ನೆರವೇರಿದ ಪ್ರವಾದನೆ
ಯೇಸು ಕ್ರಿಸ್ತನಿಗೆ ಅವನ ಶಿಷ್ಯರು, ರಾಜ್ಯದ ಬಲದಲ್ಲಿ ತನ್ನ ಅದೃಶ್ಯ ಸಾನಿಧ್ಯದ ಸೂಚನೆಗಾಗಿ ವಿಚಾರಿಸಿದಾಗ, ಯೇಸುವು “ಅಧರ್ಮವು ಹೆಚ್ಚಾಗುವದು” ಎಂದು ಮುಂತಿಳಿಸಿದ್ದನು. (ಮತ್ತಾಯ 24:3, 12) ನಮ್ಮ ದಿನಗಳಲ್ಲಿ ಈ ಪ್ರವಾದನೆಯು ನೆರವೇರಿದೆಯೇ?
ಖಂಡಿತವಾಗಿಯೂ ಅದು ನೆರವೇರಿದೆ! ಸಂಯುಕ್ತ ರಾಷ್ಟ್ರ ಸಂಘದಿಂದ ಅಕ್ಟೋಬರ್ 1991ರಲ್ಲಿ ಪ್ರಕಾಶಿಸಲ್ಪಟ್ಟ ದ ಯುನೈಟೆಡ್ ನೇಷನ್ಸ್ ಆ್ಯಂಡ್ ಕ್ರೈಮ್ ಪ್ರಿವೆನನ್ ಎಂಬ ಪುಸ್ತಕವು ಹೇಳುವುದು: “ಗಂಭೀರವಾದ ಪಾತಕವು ಲೋಕದ ಅಧಿಕ ಸಂಖ್ಯಾತ ರಾಷ್ಟ್ರಗಳಲ್ಲಿ ಅಪವಾದಾತ್ಮಕವಾಗಿಯೂ ಒಂದು ತೀವ್ರತಮ ಸಮಸ್ಯೆಯಾಗಿದೆ. ಆಂತರಿಕ ಪಾತಕವು ಹೆಚ್ಚಿನ ವೈಯಕ್ತಿಕ ರಾಷ್ಟ್ರಗಳ ಹತೋಟಿ ಮೀರಿ ಹೋಗಿರುತ್ತದೆ ಮತ್ತು ರಾಷ್ಟ್ರದಾಚೆಯ ಪಾತಕವು ಅಂತಾರಾಷ್ಟ್ರೀಯ ಸಮುದಾಯದ ಪ್ರಚಲಿತ ವ್ಯಾಪ್ತಿಯನ್ನು ಮೀರಿ ವರ್ಧಿಸಿದೆ. . . . ಸಂಸ್ಥಾಪಿತ ದುಷ್ಕರ್ಮಿ ತಂಡಗಳ ಪಾತಕವು ದಿಗಿಲುಗೊಳಿಸುವ ಪ್ರಮಾಣಗಳಲ್ಲಿ, ವಿಶೇಷವಾಗಿ ಶಾರೀರಿಕ ಬಲಾತ್ಕಾರ, ಬೆದರಿಕೆಯೊಡ್ಡುವಿಕೆ ಮತ್ತು ಸರಕಾರೀ ಅಧಿಕಾರಿಗಳ ಭ್ರಷ್ಟಾಚಾರ ಗಂಭೀರವಾದ ಪರಿಣಾಮಗಳೊಂದಿಗೆ ವಿಸ್ತರಿಸಿದೆ. ಭಯವಾದವು ಹತ್ತಾರು ಸಾವಿರ ನಿರಪರಾಧಿ ಬಲಿಗಳನ್ನು ಆಹುತಿಪಡೆದಿದೆ. ಮಾದಕೌಷಧಗಳಲ್ಲಿ ದರೋಡೆ ಮಾಡುವ ಸ್ವಭಾವದ ವ್ಯಾಪಾರವು ಒಂದು ಲೋಕವ್ಯಾಪಕ ದುರಂತವಾಗಿದೆ. ಪಾತಕ ರೀತಿಯ ಮುಂದಾಲೋಚನೆಯಿಲ್ಲದ ಪರಿಸರದ ನಾಶನವು ಎಷ್ಟೊಂದು ದಿಗಿಲುಗೊಳಿಸುವ ರೂಪದಲ್ಲಿ ಮತ್ತು ಪ್ರಮಾಣದಲ್ಲಿ ನಡೆದಿದೆಯೆಂದರೆ, ಅದನ್ನು ಸ್ವತಃ ಲೋಕದ ವಿರುದ್ಧಮಾಡಿರುವ ಒಂದು ಪಾತಕವೆಂದು ಪರಿಗಣಿಸುವಷ್ಟು ಆಗಿದೆ.”
ಹಲ್ಲೆಗಳು: 1970 ರಲ್ಲಿ ಪ್ರತಿ 1,00,000 ಜನರಿಗೆ 150 ಆಗಿದ್ದ ಹಲ್ಲೆಗಳಿಂದ 1990 ರಲ್ಲಿ 1,00,000ಕ್ಕೆ ಸುಮಾರು 400 ರಷ್ಟು ಅಭಿವೃದ್ಧಿ.
ಕಳ್ಳತನಗಳು: 1970 ರಲ್ಲಿ ಪ್ರತಿ 1,00,000 ಜನರಿಗೆ 1,000 ಕ್ಕಿಂತ ಸ್ವಲ್ಪ ಹೆಚ್ಚು ನಡೆದಿದ್ದರೆ, 1990 ರಲ್ಲಿ 1,00,000ಕ್ಕೆ 3,500 ರಷ್ಟು ಅಭಿವೃದ್ಧಿ.
ಉದ್ದೇಶಪೂರ್ವಕ ನರಹತ್ಯೆಗಳು: ಪ್ರಗತಿಶೀಲ ದೇಶಗಳಲ್ಲಿ 1975 ಮತ್ತು 1985ರ ನಡುವೆ ಪ್ರತಿ 1,00,000 ಜನರಿಗೆ 1 ರಿಂದ 2.5 ರಷ್ಟು ಏರಿಕೆ. ಪ್ರಗತಿಹೊಂದಿದ ದೇಶಗಳಲ್ಲಿ ಅದೇ ಸಮಯಾವಧಿಯಲ್ಲಿ 3 ಕ್ಕಿಂತಲೂ ಕಡಿಮೆಯಿಂದ 3.5 ಕ್ಕಿಂತಲೂ ಹೆಚ್ಚಿನ ಏರಿಕೆ.
ಮಾದಕೌಷಧಾನಿತ್ವ ಪಾತಕಗಳು: ಆ ಪುಸ್ತಕವು ಅವಲೋಕಿಸುವುದು: “ಸಣ್ಣರಾಷ್ಟ್ರಗಳ ಸರಕಾರಗಳಿಗಿಂತಲೂ ಪ್ರಮುಖ ಮಾದಕೌಷಧ ವ್ಯಾಪಾರವು ಒಟ್ಟಿಗೆ ಅಕ್ಷರಶಃ ಹೆಚ್ಚು ವ್ಯಯಿಸುತ್ತದೆ ಮತ್ತು ಹೆಚ್ಚು ಆಯುಧಬಲ ಹೊಂದಿದೆ. ಇದು ಎಷ್ಟೆಂದರೆ ಕೈಗಾರಿಕಾ ದೇಶಗಳ ಅದರ ನಿಷೇಧವನ್ನು ಮತ್ತು ಕಾನೂನು ಅನುಷ್ಠಾನ ಪ್ರಾಧಿಕಾರಗಳ ಪ್ರಯತ್ನಗಳನ್ನು ಇಷ್ಟರ ತನಕ ನಿಷ್ಫಲಗೊಳಿಸುವಷ್ಟು ಶಕವ್ತಾಗಿದೆ.”
ಮೊತ್ತ ಪಾತಕ ಸಂಖ್ಯಾಪ್ರಮಾಣ: 1985 ರಲ್ಲಿ ಪ್ರತಿ 1,00,000ಕ್ಕೆ 4,000 ದಿಂದ ದ್ವಿಗುಣಗೊಳಿಸಲ್ಪಟ್ಟು 2000 ವರ್ಷದೊಳಗೆ 8,000ಕ್ಕೆ ಸಮೀಪ ಬರುವದನ್ನು ನಿರೀಕ್ಷಿಸಲಾಗಿದೆ.
ಪಾತಕದಲ್ಲಿ ಭೌಗೋಳಿಕ ವೃದ್ಧಿಯು, ನಾವು “ವಿಷಯಗಳ ವ್ಯವಸ್ಥೆಯ ಅಂತ್ಯ”ದಲ್ಲಿ ಜೀವಿಸುವುದನ್ನು ಸೂಚಿಸುವ ಯೇಸುವಿನ ಪ್ರವಾದನೆಯ ಒಂದು ಲಕ್ಷಣವಾಗಿದೆ. (ಮತ್ತಾಯ 24:3, NW) ಯೇಸುವು ಹೇಳಿದ್ದು: “ಹಾಗೆಯೇ ನೀವು ಸಹ ಇವುಗಳಾಗುವದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವದೆ ಎಂದು ತಿಳುಕೊಳ್ಳಿರಿ.”—ಲೂಕ 21:31. (w92 10/15)