ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 9/1 ಪು. 32
  • ಜೀವಜಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವಜಲ
  • ಕಾವಲಿನಬುರುಜು—1993
ಕಾವಲಿನಬುರುಜು—1993
w93 9/1 ಪು. 32

ಜೀವಜಲ

“ಕೇಳುವವನು ಬಾ—ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.” (ಪ್ರಕಟನೆ 22:17) “ಜೀವಜಲ”—ಯೇಸು ಕ್ರಿಸ್ತನ ವಿಮೋಚನ ಯಜ್ಞದ ಮೇಲೆ ಆಧಾರಿತವಾದ ನಮ್ಮ ರಕ್ಷಣೆಗಾಗಿ ದೇವರ ಎಲ್ಲಾ ಒದಗಿಸುವಿಕೆಗಳು ಎಂದದರ ಅರ್ಥ. ಈ ಒದಗಿಸುವಿಕೆಗಳು ದೊರೆಯುತ್ತವೆ ಮತ್ತು ಅವು ಉಚಿತವಾಗಿವೆ. ಇದು ನಮ್ಮ ದೇವರ ವತಿಯಿಂದ ಎಂತಹ ಆಶ್ಚರ್ಯಕರ ಔದಾರ್ಯ! ಆದರೂ, ಅವು ಜಲದಿಂದ ಸೂಚಿಸಲ್ಪಟ್ಟದ್ದೇಕೆ?

ಒಳ್ಳೇದು, ಸಹಜ ನೀರು, ಮಣ್ಣಿನಲ್ಲಿರುವ ಸಸ್ಯವನ್ನು ಬೆಳೆಯುವಂತೆ ಮಾಡುತ್ತದೆ, ಮತ್ತು ಅದು ಮಾನವ ಜೀವನವನ್ನು ಶಕ್ಯವನ್ನಾಗಿ ಮಾಡುತ್ತದೆ. ನೀರಿನ ಹೊರತು, ಸಸ್ಯ ಜೀವ ಮತ್ತು ಹೀಗೆ ಮಾನವ ಜೀವ ಅಸ್ತಿತ್ವದಲ್ಲಿರ ಸಾಧ್ಯವಿಲ್ಲ. ಅದಲ್ಲದೆ, ನಿಮ್ಮ ದೇಹವು 65 ಪ್ರತಿಶತ ನೀರಾಗಿದೆ. ದಿನವೊಂದಕ್ಕೆ ಸುಮಾರು 2.4 ಲೀಟರ್‌ ನೀರನ್ನು ಸೇವಿಸುವ ಮೂಲಕ ಆ ಪ್ರಮಾಣವನ್ನು ಕಾಪಾಡಿಕೊಳ್ಳುವಂತೆ ಸಹ ಕೆಲವು ಆರೋಗ್ಯ ಪರಿಣತರು ಶಿಫಾರಸು ಮಾಡುತ್ತಾರೆ. ನಿಮ್ಮ ಆಂತರಿಕ ಜೀವ ಕಾರ್ಯಗತಿಗಳಿಗೆಲ್ಲಾ—ಆಹಾರವನ್ನು ಪಚನಿಸುವುದರಿಂದ ಹಿಡಿದು ಹಿಪ್ಪೆಯನ್ನು ತೊಡೆದುಹಾಕುವ ತನಕ—ನೀರಿನ ಆವಶ್ಯಕತೆ ಇದೆ. ಒಂದು ವಾರದ ತನಕ ನೀವು ನೀರು ಕುಡಿಯದಿದ್ದರೆ, ನೀವು ಸಾಯುವಿರಿ.

ಅಂತೆಯೇ, “ಜೀವಜಲ” ವು ಆತ್ಮಿಕ ಜೀವನವನ್ನು ಶಕ್ಯವನ್ನಾಗಿ ಮಾಡುತ್ತದೆ ಮತ್ತು ಪೋಷಿಸುತ್ತದೆ. ನಾವು ಜೀವಜಲವನ್ನು ತಿರಸ್ಕರಿಸಿದರೆ, ಯಾವ ಶಾಶ್ವತ ಭವಿಷ್ಯವೂ ನಮಗಿರುವುದಿಲ್ಲ. (ಯೋಹಾನ 3:36) ನಾವದನ್ನು ಸ್ವೀಕರಿಸಿದರೆ, ನಿತ್ಯಜೀವವನ್ನು ನಾವು ಪಡೆಯಬಲ್ಲೆವು. ಯೇಸು ಸಮಾರ್ಯದ ಸ್ತ್ರೀಗೆ ಹೀಗಂದಾಗ ಆಕೆ ಆತುರದಿಂದ ಪ್ರತಿಕ್ರಿಯೆ ತೋರಿಸಿದರಲ್ಲೇನೂ ಆಶ್ಚರ್ಯವಿಲ್ಲ: “ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ; ನಾನು ಅವನಿಗೆ ಕೊಡುವ ನೀರು ಅವನಲ್ಲಿ ಉಕ್ಕುವ ಒರತೆಯಾಗಿದ್ದು ನಿತ್ಯಜೀವವನ್ನು ಉಂಟುಮಾಡುವದು”! (ಯೋಹಾನ 4:14) ನಾವು ತದ್ರೀತಿಯ ಆತುರತೆಯಿಂದ ಎಟಕಿಸಿಕೊಂಡು, ಜೀವಜಲವನ್ನು ಉಚಿತವಾಗಿ ಪಡಕೊಳ್ಳುವಂತಾಗಲಿ.

[ಪುಟ 32 ರಲ್ಲಿರುವ ಚಿತ್ರ ಕೃಪೆ]

Garo Nalbandian

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ