ನಿಮಗೆ ನೆನಪಿದೆಯೇ?
ಇತ್ತೀಚೆಗಿನ ಕಾವಲಿನಬುರುಜು ಸಂಚಿಕೆಗಳು ನಿಮಗೆ ಕಾರ್ಯರೂಪ ಮೌಲ್ಯದವುಗಳಾಗಿ ಕಂಡಿವೆಯೋ? ಹಾಗಿದ್ದರೆ ಕೆಳಗಿನ ಪ್ರಶ್ನೆಗಳೊಂದಿಗೆ ನಿಮ್ಮ ಸ್ಮರಣಶಕ್ತಿಯನ್ನು ಏಕೆ ಪರೀಕ್ಷಿಸಬಾರದು:
▫ ಯೆಹೋವನ ಸಾಕ್ಷಿಗಳು ತಮ್ಮ ನೆರೆಯವರನ್ನು ಸಂದರ್ಶಿಸುತ್ತಾ ಇರುವದೇಕೆ?
ವಾಗ್ದಾನಿಸಲ್ಪಟ್ಟ ರಾಜ್ಯದ ಮೂಲಕ ಯೆಹೋವನ ಸಾಕ್ಷಿಗಳು ತಮಗಾಗಿ ದೇವರ ಆಶೀರ್ವಾದಗಳನ್ನು ಬಯಸುತ್ತಾರೆ, ಮತ್ತು ತಮ್ಮ ನೆರೆಯವರಿಗಾಗಿ ಪ್ರೀತಿಯಿಂದ ಪ್ರಚೋದಿಸಲ್ಪಟ್ಟು, ಅವರಿಗಾಗಿಯೂ ಅದೇ ಆಶೀರ್ವಾದವನ್ನು ಬಯಸುತ್ತಾರೆ. ಹೀಗೆ ಯೇಸುವಿನ ಮಾದರಿಯನ್ನು ಅನುಸರಿಸುತ್ತಾ, ತಮ್ಮ ನೆರೆಯವರನ್ನು ಸಂದರ್ಶಿಸಲು ಅವರು ನಿಸ್ವಾರ್ಥ ಪ್ರೀತಿಯಿಂದ ಒತ್ತಾಯಿಸಲ್ಪಡುತ್ತಾರೆ. (ಮತ್ತಾಯ 6:9, 10; 22:37-39)—8⁄15, ಪುಟಗಳು 8, 9.
▫ ವಿಕಾಸವಾದದಲ್ಲಿ ನಂಬಿಕೆ ವಿಶ್ವಾಸದ ಒಂದು ವಿಷಯವಾಗಿದೆ ಏಕೆ?
ಹೊಸ ಜೀವರೂಪಗಳನ್ನು ಉತ್ಪಾದಿಸುವ ರೂಪ ಬದಲಾವಣೆಯನ್ನು—ಪ್ರಯೋಜನಕಾರಿಯಾಗಿರುವವುಗಳನ್ನು ಸಹ—ವಿಜ್ಞಾನಿಗಳು ಎಂದಿಗೂ ಗಮನಿಸಿದ್ದಿಲ್ಲ, ಆದರೂ ಹೊಸ ಜಾತಿಗಳು ಬಂದಿರುವುದು ನಿಷ್ಕೃಷ್ಟವಾಗಿಯೂ ಹಾಗೆಯೇ ಎಂದು ವಿಕಾಸವಾದಿಗಳು ವಾದಿಸುತ್ತಾರೆ. ವಿಕಾಸವಾದಿಗಳು ಜೀವದ ಅಜೀವಜನ್ಯತೆಯನ್ನು ನೋಡಿಲ್ಲ, ಆದರೂ ಜೀವವು ಆರಂಭಗೊಂಡದ್ದು ಹಾಗೆಯೇ ಎಂಬದಾಗಿ ಅವರು ಪಟ್ಟು ಹಿಡಿಯುತ್ತಾರೆ.—9⁄1, ಪುಟ 5.
▫ ಜೀವನದಲ್ಲಿನ ನಿರ್ಬಂಧಗಳಿಂದ ಬರಬಹುದಾದ ನಿರುತ್ಸಾಹವನ್ನು ನಾವು ಹೇಗೆ ಉತ್ತಮವಾಗಿ ಗೆಲ್ಲಬಲ್ಲೆವು?
ನಮ್ಮ ಪರಿಸ್ಥಿತಿಯು ಏನೇ ಆಗಿರಲಿ, ನಾವು ಏನನ್ನು ಮಾಡಲಾರೆವೋ ಅದರ ಕುರಿತಾಗಿ ಪರಿತಪಿಸುವದಕ್ಕಿಂತ ನಾವೇನನ್ನು ಮಾಡಬಲ್ಲೆವೋ ಅದರ ಮೇಲೆ ಕೇಂದ್ರೀಕರಿಸಿದರೆ, ಜೀವಿತವು ಹೆಚ್ಚು ತೃಪ್ತಿಕರವಾಗಿರುವದು, ಮತ್ತು ದೇವರ ಸೇವೆಯಲ್ಲಿ ನಮಗೆ ಆನಂದ ಸಿಗುವದು. (ಕೀರ್ತನೆ 126:5, 6)—9⁄1, ಪುಟ 28.
▫ ಕ್ಷಮಿಸುವದರ ಲಾಭಗಳೇನು?
ಇತರರನ್ನು ಕ್ಷಮಿಸುವದು ಒಳ್ಳೆಯ ಸಂಬಂಧಗಳನ್ನು ಪ್ರವರ್ಧಿಸುತ್ತದೆ (ಎಫೆಸ 4:32); ಅದು ಕೇವಲ ಜೊತೆ ಮಾನವರೊಂದಿಗೆ ಶಾಂತಿಯನ್ನು ಮಾತ್ರವಲ್ಲ, ಆದರೆ ಆಂತರಿಕ ಶಾಂತಿಯನ್ನು ಸಹ ತರುತ್ತದೆ (ರೋಮಾಪುರ 14:19; ಕೊಲೊಸ್ಸೆ 3:13-15); ಇತರರನ್ನು ಕ್ಷಮಿಸುವದು, ನಮ್ಮ ಪಾಪಗಳು ಕ್ಷಮಿಸಲ್ಪಡುವಂತೆ ಸಾಧ್ಯಮಾಡುತ್ತದೆ (ಮತ್ತಾಯ 6:14); ಹಾಗೂ, ಅದು ಸ್ವತಃ ನಾವೇ ಕ್ಷಮಾಪಣೆಯ ಅಗತ್ಯವುಳ್ಳವರಾಗಿದ್ದೇವೆ ಎಂಬದನ್ನು ಜ್ಞಾಪಿಸಿಕೊಳ್ಳುವಂತೆ ನಮಗೆ ಸಹಾಯ ಮಾಡುತ್ತದೆ. (ರೋಮಾಪುರ 3:23)—9⁄15, ಪುಟ 7.
▫ ಪ್ರವಾದಿ ಆಮೋಸನ ಮಾದರಿಯು ನಮ್ಮ ಸಾರುವ ಚಟುವಟಿಕೆಯಲ್ಲಿ ನಮಗೆ ಹೇಗೆ ಸಹಾಯಮಾಡುತ್ತದೆ?
ಆಮೋಸನಂತೆ, ನಾವು ದೇವರ ಸಂದೇಶವನ್ನು ಬದಲಾಯಿಸುವುದೂ ಇಲ್ಲ ಅದರ ತೀಕ್ಷೈತೆಯನ್ನು ಕಡಿಮೆಮಾಡುವುದೂ ಇಲ್ಲ. ಬದಲಿಗೆ, ಕೇಳುವವರ ಪ್ರತಿಕ್ರಿಯೆಯನ್ನು ಲಕ್ಷಿಸದೆ ನಾವು ಅದನ್ನು ವಿಧೇಯತೆಯಿಂದ ಘೋಷಿಸುತ್ತೇವೆ.—9⁄15, ಪುಟ 17.
▫ ದೇವರ ಯಾವ ವಿಶಿಷ್ಟಗುಣಗಳನ್ನು ನಾವು ಅನುಕರಿಸಬೇಕು?
ಯೆಹೋವನ ಸಂಘಟನಾ ಸಾಮರ್ಥ್ಯ ಮತ್ತು ಅವನ ಸಂತೋಷ ಎರಡು ಪ್ರಾಮುಖ್ಯ ಗುಣಗಳಾಗಿವೆ. (1 ಕೊರಿಂಥ 14:33; 1 ತಿಮೊಥೆಯ 1:11) ದೇವರ ಈ ಗುಣಗಳು ಸಮತೂಕದಲ್ಲಿವೆ, ಆದುದರಿಂದ ಒಂದನ್ನು ಬಲಿಕೊಟ್ಟು ಒಂದನ್ನು ಸರ್ವಪ್ರಧಾನವಾಗಿ ಮಾಡಲಾಗುವದಿಲ್ಲ.—10⁄1, ಪುಟ 10.
▫ ಯೆಹೋವನನ್ನು ಸೇವಿಸಲು ತಮ್ಮ ಮಕ್ಕಳಿಗೆ ಸಹಾಯ ಮಾಡುವಂತೆ ಹೆತ್ತವರು ತೆಗೆದುಕೊಂಡಿರುವ ಕೆಲವು ಸಕಾರಾತ್ಮಕ ಹೆಜ್ಜೆಗಳಾವುವು?
ಬೇಗನೇ ಆರಂಭಿಸುವದು ಒಂದು ಪ್ರಾಮುಖ್ಯವಾದ ಕೀಲಿ ಕೈಯಾಗಿದೆ. ಆರಂಭದ ವರುಷಗಳಲ್ಲಿ ಬೀರಲ್ಪಟ್ಟ ಪ್ರಭಾವಗಳು ಮತ್ತು ಕಲಿಯಲ್ಪಟ್ಟ ಪಾಠಗಳು ಜೀವಮಾನವಿಡೀ ಬಾಳುತ್ತವೆ. (ಜ್ಞಾನೋಕ್ತಿ 22:6) ಯೆಹೋವನಿಗಾಗಿ ಮತ್ತು ಎಲ್ಲಾ ಕೂಟಗಳಲ್ಲಿ ಅವನ ಆರಾಧನೆಗಾಗಿ ವಿಧೇಯತೆ ಮತ್ತು ಗೌರವವನ್ನು ಕಲಿಸುವದು ಪ್ರಾಮುಖ್ಯವಾಗಿದೆ. ಸಫಲರಾದ ಹೆತ್ತವರು ತಪ್ಪಾದ ಪ್ರವೃತ್ತಿಗಳನ್ನು ಗುರುತಿಸಲು ಕಲಿಯುತ್ತಾರೆ, ಮತ್ತು ಅದನ್ನು ಸರಿಪಡಿಸಲು ತಮ್ಮ ಮಕ್ಕಳಿಗೆ ಸಹಾಯಮಾಡುತ್ತಾರೆ. (ಜ್ಞಾನೋಕ್ತಿ 22:15) ಕೊನೆಗೆ, ಅವನು ನ್ಯಾಯಸಮ್ಮತವಾಗಿ ಸಾಧಿಸಬಲ್ಲ ದೇವಪ್ರಭುತ್ವ ಗುರಿಗಳನ್ನು ನಿಮ್ಮ ಮಗುವಿಗಾಗಿ ಸ್ಥಾಪಿಸಲು ಬೇಗನೇ ತೊಡಗಿರಿ.—10⁄1, ಪುಟಗಳು 27-8.
▫ ಯೆಹೋವನ ಕ್ಷಮಾಪಣೆಯ ಯಾವ ವಿಶಿಷ್ಟ ಲಕ್ಷಣವನ್ನು ನಾವು ಆಚರಿಸಲು ಪ್ರಯತ್ನಿಸಬೇಕು?
ಯೆಹೋವನು ಕ್ಷಮಿಸುವವನೂ ಮರೆಯುವವನೂ ಆಗಿದ್ದಾನೆ. (ಯೆರೆಮೀಯ 31:34) ಇದು ಮಾನವ ಜೀವಿಗಳಿಗೆ ಮಾಡಲು ಕಠಿನವಾದ ವಿಷಯವಾಗಿದೆ. ಮತ್ತಾಯ 6:14, 15 ರಲ್ಲಿ ದಾಖಲಿಸಲ್ಪಟ್ಟಂತೆ, ಹೀಗೆ ಮಾಡುವದರ ಪ್ರಮುಖತೆಯು ಯೇಸುವಿನಿಂದ ಒತ್ತಿ ಹೇಳಲ್ಪಟ್ಟಿತ್ತು.—10⁄15, ಪುಟಗಳು 25-6.
▫ ನಾವು ಕನಿಕರಿಸುವವರಾಗಿರುವದಕ್ಕೆ ಮೂರು ಅಡಿಗ್ಡಳು ಯಾವುವು?
ನಮ್ಮ ಪಾಪಪೂರ್ಣ ಸ್ವಭಾವದ ಕಾರಣ, ಅಸೂಯೆಯ ಭಾವನೆಗಳು ನಮ್ಮ ಹೃದಯಗಳಲ್ಲಿ ಬೇರೂರಬಲ್ಲವು. ಯಾರಾದರೊಬ್ಬರ ಕುರಿತು ನಾವು ಅಸೂಯೆಯುಳ್ಳವರಾದರೆ, ನಾವು ಅವರನ್ನು ಕೋಮಲವಾದ ಕನಿಕರದಿಂದ ಹೇಗೆ ಸತ್ಕರಿಸಬಲ್ಲೆವು? ಹಿಂಸಾಚಾರಕ್ಕೆ ಅನಾವಶ್ಯಕವಾದ ಒಡ್ಡುವಿಕೆ ಇನ್ನೊಂದು ಅಡ್ಡಿಯಾಗಿದೆ. ಇದು ಇತರರ ಕಷ್ಟಾನುಭವದ ಕಡೆಗೆ ನಮ್ಮ ಮನಸ್ಸನ್ನು ಕಠಿನಗೊಳಿಸುವದು. ಇನ್ನೂ ಹೆಚ್ಚಾಗಿ, ಸ್ವಹಿತಾಸಕ್ತಿಯುಳ್ಳ ಒಬ್ಬ ವ್ಯಕ್ತಿಯು ಕನಿಕರದ ಕೊರತೆಯುಳ್ಳವನಾಗಿರುವ ಸಂಭಾವ್ಯತೆ ಇದೆ. (1 ಯೋಹಾನ 3:17)—11⁄1, ಪುಟಗಳು 19, 20.
▫ ಯೋಬನ ಕುರಿತಾದ ಶಾಸ್ತ್ರೀಯ ವೃತ್ತಾಂತದಿಂದ ಯಾವ ಪಾಠಗಳನ್ನು ಕಲಿಯಬಹುದು?
ಯೋಬನ ಕುರಿತಾದ ಶಾಸ್ತ್ರೀಯ ವೃತ್ತಾಂತವು, ಸೈತಾನನ ಯುಕ್ತಿಗಳ ಬಗ್ಗೆ ನಮ್ಮನ್ನು ಅಧಿಕ ಅರಿವುಳ್ಳವರನ್ನಾಗಿ ಮಾಡುತ್ತದೆ ಮತ್ತು ಯೆಹೋವನ ವಿಶ್ವ ಸಾರ್ವಭೌಮತೆಯು ಹೇಗೆ ಮಾನವ ಸಮಗ್ರತೆಗೆ ಸಂಬಂಧಿಸಿದೆ ಎಂಬದನ್ನು ಕಾಣುವಂತೆ ನಮಗೆ ಸಹಾಯ ಮಾಡುತ್ತದೆ. ಯೋಬನಂತೆ ದೇವರನ್ನು ಪ್ರೀತಿಸುವವರೆಲ್ಲರು ಪರೀಕ್ಷಿಸಲ್ಪಡಬೇಕು. ಯೋಬನಂತೆ ನಾವೂ ತಾಳಬಲ್ಲೆವು, ಸೈತಾನನನ್ನು ಸುಳ್ಳುಗಾರನಾಗಿ ರುಜುಪಡಿಸಬಲ್ಲೆವು ಮತ್ತು ದೇವರ ರಾಜ್ಯದ ಆಶೀರ್ವಾದಗಳನ್ನು ಆನಂದಿಸಬಲ್ಲೆವು.—11⁄15, ಪುಟ 20.
▫ ಹಿರಿಯರ ಮಂಡಲಿಯ ಅಧ್ಯಕ್ಷನು ಪ್ರತಿಯೊಬ್ಬ ಹಿರಿಯನಿಗೆ ತಕ್ಕದ್ದಾದ ಮನ್ನಣೆಯನ್ನು ಹೇಗೆ ತೋರಿಸಬಲ್ಲನು?
ಸಾಧ್ಯವಿರುವಾಗಲೆಲ್ಲಾ ಅಧ್ಯಕ್ಷನು, ಬೇರೆ ಹಿರಿಯರು ಗುರುತುಮಾಡಲ್ಪಟ್ಟ ಪ್ರತಿಯೊಂದು ಅಂಶಕ್ಕೆ ಜಾಗರೂಕವಾದ ಹಾಗೂ ಪ್ರಾರ್ಥನಾಪೂರ್ವಕವಾದ ಯೋಚನೆಯನ್ನು ಮಾಡಲು ಸಮಯವನ್ನು ಅನುಮತಿಸುವಂತೆ ಸಾಕಷ್ಟು ಮುಂಚಿತವಾಗಿ ಕಾರ್ಯ ಸೂಚಿಯನ್ನು ಒದಗಿಸಬೇಕು. ಹಿರಿಯರ ಕೂಟದ ಸಂದರ್ಭದಲ್ಲಿ, ಹಿರಿಯರ ಅಭಿಪ್ರಾಯವನ್ನು ರೂಪಿಸಲು ಪ್ರಯತ್ನಿಸುವ ಬದಲಿಗೆ ಚರ್ಚೆಯ ವಿಷಯಗಳ ಮೇಲೆ “ಮಾತಾಡುವ ಸ್ವಾತಂತ್ರ್ಯ” ವನ್ನು ತೆಗೆದುಕೊಳ್ಳುವಂತೆ ಆತನು ಅವರನ್ನು ಉತ್ತೇಜಿಸುವನು. (1 ತಿಮೊಥೆಯ 3:13, NW)—12⁄1, ಪುಟ 30.