ಚಿಕ್ಕದ್ದು ಆದರೆ ಶಕ್ತಿಯುತವಾದದ್ದು
ಕೆನಡದ ಒಬ್ಬ ಯುವ ಪುರುಷನಾದ, ರಾಬರ್ಟ್, ಜೀವಿತದ ಉದ್ದೇಶವನ್ನು ಹುಡುಕುತ್ತಾ ಇಡೀ ಯುರೋಪನ್ನು ಸಂಚರಿಸಿದನು. ಭವಿಷ್ಯದ ಕುರಿತಾಗಿ ಅವನನ್ನು ನಿರಾಶನಾಗಿ ಮಾಡಿದ ಹಲವಾರು ವಿಷಯಗಳನ್ನು ಅವನು ನೋಡಿದನು.
ಸ್ಪೆಯಿನ್ನ ಸೆವಿಲ್ನಲ್ಲಿ ಒಂದು ಚಿಕ್ಕ ಹೋಟೇಲಿನಲ್ಲಿ ಕುಳಿತ್ತಿದ್ದಾಗ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಒಂದು ಕಿರುಹೊತ್ತಗೆಯನ್ನು ರಾಬರ್ಟ್ಗೆ ಕೊಡಲಾಯಿತು. ಮೊದಲಲ್ಲಿ, ರಾಬರ್ಟ್ ಅನಿಶ್ಚಿತನಾಗಿದ್ದನು. “ಆದರೂ ನಾನು ಅದನ್ನು ಓದಿದೆ ಖಂಡಿತ,” ಎಂದು ಅವನು ಹೇಳಿದನು. “ನಾನು ಅದನ್ನು ವಿವರಿಸಲಾರೆ, ಆದರೆ ಏನೋ ಫಕ್ಕನೆ ಅರ್ಥವಾದಂಥ ಅನಿಸಿಕೆ ನನಗಾಯಿತು. ನನ್ನ ಪ್ರಯಾಣಗಳಲ್ಲಿ ನಾನು ಮಾನವ ಮುಗ್ಗಟ್ಟು ಮತ್ತು ದುರ್ದೆಶೆಯ ಅನೇಕ ರೂಪಗಳನ್ನು ನೋಡಿದ್ದೆ ಮತ್ತು ವಿಷಯಗಳನ್ನು ಬದಲಾಯಿಸುವ ನನ್ನ ಅಸಮರ್ಥತೆಯ ಕುರಿತಾಗಿ ಹತಾಶನಾಗಿದ್ದೆ. ಟ್ರ್ಯಾಕ್ಟನ್ನು ಓದಿದ ನಂತರ, ನಾನು ಚಿಂತಿಸತೊಡಗಿದೆ: ‘ಈ “ಹೊಸ ಲೋಕ”ದ ಅಸ್ತಿತ್ವಕ್ಕೆ ಯಾವುದಾದರೂ ಸಾಧ್ಯತೆ ಇದೆಯೋ?’ ಅನಂತರ ನಾನು ನೆನಸಿದೆ, ‘ಹೌದು, ಅದು ಸಾಧ್ಯವಿರಬಹುದು.’”
ನವೀಕರಿಸಲ್ಪಟ್ಟ ನಿರೀಕ್ಷೆಯೊಂದಿಗೆ, ತಾನು ಮನೆಗೆ ಹಿಂದಿರುಗಿದಾಗ ಯಾರಾದರೂ ತನ್ನನ್ನು ಭೇಟಿಯಾಗಲು ಮತ್ತು ಬೈಬಲನ್ನು ಅರ್ಥಮಾಡಿಕೊಳ್ಳುವಂತೆ ಅವನಿಗೆ ಸಹಾಯ ಮಾಡಲು ಕೇಳಿಕೊಳ್ಳುತ್ತಾ ರಾಬರ್ಟ್ ಕೆನಡದಲ್ಲಿರುವ ಯೆಹೋವನ ಸಾಕ್ಷಿಗಳ ಆಫೀಸಿಗೆ ಬರೆದನು.
ನಿಸ್ಸಂದೇಹವಾಗಿ, ಮೌಖಿಕವಾಗಿ ಉಚ್ಚರಿಸಲ್ಪಟ್ಟ ಮಾತುಗಳು ಶಕ್ತಿಯುತವಾಗಿವೆ. ಆದಾಗಲೂ, ಮುದ್ರಿತ ಸಂದೇಶದ ಶಕ್ತಿಯನ್ನು ಎಂದೂ ಕಡಮೆಯಾಗಿ ಎಣಿಸಬೇಡಿರಿ. ಅವು ಎಷ್ಟೇ ಚಿಕ್ಕದ್ದಾಗಿರಲಿ, ಬೈಬಲ್ಆಧಾರಿತ ಪ್ರಕಾಶನಗಳಿಗೆ ಬಲವತ್ತಾದ ಆಕರ್ಷಣೆ ಇದೆ. ಭವಿಷ್ಯಕ್ಕಾಗಿ ಒಂದು ನಿಶ್ಚಿತ ನಿರೀಕ್ಷೆಯನ್ನು ಕೊಡುತ್ತಾ ಅವು ಮನಸ್ಸು ಮತ್ತು ಹೃದಯವನ್ನು ಪ್ರಭಾವಿಸುತ್ತವೆ.—ಇಬ್ರಿಯ 4:12.