ರಾಜ್ಯ ಘೋಷಕರು ವರದಿ ಮಾಡುತ್ತಾರೆ
ದೇವರ ಜನರು ತಮ್ಮನ್ನು ಇಚ್ಛಾಪೂರ್ವಕವಾಗಿ ನೀಡಿಕೊಳ್ಳುತ್ತಾರೆ
ಅವನ ಹೆಸರು ಯೋಸೇಫ್ ಮತ್ತು ಅವನು ಕುಪ್ರದ್ವೀಪದವನಾಗಿದ್ದನು. ಕ್ರೈಸ್ತತ್ವದ ಅಭಿವೃದ್ಧಿಗಾಗಿ ಹಣಕಾಸಿನ ದೃಷ್ಟಿಯಿಂದ ನೆರವು ನೀಡಲು ತಮ್ಮ ಹೊಲಗಳನ್ನು ಮತ್ತು ಮನೆಗಳನ್ನು ಮಾರಿದಂತಹ ಪ್ರಥಮ ಶತಮಾನದ ಕ್ರೈಸ್ತರಲ್ಲೊಬ್ಬನಾಗಿದ್ದನು. ಅವನ ಪ್ರೀತಿಯ ಸ್ವಭಾವ ಮತ್ತು ಔದಾರ್ಯತೆಯ ಕಾರಣದಿಂದಾಗಿ, ಅವನು ಬಾರ್ನಬ, ಅಂದರೆ “ಸಾಂತ್ವನದ ಪುತ್ರ” ಎಂದು ಪ್ರಸಿದ್ಧನಾದನು.—ಅ. ಕೃತ್ಯಗಳು 4:34-37.
ಇತರರಲ್ಲಿ ಅಂತಹ ಯಥಾರ್ಥ ಆಸಕ್ತಿಯು ಯಾವಾಗಲೂ ಯೆಹೋವನ ಸತ್ಯಾರಾಧಕರ ಒಂದು ಗುರುತಾಗಿರುತ್ತದೆ. ಸಾಲೊಮನ್ ಐಲೆಂಡ್ಸ್ನಿಂದ ಬಂದಿರುವ ಈ ಮುಂದಿನ ಅನುಭವದಲ್ಲಿ ಎತ್ತಿತೋರಿಸಲ್ಪಡುವಂತೆ ಯೆಹೋವನ ಸಾಕ್ಷಿಗಳು ಇದರಿಂದ ಭಿನ್ನರಾಗಿಲ್ಲ.
ಆಸ್ಟ್ರೇಲಿಯ ಮತ್ತು ನ್ಯೂ ಜೀಲೆಂಡ್ನಿಂದ ಸುಮಾರು 60 ಸಾಕ್ಷಿಗಳ ಒಂದು ಗುಂಪು ಗ್ವಾಡಲ್ಕ್ಯಾನಲ್ನಲ್ಲಿ ಸಾಲೊಮನ್ ಐಲೆಂಡ್ಸ್ನ ರಾಜಧಾನಿಯಾದ ಹೋನಿಯಾರಾಕ್ಕೆ ಪ್ರಯಾಣಿಸಿತು. ದೊಡ್ಡ ಕ್ರೈಸ್ತ ಒಕ್ಕೂಟಗಳಿಗಾಗಿ ಒಂದು ಎಸೆಂಬ್ಲಿ ಹಾಲ್ನ ನಿರ್ಮಾಣದಲ್ಲಿ ಸಹಾಯ ಮಾಡಲು ಅವರು ಬಂದಿದ್ದರು. ಸುಮಾರು 1,200 ಜನರನ್ನು ಕುಳ್ಳಿರಿಸುವ ಸಾಮರ್ಥ್ಯವಿರುವ ಒಂದು ಹಾಲ್ ಅನ್ನು ಕಟ್ಟಲು ಅವರಿಗೆ ಕೇವಲ ಎರಡು ವಾರಗಳು ತಗಲಿದವು!
ಸುಮಾರು ಅದೇ ಸಮಯಕ್ಕೆ, ನ್ಯೂ ಜಾರ್ಜಿಯಾ ದ್ವೀಪದಲ್ಲಿನ, ಚಿಕ್ಕ ಪಟ್ಟಣವಾದ ಮೂಂಡಾದ ಸ್ಥಳೀಯ ಅಧಿಕಾರಿಗಳು ಯೆಹೋವನ ಸಾಕ್ಷಿಗಳ ಸಭೆಗೆ ಪಟ್ಟಣದ ಮಧ್ಯದಲ್ಲೀ ಒಂದು ಜಾಗವನ್ನು ಕೊಟ್ಟರು. ಅವರು ಒಂದು ರಾಜ್ಯ ಸಭಾಗೃಹವನ್ನು, ಆರಾಧನೆಯ ಒಂದು ಸ್ಥಳವನ್ನು ಕಟ್ಟಲು ಬಯಸುತ್ತಿದ್ದರು. ಮತ್ತು ಅವರಿಗೆ ನಿಜವಾಗಿ ಒಂದು ರಾಜ್ಯ ಸಭಾಗೃಹದ ಆವಶ್ಯಕತೆಯಿತ್ತು. ಅವರು ಎಲೆಗಳಿಂದ ಮಾಡಲ್ಪಟ್ಟ ಒಂದು ಚಿಕ್ಕ ಮನೆಯಲ್ಲಿ ಕೂಡುತ್ತಿದ್ದರು ಆದರೆ ಒಂದು ರಾಜ್ಯ ಸಭಾಗೃಹವನ್ನು ಕಟ್ಟಲು ಅವರಲ್ಲಿ ಮೂಲಸಂಪತ್ತುಗಳಿರಲಿಲ್ಲ.a ಸಭೆಯು ಹೆಚ್ಚಾಗಿ ವೃದ್ಧರು, ದುರ್ಬಲರಾದ ಜನರು ಮತ್ತು ಮಕ್ಕಳಿಂದ ರಚಿಸಲ್ಪಟ್ಟಿತ್ತು, ಮತ್ತು ನಿರ್ಮಾಣಕಾರ್ಯದ ವೃತ್ತಿಯಲ್ಲಿ ಯಾರೊಬ್ಬರಿಗೂ ಅನುಭವವಿರಲಿಲ್ಲ.
ಸುಮಾರು 380 ಕಿಲೋಮೀಟರ್ ದೂರದಲ್ಲಿ, ಗ್ವಾಡಲ್ಕ್ಯಾನಲ್ನ ದ್ವೀಪದಲ್ಲಿ, ಹೋನಿಯಾರಾ ಪಟ್ಟಣದಲ್ಲಿರುವ ಸಾಕ್ಷಿಗಳು ತಮ್ಮನ್ನು ಇಚ್ಛಾಪೂರ್ವಕವಾಗಿ ನೀಡಿಕೊಂಡರು. (ಕೀರ್ತನೆ 110:3) ಅವರು ತರ್ಕಿಸಿದ್ದು: “ಇತರ ದೇಶಗಳಲ್ಲಿರುವ ನಮ್ಮ ಸಹೋದರರು ನಮಗಾಗಿ ಒಂದು ಎಸೆಂಬ್ಲಿ ಹಾಲ್ ಅನ್ನು ಎರಡು ವಾರಗಳಲ್ಲಿ ಕಟ್ಟಲು ಸಿದ್ಧರಾಗಿರುತ್ತಿದ್ದರೆ, ಮೂಂಡಾದಲ್ಲಿರುವ ನಮ್ಮ ಸಹೋದರರಿಗೆ ನಾವು ಖಂಡಿತವಾಗಿ ನೆರವಾಗಬಲ್ಲೆವು ಮತ್ತು ಒಂದು ರಾಜ್ಯ ಸಭಾಗೃಹವನ್ನು ಎರಡು ವಾರಗಳಲ್ಲಿ ಕಟ್ಟಬಲ್ಲೆವು.”
ಸಂಭವಿಸಿದ್ದಂತಹದ್ದು ಇದೇ. ಒಂದು ದಿನ ಸಂತೋಷಿತ ಮತ್ತು ಆತುರ ಸಾಕ್ಷಿ ಸ್ವಯಂಸೇವಕರಿಂದ ತುಂಬಿದಂತಹ ಒಂದು ದೋಣಿಯು ಮೂಂಡದಲ್ಲಿ ಆಗಮಿಸಿತು. ಗಂಡಸರು ಮತ್ತು ಹೆಂಗಸರು, ವೃದ್ಧರು ಮತ್ತು ಎಳೆಯರು, ಎಲ್ಲರೂ ತಮ್ಮ ಸರಕನ್ನು ಇಳಿಸುವದರಲ್ಲಿ ಕಾರ್ಯಮಗ್ನರಾದರು ಮತ್ತು ತಮಗಿಂತ ಮುಂಚೆ ಮೂಂಡದಲ್ಲಿ ಆಗಮಿಸಿದ ಮರ, ಸಿಮೆಂಟ್, ಚಾವಣಿಗಾಗಿ ಕಬ್ಬಿಣ ಮತ್ತು ಇತರ ಸಾಮಗ್ರಿಗಳೊಂದಿಗೆ ಕಟ್ಟಲು ಆರಂಭಿಸಿದರು.
ಕೆಲಸವು ಆರಂಭವಾದ ಸ್ವಲ್ಪ ಸಮಯದಲ್ಲೀ, ಒಂದು ಪ್ರಚಂಡ ಚಂಡಮಾರುತವು ಪಟ್ಟಣದ ನೀರಿನ ಸರಬರಾಜನ್ನು ಕಡಿದುಹಾಕಿತು. ಆದಾಗಲೂ, ಇದು ಒಂದು ಜಯಿಸಲಾಗದ ಸಮಸ್ಯೆಯಾಗಿ ಪರಿಣಮಿಸಲಿಲ್ಲ. ಇಡೀ ಕಟ್ಟೋಣ ಕಾರ್ಯಾವಳಿಗೆ ನೀರನ್ನು ಒದಗಿಸಿದ ಒಂದು ಬಾವಿಯನ್ನು ಸಾಕ್ಷಿಗಳು ತೋಡಿದರು. ಎಲ್ಲ ಕಾರ್ಮಿಕರಿಗೆ ಆಹಾರದ ಕುರಿತಾಗಿ ಏನು? ಅದೂ ಒಂದು ಸಮಸ್ಯೆಯಾಗಿರಲಿಲ್ಲ. ಹೋನಿಯಾರಾದ ಸಭೆಗಳಿಂದ ಒದಗಿಸಲಾದ ಆಹಾರದೊಂದಿಗೆ ಹೋನಿಯಾರಾದಿಂದ ಬಂದಂತಹ ಸ್ವಯಂಸೇವಕರನ್ನು ಕಳುಹಿಸಲಾಗಿತ್ತು. ಅವರು ತಮ್ಮ ಸ್ವಂತ ಅಡಿಗೆಯವರನ್ನೂ ಕರೆತಂದಿದ್ದರು!
ನೆರೆಹೊರೆಯವರು ಈ ಯೋಜನೆಯ ಪ್ರಗತಿಯನ್ನು ಆಶ್ಚರ್ಯದಿಂದ ಗಮನಿಸಿದರು. ಅವರಲ್ಲಿ ಒಬ್ಬನು ಅಂದದ್ದು: “ಇಲ್ಲಿ ವಿಷಯಗಳು ಕೆಲವು ದಿನಗಳೊಳಗೆ ಆಗುವುದಿಲ್ಲ. ಅವುಗಳಿಗೆ ವರ್ಷಗಳು ತಗಲುತ್ತವೆ.” ಒಬ್ಬ ಧಾರ್ಮಿಕ ಮುಖಂಡನಾದ ಇನ್ನೊಬ್ಬ ನೆರೆಯವನು, ತನ್ನ ಚರ್ಚು ಕಳೆದ 20 ವರ್ಷಗಳಿಂದ ನಿರ್ಮಾಣವಾಗುತ್ತಾ ಇದೆ ಮತ್ತು ಇನ್ನೂ ಮುಗಿದಿಲ್ಲವೆಂದು ಒಪ್ಪಿಕೊಂಡನು. ವ್ಯತಿರಿಕ್ತವಾಗಿ, ಮೂಂಡದಲ್ಲಿರುವ ಯೆಹೋವನ ಸಾಕ್ಷಿಗಳ ಹೊಸ ರಾಜ್ಯ ಸಭಾಗೃಹವು ಕೇವಲ ಹತ್ತು ದಿನಗಳೊಳಗೆ ಮುಗಿಸಲ್ಪಟ್ಟಿತು!
[ಅಧ್ಯಯನ ಪ್ರಶ್ನೆಗಳು]
a ಎಲೆಗಳಿಂದ ಮಾಡಲ್ಪಟ್ಟ ಒಂದು ಮನೆಯು, ಮರಗಾಡಿನಿಂದ ಅಥವಾ ಕಾಡಿನಿಂದ ಕಡಿಯಲ್ಪಟ್ಟ ಸಾಮಾಗ್ರಿಗಳಿಂದ ಮಾಡಲ್ಪಟ್ಟ ಒಂದು ಮನೆಯಾಗಿದೆ. ಚೌಕಟ್ಟನ್ನು ಕೋಲುಗಳಿಂದ ಮತ್ತು ಕಂಬಗಳಿಂದ ಮಾಡಲಾಗುತ್ತದೆ, ಮತ್ತು ಮಾಳಿಗೆಯನ್ನು ಹಾಗೂ ಗೋಡೆಗಳನ್ನು ಕೋಲುಗಳ ಮೇಲೆ ಮಡಿಸಲ್ಪಟ್ಟ ತಾಳೆಯ ಎಲೆಗಳಿಂದ ಮಾಡಲ್ಪಟ್ಟ ಮತ್ತು ಬಳ್ಳಿಗಳೊಂದಿಗೆ ಹೊಲಿಸಿದ ಪುಟಿಪುಗಳಿಂದ ಮುಚ್ಚಲ್ಪಟ್ಟಿವೆ.
[ಪುಟ 24ರಲ್ಲಿರುವಚಿತ್ರ]
(For fully formatted text, see publication)
ದಕ್ಷಿಣ ಪಸೆಫಿಕ್ ಮಹಾಸಾಗರ
ಸಾಲೊಮನ್ ಐಲೆಂಡ್ಸ್
ಮೂಂಡಾ
ಗ್ವಾಡಲ್ಕ್ಯಾನಲ್
ಹೋನಿಯಾರಾ
[ಭೂಪಟ]
ಆಸ್ಟ್ರೇಲಿಯ
ನ್ಯೂ ಜೀಲೆಂಡ್