ಹೋಗುವುದು ಸ್ವರ್ಗಕ್ಕೋ ಅಥವಾ ನರಕಕ್ಕೋ?
“ಸ್ವರ್ಗಕ್ಕೆ ಹೋಗುವ ಅಥವಾ ನರಕಕ್ಕೆ ಹೋಗುವ ನಿಮ್ಮ ಸಾಧ್ಯತೆಗಳೇನು?”
ಮೂಲದಲ್ಲಿ ಅದನ್ನು, ಇತ್ತೀಚೆಗಿನ ಸಮೀಕ್ಷೆಯೊಂದರಲ್ಲಿ ಅಮೆರಿಕನ್ ಜನತೆಯ ಒಂದು ಮಾದರಿ ವಿಭಾಗಕ್ಕೆ ಕೇಳಲಾಯಿತು. ಪ್ರಿನ್ಸ್ಟನ್ ರಿಲಿಜನ್ ರಿಸರ್ಚ್ ಸೆಂಟರ್ ಅದರ ಫಲಿತಾಂಶಗಳನ್ನು ರಿಲಿಜನ್ ಇನ್ ಅಮೆರಿಕ 1992-1993 ಯಲ್ಲಿ ಪ್ರಕಟಿಸಿತು.
ನೀವು ಅದನ್ನು ಹೇಗೆ ಉತ್ತರಿಸುತ್ತಿದ್ದರಿ? ನಿಮ್ಮ ವಿವಾಹ ಜೋಡಿ ಅಥವಾ ಬೇರೆ ಪ್ರಿಯ ಜನರು ಮರಣಾನಂತರ ಪರಲೋಕಕ್ಕೆ ಹೋಗುವ ಸಂಭವನೀಯತೆಗಳೇನು? ನೀವು ಅಥವಾ ಅವರು, ಕಟ್ಟಕಡೆಗೆ ನರಕಕ್ಕೇ ಹೋಗುವ ಸಾಧ್ಯತೆ ಇರಬಹುದೆಂದು ನೀವು ನೆನಸುತ್ತೀರೋ?
ಸ್ವರ್ಗಕ್ಕೆ ಹೋಗುವ ತಮ್ಮ ಸಂಭವಗಳು ಒಳ್ಳೆಯವೂ ಅತ್ಯುತ್ತಮವೂ ಆಗಿವೆಯೆಂದು 78 ಪ್ರತಿಶತ ಜನರು ನೆನಸಿದರೆಂದು ಸಮೀಕ್ಷೆ ತೋರಿಸಿತು, ಇದು ಸುಮಾರು 40 ವರುಷಗಳ ಹಿಂದೆ ಆ ರೀತಿ ಉತ್ತರಿಸಿದವರಿಗಿಂತ ಹೆಚ್ಚಾಗಿತ್ತು. ನರಕಕ್ಕೋ? ಅಲ್ಲಿಗೆ ಹೋಗುವ ಸಂಭವನೀಯತೆ ಕೊಂಚವೆಂದು ಸುಮಾರು 77 ಪ್ರತಿಶತ ಹೇಳಿದರು.
ಅವರ ಉತ್ತರಗಳು ನಿಷ್ಕೃಷ್ಟ ಬೈಬಲ್ ಜ್ಞಾನದಲ್ಲಿ ಆಧಾರಿಸಿದ್ದವೋ? ಒಳ್ಳೇದು, 10 ರಲ್ಲಿ 4 ಮಂದಿ ಒಪ್ಪಿಕೊಂಡದ್ದೇನಂದರೆ ಅವರು ಧಾರ್ಮಿಕ ಆರಾಧನೆಗಳಿಗೆ ಐದು ವರ್ಷಗಳ ಹಿಂದೆ ಮಾಡುತ್ತಿದ್ದದಕ್ಕಿಂತ ಕಡಿಮೆ ಬಾರಿ ಉಪಸ್ಥಿತರಾಗುತ್ತಾರೆ. ಕೇವಲ 28 ಪ್ರತಿಶತ ಬೈಬಲ್ ಅಧ್ಯಯನ ಗುಂಪುಗಳಲ್ಲಿ ಮತ್ತು 27 ಪ್ರತಿಶತ ಧಾರ್ಮಿಕ ಶಿಕ್ಷಣ ತರಗತಿಗಳಲ್ಲಿ ಪಾಲಿಗರಾಗುವುದನ್ನು ತಿಳಿಸಿದರು.
ಬೈಬಲನ್ನು ನೀವು ಜಾಗರೂಕತೆಯಿಂದ ಅಭ್ಯಾಸಿಸುವುದಾದರೆ, ಕೆಲವು ಆಶ್ಚರ್ಯಕರ ನಿಜತ್ವಗಳನ್ನು ನೀವು ಕಂಡುಕೊಳ್ಳುವಿರಿ. ಉದಾಹರಣೆಗೆ, ಬೈಬಲ್ ಸ್ಪಷ್ಟವಾಗಿಗಿ ಹೇಳುವುದೇನಂದರೆ, ಕೆಲವು ಬೈಬಲ್ ಭಾಷಾಂತರಗಳಲ್ಲಿ ತರ್ಜುಮೆಯಾದ ಪ್ರಕಾರ, ಯೇಸು ಮರಣದಲ್ಲಿ “ನರಕ” ಕ್ಕೆ ಹೋದನು. (ಅ. ಕೃತ್ಯಗಳು 2:31, ಕಿಂಗ್ ಜೇಮ್ಸ್ ವರ್ಷನ್; “ಹೇಡಿಸ್,” ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್) ಅರಸ ದಾವೀದನಾಗಲಿ ಯಾ ಸ್ನಾನಿಕನಾದ ಯೋಹಾನನಾಗಲಿ ಮರಣಾನಂತರ ಸ್ವರ್ಗಕ್ಕೆ ಹೋಗಲಿಲ್ಲವೆಂದು ಸಹ ದೇವರ ವಾಕ್ಯ ರುಜುಪಡಿಸುತ್ತದೆ. (ಮತ್ತಾಯ 11:11; ಅ. ಕೃತ್ಯಗಳು 2:29) ಅವು ನಿಜ ಸಂಗತಿಗಳಾಗಿರುತ್ತವೆ, ಒಂದು ಧಾರ್ಮಿಕ ಸಮೀಕ್ಷೆಯ ಬರಿಯ ಅಭಿಪ್ರಾಯಗಳಲ್ಲ.
ನಿಮ್ಮನ್ನು ಪ್ರಭಾವಿಸಬಹುದಾದ ಇತರ ನಿಜತ್ವಗಳು: ಯೇಸುವಿನ ಅಪೊಸ್ತಲರು ಮತ್ತು ಒಂದು ಸೀಮಿತ ಸಂಖ್ಯೆಯ ಬೇರೆಯವರು ಯೇಸುವಿನೊಂದಿಗೆ ಆಳಲು ಪರಲೋಕಕ್ಕೆ ಒಯ್ಯಲ್ಪಡುವರೆಂದು ಬೈಬಲ್ ಕಲಿಸುತ್ತದೆ. ಆದರೂ, ಸತ್ತಿರುವವರಾದ ಅಧಿಕ ಸಂಖ್ಯಾತ ಜನರು ಮಾನವಕುಲದ ಸಾಮಾನ್ಯ ಸಮಾಧಿಗೆ ಹೋದರು ಅಷ್ಟೇ. ದೇವರು ಅವರನ್ನು ಪುನರುತ್ಥಾನಗೊಳಿಸಿ, ಒಂದು ಪುನರ್ಸ್ಥಾಪಿತ ಭೂಪ್ರಮೋದವನದಲ್ಲಿ ಪೂರ್ಣವೂ ಸಂತೋಷಕರವೂ ಆದ ಅನಂತ ಜೀವನದ ಪ್ರತೀಕ್ಷೆಯೊಂದಿಗೆ ಅವರನ್ನು ಭೂಮಿಯ ಜೀವಿತಕ್ಕೆ ಬರಮಾಡುವನು.
ಆ ನಿರೀಕ್ಷೆಗಾಗಿ ನಂಬಲರ್ಹವಾದ ಆಧಾರವನ್ನು ನಿಮ್ಮ ಸ್ವಂತ ಬೈಬಲಿನಿಂದ ಸ್ಥಿರಪಡಿಸುವಂತೆ ನಿಮಗೆ ಸಹಾಯ ನೀಡಲು ಯೆಹೋವನ ಸಾಕ್ಷಿಗಳು ಸಂತೋಷಪಡುವರು.