ಲೋಕದ ಆರ್ಥಿಕ ಭವಿಷ್ಯವನ್ನು ಮುಂತಿಳಿಸುವುದು
ಆರ್ಥಿಕ ವ್ಯಾಪಾರಗಳ ಅಸ್ಥಿರತೆಯು ಮತ್ತು 1987 ರ ಬಂಡವಾಳ ಪೇಟೆಯ ಕುಸಿತವನ್ನು ಮುಂತಿಳಿಸಲು ತಪ್ಪಿದ ವಿಶೇಷ್ಲಕರಲ್ಲಿ ಭರವಸೆಯ ಕೊರತೆಯು, ಕೆಲವು ವ್ಯಾಪಾರಸ್ಥರನ್ನು ತಮ್ಮ ಆರ್ಥಿಕ ಭವಿಷ್ಯವನ್ನು ಮುಂದಾಗಿ ತಿಳಿಯಲು ಜ್ಯೋತಿಶ್ಶಾಸ್ತ್ರದ ಕಡೆಗೆ ತಿರುಗಿಸಿಯದೆ, ಎಂದು ವಾದಿಸುತ್ತದೆ ಲಂಡನ್ ಪತ್ರಿಕೆ ಅಕೌಂಟೆನ್ಸಿ ಏಜ್. ಪತ್ರಿಕೆಯು ಗಮನಿಸುವುದೇನಂದರೆ “ಆರ್ಥಿಕ ಜೋಯಿಸರು ತಮ್ಮ ಸವಿಸ್ತಾರ ವ್ಯಾಪಾರ ಕಾಲಜ್ಞಾನಗಳಿಗೆ ಪ್ರತಿಷ್ಠಿತ ಗಿರಾಕಿಗಳ ಒಂದು ಚಿತ್ತವೇಧಕ ಪಟ್ಟಿಯನ್ನು ಗಳಿಸುತ್ತಿದ್ದಾರೆ.”
ಒಬ್ಬ ಸಲಹೆಗಾರನು 30 ವರ್ಷಗಳ ನಿತ್ಯದ ಆರ್ಥಿಕ ಆಧಾರಾಂಶದಲ್ಲಿ ತಾನು ಹತ್ತೆಹಚ್ಚುವ ಕಾಲಚಕ್ರವನ್ನು, ಗ್ರಹಗಳ ಚಲನೆಯೊಂದಿಗೆ ತೂಗಿನೋಡುತ್ತಾನೆ. ಈ ಆಧಾರದ ಮೇಲೆ ಅವನು ತನ್ನ ಕಾಲಜ್ಞಾನಗಳನ್ನು ನೀಡುತ್ತಾನೆ. ಅನೇಕ ಗಿರಾಕಿಗಳು 1987 ಕ್ಕೆ ಮುಂಚೆ ಅವನ ಸಲಹೆಗೆ ಕಿವಿಗೊಡಲು ವಿಮುಖರಾಗಿದ್ದರೂ, ವ್ಯವಹಾರೈಕ ಬುದ್ಧಿಯ ಬಂಡವಾಳಗಾರರು ಕೂಡ ತನಗೆ ಕಿವಿಗೊಡಲು ಸಿದ್ಧರಾಗಿರುವುದನ್ನು ಅವನೀಗ ಕಾಣುತ್ತಾನೆ.
ಇನ್ನೊಬ್ಬ ಆರ್ಥಿಕ ಜೋಯಿಸನು ಒಬ್ಬ ವ್ಯಕ್ತಿಯ ಗುಣಲಕ್ಷಣಗಳನ್ನು ಅಂದಾಜುಮಾಡಲು ಮತ್ತು “ಸಂಭವನೀಯ ವ್ಯಾಪಾರ ವಿಕಸನಗಳ ವೇಳೆಗಾಗಿ ಹಾದಿಗಳನ್ನು” ಹುಡುಕಲು ಸಹ, ಜನನ ತಾರೀಕಿನ ಮೇಲೆ ಆಧರಿತವಾದ ತಖ್ತೆಯನ್ನು ತಯಾರಿಸುತ್ತಾನೆ. ಇನ್ನೂ ಒಬ್ಬನು ಬೇಳ್ಳಿ ಪೇಟೆಯ ಏಳುಬೀಳುಗಳು ಒಂದು ಚಾಂದ್ರಮಾನ ಚಕ್ರವನ್ನು ಹಿಂಬಾಲಿಸುತ್ತವೆಂದು ನಂಬುತ್ತಾನೆ. ಆದರೆ ಕ್ರಮದ ಆರ್ಥಿಕ ವಿಶೇಷ್ಲಕರೊಂದಿಗೆ ಹೋಲಿಸುವಾಗ, ಅವನ ಗಿರಾಕಿಗಳು ಅವನಿಗೆ “ಅದನ್ನು ತಪ್ಪಾಗಿ ಪಡೆಯುವುದಕ್ಕೆ ಅತಿ ಕೊಂಚ ಅವಕಾಶವನ್ನು” ಕೊಡುವುದಾಗಿ ಈ ಜೋಯಿಸನು ಕಾಣುತ್ತಾನೆ.
ಆದರೂ ನಿಶ್ಚಯವಾಗಿಯೂ ಸತ್ಯವಾಗಿರುವ ಒಂದು ಆರ್ಥಿಕ ಕಾಲಜ್ಞಾನವು ಇದೆ, ಮತ್ತು ಅದಕ್ಕೆ ಜ್ಯೋತಿಶ್ಶಾಸ್ತ್ರದೊಂದಿಗೆ ಯಾವ ಸಂಬಂಧವೂ ಇಲ್ಲ. ಈ ಮುಂತಿಳಿಸುವಿಕೆಯು ಬೈಬಲಿನಲ್ಲಿ ದಾಖಲೆಯಾಗಿದೆ ಮತ್ತು ಖಂಡಿತವಾಗಿ “ತಪ್ಪಾಗಿ ಪಡೆಯಲು ಅವಕಾಶ” ವನ್ನೇ ತನಗೆಂದೂ ಕೊಡದ ದೇವರಾದ ಯೆಹೋವನಿಂದ ಪ್ರೇರಿತವಾಗಿದೆ. ಆತನು “ಸುಳ್ಳಾಡಲು ಸಾಧ್ಯವಿರದ” ದೇವರು. (ತೀತ 1:2, NW) ಅವನು ತನ್ನ ಪ್ರವಾದಿ ಯೆಹೆಜ್ಕೇಲನನ್ನು ಘೋಷಿಸುವಂತೆ ಮಾಡಿದ್ದು: “ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, ಅವರ ಬಂಗಾರವು ಅಶುದ್ಧಪದಾರ್ಥದಂತಿರುವದು. . . . ಅವರ ಬೆಳ್ಳಿಬಂಗಾರವು ಅವರನ್ನು ರಕ್ಷಿಸಲಾರದು.”—ಯೆಹೆಜ್ಕೇಲ 7:19.
ಅದು ಯಾವಾಗ ಆಗಲಿದೆ? ಯೇಸು ಕ್ರಿಸ್ತನು ಮುಂತಿಳಿಸಿದ ಬರಲಿರುವ “ಮಹಾ ಸಂಕಟದ” ದ ಸಮಯದಲ್ಲಿ; ಅದನ್ನು ಯೆಹೆಜ್ಕೇಲನು “ಯೆಹೋವನು ತನ್ನ ರೋಷವನ್ನು ತೀರಿಸುವ ದಿನ” ಎಂದು ಕರೆದಿದ್ದಾನೆ. (ಮತ್ತಾಯ 24:21; ಯೆಹೆಜ್ಕೇಲ 7:19) ಜೋಯಿಸರು ಏನನ್ನೇ ಮುಂತಿಳಿಸಲಿ, ಆರ್ಥಿಕ ಸಮೃದ್ಧಯು ಪಾರಾಗುವಿಕೆಯ ಭರವಸೆಯನ್ನೀಯದು. ಯಾವುದರಲ್ಲಿ—ರಾಜಕೀಯ, ಧಾರ್ಮಿಕ, ಮತ್ತು ವ್ಯಾಪಾರದ—ಭ್ರಷ್ಟತೆಯೆಲ್ಲವು ನಿರ್ಮೂಲವಾಗುವುದೋ ಆ ಲೋಕವ್ಯಾಪಕ ಉತ್ಪವ್ಲನದಲ್ಲಿ, ಮಹಾ ವಿಮೋಚಕನಾದ ಯೆಹೋವ ದೇವರಲ್ಲಿ ಭರವಸೆಯು ಮಾತ್ರವೇ ಸುರಕ್ಷೆಯ ಖಾತ್ರಿಯನ್ನು ಕೊಡಬಲ್ಲದು.—ಜ್ಞಾನೋಕ್ತಿ 3:5, 6; ಚೆಫನ್ಯ 2:3; 2 ಪೇತ್ರ 2:9. (w92 12/15)