ಭಯದಿಂದ ಸ್ವಾತಂತ್ರ್ಯವು ಹತ್ತಿರವಿದೆ!
ಮನುಷ್ಯನು ಹುಟ್ಟಿದಂದಿನಿಂದ ಸಾಯುವ ವರೆಗೂ ಭಯದಲ್ಲಿ ಜೀವಿಸುವುದಾದರೂ, ಯೇಸು ಕ್ರಿಸ್ತನ ಮೂಲಕ ದೇವರ ರಾಜ್ಯವು ಹತ್ತಿರದ ಭವಿಷ್ಯತ್ತಿನಲ್ಲಿ ರೋಗ ಮತ್ತು ಮರಣವನ್ನು ಸೇರಿಸಿ ಎಲ್ಲ ಕಷ್ಟಾನುಭವವನ್ನು ಅನಂತವಾಗಿ ತೆಗೆದುಹಾಕುವ ಒಂದು ಸಮಯಕ್ಕೆ ನಾವು ಭರವಸೆಯಿಂದ ಎದುರುನೋಡಬಲ್ಲೆವು. ದೇವರ ಪ್ರೀತಿಯ ಒದಗಿಸುವಿಕೆಗಳಿಂದ ಪ್ರಯೋಜನ ಪಡೆಯಲು ಯಾವುದರ ಅಗತ್ಯವಿದೆ ಎಂದು ಈ ಪತ್ರಿಕೆಯು ತೋರಿಸಿದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ನೀವು ಸ್ವಾಗತಿಸುವುದಾದರೆ ಅಥವಾ ನಿಮ್ಮೊಂದಿಗೆ ಉಚಿತವಾದೊಂದು ಮನೆ ಬೈಬಲ್ ಅಧ್ಯಯನವನ್ನು ನಡೆಸಲು ಯಾರಾದರೂ ನಿಮ್ಮನ್ನು ಭೇಟಿಯಾಗುವಂತೆ ನೀವು ಬಯಸುವುದಾದರೆ, ದಯವಿಟ್ಟು Watch Tower, H-58 Old Khandala Road, Lonavla 410 401, Mah., India. ಅಥವಾ ಪುಟ 2 ರಲ್ಲಿ ಪಟ್ಟಿಮಾಡಲಾಗಿರುವ ತಕ್ಕದಾದ ವಿಳಾಸಕ್ಕೆ ಬರೆಯಿರಿ.