ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 8/15 ಪು. 31
  • ನಿಮಗೆ ನೆನಪಿದೆಯೇ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ನೆನಪಿದೆಯೇ?
  • ಕಾವಲಿನಬುರುಜು—1993
  • ಅನುರೂಪ ಮಾಹಿತಿ
  • ಅಬ್ರಹಾಮನೊಂದಿಗೆ ದೇವರು ಮಾಡಿದ ಒಡಂಬಡಿಕೆ
    ಬೈಬಲ್‌—ಅದರಲ್ಲಿ ಏನಿದೆ?
  • “ನನ್ನ ಸ್ನೇಹಿತ” ಎಂದು ಯೆಹೋವನು ಕರೆದ ವ್ಯಕ್ತಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಅಬ್ರಹಾಮ ಪ್ರೀತಿಯುಳ್ಳ ವ್ಯಕ್ತಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • “ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ”
    ಕಾವಲಿನಬುರುಜು—1999
ಇನ್ನಷ್ಟು
ಕಾವಲಿನಬುರುಜು—1993
w93 8/15 ಪು. 31

ನಿಮಗೆ ನೆನಪಿದೆಯೇ?

ಇತ್ತೀಚಿನ ಕಾವಲಿನಬುರುಜು ಸಂಚಿಕೆಗಳು ನಿಮಗೆ ಪ್ರಾಯೋಗಿಕ ಬೆಲೆಯದ್ದಾಗಿ ಕಂಡುಬಂದಿವೆಯೆ? ಹಾಗಿದ್ದರೆ ಕೆಳಗಿನ ಪ್ರಶ್ನೆಗಳೊಂದಿಗೆ ನಿಮ್ಮ ಸ್ಮರಣಶಕ್ತಿಯನ್ನು ಏಕೆ ಪರೀಕ್ಷಿಸಬಾರದು?

▫ ದುರಾಚಾರದ ಯಾವುದೇ ಯೋಚನೆಯು ಅಮಂತ್ರಿಸದೆ ನಮ್ಮ ಮನಸ್ಸನ್ನು ಪ್ರವೇಶಿಸುವುದಾದರೆ, ನಾವೇನು ಮಾಡಬೇಕು? ನಾವು ಮಾನಸಿಕವಾಗಿ ಆ ವಿಷಯವನ್ನು ಬದಲಾಯಿಸಬೇಕು, ತಿರುಗಾಡಲು ಹೋಗಬೇಕು, ಏನಾದರೂ ಓದಬೇಕು, ಯಾ ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡಬೇಕು. ಇಂಥ ಒಂದು ಸನ್ನಿವೇಶದಲ್ಲಿ ಪ್ರಾರ್ಥನೆಯು ಸಹ ಒಂದು ಬಲಾಢ್ಯವಾದ ಸಹಾಯವಾಗಿದೆ. (ಕೀರ್ತನೆ 62:8)—ssbra ಪುಟ 33.

◻ ಯುವ ಜನರು ತಾವು ಆಲಿಸುವ ಸಂಗೀತದ ರೀತಿಯ ಕುರಿತು ಏಕೆ ಜಾಗರೂಕತೆಯಿಂದಿರಬೇಕು? ಸಂಗೀತಕ್ಕೆ ಪ್ರಚೋದಿಸುವ, ಮರುಳುಗೊಳಿಸುವ, ಮತ್ತು ಪ್ರಭಾವಿಸುವ ಶಕ್ತಿಯಿದೆ. ಅನೇಕ ಜನಪ್ರಿಯ ಸಂಗೀತಗಳಲ್ಲಿ ಬೆರಗುಗೊಳಿಸುವ ಸಂಖ್ಯೆಯಲ್ಲಿ ಲೈಂಗಿಕ ವ್ಯಂಗ್ಯೋಕ್ತಿಗಳೂ ಮರಸಿಟ್ಟುಕೊಂಡ ದುರಾಚಾರ ಸೂಚನೆಗಳೂ ಇರುವುದರಿಂದ, ರೆಕಾರ್ಡುಗಳನ್ನು, ಟೇಪ್‌ಗಳನ್ನು, ಮತ್ತು ಡಿಸ್ಕ್‌ಗಳನ್ನು ಆರಿಸುವಾಗ ಮಹಾ ಜಾಗರೂಕತೆ ವಹಿಸಬೇಕೆಂಬುದನ್ನು ನೋಡುವುದು ಸುಲಭ.—ssbr ಪುಟ 37.

◻ “ನಮ್ಮ ಕರ್ತನಾದ ಯೇಸು ಕ್ರಿಸ್ತನ ಸಾನ್ನಿಧ್ಯ” (1 ಥೆಸಲೊನೀಕ 5:23, NW) ಎಂಬ ವಾಕ್ಸರಣಿಯ ಅರ್ಥವೇನು? ಇದು 1914 ರಿಂದ, ಸ್ವರ್ಗದಲ್ಲಿ ಸಿಂಹಾಸನಾರೋಹಣವನ್ನು ಅನುಸರಿಸಿ, ರಾಜನಾಗಿರುವ ಕರ್ತನಾದ ಯೇಸು ಕ್ರಿಸ್ತನ ಅದೃಶ್ಯ ರಾಜವೈಭವದ ಸಾನ್ನಿಧ್ಯವನ್ನು ಸೂಚಿಸುತ್ತದೆ. (ಕೀರ್ತನೆ 110:1, 2)—ssbr ಪುಟ 51.

◻ ಯೆಹೋವನು ತನ್ನ ಆತ್ಮಿಕ ಆಲಯನ್ನು ಶುಚಿಗೊಳಿಸಿದುದರ ಮೂಲಕ ಯಾವ ಉದ್ದೇಶ ಒದಗಿ ಬಂತು? (ಮಲಾಕಿಯ 3:1-4) ಯೆಹೋವನು ತನ್ನ ಆಲಯವು ನಿರ್ಮಲವಾದ ಸ್ಥಿತಿಯಲ್ಲಿರುವಂತೆ ಬಯಸಿದನು. ಏಕೆಂದರೆ ಭೂನಿರೀಕ್ಷೆಯಿರುವ ಆರಾಧಕರು ದೊಡ್ಡ ಸಂಖ್ಯೆಯಲ್ಲಿ ತರಲ್ಪಟ್ಟಾಗ, ಅವರು ತನ್ನ ವಿಶ್ವ ಪರಿಮಾಧಿಕಾರವು ಗೌರವಿಸಲ್ಪಡುವ, ತನ್ನ ದೈವಿಕ ನಾಮವು ಶುದ್ಧೀಕರಿಸಲ್ಪಡುವ, ಮತ್ತು ತನ್ನ ನೀತಿಯ ನಿಯಮಗಳು ಪಾಲಿಸಲ್ಪಡುವ ಒಂದು ಸ್ಥಳವನ್ನು ಕಂಡುಕೊಳ್ಳುವರು.—ssbr ಪುಟ 56.

◻ ಕ್ರಿಸ್ತ ಯೇಸು ತನ್ನ ನೇಮಿಸಲ್ಪಟ್ಟ ಆಳಿಗೆ ಕೊಡುವ “ಎಲ್ಲಾ ಆಸ್ತಿ” ಏನಾಗಿದೆ? (ಮತ್ತಾಯ 24:45-47) ಸ್ವರ್ಗೀಯ ರಾಜನೋಪಾದಿ ಕ್ರಿಸ್ತನ ಅಧಿಕಾರಕ್ಕೆ ಸಂಬಂಧಿಸಿ ಅವನ ಆಸ್ತಿಯಾಗಿ ಪರಿಣಮಿಸಿದ ಭೂಮಿಯ ಮೇಲಿರುವ ಸಕಲ ಆತ್ಮಿಕ ಆಸ್ತಿಯನ್ನು ಈ “ಆಸ್ತಿ” ಸೂಚಿಸುತ್ತದೆ. ಎಲ್ಲ ರಾಷ್ಟ್ರಗಳ ಜನರನ್ನು ಕ್ರಿಸ್ತನ ಶಿಷ್ಯರಾಗಿ ಮಾಡುವ ಆಜ್ಞೆ ಇದರಲ್ಲಿ ಸೇರಿರುವುದು. (ಮತ್ತಾಯ 28:19, 20)—ssbr ಪುಟ 57.

◻ ಪೇತ್ರನ 1 ಪೇತ್ರ 5:2 ರ ಪ್ರೋತ್ಸಾಹನೆಗನುಸಾರ, ಕ್ರೈಸ್ತ ಹಿರಿಯರು ಕುರಿಪಾಲನೆಯಲ್ಲಿ ‘ಇಷ್ಟವನ್ನು’ ಹೇಗೆ ತೋರಿಸುತ್ತಾರೆ? ಕುರಿಗಳ ಚಿಂತೆ ವಹಿಸುವ ಒಬ್ಬ ಕ್ರೈಸ್ತ ಹಿರಿಯನು ತನ್ನ ಪಾಲನೆಯನ್ನು ಇಷ್ಟಪೂರ್ವಕವಾಗಿ, ತನ್ನ ಸ್ವಂತ ಸ್ವತಂತ್ರ ಇಷ್ಟದಿಂದ, ಒಳ್ಳೆಯ ಕುರುಬನಾದ ಯೇಸು ಕ್ರಿಸ್ತನ ಮೇಲ್ವಿಚಾರದಲ್ಲಿ ಮಾಡುವನು. ಇಷ್ಟಪೂರ್ವಕವಾಗಿ ಸೇವಿಸುವುದೆಂದರೆ ಒಬ್ಬ ಕ್ರೈಸ್ತ ಕುರುಬನು ಯೆಹೋವನ ಅಧಿಕಾರಕ್ಕೆ ಅಧೀನನಾಗಿ, ದೇವಪ್ರಭುತ್ವದ ಏರ್ಪಾಡಿಗೆ ಗೌರವ ತೋರಿಸುತ್ತಾನೆಂದೂ ಅರ್ಥ.—ssbr ಪುಟ 48.

◻ ಯೇಸುವನ್ನು ಹಿಂಬಾಲಿಸುವ ಯಾವನೂ “ತನ್ನನ್ನು ನಿರಾಕರಿಸಿ” ಹಿಂಬಾಲಿಸಬೇಕೆಂದು ಯೇಸು ಹೇಳಿದ್ದು ಯಾವ ಅರ್ಥದಲ್ಲಿ? (ಮತ್ತಾಯ 16:24) ‘ನಿಮ್ಮನ್ನು ನಿರಾಕರಿಸುವುದು’ ಎಂದರೆ ನಿಮ್ಮ ಮೇಲಿರುವ ಸ್ವಾಮ್ಯವನ್ನು ನೀವು ಯೆಹೋವನಿಗೆ ಬಿಟ್ಟುಕೊಡುವುದು ಎಂದರ್ಥ. (1 ಕೊರಿಂಥ 6:19, 20) ಅಂದರೆ ನಿಮ್ಮನ್ನಲ್ಲ, ದೇವರನ್ನು ಸಂತೋಷಪಡಿಸುವರೆ ನೀವು ಜೀವಿಸುತ್ತೀರಿ ಎಂದು ಅರ್ಥ. (ರೋಮಾಪುರ 14:8)—6⁄1, ಪುಟ 9.

◻ ಒಬ್ಬ ವ್ಯಕ್ತಿಯನ್ನು ಸಂತೋಷಪಡಿಸಲು ಏನು ಬೇಕಾಗುತ್ತದೆ? ಯೆಹೋವನೊಂದಿಗೆ ಉತ್ತಮ ಸಂಬಂಧವನ್ನು ಅನುಭವಿಸುವುದು ಮತ್ತು ಆತನ ಸೇವೆಯಲ್ಲಿ ಕಾರ್ಯಮಗ್ನರಾಗಿರುವುದು ಒಬ್ಬ ವ್ಯಕ್ತಿಯ ಜೀವನಕ್ಕೆ ನಿಜ ಸಂತೋಷವನ್ನು ತರುತ್ತದೆ.—6⁄1, ಪುಟ 22.

◻ ಸೊದೋಮನ್ನು ನಾಶಗೊಳಿಸುವ ತನ್ನ ಉದ್ದೇಶದ ಕುರಿತು ಅಬ್ರಹಾಮನು ಅಷ್ಟು ಸರಳವಾಗಿ ಮಾತಾಡುವಂತೆ ಯೆಹೋವನು ಏಕೆ ಅನುಮತಿಸಿದನು? (ಆದಿಕಾಂಡ 18:22-32) ಇದಕ್ಕೆ ಕಾರಣಗಳಲ್ಲಿ ಒಂದು ಅಬ್ರಹಾಮನು ದೇವರ ಸ್ನೇಹಿತನಾಗಿದ್ದುದೇ. (ಯಾಕೋಬ 2:23) ಅಲ್ಲದೆ, ಅಬ್ರಹಾಮನ ಸಂಕಟಕರ ಅನಿಸಿಕೆ ಯೆಹೋವನಿಗೆ ಗೊತ್ತಿತ್ತು. ಅಬ್ರಹಾಮನ ಸೋದರಳಿಯ ಲೋಟನು ಸೊದೋಮಿನಲ್ಲಿ ಜೀವಿಸುತ್ತಿದ್ದನೆಂಬುದು ಮತ್ತು ಲೋಟನ ಭದ್ರತೆಯ ಕುರಿತು ಅಬ್ರಹಾಮನು ತೀರಾ ಚಿಂತಿತನಾಗಿದ್ದನೆಂಬುದು ಯೆಹೋವನಿಗೆ ತಿಳಿದಿತ್ತು. ಈ ಕಾರಣಗಳಿಗಾಗಿ, ಸೊದೋಮನ್ನು ನಾಶಪಡಿಸುವ ತನ್ನ ಉದ್ದೇಶದ ಕುರಿತು ಅಬ್ರಹಾಮನ ಪ್ರಶ್ನೆಗಳಿಗೆ ಉತ್ತರ ಕೊಡಲು ಯೆಹೋವನು ಇಷ್ಟಪಟ್ಟನು.—6⁄15, ಪುಟ 16.

◻ ಹದಿನಾರನೆಯ ಶತಮಾನದ ಪ್ರಾಟೆಸ್ಟಂಟ್‌ ಸುಧಾರಣೆಯು ಸತ್ಯ ಕ್ರೈಸ್ತತ್ವಕ್ಕೆ ಹಿಂದಿರುಗುವಿಕೆಯನ್ನು ಗುರುತಿಸಿತೊ? ಇಲ್ಲ, ಹಾಗೆ ಗುರುತಿಸಲಿಲ್ಲ! ಶುದ್ಧ ಕ್ರೈಸ್ತತ್ವಕ್ಕೆ ಹಿಂದಿರುಗುವ ಬದಲಿಗೆ ಸುಧಾರಣೆಯು, ರಾಜಕೀಯ ಸರಕಾರಗಳ ಅನುಗ್ರಹ ಸಂಪಾದಿಸಿ, ಅವುಗಳ ಯುದ್ಧಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿದ ಅನೇಕ ರಾಷ್ಟ್ರೀಯ ಯಾ ಪ್ರಾದೇಶಿಕ ಚರ್ಚ್‌ಗಳನ್ನು ಹುಟ್ಟಿಸಿತು.—7⁄1, ಪುಟಗಳು 10-11.

◻ ಮತ್ತಾಯ 6:20 ರಲ್ಲಿ ಯೇಸು ಹೇಳಿದ “ಪರಲೋಕದಲ್ಲಿ ಗಂಟು” ಗಳು ಯಾವುವು? ಇವು ಎಂದಿಗೂ ಕಳೆಗುಂದದ ನಿಕ್ಷೇಪಗಳು. ಯೆಹೋವನೊಂದಿಗೆ ಒಂದು ಒಳ್ಳೆಯ ಹೆಸರು ಮತ್ತು ಕ್ರೈಸ್ತ ಸೇವೆಯಲ್ಲಿ ನಂಬಿಗಸ್ತಿಕೆಯ ಒಂದು ದಾಖಲೆ ಇವುಗಳಲ್ಲಿ ಸೇರಿವೆ. ಯೆಹೋವನು ಎಂದಿಗೂ ಮರೆತುಬಿಡದ ವಿಷಯಗಳಲ್ಲಿ ಇವು ಕೂಡಿವೆ. (ಇಬ್ರಿಯ 6:10)—7⁄1, ಪುಟ 32.

◻ ನಮ್ಮ ನಂಬಿಕೆಯ ಪ್ರಧಾನ ಘಟಕಾಂಶಗಳಾಗಿ ಪೇತ್ರನು ಯಾವ ಗುಣಗಳನ್ನು ಹೆಸರಿಸುತ್ತಾನೆ? (2 ಪೇತ್ರ 1:5-7) ಸದ್ಗುಣ, ಜ್ಞಾನ, ದಮೆ, ತಾಳ್ಮೆ, ದೇವಭಕ್ತಿ, ಸಹೋದರ ಸ್ನೇಹ, ಮತ್ತು ಪ್ರೀತಿಯನ್ನು ನಮ್ಮ ನಂಬಿಕೆಗೆ ಒದಗಿಸಬೇಕು.—7⁄15, ಪುಟ 13.

◻ ದಾವೀದನು ಬತ್ಷೆಬೆಯೊಂದಿಗೆ ಮಾಡಿದ ಪಾಪದ ವೃತ್ತಾಂತದಲ್ಲಿ ದೇವರ ಸೇವಕರಿಗೆ ಯಾವ ಎಚ್ಚರಿಕೆಯಿದೆ? (2 ಸಮುವೇಲ 11:2-4) ತನ್ನ ಸ್ವಂತ ಮದುವೆಯಲ್ಲಿ ಸಂತೋಷವನ್ನು ಅನುಭವಿಸಲು ಸ್ವತಂತ್ರನಾಗಿದ್ದರೂ, ದಾವೀದನು ನಿಷಿದ್ಧ ಲೈಂಗಿಕಾಪೇಕ್ಷೆಯು ಬೆಳೆಯುವಂತೆ ಬಿಟ್ಟನು. ಊರೀಯನ ಹೆಂಡತಿಯು ಎಷ್ಟು ಆಕರ್ಷಕವಾಗಿದ್ದಾಳೆಂದು ಗಮನಿಸಿ, ಅವಳೊಂದಿಗೆ ನಿಷಿದ್ಧವಾದ ಅನುಭವಗಳನ್ನು ಹುಡುಕಲು ತನ್ನ ಯೋಚನೆ—ಮತ್ತು ವರ್ತನೆ—ಸ್ವೇಚ್ಛೆಯಾಗಿ ಹೋಗುವಂತೆ ಬಿಟ್ಟನು. ಈ ರೀತಿಯ ದುರಾಶೆಯನ್ನು ತ್ಯಜಿಸದಿರುವಲ್ಲಿ ದೇವರ ಸೇವಕರುಗಳಲ್ಲಿ ಯಾವನಿಗೂ ಇದೇ ಸಂಗತಿ ಸಂಭವಿಸಸಾಧ್ಯವಿದೆ. (ಯಾಕೋಬ 1:14, 15)—8⁄1, ಪುಟ 14.

[ಅಧ್ಯಯನ ಪ್ರಶ್ನೆಗಳು]

a  ಸ್ಕಿಪ್ಡ್‌ ಸಡ್ಟಿ ಆರ್ಟಿಕ್‌ಲ್ಸ್‌ ಬ್ರೋಷರ್‌.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ