ಅವಳು ಬಹುಮಾನವನ್ನು ಗೆದ್ದಳು
“ಇದಕ್ಕೆಲ್ಲಾ ನಾನು ನಿಮಗೆ ಋಣಿ,” ಎಂದು ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿ ಕಯೋಎ ಜಪಾನಿನ ವಾಚ್ ಟವರ್ ಸೊಸೈಟಿಯ ಶಾಖಾ ಆಫೀಸಿಗೆ ಬರೆದಳು. ಇತ್ತೀಚಿಗೆ ಜಪಾನ್ ಸಂಚಾರ ಸಂರಕ್ಷಣ ಮಂಡಲಿ ಏರ್ಪಡಿಸಿದ್ದ ರಾಷ್ಟ್ರೀಯ ಸಂಯೋಜನಾ ಸ್ಪರ್ಧೆಯಲ್ಲಿ ಕಯೋಎ ಉಚ್ಚ ಪ್ರಶಸ್ತಿಯನ್ನು ಗಿಟ್ಟಿಸಿದಳು. ಈ ಅಮೂಲ್ಯವಾದ ಪ್ರಶಸ್ತಿಯಲ್ಲಿ ಸ್ವೀಡನ್‌ಗೆ ಪ್ರಯಾಣವು ಒಳಗೊಂಡಿದೆ.
ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಟಿಸಿದ ಅನೇಕ ಉತ್ತಮ ಪ್ರಕಾಶನಗಳು ತಾನು ಗೆಲ್ಲುವಂತೆ ಹೆಚ್ಚು ಸಹಾಯ ಮಾಡಿದವೆಂದು ತಿಳಿಸಿ ಕೃತಜ್ಞತೆ ತೋರಿಸಲಿಕ್ಕಾಗಿ ಕಯೋಎ ಬರೆದಳು. ಇದಲ್ಲದೆ ಅವಳು ಅನೇಕ ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ತನ್ನ ಶಾಲೆಯನ್ನು ಪ್ರತಿನಿಧಿಸಿದ್ದಳು. ಅವಳು ಹೇಳುವದು, “ಅಧಿಕ ಸಂಖ್ಯೆಯ ಸ್ಪರ್ಧೆಗಳಲ್ಲಿ, ಮುಖ್ಯ ವಿಷಯವು ಕೊಡಲ್ಪಡುತ್ತದೆ. ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳಿಗಾಗಿ ಗ್ರಂಥಾಲಯಗಳಲ್ಲಿ ಸಂಶೋಧನೆ ಮಾಡುತ್ತಾರೆ. ಆ ಎಲ್ಲ ತೊಂದರೆಗಳಿಗೆ ನಾನು ಹೋಗುವುದಿಲ್ಲ. ಏಕೆಂದರೆ ಮನೆಯ ಪುಸ್ತಕ ಬೀರಿನಲ್ಲಿಯೇ ವಿಷಯವಸ್ತುಗಳ ಸಂಗ್ರಹವಿದೆ!” ಅವಳು ಮುಂದುವರಿಸುವದು: “ಯಾವುದೇ ಮುಖ್ಯ ವಿಷಯವಿರಲಿ, ಅದು ವೃದ್ಧಾಪ್ಯದ, ಪರಿಸರದ, ಅಂತಾರಾಷ್ಟ್ರೀಯ ಸಂಬಂಧಗಳ ಅಥವಾ ಆತ್ಮಾಭಿವೃದಿಯ್ದ ಸಮಸ್ಯೆಯೇ ಆಗಿರಲಿ, ಆ ಬಗ್ಗೆ ಆಳವಾದ ಚರ್ಚೆಗೆ ಬೇಕಾದ ವಿಷಯವು ವಾಚ್‌ಟವರ್ ಮತ್ತು ಅವೇಕ್! ಪತ್ರಿಕೆಗಳಲ್ಲಿದೆ.”
ಆದಾಗ್ಯೂ ಕಯೋಎವಿಗೆ ಕೇವಲ ಸಾಹಿತ್ಯಗಳು ಮಾತ್ರವೇ ಸಹಾಯಿಸಲಿಲ್ಲ. ಬದಲಾಗಿ ಯೆಹೋವನ ಸಾಕ್ಷಿಗಳ ಕಲಿಸುವ ಕಾರ್ಯಕ್ರಮಗಳ ಮೂಲಕ ದೊರೆತ ಶಿಕ್ಷಣದಿಂದ ಅವಳ ಓದು ಬರಹಗಳು ಪ್ರಗತಿಯಾದ ಕಾರಣ ಅನೇಕ ಸ್ಪರ್ಧೆಗಳಲ್ಲಿ ಅವಳು ಮೇಲಾಗುವಂತೆ ಮಾಡಿದವು. ಅವಳು ಒಪ್ಪಿಕೊಳ್ಳುವುದು: “ಒಮ್ಮೆ ನನಗೆ ನಿಜವಾಗಿ ವಿಶ್ವವಿದ್ಯಾನಿಲಯದ ಶಿಕ್ಷಣವನ್ನು ಪಡಕೊಳ್ಳಬೇಕೆಂಬ ಬಯಕೆ ಇತ್ತು, ಆದರೆ ಇಂತಹ ಒಂದು ತರಬೇತಿಯು ಎಲ್ಲಿ ಸಿಗಸಾಧ್ಯವಿದೆ?” ಈಗ ಅವಳು ಶಿಕ್ಷಣದಿಂದ ಪಡೆದ ಲಾಭದಿಂದ ಪೂರ್ಣಸಮಯ ಬೇರೆಯವರಿಗೆ ಸಹಾಯ ಮಾಡಲು ಮುನ್ನೋಡುತ್ತಿದ್ದಾಳೆ. ಪ್ರಬಂಧದ ಬಹುಮಾನದಲ್ಲಿ ಹರ್ಷಿತಳಾದ ಕಯೋಎಗೆ ಜೀವದ ಕೊಡುಗೆಯನ್ನು ಗೆಲ್ಲುವುದರ ಮೇಲೆ ಹೃದಯವು ಕೇಂದ್ರಿತವಾಗಿದೆ.—ಹೋಲಿಸಿ ಫಿಲಿಪ್ಪಿ 3:14. (w92 11/1)