ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 12/15 ಪು. 32
  • ನನ್ನ ಕೋಪವೊ, ನನ್ನ ಆರೋಗ್ಯವೊ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನನ್ನ ಕೋಪವೊ, ನನ್ನ ಆರೋಗ್ಯವೊ?
  • ಕಾವಲಿನಬುರುಜು—1993
ಕಾವಲಿನಬುರುಜು—1993
w93 12/15 ಪು. 32

ನನ್ನ ಕೋಪವೊ, ನನ್ನ ಆರೋಗ್ಯವೊ?

ಕೋಪ ಯಾರಿಗೆ ಬರುವುದಿಲ್ಲ? ನಮಗೆಲ್ಲರಿಗೂ ಬರುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ವಲ್ಪ ಮಟ್ಟಿಗಿನ ಕೋಪವನ್ನು ನ್ಯಾಯೀಕರಿಸಬಹುದು. ಆದರೆ, ಪ್ರಾಮಾಣಿಕವಾಗಿ ಹೇಳಬೇಕಾದರೆ, ಅನೇಕ ವೇಳೆ ನಮ್ಮ ಕೋಪವನ್ನು (ಅಥವಾ ಅದರ ತೀವ್ರತೆಯನ್ನು) ನ್ಯಾಯೀಕರಿಸಲಾಗದಿರುವುದು ನಿಜವಲ್ಲವೆ?

ಬೈಬಲು ನಮಗನ್ನುವುದು: “ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು. ಉರಿಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು.” (ಕೀರ್ತನೆ 37:8) ಈ ಸಲಹೆ ಎಷ್ಟು ವಿವೇಕಪೂರ್ಣ? ಅದು ನಿಮ್ಮ ದೀರ್ಘಾವಧಿಯ ಆರೋಗ್ಯವನ್ನು ಬಾಧಿಸಬಲ್ಲದೊ?

ತನ್ನ “ಆರೋಗ್ಯ” ವಿಭಾಗದಲ್ಲಿ, ದ ನ್ಯೂ ಯಾರ್ಕ್‌ ಟೈಮ್ಸ್‌ ಗಮನಿಸಿದ್ದು:

“ಭಾವಿಸಲ್ಪಟ್ಟ ಪ್ರತಿಯೊಂದು ಕಡೆಗಣಿಕೆಯ ಕಾರಣ ಅನೇಕ ವೇಳೆ ಕೋಪಾವೇಶದಿಂದ ಸ್ಫೋಟಗೊಳ್ಳುವ ಜನರು ಅಥವಾ ಕುದಿಯುತ್ತಾ ಕುಳಿತಿರುವವರು ತಮಗೆ ಅಹಿತಕರವಾಗಿರುವುದಕ್ಕಿಂತ ಹೆಚ್ಚಿನದನ್ನು ಮಾಡಬಹುದು. ಅವರು ತಮ್ಮನ್ನು ಕೊಲ್ಲುತ್ತಿರಲೂಬಹುದು.

“ಅಸ್ತಿಗತ ಕೋಪ ನಮ್ಮ ದೇಹಕ್ಕೆ ಎಷ್ಟು ಹಾನಿಕರವೆಂದರೆ, ಅದು ಶೀಘ್ರ ಮರಣದ ಬಲಾಢ್ಯ ಅಪಾಯ ಸಂಭವಗಳಾದ ಸಿಗರೇಟು ಸೇದುವಿಕೆ, ಬೊಜ್ಜು, ಮತ್ತು ಹೆಚ್ಚು ಕೊಬ್ಬಿರುವ ಆಹಾರದ ಸಾಲಿನಲ್ಲಿದೆ, ಯಾ ಅವನ್ನು ಮೀರಿಸುತ್ತದೆಂದು ಸೂಚಿಸುತ್ತಾ, ಸಂಶೋಧಕರು ಇತ್ತೀಚೆಗೆ ಹೇರಳ ಆಧಾರಾಂಶವನ್ನು ಸಂಗ್ರಹಿಸಿದ್ದಾರೆ.

“‘ದ್ವೇಷಾತ್ಮಕವಾದ, ಸಂಶಯಾಸ್ಪದ ಕೋಪವು ನಮಗೆ ತಿಳಿದಿರುವ ಬೇರೆ ಯಾವುದೇ ಇತರ ಆರೋಗ್ಯ ಹಾನಿಗೆ ಸಮಾನವಾಗಿದೆ ಎಂದು ನಮ್ಮ ಅಧ್ಯಯನಗಳು ಸೂಚಿಸುತ್ತವೆ,’ ಎನ್ನುತ್ತಾರೆ, ಡ್ಯೂಕ್‌ ವಿಶ್ವವಿದ್ಯಾಲಯ ವೈದ್ಯಕೀಯ ಕೇಂದ್ರದ ಚರ್ಯಾಮೂಲ ಔಷಧದ ಒಬ್ಬ ಸಂಶೋಧಕರಾದ ಡಾ. ರೆಡ್‌ಫರ್ಡ್‌.”

ದಿನನಿತ್ಯದ ಜೀವನದ ಸಾಮಾನ್ಯ ಸಮಸ್ಯೆಗಳಿಗೆ ವಿಪರೀತ ಪ್ರತಿಕ್ರಿಯೆಯನ್ನು ತೋರಿಸುವವರು ಹೆಚ್ಚು ಸೆಸ್ಟ್ರ್‌ ಚೋದಕಸ್ರಾವಗಳನ್ನು ಉತ್ಪಾದಿಸುತ್ತಾರೆಂದು ಅಧ್ಯಯನಗಳು ಸೂಚಿಸುತ್ತವೆ. ಅವರ ಅಡಿಗಡಿಯ ಉದ್ರೇಕಗಳು ಕಲೆಸ್ಟರಲ್‌ನ ರಕ್ಷಕ ಮತ್ತು ಹಾನಿಕಾರಕ ನಮೂನೆಗಳ ಮಧ್ಯೆ ಅಸಮತೆಯನ್ನು ಉಂಟುಮಾಡಿ ಹೃತ್ನಾಳ ರೋಗ ಹಾನಿಗೆ ಅವರನ್ನು ತುತ್ತಾಗಿಸಬಲ್ಲದು.

‘ನನ್ನ ಸ್ವಭಾವವೇ ಹಾಗೆ’ ಅಥವಾ, ‘ನಾನು ಬೆಳೆದು ಬಂದಿರುವುದೇ ಹಾಗೆ’ ಎಂದು ಕೆಲವರು ಹೇಳಬಹುದು. ಆದರೂ, ದೇವರ ಬುದ್ಧಿವಾದವನ್ನು ಯಥಾರ್ಥತೆಯಿಂದ ಅನ್ವಯಿಸಿಕೊಳ್ಳಲು ಪ್ರಯತ್ನಿಸುವಲ್ಲಿ, ನೀವು ಬದಲಾವಣೆ ಹೊಂದಲಾರಿರಿ ಎಂದು ಇದರ ಅರ್ಥವಲ್ಲ. ನಿಮ್ಮ ಸ್ವಂತ ಬೈಬಲಿನಲ್ಲಿ ಜ್ಞಾನೋಕ್ತಿ 14:29, 30; 22:24, 25; ಎಫೆಸ 4:26; ಯಾಕೋಬ 1:19, 20 ರಲ್ಲಿ ಕೋಪ ಮತ್ತು ರೋಷದ ವಿಷಯ ಆತನ ಬುದ್ಧಿವಾದವನ್ನು ಪರೀಕ್ಷಿಸಿರಿ.

ಈ ದೈವಿಕ ವಿವೇಕವನ್ನು ಅನ್ವಯಿಸಿಕೊಳ್ಳುವುದು ನಿಮ್ಮ ಆರೋಗ್ಯವನ್ನು ಹೆಚ್ಚು ಉತ್ತಮಗೊಳಿಸಿ ನಿಮ್ಮ ಆಯುಸ್ಸನ್ನು ಲಂಬಿಸಬಹುದು. ಟೈಮ್ಸ್‌ ಗಮನಿಸಿದ್ದು: “ಕೋಪ ಪ್ರವೃತ್ತಿಯ ಜನರು ತಮ್ಮ ಕ್ಷಿಪ್ರವಾದ, ದ್ವೇಷಾತ್ಮಕ ಪ್ರತಿಕ್ರಿಯೆಗಳನ್ನು ಬದಲಾಯಿಸುವ ಮೂಲಕ ಅಕಾಲ ಪ್ರಾಣನಷ್ಟವನ್ನು ಕಡಮೆ ಮಾಡಬಲ್ಲರು” ಎಂದು ಅನೇಕ ಸಂಶೋಧಕರು ಹೇಳಿದ್ದಾರೆ.”

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ