‘ಆಕಾಶವು ಪ್ರಚುರಪಡಿಸುತ್ತದೆ . . . ’
ನೀವೀಗ ಎಲ್ಲಿದ್ದಿರೋ ಅಲ್ಲಿಂದ ಸುಮಾರು 1,500 ಲಕ್ಷ ಕಿಲೊಮೀಟರ್ ದೂರದಲ್ಲಿ, ಸೂರ್ಯನು ಆಕಾಶದಲ್ಲಿ ತನ್ನ ಪ್ರಜ್ವಲಿಸುವ ತೇಜಸ್ಸಿನೊಂದಿಗೆ ಹೊಳೆಯುತ್ತಾನೆ. ಸಾವಿರಾರು ವರ್ಷಗಳಿಂದ ಒಬ್ಬ ದೇವರಾಗಿ ಆರಾಧಿಸಲ್ಪಡುತ್ತಿರುವ ಈ ನಮ್ಮ ಶೋಭಾಯಮಾನ ಗಗನದ ನೆರೆಯವನಾದರೋ ನಿಜವಾಗಿ, “ಭೂಪರಲೋಕಗಳನ್ನು ಉಂಟುಮಾಡಿದ” ಅವನ ನಿರ್ಮಾಣಿಕನ ಶಕ್ತಿಗೆ ಕೇವಲ ಒಂದು ಸಾಕ್ಷ್ಯವಾಗಿ ಇದ್ದಾನೆ. (ಕೀರ್ತನೆ 115:15) ಅವನ ಹೊಳಪು ಮತ್ತು ಉಷ್ಣತೆ ಭೂಮಿಯಲ್ಲಿ ಜೀವಕ್ಕಾಗಿ ಅತ್ಯಾವಶ್ಯಕ. ಮತ್ತು ವಿಜ್ಞಾನಿಗಳು ಅವನ ಕುರಿತಾಗಿ ಕಲಿತಿರುವ ನಿಜತ್ವಗಳು ನಮ್ಮನ್ನು ಅಚ್ಚರಿಯಿಂದ ತುಂಬಿಸುತ್ತವೆ.
ಸೂರ್ಯನು ಭಾರಿ ಪ್ರಮಾಣದಲ್ಲಿ ಶಕ್ತಿಯನ್ನು ಉತ್ಪಾದಿಸುತ್ತಾನೆಂದು ನಮಗೆ ಹೇಳಲ್ಪಟ್ಟಿದೆ. ಅದು ಉಂಟುಮಾಡುವ ಉಷ್ಣ ಮತ್ತು ಬೆಳಕಿನ ಅರ್ಧ ಬಿಲಿಯಕ್ಕಿಂತಲೂ ಕಡಿಮೆ ಪಾಲು ಭೂಮಿಯಿಂದ ತಡೆದು ಹಿಡಿಯಲ್ಪಡುತ್ತದೆಂಬ ಮನವರಿಕೆ ನಿಮಗಾಗಿದೆಯೇ? ಆದರೂ, ಆ ಅತ್ಯಲ್ಪ ಅಂಶದ ಭಾರಿ ಮೊತ್ತವು ಪ್ರತಿ ಮಿನಿಟಿಗೆ 2,40,00,000,00,00,000 ಅಶ್ವಶಕ್ತಿ ಆಗಿದೆ!
ಸೂರ್ಯನು ಆ ಎಲ್ಲಾ ಶಕ್ತಿಯನ್ನು ಉಂಟುಮಾಡುವುದು ಹೇಗೆ? ಪ್ರತಿಯೊಂದು ಸೆಕೆಂಡಿಗೆ ಸುಮಾರು 40 ಲಕ್ಷ ಚಿಕ್ಕ ಅಳತೆಯ ಟನ್ನುಗಳಷ್ಟು ಜಲಜನಕವನ್ನು ಹೀರಿಕೊಳ್ಳುವ ಮೂಲಕ ಶಕ್ತಿಯನ್ನು ಉತ್ಪಾದಿಸುವ ಅವನ ಗರ್ಭದಲ್ಲಿರುವ ಬಹು ದೊಡ್ಡ ನ್ಯೂಕ್ಲಿಯರ್ ಕುಲುಮೆಯ ಮೂಲಕವೇ. ಮಾನವ ಕುಲಕ್ಕೆ ಸಂತೋಷಕರವಾಗಿಯೇ, ಈ ಕಾರ್ಯಗತಿಯು ಬಿಲ್ಯಾಂತರ ವರ್ಷಗಳ ತನಕ ಮುಂದರಿಯುವಂತೆ ಮಾಡಲು ಸೂರ್ಯನಲ್ಲಿ ಸಾಕಷ್ಟು ಇಂಧನವಿದೆ.
ವಿಜ್ಞಾನಿಗಳು ಸಂಶೋಧಿಸಿದ ಕೆಲವು ವಿಷಯಗಳು ಹೆಚ್ಚಿನ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ಉದಾಹರಣೆಗೆ, ಸುತ್ತಿಗೆಯಿಂದ ಹೊಡೆಯಲ್ಪಟ್ಟ ಲೋಹದ ಫಲಕದಂತೆ ಸೂರ್ಯನು ಸಂತತವಾಗಿ ಸ್ಪಂದಿಸುತ್ತಿರುತ್ತಾನೆ, ಏಕೆ? ಅಲ್ಲದೆ, ಇದನ್ನು ಪರಿಗಣಿಸಿರಿ: ಸೂರ್ಯನ ಪ್ರಜ್ವಲಿಸುವ ಗರ್ಭವು ಅದರ ಅತ್ಯುಷವ್ಣಿರುವ ಭಾಗವಾಗಿದೆ, ಮತ್ತು ಪದರವು ಗರ್ಭದಿಂದ ಎಷ್ಟು ಹೆಚ್ಚು ದೂರವಿದೆಯೇ ಅಷ್ಟು ಹೆಚ್ಚು ತಂಪಿದೆ. ಆದರೆ ನಾವು ಸೂರ್ಯನ ಪರಿಸರದ ಹೊರ ಪದರಾದ ಪ್ರಭಾ ವಲಯಕ್ಕೆ ಬರುವಾಗ, ಅದು ಬದಲಾಗುತ್ತದೆ. ಉರಿಯುವ ಗರ್ಭಕ್ಕೆ ಹತ್ತರವಾಗಿರುವ ಪದರಗಳಿಗಿಂತ ಪ್ರಭಾ ವಲಯವು ಹೆಚ್ಚು ಬಿಸಿಯಾಗಿದೆ. ಏಕೆ?
ಅಷ್ಟಲ್ಲದೆ, ಸೂರ್ಯನು—ಭೂಮಿಯಂತೆ—ಆವರ್ತಿಸುವಾಗ, ವಿವಿಧ ಭಾಗಗಳು ವಿವಿಧ ವೇಗಗಳಲ್ಲಿ ಆವರ್ತಿಸುತ್ತವೆ. ದೃಷ್ಟಾಂತಕ್ಕಾಗಿ, ಮೇಲ್ಮೈಯು ಒಳಗಣ ಪದರುಗಳಿಗಿಂತ ಹೆಚ್ಚು ವೇಗದಿಂದ ಆವರ್ತಿಸುತ್ತದೆ. ಏಕೆ? ಮತ್ತು ಅದು ಹೇಗೆ ಶಕ್ಯವು? ಅದಲ್ಲದೆ ಸೂರ್ಯನ ಕಲೆಗಳಿವೆ. ಸೂರ್ಯನ ಮೇಲ್ಮೈಯ ಮೇಲಿರುವ ಈ ಕಲೆಗಳು 11 ವರ್ಷಗಳ ಒಂದು ಅವಧಿಯಲ್ಲಿ ಒಂದು ಕ್ರಮದ ಕಾಲಚಕ್ರದಲ್ಲಿ ಬರುತ್ತವೆ ಮತ್ತು ಹೋಗುತ್ತವೆ. ಅವು ಅಷ್ಟು ಕ್ರಮ ಪ್ರಕಾರವಾಗಿ ಬದಲಾಗುವುದು ಏಕೆ?
ಸೂರ್ಯನ ಕುರಿತು ಕಲಿಯಲು ಇನ್ನೂ ಹೆಚ್ಚಿರುವುದಾದರೂ, ನಮಗೆ ಈವಾಗಲೇ ಏನು ತಿಳಿದಿದೆಯೇ ಅದು, ಅದರ ನಿರ್ಮಾಣಿಕನಾದ ಯೆಹೋವನೆಡೆಗೆ ನಾವು ಭಯಚಕಿತರಾಗಿ ನೋಡುವಂತೆ ಮಾಡುತ್ತದೆ. ಪ್ರತಿ ಸಾರಿ ನಾವು ಸೂರ್ಯನನ್ನು ನೋಡುವಾಗ, ನಮಗೆ ಇದರ ನೆನಪಾಗುತ್ತದೆ ಏನಂದರೆ “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.”—ಕೀರ್ತನೆ 19:1. (w92 10/1)