ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 4/15 ಪು. 30
  • ನಿಮಗೆ ನೆನಪಿದೆಯೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ನೆನಪಿದೆಯೆ?
  • ಕಾವಲಿನಬುರುಜು—1994
  • ಅನುರೂಪ ಮಾಹಿತಿ
  • ವಿಲಿಯಮ್‌ ಹಿಸ್ವ್‌ಟನ್‌—ಪಾಷಂಡಿಯೊ, ಪ್ರಾಮಾಣಿಕ ವಿದ್ವಾಂಸನೊ?
    ಕಾವಲಿನಬುರುಜು—1994
  • ಒಳ್ಳೆಯ ಮತ್ತು ಕೆಟ್ಟ ಫಲಗಳು
    ಕಾವಲಿನಬುರುಜು—1994
  • ಸ್ವರ್ಗಾರೋಹಣ—ದೇವರಿಂದ ಪ್ರಕಟಿತವಾದ ತತ್ವವೋ?
    ಕಾವಲಿನಬುರುಜು—1994
  • ದೈವಿಕ ಬೋಧನೆಯು ವಿಜಯಿಯಾಗುತ್ತದೆ
    ಕಾವಲಿನಬುರುಜು—1994
ಇನ್ನಷ್ಟು
ಕಾವಲಿನಬುರುಜು—1994
w94 4/15 ಪು. 30

ನಿಮಗೆ ನೆನಪಿದೆಯೆ?

ಕಾವಲಿನಬುರುಜು ಪತ್ರಿಕೆಯ ಇತ್ತೀಚೆಗಿನ ಸಂಚಿಕೆಗಳನ್ನು ಓದುವುದರಲ್ಲಿ ನೀವು ಆನಂದಿಸಿದ್ದೀರೊ? ಹಾಗಿರುವಲ್ಲಿ, ಮುಂದಿನ ವಿಷಯಗಳನ್ನು ಜ್ಞಾಪಿಸಿಕೊಳ್ಳುವುದು ಸ್ವಾರಸ್ಯವುಳ್ಳದ್ದಾಗಿ ನೀವು ಕಾಣುವಿರಿ:

▫ ಇಸ್ರಾಯೇಲ್ಯ ಗೂಢಾಚಾರರು ಸೂಳೆಯಾದ ರಾಹಾಬಳ ಮನೆಯಲ್ಲಿ ತಂಗಲು ಆರಿಸಿದ್ದು ಏಕೆ?

ಇಸ್ರಾಯೇಲ್ಯ ಗೂಢಾಚಾರರು ದೇವರ ನಿಯಮಕ್ಕನುಸಾರವಾಗಿ ಜೀವಿಸಿದರು, ಆದುದರಿಂದ ಅವರು ರಾಹಾಬಳ ಮನೆಯಲ್ಲಿ ಅನೈತಿಕ ಕಾರಣಗಳಿಗಾಗಿ ತಂಗಲಿಲ್ಲ. ಒಬ್ಬಾಕೆ ಸೂಳೆಯ ಮನೆಯಲ್ಲಿ ಅವರ ಇರವು, ಪಟ್ಟಣದಲ್ಲಿ ಸಂಶಯವನ್ನು ಕೆರಳಿಸುವ ಕಡಿಮೆ ಸಾಧ್ಯತೆಯನ್ನು ಹೊಂದಿರುವುದೆಂದು ಅವರು ಬಹುಶಃ ವಿವೇಚಿಸಿದರು. ಊರಗೋಡೆಯ ಮೇಲೆ ಅವಳ ಮನೆಯು ಕಟ್ಟಲ್ಪಟ್ಟ ಸಂಗತಿಯು, ಪಾರಾಗುವಿಕೆಯನ್ನು ಸರಳಗೊಳಿಸಬಹುದಾಗಿತ್ತು. ಆದರೆ ಎಲ್ಲಕ್ಕಿಂತಲೂ ಮಿಗಿಲಾಗಿ, ಯಾರ ಹೃದಯವು ಇಸ್ರಾಯೇಲ್ಯರೊಂದಿಗೆ ದೈವಿಕ ನಿರ್ವಹಣೆಯ ವರದಿಗಳಿಂದ ಅಷ್ಟು ಅನುಕೂಲವಾಗಿ ಪ್ರಭಾವಿಸಲ್ಪಟ್ಟ ಕಾರಣ ಪಶ್ಚಾತಾಪ್ತಪಟ್ಟು ಆಕೆ ತನ್ನ ಮಾರ್ಗಗಳನ್ನು ಬದಲಾಯಿಸುವಂತೆ ಮಾಡಿತೋ ಅಂತಹ ಒಬ್ಬ ಪಾಪಿಯ ಕಡೆಗೆ ಯೆಹೋವನು ಅವರನ್ನು ಮಾರ್ಗದರ್ಶಿಸಿದನು.—12⁄15, ಪುಟಗಳು 24-5.

▫ ಕೋಪವು ನಮ್ಮ ಆರೋಗ್ಯವನ್ನು ಹೇಗೆ ಪ್ರಭಾವಿಸುತ್ತದೆ?

ಕೋಪವು ಸೆಸ್ಟ್ರ್‌ ಚೋದಕಸ್ರಾವಗಳನ್ನು ಉತ್ಪಾದಿಸುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಕೋಪದ ಅಡಿಗಡಿಯ ಉದ್ರೇಕಗಳು, ಕಲೆಸ್ಟರಲ್‌ನ ರಕ್ಷಕ ಮತ್ತು ಹಾನಿಕಾರಕ ನಮೂನೆಗಳ ಮಧ್ಯೆ ಅಸಮತೆಯನ್ನು ಉಂಟುಮಾಡುತ್ತಾ, ನಮ್ಮನ್ನು ಹೃತ್ನಾಳ ರೋಗದ ಗಂಡಾಂತರಕ್ಕೆ ಈಡು ಮಾಡಬಲ್ಲವು.—12⁄15, ಪುಟ 32.

▫ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ನಮ್ಮ ಹಂಚಿಕೆಯನ್ನು ಹೆಚ್ಚಿಸಲು ಯಾವ ಸಲಹೆಗಳು ನಮಗೆ ಸಹಾಯ ಮಾಡುವವು?

ಕಾವಲಿನಬುರುಜು ಮತ್ತು ಎಚ್ಚರ! ಪ್ರಜ್ಞೆಯುಳ್ಳವರಾಗಿರ್ರಿ; ನಿರೂಪಣೆಯನ್ನು ಸರಳವಾಗಿಡಿರಿ; ಕೆಲವೊಂದು ಸಂಕ್ಷಿಪ್ತ ನಿರೂಪಣೆಗಳನ್ನು ತಯಾರಿಸುವ ಮೂಲಕ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳಿರಿ; ವೈಯಕ್ತಿಕವಾದೊಂದು ಗುರಿಯನ್ನಿಡಿರಿ.—1⁄1, ಪುಟಗಳು 24-5.

▫ ಮೋಶೆಯು ಅನುಸರಿಸಲು ನಮಗೆ ಏಕೆ ಒಂದು ಉತ್ತಮವಾದ ದೇವಪ್ರಭುತ್ವ ಮಾದರಿಯಾಗಿದ್ದಾನೆ?

ವಿಷಯಗಳ ಮೇಲೆ ಯೆಹೋವನ ಮಾರ್ಗದರ್ಶನವನ್ನು ಮೋಶೆಯು ಹುಡುಕಿದನು. ಅವನಿಗೆ ಯಾವುದೇ ವೈಯಕ್ತಿಕ ಹೆಬ್ಬಯಕೆಗಳು ಇರಲಿಲ್ಲ ಆದರೆ ಅವನು ಯೆಹೋವನ ಮಹಿಮೆಯ ಕುರಿತು ಚಿಂತಿತನಾಗಿದ್ದನು. ಅವನಿಗೆ ಬಲವಾದ ನಂಬಿಕೆಯಿತ್ತು; ಮತ್ತು ಇಸ್ರಾಯೇಲ್‌ ಜನಾಂಗದ ನಿಜವಾದ ಅರಸನು ಯೆಹೋವನಾಗಿದ್ದನೆಂಬುದನ್ನು ಅವನು ಎಂದಿಗೂ ಮರೆಯಲಿಲ್ಲ.—1⁄15, ಪುಟ 11.

▫ ದೈವಿಕ ಬೋಧನೆಯು ವಿಜಯಿಯಾಗುವ ಕೆಲವು ವಿಧಾನಗಳಾವುವು?

ಯೆಹೋವನ ಜನರಿಗೆ ಸತ್ಯದ ಪ್ರಗತಿಪರ ತಿಳಿವಳಿಕೆಯನ್ನು ನೀಡುವ ಮೂಲಕ ದೈವಿಕ ಬೋಧನೆಯು ವಿಜಯಿಯಾಗುತ್ತದೆ. ಅದು ಜನರನ್ನು ಆತ್ಮಿಕ ಬೆಳಕಿನೊಳಗೆ ತರುತ್ತದೆ, ಮತ್ತು ದೇವರನ್ನು ಹೇಗೆ “ಆತ್ಮ ಮತ್ತು ಸತ್ಯ” ದೊಂದಿಗೆ ಆರಾಧಿಸಬೇಕೆಂದು ಅದು ದೀನರಿಗೆ ತೋರಿಸುತ್ತದೆ. (ಯೋಹಾನ 4:24) ಪರೀಕ್ಷೆಗಳು ಮತ್ತು ದುಷ್ಟ ಲೋಕದ ಮೇಲೂ ದೈವಿಕ ಬೋಧನೆಯು ವಿಜಯಿಯಾಗುತ್ತದೆ.—2⁄1, ಪುಟಗಳು 10-12.

▫ ಸಫಲವಾದ ಸಲಹೆನೀಡಿಕೆಗಿರುವ ಕೀಲಿ ಕೈ ಯಾವುದು?

ಇನ್ನೊಬ್ಬ ವ್ಯಕ್ತಿಯ ಕಡೆಗೆ ಯೋಗ್ಯ ಸನ್ಮಾನ ಮತ್ತು ಗೌರವಪೂರ್ವಕವಾಗಿ ವ್ಯವಹರಿಸಲ್ಪಡಲು ಅವನಿಗಿರುವ ಹಕ್ಕೇ ಈ ಕೀಲಿ ಕೈ. ಆದುದರಿಂದ ಕ್ರೈಸ್ತ ಸಲಹೆಗಾರನು ದಯಾಪರನೂ ದೃಢಚಿತ್ತನೂ ಆಗಿರಬೇಕು. ಆದರೆ ಸಲಹೆ ಪಡೆಯುವವನನ್ನು ಗೌರವದಿಂದ ತೊಡಿಸಬೇಕು.—2⁄1, ಪುಟ 28.

▫ ರೋಮನ್‌ ಕ್ಯಾತೊಲಿಕ್‌ ಚರ್ಚು ಮರಿಯಳ ಸ್ವರ್ಗಾರೋಹಣವನ್ನು ಒಂದು ತತ್ವವಾಗಿ ಅಂಗೀಕರಿಸುವಂತಾದದ್ದು ಹೇಗೆ?

ಯೇಸುವಿನ ಮರಣಾನಂತರದ ಮೊದಲಿನ ಶತಮಾನಗಳಲ್ಲಿ, ಮರಿಯಳ ಸ್ವರ್ಗಾರೋಹಣ ಕ್ರೈಸ್ತರ ಆಲೋಚನೆಗೆ ಪೂರ್ತಿ ಪರಕೀಯವಾಗಿತ್ತು. ಆದರೂ, ತ್ರಯೈಕ್ಯ ಬೋಧನೆ ಅಧಿಕೃತ ಚರ್ಚ್‌ ಬೋಧನೆಯಾದ ಮೇಲೆ, ಮರಿಯಳಿಗೆ ಹೆಚ್ಚುತ್ತಿರುವ ಪ್ರಧಾನ ಪಾತ್ರ ಕೊಡಲ್ಪಟ್ಟಿತು. ಈ ಸ್ವರ್ಗಾರೋಹಣ ತತ್ವವು ನವಂಬರ 1, 1950 ರ ತನಕ ಮತ ತತ್ವವಾಗಿ ಅಂಗೀಕರಿಸಲ್ಪಡಲಿಲ್ಲ. ಅಂದು XII ಪೋಪ್‌ ಪಾಯಸ್‌ ಪ್ರಕಟಿಸಿದ್ದು: “ಇದನ್ನು ದೇವರು ಪ್ರಕಟಿಸಿದ ತತ್ವವಾಗಿ ನಾವು ನಿರೂಪಿಸುತ್ತೇವೆ.”—ಮೂನಿಫೀಕೆಂಟಿಸೀಮುಸ್‌ ಡೇವುಸ್‌.—2⁄15, ಪುಟಗಳು 26-7.

▫ ಯೆರೆಮೀಯ 24 ನೆಯ ಅಧ್ಯಾಯದಲ್ಲಿ ಒಳ್ಳೆಯ ಮತ್ತು ಕೆಟ್ಟು ಹೋಗಿದ್ದ ಅಂಜೂರಗಳಿದ್ದ ಎರಡು ಬುಟ್ಟಿಗಳು ಏನನ್ನು ಪ್ರತಿನಿಧೀಕರಿಸಿದವು?

ಒಳ್ಳೆಯ ಅಂಜೂರಗಳು ಆರಂಭದಲ್ಲಿ ಬಾಬೆಲಿಗೆ ಸೆರೆಯಾಗಿ ಹೋಗಿದ್ದ ಯೆಹೂದ್ಯರನ್ನು ಪ್ರತಿನಿಧೀಕರಿಸಿದವು. ಇವರಲ್ಲಿ ಒಂದು ಜನಶೇಷ ಯೆಹೂದಕ್ಕೆ ಹಿಂದಿರುಗಲಿತ್ತು. ಕೆಟ್ಟು ಹೋಗಿದ್ದ ಅಂಜೂರಗಳು, ದೇವರ ಹೆಸರಲ್ಲಿ ಪ್ರತಿಜ್ಞೆ ಮಾಡಿದ್ದರೂ ನೆಬೂಕದ್ನೆಚ್ಚರ ರಾಜನ ವಿರುದ್ಧ ದಂಗೆಯೆದ್ದ ಚಿದ್ಕೀಯ ರಾಜನನ್ನೂ ಅವನೊಂದಿಗಿದ್ದವರನ್ನೂ ಚಿತ್ರಿಸಿದವು. ಇದಕ್ಕೆ ಸಮಾನವಾಗಿ, ಈ ಆಧುನಿಕ ಸಮಯಗಳಲ್ಲಿ ತಮ್ಮ ಜೀವಿತಗಳಲ್ಲಿ ಉತ್ತಮ ಫಲಗಳನ್ನು ಫಲಿಸಿರುವ ಆತ್ಮಿಕ ಇಸ್ರಾಯೇಲಿನ ಉಳಿಕೆಯವರನ್ನೂ, ಇದಕ್ಕೆ ವೈದೃಶ್ಯವಾಗಿ ಕೊಳೆತ ಫಲವನ್ನು ಫಲಿಸಿರುವ ಕ್ರೈಸ್ತಪ್ರಪಂಚದ ಪುರೋಹಿತರನ್ನೂ ನಾವು ಕಂಡುಕೊಳ್ಳುತ್ತೇವೆ.—3⁄1, ಪುಟಗಳು 14-16.

▫ ಹದಿನಾಲ್ಕನೆಯವರು (ಕ್ವಾರ್ಟೊಡೆಸಿಮನ್ಸ್‌) ಯಾರಾಗಿದ್ದರು, ಮತ್ತು ಇಂದು ಕ್ರೈಸ್ತರಿಗೆ ಅವರೇಕೆ ಆಸಕ್ತಿಹುಟ್ಟಿಸುವವರಾಗಿದ್ದಾರೆ?

ಅಪೊಸ್ತಲರ ದಿನಗಳಾನಂತರ, ಅಪೊಸ್ತಲ ಸಂಬಂಧಿತ ಮಾದರಿಯಂತೆ ಕರ್ತನ ಸಂಧ್ಯಾ ಬೋಜನವನ್ನು ನೈಸಾನ್‌ 14 ರಂದು ಆಚರಿಸುತ್ತಿದ್ದ ಕೆಲವರಿದ್ದರು. ಅವರು “ಹದಿನಾಲ್ಕನೆಯವರು,” ಅಥವಾ ಕ್ವಾರ್ಟೊಡೆಸಿಮನ್ಸ್‌ ಎಂದು ಪ್ರಸಿದ್ಧರಾದರು. ಇದು ಇಂದು ಆಸಕ್ತಿಯ ವಿಷಯ, ಏಕೆಂದರೆ ಅಪೊಸ್ತಲರು ಸತ್ತ ಮೇಲೆಯೂ, ಯೇಸುವಿನ ಮರಣವನ್ನು ಸರಿಯಾದ ರೀತಿಯಲ್ಲಿ ನೈಸಾನ್‌ 14 ರಂದು ವರ್ಷಕ್ಕೊಮ್ಮೆ ಆಚರಿಸಿದವರಿದರ್ದೆಂದು ಇದು ತೋರಿಸುತ್ತದೆ.—3⁄15, ಪುಟಗಳು 4-5.

▫ ವಿಲ್ಯಮ್‌ ಹಿಸ್ವನ್ಟ್‌ ಯಾರಾಗಿದ್ದನು?

ಅವನು ಇಂಗ್ಲೆಂಡಿನಲ್ಲಿ 18 ನೆಯ ಶತಮಾನದ ಒಬ್ಬ ನಿಪುಣ ವಿದ್ವಾಂಸ. ಸರ್‌ ಐಸಕ್‌ ನ್ಯೂಟನನ ಆಪ್ತ ಒಡನಾಡಿ. ಹಿಸ್ವನ್ಟನು ಕ್ರಿಸ್ಟ್ಯನ್‌ ಗ್ರೀಕ್‌ ಶಾಸ್ತ್ರಗಳನ್ನು ಭಾಷಾಂತರಿಸಿ, ತ್ರೈಯೈಕ್ಯ ಬೋಧನೆಯನ್ನು ಬಹಿರಂಗವಾಗಿ ವಿರೋಧಿಸಿದನು ಮತ್ತು ಅವನು ಖಗೋಲ ಶಾಸ್ತ್ರ ಮತ್ತು ಗಣಿತದ ಉಪನ್ಯಾಸಕನಾಗಿದ್ದನು. ಆದರೆ ಯೆಹೂದಿ ಇತಿಹಾಸಗಾರ ಫ್ಲೇವಿಯಸ್‌ ಜೋಸೀಫಸನ ಬರಹಗಳನ್ನು ಇಂಗಿಷ್ಲಿಗೆ ಭಾಷಾಂತರ ಮಾಡಿದುದರಲ್ಲಿ ಹಿಸ್ವನ್ಟನು ಹೆಚ್ಚಿನದಾಗಿ ಜ್ಞಾಪಕಕ್ಕೆ ಬರುವುದು ಸಂಭವನೀಯ.—3⁄15, ಪುಟಗಳು 26-8.

▫ ಮನುಷ್ಯನು ದೇವರ ಸ್ವರೂಪದಲ್ಲಿ ಮಾಡಲ್ಪಟ್ಟದ್ದು ಹೇಗೆ? (ಆದಿಕಾಂಡ 1:27)

ದೇವರ ಪ್ರಧಾನ ಗುಣಗಳಾದ ಪ್ರೀತಿ, ನ್ಯಾಯ, ವಿವೇಕ, ಮತ್ತು ಶಕ್ತಿ ಹಾಗೂ ಇತರ ಗುಣಗಳನ್ನು ನಿರ್ವಹಿಸುವ ಸಾಮರ್ಥ್ಯದಿಂದ ಮನುಷ್ಯನು ನಿರ್ಮಿಸಲ್ಪಟ್ಟನು.—4⁄1, ಪುಟ 25.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ