“ಅಡವಿಯ ಹೂವುಗಳು”
ನಿರುದ್ಯೋಗ. ಏರುತ್ತಿರುವ ಕ್ರಯಗಳು. ದಾರಿದ್ರ್ಯ. ಆರ್ಥಿಕ ಕುಸಿತ. ವಾರ್ತಾ ಬಿತರ್ತಿಸುವಿಕೆಯ ಅಂಕಣಗಳಲ್ಲಿ ಏರುತ್ತಿರುವ ಬಹುಸಂಖ್ಯೆಯಲ್ಲಿ ಈ ನುಡಿಗಳು ಕಾಣುತ್ತಿವೆ. ತಮ್ಮ ಕುಟುಂಬಗಳಿಗೆ ಉಣಿಸಲು ಮತ್ತು ತೊಡಿಸಲು, ಮತ್ತು ಅವರ ತಲೆಗಳ ಮೇಲೆ ಒಂದು ಸೂರು ಇರಲು ಲಕ್ಷಾಂತರ ಮಂದಿಗಳು ಪ್ರಯತ್ನಿಸುವಾಗ ಪಡುತ್ತಿರುವ ಬವಣೆಗಳನ್ನು ಅವುಗಳು ಪ್ರತಿಬಿಂಬಿಸುತ್ತವೆ.
ಆಸ್ತಿಕರು ಮತ್ತು ನಾಸ್ತಿಕರು ಇಬ್ಬರೂ ಸಮಾನವಾಗಿ ಬಾಧಿತರಾಗಿದ್ದಾರೆ. ಆದರೆ ಈ ಸಮಸ್ಯೆಗಳನ್ನು ಎದುರಿಸುವುದರಲ್ಲಿ ಆಸ್ತಿಕರಾದರೋ ತಮ್ಮಷ್ಟಕ್ಕೆ ಬಿಡಲ್ಪಟ್ಟಿಲ್ಲ. ಮೊದಲನೆಯ ಶತಮಾನದ ನಮ್ರ ಜನರಿಗೆ ಯೇಸುವು ಮಾತಾಡಿದಾಗ, ಅಂದದ್ದು: “ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ?”—ಮತ್ತಾಯ 6:26.
ಯೇಸುವು ಇದನ್ನೂ ಹೇಳಿದನು: “ಅಡವಿಯ ಹೂವುಗಳ ಬೆಳೆಯುವ ರೀತಿಯನ್ನು ಯೋಚಿಸಿ ತಿಳಿಯಿರಿ, ಅವು ದುಡಿಯುವದಿಲ್ಲ, ನೂಲುವದಿಲ್ಲ; ಆದಾಗ್ಯೂ ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಅರಸನಾದ ಸೊಲೊಮೋನನಿಗೆ ಸಹ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ. . . . ಅಡವಿಯ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿತೊಡಿಸುವನಲ್ಲವೇ.” —ಮತ್ತಾಯ 6:28-30.
ಜೀವಿಸಲಿಕ್ಕಾಗಿ ಕ್ರೈಸ್ತನೊಬ್ಬನು ಕೆಲಸ ಮಾಡುವ ಜರೂರಿಯಿಲವ್ಲೆಂದು ಇದರ ಅರ್ಥವೋ? ಎಂದಿಗೂ ಇಲ್ಲ! ಅವನ ಬೆಲೆಪಟ್ಟಿಗಳನ್ನು ತೆರಲು ಎಷ್ಟು ಅಗತ್ಯವೋ ಅಷ್ಟು ಶ್ರಮಪಟ್ಟು ಕ್ರೈಸ್ತನೊಬ್ಬನು ಕೆಲಸ ಮಾಡುತ್ತಾನೆ. ಅಪೊಸ್ತಲ ಪೌಲನು ಅಂದದ್ದು: “ಕೆಲಸ ಮಾಡಲೊಲ್ಲದವನು ಊಟಮಾಡಬಾರ”ದು. (2 ಥೆಸಲೊನೀಕ 3:10) ಆದಾಗ್ಯೂ, ದೇವರ ಪ್ರೀತಿಮಯ ಲಕ್ಷ್ಯದ ಅರಿವು ಮತ್ತು ಅವನ ಸ್ವರ್ಗೀಯ ತಂದೆಯು ಅವನ ಮೇಲೆ ನಿಗಾ ಇಟ್ಟಿದ್ದಾನೆಂಬ ನಂಬಿಕೆಯು ಕ್ರೈಸ್ತನಿಗೆ ಇದೆ. ಆದಕಾರಣ, ಜೀವಿತದ ವ್ಯಾಕುಲತೆಗಳಿಂದ ಅವನು ಸಮತೂಕ ಕಳೆದುಕೊಂಡಿರುವದಿಲ್ಲ. ಸಂಕಷ್ಟದ ಸಮಯದಲ್ಲೂ, ಅವನು ಪ್ರಥಮ ಸಂಗತಿಗಳನ್ನು—ಆತ್ಮಿಕ ಸಂಗತಿಗಳನ್ನು—ಪ್ರಥಮವಾಗಿ ಇಡುತ್ತಾನೆ. ಅವನು ಯೇಸುವಿನ ಮಾತುಗಳನ್ನು ನಂಬುತ್ತಾನೆ: “ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.”—ಮತ್ತಾಯ 6:33. (w93 2⁄1)