ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 1/15 ಪು. 32
  • ಬಂಗಾರದ ಸೇಬು ಹಣ್ಣುಗಳಂತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬಂಗಾರದ ಸೇಬು ಹಣ್ಣುಗಳಂತೆ
  • ಕಾವಲಿನಬುರುಜು—1994
ಕಾವಲಿನಬುರುಜು—1994
w94 1/15 ಪು. 32

ಬಂಗಾರದ ಸೇಬು ಹಣ್ಣುಗಳಂತೆ

ಸೇಬು ಹಣ್ಣುಗಳು—ಕಣ್ಣನ್ನೂ ನಾಲಿಗೆಯನ್ನೂ ಅವು ಹೇಗೆ ರಂಜಿಸುತ್ತವೆ! “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ,” ಎಂಬುದಾಗಿ ಹೇಳುವಾಗ, ರುಚಿಕರವಾದ ಈ ಹಣ್ಣನ್ನು ವಿಚಾರ ಪ್ರೇರಕ ಉಪಮೆಯಲ್ಲಿ ಬೈಬಲ್‌ ಉಪಯೋಗಿಸುತ್ತದೆ. (ಜ್ಞಾನೋಕ್ತಿ 25:11) ಈ ಹೇಳಿಕೆಯ ಅರ್ಥವೇನಾಗಿದೆ?

“ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳು” ಬೆಳ್ಳಿಯ ಹರಿವಾಣದ ಮೇಲೆ ಕೆತ್ತಲ್ಪಟ್ಟ ಬಂಗಾರದ ಹಣ್ಣಿನಂತಹ ಕೆತ್ತನೆಯ ಕೆಲಸವನ್ನು ಸೂಚಿಸಬಹುದು. ಈ ಅಧ್ಯಾಯದಲ್ಲಿನ ಆರಂಭಿಕ ವಚನಗಳು ರಾಜನೊಬ್ಬನನ್ನು ಸಮೀಪಿಸುವುದರ ಕುರಿತು ತಿಳಿಸುವುದರಿಂದ, ಈ ವಚನವು ಅರಸನೊಬ್ಬನಿಗೆ ಕೊಡಲ್ಪಡುವ ಕೊಡುಗೆಗಳನ್ನು—ಬೆಳ್ಳಿಯ ಹರಿವಾಣಗಳ ಮೇಲೆ ಇರಿಸಲಾದ ಸೇಬು ಹಣ್ಣುಗಳ ರೂಪದಲ್ಲಿರುವ ಬಂಗಾರದ ಆಭರಣಗಳನ್ನು ಸೂಚಿಸಸಾಧ್ಯವಿದೆ. (ಜ್ಞಾನೋಕ್ತಿ 25:6, 7) ಖಂಡಿತವಾಗಿ, ಪರಿಣಾಮಕಾರಕವಾಗಿ ಸುಂದರ!

ಬರೆಯಲ್ಪಟ್ಟ ಯಾ ಮಾತಾಡಲ್ಪಟ್ಟ ಸೂಕ್ತವಾದ, ಘನತೆಯುಳ್ಳ, ಸಮಯೋಚಿತ ಮಾತುಗಳಲ್ಲಿ ಸಮಾನವಾದ ಸೌಂದರ್ಯವಿದೆ. ಅವು ಹಿತಕರವಾಗಿಯೂ, ಉತ್ತೇಜನಕರವಾಗಿಯೂ, ಮತ್ತು ಅನೇಕ ರೀತಿಯಲ್ಲಿ ಪ್ರಯೋಜನಕರವಾಗಿಯೂ ಇವೆ. ವಿಶೇಷವಾಗಿ ಬೈಬಲಿನ ದೈವಿಕವಾಗಿ ಪ್ರೇರಿತವಾದ ಒಳವಿಷಯಗಳು ಸುಂದರವಾದ “ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣು” ಗಳಂತಿವೆ.

ಜ್ಞಾನೋಕ್ತಿ 25:11 ರಲ್ಲಿ ರಾಜ ಸೊಲೊಮೋನನ ವಿವೇಕಯುಕ್ತ ಹೇಳಿಕೆಯ ಮೂಲಕ ದೃಷ್ಟಾಂತಿಸಲ್ಪಟ್ಟಂತೆ, ಅವನು “ಯಥಾರ್ಥಭಾವದಿಂದ ರಚಿಸಿದ ಒಪ್ಪಿಗೆಯ ಸತ್ಯದ ಮಾತುಗಳನ್ನು ಹುಡುಕಿ ಆರಿಸಿದನು.” (ಪ್ರಸಂಗಿ 12:10; ಜ್ಞಾನೋಕ್ತಿ 25:1) ಶತಮಾನಗಳ ಅನಂತರ, ಕ್ರೈಸ್ತ ಅಪೊಸ್ತಲ ಪೌಲನು ಬರೆದದ್ದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು . . . ಉಪಯುಕ್ತವಾಗಿದೆ.” (2 ತಿಮೊಥೆಯ 3:16) ಹೌದು, ಪ್ರಯೋಜನಕರ ಬುದ್ಧಿವಾದವನ್ನು, ಪ್ರವಾದನೆಗಳನ್ನು, ಶಬ್ದಚಿತ್ರಗಳನ್ನು, ಮತ್ತು ಅತ್ಯುತ್ತಮ ಕುಶಲ ಕರ್ಮಿಗಳ ಕೆಲಸಗಳನ್ನು ಬಹಳವಾಗಿ ಮೀರುವಂತಹ ಉತ್ಕೃಷ್ಟತೆ ಹಾಗೂ ಸೌಂದರ್ಯದ ಸತ್ಯಗಳು ಬೈಬಲಿನಲ್ಲಿವೆ. ಇನ್ನೂ ಹೆಚ್ಚಾಗಿ, ದೇವರ ವಾಕ್ಯವಾದ ಬೈಬಲಿನಿಂದ ವಿವೇಕವನ್ನು ಪಡೆಯುವ ಯಾವನೂ, ಅಮೂಲ್ಯವಾದೊಂದು ಸ್ವತ್ತನ್ನು ಸಂಪಾದಿಸುತ್ತಾನೆ ಮತ್ತು ಅನಂತ ಜೀವನದ ನಿರೀಕ್ಷೆಯನ್ನು ಮನಸ್ಸಿನಲ್ಲಿ ಉಳಿಸಿಕೊಳ್ಳಬಲ್ಲನು.—ಜ್ಞಾನೋಕ್ತಿ 4:7-9; ಯೋಹಾನ 17:3.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ