“ನಾನು ಅದ್ಭುತಕರವಾಗಿ ರಚಿಸಲ್ಪಟ್ಟಿದೇನ್ದೆ”
“ನಾನು ಎಲ್ಲಿಂದ ಬಂದೆ?” ಇದು ಹೆಚ್ಚಿನ ಎಳೆಯ ಮಕ್ಕಳು ಒಂದಲ್ಲ ಒಂದು ಸಮಯ ಕೇಳುವ ಪ್ರಶ್ನೆ ಆಗಿದೆ. ಮಕ್ಕಳು ಬೆಳೆದಾಗ, ಅವರ ಪ್ರಶ್ನೆ ಅನೇಕ ವೇಳೆ ಅಧಿಕ ಗಾಢವಾಗುತ್ತದೆ: “ಜೀವವು ಎಲ್ಲಿಂದ ಬಂತು?” ಈ ಪ್ರಶ್ನೆಯು ಸಾವಿರಾರು ವರ್ಷಗಳಿಂದ ಚರ್ಚಿಸಲ್ಪಟ್ಟಿದೆ, ಮತ್ತು ಪ್ರಚಲಿತವಾಗಿ ಅನೇಕ ವಿಜ್ಞಾನಿಗಳು, ಜೀವಿತದ ಮೂಲದ ಗೂಢಪ್ರಶ್ನೆಗೆ ವಿಕಾಸವು ಅತ್ಯಂತ ವಿವೇಚನಾಯುಕ್ತ ಉತ್ತರವೆಂದು ವೀಕ್ಷಿಸುತ್ತಾರೆ. ಮೂಲಭೂತವಾಗಿ, ಜೀವವು ಅಕಸ್ಮಾತ್ತಾಗಿ ಬಂತು ಎಂಬುದು ವಿಕಾಸವಾದಿಯ ವಿವರಣೆಯಾಗಿದೆ.
ಸುಮಾರು 3,000 ವರ್ಷಗಳ ಹಿಂದೆ, ರಾಜ ದಾವೀದನು ಬರೆದದ್ದು: “ಭಯ ಹುಟ್ಟಿಸುವ ರೀತಿಯಲ್ಲಿ ನಾನು ಅದ್ಭುತಕರವಾಗಿ ರಚಿಸಲ್ಪಟ್ಟಿದೇನ್ದೆ.” (ಕೀರ್ತನೆ 139:14, NW) ಜೀವದ ಕುರಿತು ನಾವು ಹೆಚ್ಚನ್ನು ಕಲಿತಂತೆ, ಆ ಮಾತುಗಳಲ್ಲಿ ಅಧಿಕ ಸತ್ಯವನ್ನು ನಾವು ಕಾಣುತ್ತೇವೆ. ನಿಶ್ಚಯವಾಗಿ, ಭೌತಿಶಾಸ್ತ್ರಜ್ಞನಾದ ಫ್ರೆಡ್ ಹೈಲ್ ಬರೆದದ್ದು: “ಜೀವದ ಗಂಭೀರ ಕ್ಲಿಷ್ಟತೆಯ ಬಗೆಗೆ ಜೀವರಸಾಯನ ವಿಜ್ಞಾನಿಗಳು ಹೆಚ್ಚೆಚ್ಚು ಕಂಡುಹಿಡಿದಂತೆ, ಅದು ಆಕಸ್ಮಿಕವಾಗಿ ಉದ್ಭವಿಸಿರುವುದರ ಸಂಭಾವ್ಯತೆಗಳು ಎಷ್ಟು ಅಲ್ಪವಾಗಿವೆ ಎಂದರೆ, ಅವುಗಳನ್ನು ಸಂಪೂರ್ಣವಾಗಿ ವಿಸರ್ಜಿಸಸಾಧ್ಯವಿದೆ ಎಂಬುದು ಸುವ್ಯಕ್ತ. ಜೀವವು ಅಕಸ್ಮಾತ್ತಾಗಿ ಬಂದಿರಲು ಸಾಧ್ಯವಿಲ್ಲ.”
ಆದುದರಿಂದ ಜೀವದ ಮೂಲ ಏನಾಗಿದೆ? ಈ ಪತ್ರಿಕೆಯ ಎರಡು ಆರಂಭಿಕ ಲೇಖನಗಳು ಆ ಪ್ರಶ್ನೆಯನ್ನು ಚರ್ಚಿಸುತ್ತವೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ನೀವು ಬಯಸುವುದಾದರೆ, ದಯವಿಟ್ಟು Watch Tower, H-58 Old Khandala Road, Lonavla, 410 401 Mah., India. ಇವರಿಗೆ, ಅಥವಾ 2 ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದಾದ ವಿಳಾಸಕ್ಕೆ ಬರೆಯಿರಿ.