ನಮ್ಮ ಎಳೆಯರಿಗಾಗಿ ಎಂತಹ ಭವಿಷ್ಯತ್ತು?
ನ್ಯೂಕ್ಲಿಯರ್ ಬೆದರಿಕೆಯು—ಭಯೋತ್ಪಾದಕರ ಬಾಂಬುಗಳಿಂದಾಗಲಿ ಯಾ ನ್ಯೂಕ್ಲಿಯರ್ ಕೇಂದ್ರಗಳಲ್ಲಿ ಅಪಘಾತಗಳಿಂದಾಗಲಿ—ಎಲ್ಲರನ್ನು ಬೆದರಿಸುತ್ತದೆ. ನಿಮ್ಮ ಸ್ವಂತ ಮಕ್ಕಳನ್ನು ಯಾ ಮೊಮ್ಮಕ್ಕಳನ್ನು ಸೇರಿಸಿ, ವಿಶೇಷವಾಗಿ ಎಳೆಯರ ಕುರಿತು ನೀವು ಚಿಂತಿಸಬಹುದು. ಯಾವುದೇ ಮಗುವಿನ ಆರೋಗ್ಯ ಮತ್ತು ಭವಿಷ್ಯತ್ತನ್ನು ಒಂದು ನ್ಯೂಕ್ಲಿಯರ್ ಬೆದರಿಕೆಯು ವಿಪತ್ತಿಗೆ ತರುತ್ತದೆಂದು ಗ್ರಹಿಸುವುದು ಎಷ್ಟು ದುಃಖಕರವಾಗಿದೆ.
ಆದರೆ ನಿರಾಶೆಗೊಳ್ಳಬೇಡಿರಿ. ಎಳೆಯರ ಭವಿಷ್ಯತ್ತಿನ ಕುರಿತು ಆಶಾವಾದಿಗಳಾಗಿರಲು ನಿಮಗೆ ಕಾರಣವಿದೆ. ನಿರೀಕ್ಷೆಗಾಗಿ ಆಧಾರವು, ನಮ್ಮ ಎಳೆಯರನ್ನು ರಕ್ಷಿಸುವ ಮಾನವ ಪ್ರಯತ್ನಗಳ ಮೇಲಲ್ಲ, ಆದರೆ ನಮ್ಮ ಸೃಷ್ಟಿಕರ್ತನ ಕೈಗಳಲ್ಲಿ ಅವಲಂಬಿಸಿರುವ ಒಂದು ಭವಿಷ್ಯದ ಮೇಲೆ ಕೇಂದ್ರಿತವಾಗಿರುತ್ತದೆ.
ದೇವರ ಮಗನಾದ ಯೇಸು, ಮಧ್ಯ ಪೂರ್ವದಲ್ಲಿ ಕಲಿಸಿದಾಗ, ಎಳೆಯರಿಗಾಗಿ ಅವನು ಚಿಂತೆಯನ್ನು ಪ್ರದರ್ಶಿಸಿದನು. (ಮಾರ್ಕ 9:36, 37, 42; 10:13-16) ಅಂತಿಮವಾಗಿ ದೇವರು ನ್ಯೂಕ್ಲಿಯರ್ ಬೆದರಿಕೆಯನ್ನು ಕೊನೆಗೊಳಿಸಿ, ಒಂದು ಭೌಗೋಲಿಕ ಪ್ರಮೋದವನವನ್ನು ಸ್ಥಾಪಿಸುವಾಗ, ಅದೇ ರೀತಿಯ ಚಿಂತೆಯು ಪ್ರತಿಬಿಂಬಿಸಲ್ಪಡುವುದೆಂದು ಬೈಬಲ್ ತೋರಿಸುತ್ತದೆ. ನಮ್ಮ ಎಳೆಯರು ಅದನ್ನು ಅನುಭವಿಸಬಲ್ಲರು, ಮತ್ತು ನೀವು ಕೂಡ.
ಅಧಿಕ ಮಾಹಿತಿಯನ್ನು ನೀವು ಸ್ವಾಗತಿಸುವುದಾದರೆ ಅಥವಾ ನಿಮ್ಮೊಂದಿಗೆ ಒಂದು ಉಚಿತ ಬೈಬಲಧ್ಯಯನವನ್ನು ನಡಿಸಲು ಯಾರಾದರೂ ಸಂದರ್ಶಿಸುವಂತೆ ನೀವು ಬಯಸುವುದಾದರೆ ದಯವಿಟ್ಟು, Watch Tower, H-58 Old Khandala Road, Lonavla, 410 401 Mah., India. ಇವರಿಗೆ, ಅಥವಾ 2 ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದಾದ ವಿಳಾಸಕ್ಕೆ ಬರೆಯಿರಿ.