ಸುಗ್ಗೀಕಾಲ!
“ಕ್ರೈಸ್ತತ್ವ”ದ ಇತಿಹಾಸವು ಅಷ್ಟೊಂದು ಅಕ್ರಿಸ್ತೀಯವಾಗಿರುವುದು ಯಾಕೆ? ಅನೇಕ ವಿಚಾರಪರ ಜನರು ಈ ಪ್ರಶ್ನೆಯನ್ನು ಕೇಳುತ್ತಾರೆ, ಆದರೆ ಬಹುತೇಕ 2,000 ವರುಷಗಳ ಹಿಂದೆ ಸಾಮ್ಯವೊಂದರಲ್ಲಿ ಯೇಸುವು ಇದನ್ನು ಉತ್ತರಿಸಿದ್ದಾನೆ. ಅವನು “ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನ” ಕುರಿತು ಒಂದು ಸಾಮ್ಯದಲ್ಲಿ ಅವನು ಹೇಳಿದನು. ಆಗ, “ಅವನ ವೈರಿಯು ಬಂದು ಗೋದಿಯ ನಡುವೆ ಹಣಜಿ ಬಿತ್ತಿ ಹೋದನು.” ಬೀಜಗಳು ಮೊಳೆತಾಗ, ಆಳುಗಳು ಹಣಜಿಯನ್ನು ಕಂಡು ಅವನ್ನು ಕಿತ್ತುಹಾಕಲು ಬಯಸಿದರು. ಆದರೆ ಆ ಮನುಷ್ಯನು ಅಂದದ್ದು: “ಸುಗ್ಗೀಕಾಲದ ತನಕ ಎರಡೂ ಬೆಳೆಯಲಿ.” ಸುಗ್ಗಿಯ ಸಮಯದಲ್ಲಿ, ಗೋದಿಯನ್ನು ಹಣಜಿಯಿಂದ ಪ್ರತ್ಯೇಕಿಸಲಾಗುವುದು.—ಮತ್ತಾಯ 13:24-30.
ಯೇಸುವು ಸಾಮ್ಯವನ್ನು ವಿವರಿಸುತ್ತಾ, “ಒಳ್ಳೆಯ ಬೀಜ” ವಾದ—ನಿಜ ಕ್ರೈಸ್ತರನ್ನು—ಬಿತ್ತಿದವನು ಸ್ವತಃ ತಾನು ಎಂದು ಯೇಸು ಹೇಳಿದನು. “ಹಣಜಿ” ಯನ್ನು ನಡುವೆ ನೆಟ್ಟ—ಖೋಟಾ ಕ್ರೈಸ್ತರನ್ನು ಸಭೆಯೊಳಗೆ ನುಸುಳಿಸಿದ—ವೈರಿಯು ಸೈತಾನನಾಗಿದ್ದನು. ಸುಳ್ಳು ಮತ್ತು ನಿಜ ಕ್ರೈಸ್ತರು ಒಂದುಗೂಡಿ ಇರುವಂತೆ ಯೇಸು ಅನುಮತಿಸಿದನು—ಆದರೆ ಸುಗ್ಗೀಕಾಲದ ತನಕ ಮಾತ್ರ. ಅನಂತರ ಅವರು ಪ್ರತ್ಯೇಕಿಸಲ್ಪಡಲಿದ್ದರು.—ಮತ್ತಾಯ 24:36-44.
ಆದಕಾರಣ, ವಿಧರ್ಮಿ ಬೋಧನೆಗಳನ್ನು ಸ್ವೀಕರಿಸುವ ಮೂಲಕ, ಅನೈತಿಕತೆಯನ್ನು ಮಾನ್ಯಮಾಡುವ ಮೂಲಕ, ರಾಜ್ಯಗಳನ್ನು ಗೆಲ್ಲುವ ಯುದ್ಧಗಳನ್ನು ಬೆಂಬಲಿಸುವ ಮೂಲಕ, ಕ್ರೂರವಾದ ಮಠೀಯ ನ್ಯಾಯಸ್ಥಾನಗಳ ಮೂಲಕ, “ಕ್ರೈಸ್ತ” ಸಂಸ್ಥೆಗಳು ಶತಮಾನಗಳಲ್ಲೆಲ್ಲಾ ದೇವರನ್ನು ಅಗೌರವಗೊಳಿಸಿರುವುದನ್ನು ನಾವು ಕೇಳುವಾಗ ಆಶ್ಚರ್ಯಗೊಳ್ಳುವುದಿಲ್ಲ. ನಾವು ಇದರಲ್ಲಿ ಸೈತಾನನಿಂದ ಬಿತ್ತಲ್ಪಟ್ಟ ಕೆಟ್ಟ ಬೀಜವನ್ನು ಕಂಡುಕೊಳ್ಳುತ್ತೇವೆ. ಆದರೂ, ಬೈಬಲ್ ತತ್ವಗಳಲ್ಲಿ ಸಂಧಾನ ಮಾಡುವ ಬದಲಾಗಿ ಸೆರೆಮನೆವಾಸ ಯಾ ಮರಣವನ್ನು ಅನುಭವಿಸಿದ ವ್ಯಕ್ತಿಗಳ ಕುರಿತು ನಾವು ಓದುವಾಗ, ಒಳ್ಳೆಯ ಬೀಜವು ಪೂರಾ ನಿರ್ನಾಮವಾಗಿಲ್ಲವೆಂದು ನಮಗೆ ತಿಳಿಯುತ್ತದೆ.
ಸುಗ್ಗೀಕಾಲವೆಂದರೆ “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಎಂದು ಯೇಸು ಹೇಳಿದನು. ಈ ಪ್ರಚಲಿತ ಲೋಕ ವ್ಯವಸ್ಥೆಗಳ ಸಮಾಪ್ತಿಯಲ್ಲಿ ನಾವು ಜೀವಿಸುತ್ತಿರುವುದರಿಂದ, ಇದು ಸುಗ್ಗೀಕಾಲ ಆಗಿರಲೇ ಬೇಕು! ಆದುದರಿಂದ. ನಿಜ ಮತ್ತು ಸುಳ್ಳು ಕ್ರೈಸ್ತರ ನಡುವೆ ಒಂದು ಪ್ರತ್ಯೇಕಿಸುವಿಕೆಯು ಸಂಭವಿಸಿರಲೇ ಬೇಕು. ಇಂದು, ಕೇವಲ ಅಲ್ಲೊಂದು ಇಲ್ಲೊಂದು ವ್ಯಕ್ತಿಗಳಲ್ಲ, ಯೇಸುವಿನ ನಿಜ ಕ್ರೈಸ್ತರ ವರ್ಣನೆಯನ್ನು ಒಪ್ಪುವವರಾದ—ದೇವರ ರಾಜ್ಯದ ಪ್ರಜೆಗಳೂ ಅದರ ಕುರಿತಾದ ಸುವಾರ್ತೆಯನ್ನು ಸಾರುವವರೂ, ಬೈಬಲಾಧಾರಿತ ನೈತಿಕತೆಯನ್ನು ಪ್ರವರ್ಧಿಸುವವರೂ ಬೈಬಲ್ ಸತ್ಯಕ್ಕಾಗಿ ವಿಧರ್ಮಿ ಬೋಧನೆಗಳನ್ನು ತಿರಸ್ಕರಿಸುವವರೂ, ದೇವರ ನಾಮವನ್ನು ತಿಳಿಯಪಡಿಸುವವರೂ ಲೋಕದ ಯಾವ ಭಾಗವಾಗಿ ಇರದಿರುವವರೂ ಆಗಿರುವ ಒಂದು ಪ್ರಜೆಯು ಅಸ್ತಿತ್ವದಲ್ಲಿರಬೇಕು.—ಮತ್ತಾಯ 6:33; 24:14; ಯೋಹಾನ 3:20; 8:32; 17:6, 16.
ಅಂಥ ಜನರು ಅಸ್ತಿತ್ವದಲ್ಲಿದ್ದಾರೆಂದು ನಾವು ನಿಮಗೆ ಆಶ್ವಾಸನೆ ಕೊಡುತ್ತೇವೆ! ದೇವರನ್ನು ಸ್ವೀಕರಣೀಯವಾಗಿ ಸೇವಿಸಲು ನೀವು ಬಯಸುತ್ತೀರೋ? ಹಾಗಾದರೆ ಈ ಜನರನ್ನು ಕಂಡುಹಿಡಿದು, ಅವರೊಂದಿಗೆ ದೇವರನ್ನು ಸೇವಿಸಿರಿ.