ದೇವರ ಹೆಸರು
“ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವದು ವ್ಯರ್ಥ.” ಹೀಗೆಂದು ಈ ಲ್ಯಾಟಿನ್ ಸ್ಮಾರಕ ಲೇಖವು ಓದುತ್ತದೆ. ಆ ಮಾತುಗಳು ಬೈಬಲಿನಲ್ಲಿ ಕೀರ್ತನೆ 127:1ರ ಮೇಲೆ ಆಧಾರಿಸಿವೆ, ಮತ್ತು ಅವುಗಳಲ್ಲಿ ಒಂದು ಅಗಾಧ ಸತ್ಯವು ಅಡಕವಾಗಿದೆ: ಯೆಹೋವನ ಆಶೀರ್ವಾದವಿರದ ಯಾವುದೇ ಪ್ರಯತ್ನವು ಕಟ್ಟಕಡೆಗೆ ವ್ಯರ್ಥವಾಗಿ ಹೋಗಲಿದೆ.
ಇಸವಿ 1780ರ ತಾರೀಖಿನ ಈ ಸ್ಮಾರಕ ಲೇಖವು ಶ್ರೀಲಂಕಾದ ಕೊಲಂಬೊವಿನ ಒಂದು ಕಟ್ಟಡದ ಮೇಲೆ ಕಂಡುಬಂದಿದೆ, ಮತ್ತು ಅದು ಗಮನಾರ್ಹ ಯಾಕಂದರೆ ಅದರಲ್ಲಿ ದೇವರ ಹೆಸರು, ಯೆಹೋವ, ಅಡಕವಾಗಿದೆ. (ಚಿತ್ರ ನೋಡಿರಿ.) ಆರಂಭದ ಶತಮಾನಗಳಲ್ಲಿ ಆ ಹೆಸರು ವಿಸ್ತಾರ್ಯವಾಗಿ ಉಪಯೋಗಿಸಲ್ಪಟ್ಟಿತ್ತು. ಅದು ಆಗಿಂದಾಗ್ಗೆ ಐಹಿಕ ಕಟ್ಟಡಗಳಲ್ಲಿ, ಚರ್ಚುಗಳಲ್ಲಿ, ನಾಣ್ಯಗಳ ಮೇಲೂ ಕೆತ್ತಲ್ಪಡುತ್ತಿತ್ತು. ಮಿಷನೆರಿಗಳು ಬೈಬಲನ್ನು ದೂರದ ದೇಶಗಳಿಗೆ ಕೊಂಡೊಯ್ದಾಗ ದೇವರ ನಾಮವನ್ನು ಉಪಯೋಗಿಸಿದ್ದರು, ಶ್ರೀಲಂಕಾದ ಈ ಸ್ಮಾರಕ ಲೇಖನಕ್ಕೆ ಕಾರಣವಿದೇ ಎಂಬದು ನಿಸ್ಸಂಶಯ.
ಇಂದು ವಿಷಯಗಳೆಷ್ಟು ಭಿನ್ನವಾಗಿವೆ! ಕ್ರೈಸ್ತರೆನಿಸಿಕೊಳ್ಳುವವರಲ್ಲಿ ದೇವರ ನಾಮದ ಕುರಿತು ಚಿಂತಿಸುವವರು ಕೊಂಚ ಜನ. ಅದನ್ನು ಎತ್ತಿಹೇಳುವುದಕ್ಕಾಗಿ ಯೆಹೋವನ ಸಾಕ್ಷಿಗಳನ್ನು ಕೆಲವು ವಿದ್ವಾಂಸರು ಟೀಕಿಸುತ್ತಾರೆ ಕೂಡ. ಯಾಕೆ? ಯಾಕಂದರೆ, ಕೆಲವರಿಗನುಸಾರವಾಗಿ, ಅದರ ಹೀಬ್ರು ಉಚ್ಚಾರಣೆಯು ನಿಖರವಾಗಿ ತಿಳಿದಿಲ್ಲ. ಆದರೆ ಯೇಸುವಿನ ಹೆಸರಿನ ಮೂಲ ಹೀಬ್ರು ಉಚ್ಚಾರವು ಎಷ್ಟು ಮಂದಿಗೆ ತಿಳಿದದೆ? ಆದರೂ, ಅವನ ಹೆಸರು ವಿಶ್ವವ್ಯಾಪಕವಾಗಿ ಉಪಯೋಗಿಸಲ್ಪಡುತ್ತದೆ ಮತ್ತು ಗೌರವಿಸಲ್ಪಡುತ್ತದೆ.
ಯೇಸುವಿಗೆ ದೇವರ ಹೆಸರು ಅತ್ಯಂತ ಮಹತ್ವದ್ದಾಗಿತ್ತು. ಆತನು ನಮಗೆ ಪ್ರಾರ್ಥನೆ ಮಾಡಲು ಕಲಿಸಿದ್ದು: “ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:9) ಮತ್ತು ತನ್ನ ಮರಣಕ್ಕೆ ತುಸು ಮುಂಚಿತವಾಗಿ, ಅವನು ದೇವರಿಗಂದದ್ದು: “ಲೋಕದೊಳಗಿಂದ ನೀನು ನನಗೆ ಕೊಟ್ಟ ಮನುಷ್ಯರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದೆನು.” (ಲೂಕ 17:6) ನಿಜ ಕ್ರೈಸ್ತರು ಯೇಸುವಿನ ಹೆಜ್ಜೆಜಾಡಿನ ಹಿಂಬಾಲಕರಾಗಿದ್ದಾರೆ. ಅವರು ಕೂಡ ‘ದೇವರ ಹೆಸರನ್ನು ತಿಳಿಯಪಡಿಸ’ಬೇಡವೇ? ಯೆಹೋವನ ಸಾಕ್ಷಿಗಳು ಹಾಗೆ ಮಾಡುತ್ತಾರೆ, ಮತ್ತು ಯೆಹೋವನು ಅವರ “ಮನೆ” ಯನ್ನು ಹೇರಳವಾಗಿ ಆಶೀರ್ವದಿಸುತ್ತಾನೆ. ಅವರಿಗೆ ಈ ಕೀರ್ತನೆಯು ಸತ್ಯವಾಗಿದೆ: “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು.”—ಕೀರ್ತನೆ 144:15.