್ರಮುಖವಾದ ಘಟನೆಯಾಗಿತ್ತು. ಒಂದು ಪ್ರಮೋದವನ ಭೂಮಿಯ ಮೇಲೆ ನಿತ್ಯ ಜೀವವನ್ನು ಪಡೆಯುವ ಪ್ರತೀಕ್ಷೆಯನ್ನು ಅದು ನಮ್ಮೆಲ್ಲರ ಮುಂದೆ ತೆರೆಯಿತು. ಒಂದು ಸರಳವಾದ ಆಚರಣೆಯಲ್ಲಿ, ತನ್ನ ಪ್ರೀತಿಪೂರ್ವಕ ಮಾನವ ಯಜ್ಞದ ಸಂಕೇತಗಳಾಗಿ, ಯೇಸು ಹುಳಿಯಿಲ್ಲದ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಉಪಯೋಗಿಸಿದನು. ಅನಂತರ ಆತನು ತನ್ನ ಶಿಷ್ಯರಿಗೆ ಹೇಳಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” (ಲೂಕ 22:19) ಈ ಪ್ರಮುಖ ಘಟನೆಯನ್ನು ನೀವು ನೆನಪಿಸಿಕೊಳ್ಳುವಿರೋ? ಈ ಜ್ಞಾಪಕಾಚರಣೆಯನ್ನು ಸ್ಮರಿಸಲು ಅವರೊಂದಿಗೆ ಜೊತೆಗೂಡಲು ಯೆಹೋವನ ಸಾಕ್ಷಿಗಳು ನಿಮ್ಮನ್ನು ಆದರಣೆಯಿಂದ ಆಮಂತ್ರಿಸುತ್ತಾರೆ. ಬೈಬಲಿನ ಚಾಂದ್ರಮಾನ ಕ್ಯಾಲೆಂಡರ್ನಲ್ಲಿ ನೈಸಾನ್ 14 ರೊಂದಿಗೆ ಸರಿಬೀಳುವ ತಾರೀಖಿನಂದು ಸೂರ್ಯಾಸ್ತಮಾನದ ನಂತರ ಅದು ಇರುವುದು. ನಿಮ್ಮ ಮನೆಗೆ ಹತ್ತಿರವಾಗಿರುವ ರಾಜ್ಯ ಸಭಾಗೃಹಕ್ಕೆ ನೀವು ಹಾಜರಾಗಬಹುದು. ನಿಖರವಾದ ಸಮಯ ಮತ್ತು ಸ್ಥಳಕ್ಕಾಗಿ ನೀವು ಸ್ಥಳೀಕವಾಗಿ ಯೆಹೋವನ ಸಾಕ್ಷಿಗಳನ್ನು ಕೇಳಬಹುದು. 1995 ರಲ್ಲಿ ಈ ಆಚರಣೆಗಾಗಿ ತಾರೀಖು ಶುಕ್ರವಾರ, ಎಪ್ರಿಲ್ 14 ಆಗಿರುವುದು.