ಕುಟುಂಬವು ಧಾಳಿಗೊಳಗಾಗಿದೆ!
“ಕುಟುಂಬವು ಅತ್ಯಂತ ಹಳೆಯ ಮಾನವ ಸಂಘಟನೆಯಾಗಿದೆ. ಅನೇಕ ರೀತಿಗಳಲ್ಲಿ ಅದು ಅತ್ಯಂತ ಮಹತ್ವವುಳ್ಳದ್ದೂ ಆಗಿದೆ. ಅದು ಸಮಾಜದ ಮೂಲಭೂತ ಏಕಾಂಶ. ಕುಟುಂಬ ಜೀವನದ ಸುದೃಢತೆ ಯಾ ನಿರ್ಬಲತೆಯನ್ನು ಅವಲಂಬಿಸುತ್ತಾ, ಇಡೀ ನಾಗರಿಕತೆಗಳು ಪಾರಾಗಿವೆ ಇಲ್ಲವೇ ಮಾಯವಾಗಿ ಹೋಗಿವೆ.”
ಹಾಗೆಂದು 1973 ರಷ್ಟು ಹಿಂದೆ ದಿ ವರ್ಲ್ಡ್ ಬುಕ್ ಎನ್‌ಸೈಕ್ಲೊಪೀಡಿಯಾ ಹೇಳಿದೆ. ಆದಾಗ್ಯೂ, ಇಂದಿನ ಯಥಾದೃಷ್ಟಿಯಲ್ಲಿ ವೀಕ್ಷಿಸಿದಾಗ ಆ ಮಾತುಗಳು ಅಪಶಕುನದ, ಬಹುತೇಕ ಕೇಡಿನ ಮುನ್‌ಸೂಚನೆಯ ಸರ್ವವನ್ನು ತಾಳುತ್ತವೆ. ಕಳೆದ ಕೆಲವು ವರ್ಷಗಳು ಕುಟುಂಬ ಜೀವನದ ಮೇಲೆ ನೇರ ಧಾಳಿಮಾಡುವಿಕೆಯನ್ನು ನೋಡಿವೆ. ಜನಪ್ರಿಯ ಸಲಹೆಗಾರ ಜೋನ್ ಬ್ರಾಡ್‌ಶಾ ಬರೆಯುವುದು: “ಇಂದು ಕುಟುಂಬದಲ್ಲಿ ಒಂದು ವಿಷಮಸ್ಥಿತಿ ಇದೆ. . . . ಅಧಿಕ ವಿವಾಹ ವಿಚ್ಛೇದನಾ ಪ್ರಮಾಣ, ಹದಿವಯಸ್ಕರ ಕ್ರಮರಾಹಿತ್ಯಗಳು, ಬಹುಪ್ರಮಾಣದ ಮಾದಕೌಷಧದ ದುರುಪಯೋಗ, ಸಾಂಕ್ರಾಮಿಕ ಅಗಮ್ಯಗಮನ, ತಿನ್ನುವುದರಲ್ಲಿ ಕ್ರಮರಾಹಿತ್ಯಗಳು ಮತ್ತು ದೈಹಿಕ ಹೊಡೆದಾಟ ಏನೋ ಒಂದು ತೀವ್ರವಾಗಿ ತಪ್ಪಾಗಿರುವುದರ ರುಜುವಾತಾಗಿವೆ.”
ಖಂಡಿತವಾಗಿಯೂ, ಕುಟುಂಬದಲ್ಲಿ “ಏನೋ ಒಂದು ತೀವ್ರವಾಗಿ ತಪ್ಪಾಗಿರುವುದರ ರುಜುವಾತನ್ನು” ಲೋಕದಲ್ಲೆಲ್ಲಾ ಕಾಣಬಹುದು. ದ ಯುನೆಸ್ಕೊ ಕುರಿಯರ್ ಯೂರೋಪಿನ ಸನ್ನಿವೇಶದ ಕುರಿತು ಹೇಳಿದ್ದು: “ಈ ಖಂಡದಲ್ಲೆಲ್ಲಾ 1965 ರಿಂದ ವಿವಾಹವಿಚ್ಛೇದನೆಗಳ ಸಂಖ್ಯೆಯಲ್ಲಿ ಬಹುದೊಡ್ಡ ಏರಿಕೆಯಾಗಿದೆ. . . . [ಅಲ್ಲಿ] ಏಕ ಹೆತ್ತವ ಕುಟುಂಬಗಳ ಸಂಖ್ಯೆಯಲ್ಲಿ ವೃದ್ಧಿಯಾಗಿದೆ.” ಅಭಿವೃದ್ಧಿಶೀಲ ದೇಶಗಳು ತದ್ರೀತಿಯಲ್ಲಿಯೇ ಕುಟುಂಬದಲ್ಲಿನ ಸಂಕಟದ ವೃದ್ಧಿಯನ್ನು ಕಾಣುತ್ತಾರೆ. ಲೇಖಕಿ ಏಲೆನ್ ಟ್ರೆಂಬ್ಲೆ ಅವಲೋಕಿಸುವುದು: “ಶತಮಾನಗಳಿಂದ ಸಾಮಾನ್ಯವಾದ, ಮೊದಲೇ ಹೇಳಬಹುದಾದ, ಬದಲಾವಣೆಯಾಗದಂತಹ ಜೀವಿತವಿಧಾನಗಳಿಗೆ ಹೆಸರುವಾಸಿಯಾದ ಸಮಾಜದಲ್ಲಿ ಜೀವಿಸುವ ಲಕ್ಷಾಂತರ ಜನರಿಗೆ, ಇಂದು ಒಂದು ಕ್ಷೋಭೆಯ ಸಮಯವಾಗಿರುತ್ತದೆ.”
ವಿಶೇಷವಾಗಿ ಇಂದು ಅನೇಕ ಕುಟುಂಬಗಳಲ್ಲಿ ಇರುವ ವಾತಾವರಣವು ಗಾಬರಿಗೊಳಿಸುತ್ತದೆ. ಕೇವಲ ಅಮೆರಿಕದಲ್ಲಿ, ಲಕ್ಷಗಟ್ಟಲೆ ಮಕ್ಕಳು ಒಬ್ಬ ಮದ್ಯವ್ಯಸನಿ ಹೆತ್ತವನಿಂದ⁄ಳಿಂದ ಬೆಳಸಲ್ಪಡುತ್ತಾರೆ. ಕುಟುಂಬ ಬಲಾತ್ಕಾರದಲ್ಲೂ ದಿಗಿಲುಗೊಳಿಸುವ ವೃದ್ಧಿ ಕೂಡ ಅಲ್ಲಿರುತ್ತದೆ. ಇಂಟಿಮೆಟ್ ವೈಒಲೆನ್ಸ್ ಎಂಬ ಅವರ ಪುಸ್ತಕದಲ್ಲಿ, ಸಂಶೋಧಕರಾದ ರಿಚರ್ಡ್ ಜೆಲ್ಸ್ ಮತ್ತು ಮರ್ರೇ ಸೌಸ್ಟ್ರ್ ವರದಿಸುವುದು: “ಬೇರೆ ಯಾವುದೇ ಸ್ಥಳದಲ್ಲಿ ಅಲ್ಲ, ಯಾ ನಮ್ಮ ಸಮಾಜದ ಬೇರೆ ಯಾರೂ ಅಲ್ಲ, ಬದಲಿಗೆ ಪ್ರಿಯನಾಗಿರುವವರೊಬ್ಬರ ಹಸ್ತಗಳಿಂದ ನಿಮ್ಮ ಸ್ವಂತ ಮನೆಯೊಳಗೆ ನಿಮಗೆ ದೈಹಿಕವಾಗಿ ಹಲ್ಲೆಮಾಡುವ, ಬಡಿಯುವ ಯಾ ಕೊಲ್ಲುವ ಸಾಧ್ಯತೆಗಳು ಹೆಚ್ಚು ಸಂಭವನೀಯ.”
ಕುಟುಂಬದ ಶಕ್ತಿಯ ಮೇಲೆ ನಾಗರಿಕತೆಯೊಂದರ ಪಾರಾಗುವಿಕೆಯು ನಿಜವಾಗಿಯೂ ಆಧಾರಿತವಾಗಿರುವುದಾದರೆ, ನಾಗರಿಕತೆಯ ಭವಿಷ್ಯದ ಕುರಿತಾಗಿ ಹೆದರಿಕೊಳ್ಳಲು ಕಾರಣವಿದೆ. ಆದರೂ, ನಾಗರಿಕತೆಯ ಅಂತ್ಯಗತಿಯು ನಿಮ್ಮ ಚಿಂತೆಗಳಲ್ಲಿ ಅತಿ ಕನಿಷ್ಟದ್ದಾಗಿರಬಹುದು. ನಿಮ್ಮ ಕುಟುಂಬಕ್ಕೆ ಅಂತಹ ಕ್ಷೋಭೆಯು ಯಾವ ಮುನ್ನೆಚ್ಚರಿಕೆ ಕೊಡುತ್ತದೆ ಎಂಬುದೇ ಪ್ರಾಯಶಃ ನಿಮ್ಮ ವ್ಯಾಕುಲವಾಗಿರಬಹುದು. ಫಲಿತಾಂಶವೇನಾಗಿರಬಹುದು? ಒಂದು ಅಧಿಕಾರಯುಕ್ತ ಉಗಮದ ಉತ್ತರವು ನಿಮ್ಮನ್ನು ಅತಿಯಾಗಿ ಅಚ್ಚರಿಗೊಳಿಸಬಹುದು.