ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 4/15 ಪು. 32
  • ನೀವು ಇವುಗಳಂತೆ ಒಬ್ಬರೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವು ಇವುಗಳಂತೆ ಒಬ್ಬರೋ?
  • ಕಾವಲಿನಬುರುಜು—1993
ಕಾವಲಿನಬುರುಜು—1993
w93 4/15 ಪು. 32

ನೀವು ಇವುಗಳಂತೆ ಒಬ್ಬರೋ?

‘ಒಂದು ನೂರು ವರ್ಷಗಳಿಗೆ ಕುರಿಯಾಗಿರುವುದಕ್ಕಿಂತ ಒಂದು ದಿನಕ್ಕೆ ಸಿಂಹವಾಗಿರುವುದು ಉತ್ತಮ.’ ಈ ಮಾತುಗಳು ಇಟಲಿಯ ಒಂದು ಕಾಲದ ನಿರಂಕುಶಾಧಿಕಾರಿ, ಬೆನಿಟೊ ಮೂಸಲೀನಿಯವರಿಗೆ ಸೇರಿದುದೆಂದು ಹೇಳಲಾಗಿದೆ.

ಮೂಸಲೀನಿಯಂತೆ ಅನೇಕ ಜನರು ಕುರಿಮರಿ ಮತ್ತು ಕುರಿ ವರ್ಗವಾಗಿ ಮಾಡಲ್ಪಡುವುದನ್ನು ವಿರೋಧಿಸುವರು. ಆದಾಗ್ಯೂ, ಪ್ರಾಚೀನ ಇಸ್ರಾಯೇಲಿನ ಕೀರ್ತನೆಗಾರ ರಾಜ ದಾವೀದನು ಪ್ರಕಟಿಸಿದ್ದು: “ಯೆಹೋವನು ನನ್ನ ಕುರುಬನು. . . . ವಿಶ್ರಾಂತಿಕರವಾದ ನೀರುಗಳ ಬಳಿಗೆ ಬರಮಾಡುತ್ತಾನೆ.” (ಕೀರ್ತನೆ 23:1, 2) ಹೌದು, ಯೆಹೋವ ದೇವರು ಆತನ ಜನರು ಕೇಡನ್ನುಂಟು ಮಾಡಲಾರದ ಕುರಿಗಳೋ ಎಂಬಂತೆ ಅವರನ್ನು ಕೋಮಲವಾಗಿ ಪರಾಮರಿಸುವ ಮಹಾ ಕುರುಬನಾಗಿರುತ್ತಾನೆ.

ಕೀರ್ತನೆ 95:7 ರಲ್ಲಿ ದೇವ ಜನರು ಸೂಚಕರೂಪದ ಕುರಿಗಳಂತೆ ಸಂಬೋಧಿಸಲ್ಪಟ್ಟಿರುತ್ತಾರೆ, ಅಲ್ಲಿ ನಾವು ಓದುವುದು: “ಆತನು [ಯೆಹೋವನು] ನಮ್ಮ ದೇವರು; ನಾವೋ ಆತನು ಪಾಲಿಸುವ ಪ್ರಜೆಯೂ ಆತನ ಕೈಕೆಳಗಿರುವ ಹಿಂಡೂ (ಕುರಿಗಳೂ NW) ಆಗಿದ್ದೇವೆ.” ಕೀರ್ತನೆಗಾರನು ಸ್ವತಃ “ಆತನು ಪಾಲಿಸುವ ಕುರಿಗಳೂ” ಮತ್ತು “ಆತನ ಕೈಕೆಳಗಿರುವ ಪ್ರಜೆಗಳೂ” ಎಂದು ಹೇಳಬೇಕಾಗಿತ್ತೆಂದು ಕೆಲವರು ನಿರೀಕ್ಷಿಸಿದಿರ್ದಬಹುದು. ಆದರೆ ಇಲ್ಲಿ ವಿಷಯಗಳು ಹಿಂದುಮುಂದಾಗಿವೆ, ಮತ್ತು ಹೀಗೆ ಯೆಹೋವನ ಜನರು ಅವರಾಗಿಯೇ ಆತನ ಕುರಿಗಳೋಪಾದಿ ಗುರುತಿಸಲ್ಪಟ್ಟಿದ್ದಾರೆ. ಅವರು ದೇವರ ಹುಲ್ಲುಗಾವಲಿನ ಪ್ರಯೋಜನದಲ್ಲಿ ಆನಂದಿಸುತ್ತಾರೆ ಮತ್ತು ಆತನ ಪ್ರೀತಿಯ ಹಸ್ತದ ಮೂಲಕ ನಡಿಸಲ್ಪಡುತ್ತಾರೆ.

ಯೆಹೋವನ ಮಗನಾದ ಯೇಸು ಕ್ರಿಸ್ತನು ಒಳ್ಳೇ ಕುರುಬನು. ಅನೇಕ ಬಾರಿ ಆತನು ಜನರನ್ನು ಕುರಿಗಳು ಎಂದು ಸೂಚಿಸಿದ್ದಾನೆ. ಉದಾಹರಣೆಗಾಗಿ, ಒಂದು “ಚಿಕ್ಕ ಹಿಂಡು” ಮತ್ತು ಆತನ “ಬೇರೆ ಕುರಿಗಳ” ಬಗ್ಗೆ ಯೇಸು ಮಾತಾಡಿದನು. (ಲೂಕ 12:32; ಯೋಹಾನ 10:14-16) ಆತನ ದೀನ ಕುರಿಗಳಂಥ ಶಿಷ್ಯರ ಕುರಿತು, ಯೇಸು ಅಂದದ್ದು: “ನನ್ನ ಕುರಿಗಳು ನನ್ನ ಸರ್ವಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ಬಲ್ಲೆನು; ಅವು ನನ್ನ ಹಿಂದೆ ಬರುತ್ತವೆ. ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ; ಅವು ಎಂದಿಗೂ ನಾಶವಾಗುವದೇ ಇಲ್ಲ; ಅವುಗಳನ್ನು ಯಾರೂ ನನ್ನ ಕೈಯೊಳಗಿಂದ ಕಸಕೊಳ್ಳರು.” (ಯೋಹಾನ 10:27, 28) ಧರ್ಮಶೀಲ ಅಧಿಕಾರಿಯ ಕೈಯಲ್ಲಿ, ಪ್ರಜೆಗಳು ಆತನ ಶಕ್ತಿ, ಅನುಗ್ರಹ, ಮಾರ್ಗದರ್ಶನೆ, ಮತ್ತು ಸಂರಕ್ಷಣೆಯಿಂದ ಪ್ರಯೋಜನ ಹೊಂದುತ್ತಾರೆ.—ಪ್ರಕಟನೆ 1:16, 20; 2:1.

ಯೇಸುವಿನ ಸಂರಕ್ಷಣಾ ಕೈಯೊಳಗಿಂದ ಕುರಿಗಳಂಥ ಜನರನ್ನು ನಿಜವಾಗಿಯೂ ಯಾರೂ ಕಸಕೊಳ್ಳಲು ಸಾಧ್ಯವಿಲ್ಲ. ಇಂದು, ಆತನು ಜನರನ್ನು ಆತನ ಅನುಗ್ರಹವಿಲ್ಲದ “ಆಡು” ಗಳಂತೆ ಇಲ್ಲವೆ ದೇವರ ಸ್ವರ್ಗೀಯ ರಾಜ್ಯದ ಆಳಿಕೆಯ ಕೆಳಗೆ ನಿತ್ಯ ಜೀವದಲ್ಲಿ ಆನಂದಿಸುವ “ಕುರಿ” ಗಳಂತೆ ವಿಂಗಡಿಸುತ್ತಾನೆ. (ಮತ್ತಾಯ 25:31-46) ನೀವು ಆ ಆಶೀರ್ವದಿತ ಕುರಿಗಳಲ್ಲಿ ಒಬ್ಬರಾಗಿ ಪರಿಣಮಿಸುವಿರೊ?

[ಪುಟ 32 ರಲ್ಲಿರುವ ಚಿತ್ರ ಕೃಪೆ]

Garo Nalbandian

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ