ಅವು ನಿಮಗೆ ಪ್ರಯೋಜನವಾಗಬಲ್ಲವೋ?
ನಿಮ್ಮ ಕೈಯಲ್ಲಿರುವ ಪತ್ರಿಕೆಯು, ಕುಟುಂಬಗಳನ್ನು ದೃಢಗೊಳಿಸಲು ಮತ್ತು ವೈಯಕ್ತಿಕ ಸಮಗ್ರತೆಯನ್ನು ಕಾಪಾಡಲಿಕ್ಕಾಗಿ ಬೈಬಲ್ ಮಾರ್ಗದರ್ಶಕಗಳನ್ನು ನೆನಪಿಗೆ ತರುತ್ತಾ, ಒಂದು ಉತ್ತೇಜನದ ಮೂಲವಾಗಿರುವಂತೆ ರಚಿಸಲಾಗಿದೆ. ಇಂದಿನ ತೊಂದರೆಯ ಸಮಯಗಳು ಬೈಬಲಿನಲ್ಲಿ ಮುಂತಿಳಿಸಲ್ಪಟ್ಟಿವೆಯೆಂದು ಅದು ತೋರಿಸುತ್ತದೆ, ಮತ್ತು ಪರಿಹಾರವಾದ ದೇವರ ರಾಜ್ಯ ಸರಕಾರವನ್ನು ಅದು ಎತ್ತಿಹೇಳುತ್ತದೆ. ಕಾವಲಿನಬುರುಜು ಮತ್ತು, ಅದರ ಸಂಗಾತಿ ಪತ್ರಿಕೆಯಾದ ಎಚ್ಚರ!ದ ಮೂಲಕ ನೀವು ಪ್ರಯೋಜನ ಹೊಂದಬಲ್ಲಿರೋ?
ಫಿಲಿಪ್ಪೀನ್ಸ್ನಿಂದ, ವಿಲ್ಮ ಹೆಸರಿನ ಹೆಂಗಸೊಬ್ಬಳು ಬರೆದದ್ದು: “ನಿಮ್ಮ ಪ್ರಕಾಶನಗಳನ್ನು ಬಣ್ಣಿಸಲು ಯಾವುದೇ ಶಬ್ದವಿರುವುದಾದರೆ, ನಾನು ‘ಅದ್ಭುತಕರ’ ಎಂಬದನ್ನು ಆರಿಸಿಕೊಳ್ಳುವೆನೆಂದು ಎಣಿಸುತ್ತೇನೆ. ನಿಮ್ಮ ಎಚ್ಚರ! ಮತ್ತು ಕಾವಲಿನಬುರುಜು ಪತ್ರಿಕೆಗಳನ್ನು ನಾನು ಮೊತ್ತಮೊದಲಾಗಿ ನೋಡಿದ್ದು ಮತ್ತು ಓದಿದ್ದು ಮನಿಲದಿಂದ ಬಸ್ಸಿನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗಲೆ. ಪ್ರಯಾಣ ಮಾಡುವಾಗ ಸಾಮಾನ್ಯವಾಗಿ ನಾನು ವಾರ್ತಾಪತ್ರಿಕೆಗಳನ್ನು ಸಂಗಡ ಒಯ್ಯುತ್ತೇನೆ ಆದರೆ, ಈ ಸಲ ಏನನ್ನೂ ಒಯ್ದಿರಲಿಲ್ಲ.
“ನಿಮ್ಮ ಪ್ರಕಾಶನಗಳಿದ್ದ ಒಬ್ಬ ನಡು-ವಯಸ್ಸಿನ ಪುರುಷನು ಪ್ರಯಾಣದಲ್ಲಿ ನನ್ನ ಪಕ್ಕದಲ್ಲಿ ಕೂತಿದ್ದನು. ಎಚ್ಚರ! ವನ್ನು ಓದಿದ ಅನಂತರ, ಕಾವಲಿನಬುರುಜು ಎಂಬ ಇನ್ನೊಂದು ಪತ್ರಿಕೆಯನ್ನು ಅವನು ಹೊರದೆಗೆದನು. ಎಚ್ಚರ! ವನ್ನು ಎರವಲಾಗಿ ಪಡೆಯುವ ಸಂದರ್ಭವನ್ನು ನಾನು ಒಡನೆಯೇ ತೆಗೆದುಕೊಂಡೆ. ಸತ್ಯವಾಗಿಯೂ, ಆ ಪತ್ರಿಕೆಗಳನ್ನು ಓದುವುದರಲ್ಲಿ ನಾನು ಆನಂದಿಸಿದೆ ಯಾಕಂದರೆ ಲೇಖನಗಳೆಲ್ಲವೂ ಕುತೂಹಲಕರವೂ, ಕಾಲೋಚಿತವೂ, ಮತ್ತು ಬಲವರ್ಧಕವೂ ಆಗಿದ್ದವು.”
ಆ ಹೆಂಗಸು ಕೊನೆಗೊಳಿಸಿದ್ದು: “ನಿಮ್ಮ ಪತ್ರಿಕೆಗಳನ್ನು ನಾನು ಅವಶ್ಯವಾಗಿ ಪಡೆಯಲು ಬಯಸುತ್ತೇನೆ. ಅವನ್ನು ಪಡೆಯುವುದು ಹೇಗೆಂದು ದಯವಿಟ್ಟು ನನಗೆ ತಿಳಿಸಿರಿ.” ಫಿಲಿಪ್ಪೀನ್ಸ್ನಲ್ಲಿ ಯೆಹೋವನ ಸಾಕ್ಷಿಗಳ ಶಾಖಾ ಆಫೀಸು ಈ ಹೆಂಗಸನ್ನು ಅದರ ಅಂಚೇ ಪಟ್ಟಿಯಲ್ಲಿ ಸೇರಿಸುವ ಮೂಲಕ ನೆರವನ್ನು ನೀಡಲು ಸಂತೋಷಪಟ್ಟಿತು.