“ಗೇಲಿ ಮಾಡುವದಕ್ಕಿಂತ ಮುಂಚೆ ನಾವು ಹೆಚ್ಚು ಓದೋಣ”
ಅದನ್ನು ತಾನೇ ನ್ಯೂಜಿಲೇಂಡಿನ ಒಬ್ಬ ವ್ಯಕ್ತಿಯು ನೀವು ಓದುತ್ತಿರುವ ಪತ್ರಿಕೆಯಾದ ಕಾವಲಿನಬುರುಜು ವಿನ ಕುರಿತು ಹೇಳಿದನು. ಯೆಹೆಜ್ಕೇಲ ಅಧ್ಯಾಯ 1 ರಲ್ಲಿ ವರ್ಣಿಸಲ್ಪಟ್ಟ ದೇವರ ದಿವ್ಯ ರಥದ ಕುರಿತಾದ ಲೇಖನದ ಬಗ್ಗೆ, ಆ ವ್ಯಕ್ತಿಯು ಬರೆದದ್ದು:
“ಈ ನಾಲ್ಕು ಜೀವಿಗಳಲ್ಲಿ ಯಾ ಕೆರೂಬಿಯರಲ್ಲಿ ಪ್ರತಿಯೊಬ್ಬರಿಗೆ ನಾಲ್ಕು ರೆಕ್ಕೆಗಳೂ, ನಾಲ್ಕು ಮುಖಗಳೂ ಇದ್ದವು. ಅವುಗಳಿಗೆ ಯೆಹೋವನ ನ್ಯಾಯವನ್ನು ಪ್ರತಿನಿಧಿಸುವ ಸಿಂಹನ ಮುಖವಿತ್ತು; ಹೋರಿಯ ಮುಖವು, ದೇವರ ಶಕ್ತಿಯನ್ನು ಪ್ರತಿನಿಧಿಸುತ್ತದೆ; ಗರುಡನ ಮುಖವು, ಅವನ ವಿವೇಕವನ್ನು ಸೂಚಿಸುತ್ತದೆ; ಮತ್ತು ಮನುಷ್ಯನ ಮುಖವು ಯೆಹೋವನ ಪ್ರೀತಿಯನ್ನು ಸೂಚಿಸುತ್ತದೆ.
“ಇದನ್ನು ಪುನಃ, ಪುನಃ ಓದಿದ ನಂತರ, ನನ್ನ ಹೃದಯದೊಳಗೆ ಒಂದು ಬೆಚ್ಚಗೆನ ಭಾವನೆಯುಂಟಾಯಿತು. ನನ್ನ ಕಣ್ಣುಗಳಲ್ಲಿ ಕಣ್ಣೀರು ಬಂತು, ಆನಂದಭಾಷ್ಪಗಳವು. ನನ್ನ ತಕ್ಷಣದ ಯೋಚನೆಗಳು, ‘ಯೆಹೋವನೇ, ನೀನು ಎಷ್ಟೊಂದು ಸುಂದರನೂ, ಮನೋಹರನೂ ಆಗಿದ್ದಿರಬೇಕು!’ ಒಬ್ಬ ಲೌಕಿಕ ವ್ಯಕ್ತಿಯಾಗಿರುವ ನಾನು ಹಲವು ವರ್ಷಗಳಿಂದ ಗೇಲಿಮಾಡುತ್ತಿದ್ದ, ಈ ಯೆಹೋವ ದೇವರ ಕಡೆಗಿನ ಇಂತಹ ಹೊಸ ಭಾವನೆಗಳಿಗಾಗಿ ಸ್ವತಃ ನಾನು ಬಹಳಷ್ಟು ಸ್ತಬ್ಧನಾಗಿದ್ದೇನೆ. ನಾನು ‘ಉಪಕಾರ ನಿಮಗೆ’ ಎಂದು ಯೆಹೋವನ ಸಾಕ್ಷಿಗಳಿಗೆ ಹೇಳುತ್ತೇನೆ, ಮತ್ತು ನನ್ನಂತಹ ಅನೇಕರಿಗೆ ನಾನು ಹೇಳುವುದು, ‘ಗೇಲಿ ಮಾಡುವದಕ್ಕಿಂತ ಮುಂಚೆ ನಾವು ಹೆಚ್ಚು ಓದೋಣ.”