ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 4/1 ಪು. 32
  • ಹತ್ತು ವರುಷಗಳಿಂದ ಏಕಕಾಲಿಕ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹತ್ತು ವರುಷಗಳಿಂದ ಏಕಕಾಲಿಕ!
  • ಕಾವಲಿನಬುರುಜು—1994
ಕಾವಲಿನಬುರುಜು—1994
w94 4/1 ಪು. 32

ಹತ್ತು ವರುಷಗಳಿಂದ ಏಕಕಾಲಿಕ!

ಹತ್ತು ವರುಷಗಳ ಹಿಂದೆ ಸ್ಪ್ಯಾನಿಷ್‌ ಮುದ್ರಣದ ಕಾವಲಿನಬರುಜು ಪತ್ರಿಕೆಯನ್ನು ಇಂಗ್ಲಿಷ್‌ ಮುದ್ರಣದೊಂದಿಗೆ ಏಕಕಾಲಿಕವಾಗಿ ಪ್ರಕಾಶಿಸಿದಾಗ ಹೇಗೆ ಅನಿಸಿತು ಎಂಬುದಾಗಿ ಕೇಳಲಾದಾಗ, ಒಬ್ಬಾಕೆ ಪ್ರಿಯ ಸ್ಪ್ಯಾನಿಷ್‌ ಸಹೋದರಿಯು ಪ್ರತಿಕ್ರಿಯಿಸಿದ್ದು: ‘ಇದೊಂದು ಆಶೀರ್ವಾದವಾಗಿದೆಯೆಂದು ನಮಗನಿಸುತ್ತದೆ ಯಾಕೆಂದರೆ ನಾವು ಇಂಗ್ಲಿಷ್‌ನೊಂದಿಗೆ ಅದೇ—ಏನನ್ನುತ್ತೀರಿ—ಅದೇ ಹೆಜ್ಜೆಯನ್ನು ಇಡುತ್ತಿದ್ದೇವೆ. ಇಂಗ್ಲಿಷ್‌ ಎಂಬುದಾಗಿ ನಾನು ಹೇಳುವಾಗ, ಎಲ್ಲಾ ಸಮಯ ನಾನು ಸಂಸ್ಥೆಯ ಕುರಿತು ಯೋಚಿಸುತ್ತೇನೆ. ನಾವು ಸಂಸ್ಥೆಯನ್ನು “ತಾಯಿ” ಯೋಪಾದಿ ಸೂಚಿಸುತ್ತೇವೆ. ನಾವು ನಿಕಟ, ಹತ್ತಿರವಾದ ಸಹವಾಸವನ್ನು ಅನುಭವಿಸುತ್ತೇವೆ. ಅದೆಷ್ಟು ಸುಂದರವಾಗಿದೆ. ಅದೆಷ್ಟು ಅದ್ಭುತಕರವಾಗಿದೆ!’

ಅನೇಕ ಇಂಗ್ಲಿಷ್ಯೇತರ ಓದುಗರ ಅನಿಸಿಕೆಗಳನ್ನು ಈ ನಂಬಿಗಸ್ತ ಸಹೋದರಿಯು ವ್ಯಕ್ತಪಡಿಸಿದಳು. ಗತ ವರುಷಗಳಲ್ಲಿ, ಸ್ಪ್ಯಾನಿಷ್‌ ಮುದ್ರಣದಲ್ಲಿ ಕಾವಲಿನಬರುಜು ಪತ್ರಿಕೆಯ ಲೇಖನಗಳು ಇಂಗ್ಲಿಷ್‌ನಲ್ಲಿ ಅವು ಪ್ರಕಟವಾದ ಆರು ತಿಂಗಳುಗಳ ಬಳಿಕ ಕಾಣಿಸಿಕೊಂಡವು. ಇತರ ಭಾಷೆಗಳು ಸಮಾನವಾದ ತಡೆಗಳನ್ನು ಅನುಭವಿಸಿದವು. ಸಮನಾದ ವಿಷಯವನ್ನು ಏಕಕಾಲಿಕವಾಗಿ ಅನೇಕ ಭಾಷೆಗಳಲ್ಲಿ ಪ್ರಕಟಿಸಬೇಕೆಂಬ ತೀಕ್ಷೈ ಬಯಕೆಯು ಇತ್ತೆಂಬುದು ಗ್ರಾಹ್ಯ.

ಆದುದರಿಂದ ಎಪ್ರಿಲ್‌ 1, 1984ರ ಸಂಚಿಕೆಯೊಂದಿಗೆ ಪ್ರಾರಂಭಿಸುತ್ತಾ, ಇಂಗ್ಲಿಷ್‌ ಮುದ್ರಣದೊಂದಿಗೆ ಏಕಕಾಲಿಕವಾಗುವುದರಲ್ಲಿ ಸ್ಪ್ಯಾನಿಷ್‌ ಮುದ್ರಣವು ಪ್ರಥಮವಾಗಿತ್ತು. ಇತರ ಭಾಷೆಗಳು ಬೇಗನೆ ಹಿಂಬಾಲಿಸಿದವು. ಇಸವಿ 1985ರ ಆರಂಭದೊಳಗಾಗಿ, 23 ಭಾಷೆಗಳಲ್ಲಿ ಮುದ್ರಣಗಳು ಏಕಕಾಲಿಕವಾಗಿದ್ದವು. ಭಾಷಾಂತರಕಾರರನ್ನು ಕಂಡುಹಿಡಿದು ತರಬೇತಿ ನೀಡಿದಂತೆ, ಹೆಚ್ಚಿನ ಭಾಷೆಗಳಲ್ಲಿ ಮುದ್ರಣಗಳು ಇಂಗ್ಲಿಷಿನ ಬೆನ್ನು ಹಿಡಿದವು.

ಕಾವಲಿನಬುರುಜು ವಿನ ಈ ಸಂಚಿಕೆಯು, ಏಕಕಾಲಿಕ ಪ್ರಕಾಶನದ ಹತ್ತನೆಯ ವರುಷವನ್ನು ಗುರುತಿಸುತ್ತದೆ. ಕಾವಲಿನಬುರುಜು ಈಗ 116 ಭಾಷೆಗಳಲ್ಲಿ ಪ್ರಕಾಶಿಸಲ್ಪಡುತ್ತದೆ, ಅವುಗಳಲ್ಲಿ 85 ಏಕಕಾಲಿಕವಾಗಿವೆ. ಅಂದರೆ ಕಾವಲಿನಬುರುಜು ವಿನ 1,61,00,000 ಪ್ರತಿಗಳ ಒಟ್ಟು ಸರಾಸರಿ ಉತ್ಪಾದನೆಯ 99.3 ಪ್ರತಿಶತವು, ಸಮನಾದ ಮುಖಪುಟ ರಚನೆ ಮತ್ತು ಲೇಖನಗಳೊಂದಿಗೆ ತಯಾರಿಸಲ್ಪಡುತ್ತದೆಂದು ಅರ್ಥ. ವಾರದ ಕಾವಲಿನಬುರುಜು ಅಭ್ಯಾಸವನ್ನು ಹಾಜರಾಗುವವರಲ್ಲಿ, 95 ಕ್ಕಿಂತಲೂ ಹೆಚ್ಚಿನ ಪ್ರತಿಶತ ಜನರು ಒಂದೇ ವಿಷಯವನ್ನು ಏಕಕಾಲದಲ್ಲಿ ಪರಿಗಣಿಸುತ್ತಾರೆ.

ಕಾವಲಿನಬುರುಜು ವಿನ ಸಂಗಾತಿ ಪತ್ರಿಕೆಯಾದ ಎಚ್ಚರ!ವು ಅದರ 74 ಭಾಷೆಗಳ 37 ಭಾಷೆಗಳಲ್ಲಿ ಏಕಕಾಲಿಕವಾಗಿ ಪ್ರಕಾಶಿಸಲ್ಪಡುತ್ತದೆ. ವಾರ್ಷಿಕವಾದ ಯೆಹೋವನ ಸಾಕ್ಷಿಗಳ ವರ್ಷಪುಸ್ತಕವು (ಯಿಯರ್‌ಬುಕ್‌ ಆಫ್‌ ಜೆಹೋವಸ್‌ ವಿಟ್ನೆಸೆಸ್‌) 18 ಭಾಷೆಗಳಲ್ಲಿ ಪ್ರಕಾಶಿಸಲ್ಪಡುತ್ತದೆ. ಇಂತಹ ಏಕಕಾಲಿಕ ಪ್ರಕಾಶನವು ದೇವರ ಜನರನ್ನು “ಒಂದೇ ಮನಸ್ಸೂ ಒಂದೇ ಅಭಿಪ್ರಾಯ” ದಲ್ಲಿ ಕೂಡಿಸಲು ಉಪಯುಕ್ತವಾಗುತ್ತದೆ.—1 ಕೊರಿಂಥ 1:10.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ