ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 12/1 ಪು. 24-25
  • ಊಟ ಮಾಡಿರಿ ರೊಟ್ಟಿ ತಿನ್ನಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಊಟ ಮಾಡಿರಿ ರೊಟ್ಟಿ ತಿನ್ನಿರಿ
  • ಕಾವಲಿನಬುರುಜು—1992
  • ಅನುರೂಪ ಮಾಹಿತಿ
  • ಗೋದಿ ಮತ್ತು ಕಳೆಗಳ ದೃಷ್ಟಾಂತ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ‘ನೋಡಿರಿ, ನಾನು ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • “ನೀತಿವಂತರು . . . ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುವರು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
ಕಾವಲಿನಬುರುಜು—1992
w92 12/1 ಪು. 24-25

ವಾಗ್ದಾನ ದೇಶದ ದೃಶ್ಯಗಳು

ಊಟ ಮಾಡಿರಿ ರೊಟ್ಟಿ ತಿನ್ನಿರಿ

ಒಂದು ಸಂದರ್ಭದಲ್ಲಿ, ಯೇಸು ಮತ್ತು ಅವನ ಶಿಷ್ಯರು ಒಂದು ಮನೆಯಲ್ಲಿದ್ದಾಗ ಜನಸಂದಣಿಯ ಕಾರಣ ಅವರಿಗೆ “ಊಟಕ್ಕೂ ಅವಕಾಶವಾಗಲಿಲ್ಲ.” (ಮಾರ್ಕ 3:20) ಇನ್ನೊಮ್ಮೆ ಯೇಸು ಒಬ್ಬ ಫರಿಸಾಯನ ಮನೆಗೆ “ಊಟಕ್ಕೆ” ಹೋದನು. (ಲೂಕ 14:1) ಯಾವ ರೀತಿಯ ಊಟ ನಿಮ್ಮ ಮನಸ್ಸಿಗೆ ಬರುತ್ತದೆ?

ಪುರಾತನ ಕಾಲದ ಇಸ್ರಾಯೇಲ್ಯರು ಪ್ರಾಯಶಃ ರೊಟ್ಟಿಯ ಕುರಿತು ಯೋಚಿಸಬಹುದಾಗಿತ್ತು, ಏಕೆಂದರೆ “ಊಟಕ್ಕೆ” ಎಂಬ ಹೀಬ್ರು ಮತ್ತು ಗ್ರೀಕ್‌ ಪದವಿನ್ಯಾಸಕ್ಕೆ “ರೊಟ್ಟಿ ತಿನ್ನು” ಎಂಬ ಅಕ್ಷರಾರ್ಥವಿದೆ. ಇದು ಗ್ರಾಹ್ಯ, ಏಕೆಂದರೆ ಗೋಧಿ ಯಾ ಬಾರ್ಲಿಯಿಂದ ಮಾಡಿದ ರೊಟ್ಟಿ ಅವರ ಮುಖ್ಯ ಆಹಾರಭಾಗವಾಗಿತ್ತು.

ಅನೇಕರು ಇಂದು ಹೀಬ್ರು ಮೂಲಪಿತರನ್ನು ಅವರು ಕುರುಬರೆಂದೂ ಯೇಸುವಿನ ಶಿಷ್ಯರು ಬೆಸ್ತರೆಂದೂ ನೆನಸುತ್ತಾರೆ. ಕೆಲವರು ಹಾಗೆ ಜೀವಿಸಿದರೂ ನಿಶ್ಚಯವಾಗಿ ಎಲ್ಲರೂ ಹಾಗೆ ಜೀವಿಸಲಿಲ್ಲ. ಅನೇಕರ ಜೀವನಗಳಲ್ಲಿ ಗೋಧಿ ಮುಖ್ಯಾಹಾರವಾಗಿತ್ತು. ಕೆಲವು ವೇಳೆ, ಇಸಾಕ ಮತ್ತು ಯಾಕೋಬರ ವಿಷಯದಲ್ಲಿ ಇದು ಹೀಗೆಂದು, ಆದಿಕಾಂಡ 26:12; 27:37; ಮತ್ತು 37:7 ರ ಸೂಚನೆಗಳಿಂದ ತೋರಿಬರುತ್ತದೆ. ಮತ್ತು ಯೇಸುವಿನ ಸಮಯದಲ್ಲಿ ಗಲಿಲಾಯದಲ್ಲಿ ವ್ಯವಸಾಯವು ಪ್ರಧಾನ ಕೆಲಸವಾಗಿದ್ದುದರಿಂದ, ಅಪೊಸ್ತಲರಾದ ಕೆಲವರು ಗೋಧಿ ಬೆಳೆಸುವ ರೈತರಾಗಿದ್ದಿರಬಹುದೆ?

ಈ ಸಾಧ್ಯತೆ ಇದೆ, ಏಕೆಂದರೆ ವಾಗ್ದಾನ ದೇಶದಲ್ಲಿ ಗೋಧಿ ಬೆಳೆಯಿಸುವುದು ವ್ಯಾಪಕವಾಗಿತ್ತು, ಮತ್ತು ಇದಕ್ಕೆ ಬೈಬಲಿನಲ್ಲಿ ಆಧಾರಗಳೋ ಧಾರಾಳ. (ಧರ್ಮೋಪದೇಶಕಾಂಡ 8:7-9; 1 ಸಮುವೇಲ 6:13) ಇದರಲ್ಲಿ ಏನು ಸೇರಿತ್ತು?

ಅಕ್ಟೋಬರ್‌ ಮತ್ತು ನೊವೆಂಬರ್‌ನಲ್ಲಿ ಬರುವ ಆದಿಮಳೆ ಮಣ್ಣನ್ನು ಮೆತ್ತಗೆ ಮಾಡಿದ ಬಳಿಕ, ಗೋಧಿಯ ಬೇಸಾಯಗಾರನು ಉತ್ತು ಬೀಜವನ್ನು ಬಿತ್ತುತ್ತಾನೆ. ಸಮಯಾನಂತರದ ಮಳೆ ಅವನ ಬೆಳೆ ಬೆಳೆಯುವಂತೆ ಸಹಾಯಮಾಡಿ, ಬಳಿಕ ಏಪ್ರಿಲ್‌ ಮತ್ತು ಮೇಯಲ್ಲಿ, ಬೇಸಗೆಯ ಕಾವಿಗೆ ಮೊದಲು ಸ್ವರ್ಣಕಂದು ಬಣ್ಣದ್ದಾಗಿ ಹಣ್ಣಾಗುವುದು. ಗೋಧಿಯ ಕೊಯ್ಲುಕಾಲ ಎಷ್ಟು ಸುಪರಿಚಿತವಾಗಿತ್ತೆಂದರೆ, ಅದನ್ನು ಋತುವಿನ ಸೂಚನೆಯಾಗಿ ನಾವು ಓದುತ್ತೇವೆ. (ಆದಿಕಾಂಡ 30:14; ನ್ಯಾಯಸ್ಥಾಪಕರು 15:1) ಎಡಬದಿಯ ಛಾಯಾಚಿತ್ರವನ್ನು ವರ್ಷದ ಯಾವ ಋತುವಿನಲ್ಲಿ ಹಿಡಿಯಲಾಯಿತೆಂದು ನೀವು ನಿರ್ಣಯಿಸಬಲ್ಲಿರೊ?a ಮತ್ತು ಯೇಸುವಿನ ಶಿಷ್ಯರು ತುಸು ಹಸಿ ತೆನೆಗಳನ್ನು ಕಿತ್ತಾಗ ಅದು ಯಾವ ಋತುವಾಗಿತ್ತು?—ಮತ್ತಾಯ 12:1.

ಗೋಧಿಯ ಸುಗ್ಗಿಯು ರೈತರಿಗೆ ತುಂಬ ಕೆಲಸದ ಅರ್ಥದಲ್ಲಿತ್ತು. ಕೊಯ್ಯುವವರು ಪೈರನ್ನು ಕೈಕತ್ತಿಯಿಂದ ಕಡಿದು, ಕೆಳಗೆ ನೀವು ನೋಡುವಂತೆ ಕಂತೆಗಳಾಗಿ ಕಟ್ಟುತ್ತಿದ್ದರು. ಕೆಲವು ದಂಟುಗಳನ್ನು ಅಲಕ್ಷ್ಯ ಮಾಡುವುದು ಯಾ ಅವು ಕೆಳಗೆ ಬೀಳುವುದು ನಿಶ್ಚಯ. ಈ ಕಾರಣವೇ ರೂತಳು ಧಾನ್ಯದ ತೆನೆಗಳನ್ನು ಸಂಗ್ರಹಿಸಸಾಧ್ಯವಿತ್ತು. (ರೂತ 2:2, 7, 23; ಮಾರ್ಕ 4:28, 29) ಗೋಧಿಯ ಕಂತೆಗಳನ್ನು ಆ ಬಳಿಕ, ಅರೌನನ ಕಣದಂಥ ಕಾಳೊಕ್ಕುವ ಕಣಕ್ಕೆ ಕೊಂಡೊಯ್ಯಲಾಗುತ್ತಿತ್ತು. ಅಲ್ಲಿ ಏನಾಯಿತು? “ಹಂತೀಕುಂಟೆ ಮೊದಲಾದ ಎತ್ತಿನ ಸಾಮಾನುಗಳ” ಕುರಿತು ಬೈಬಲು ಮಾತಾಡುತ್ತದೆ. (2 ಸಮುವೇಲ 24:18-22; 1 ಪೂರ್ವಕಾಲವೃತ್ತಾಂತ 21:23) ಗೋಧಿಯ ಕಂತೆಗಳನ್ನು ಒಂದು ಸಮತಟ್ಟಾದ ಕಲ್ಲಿನ ಯಾ ಒತ್ತಿದ ಮಣ್ಣ ಮೇಲೆ ಹರಡಲಾಗುತ್ತದೆ. ಒಂದು ಹೋರಿ ಯಾ ಇನ್ನೊಂದು ಮೃಗ ಗೋಧಿಯನ್ನು ಮೆಟ್ಟುತ್ತಾ ಸುತ್ತು ನಡೆದಾಡುತ್ತದೆ. ಹುಲ್ಲನ್ನು ಮುರಿದು ಧಾನ್ಯವನ್ನು ಬಿಡಿಸಲು ಸಹಾಯವಾಗುವಂತೆ ಆ ಪ್ರಾಣಿ ಒಂದು ಒಕ್ಕುಮರವನ್ನೂ ಎಳೆಯುತ್ತಿರಬಹುದು.—ಯೆಶಾಯ 41:15.

ಈಗ ಧಾನ್ಯವು ಜಳ್ಳು ಕೇರಲು ತಯಾರಾಗುತ್ತಿತ್ತು. ಇದನ್ನು ಮೇಲೆ ನೋಡುವಂತೆ, ಸಲಿಕೆ ಯಾ ಕವಲು ಗುದ್ದಲಿಯಿಂದ ಗಾಳಿಗೆಸೆಯಲಾಗುತ್ತಿತ್ತು. (ಮತ್ತಾಯ 3:12) ರೈತನು ಸಂಜೆಗೆ ಜಳ್ಳು ತೂರಬಹುದು. ಆಗ ಬೀಸುವ ಗಾಳಿ ಸಿಪ್ಪೆಯನ್ನು ಹೊಡೆದುಕೊಂಡು ಹೋಗಿ (ಬೀಜದಿಂದ ಸಿಪ್ಪೆಯನ್ನು ವಿಂಗಡಿಸಿ) ಹುಲ್ಲನ್ನು ಬದಿಗೆ ಹಾಕುತ್ತದೆ. ಧಾನ್ಯವನ್ನು ಒಟ್ಟುಗೂಡಿಸಿ ಕಲ್ಲುಗಳನ್ನು ವಿಂಗಡಿಸಿದಾಗ, ಅದು ಶೇಖರಣೆಗೆ—ಅಥವಾ, ಆ ಪ್ರಾಮುಖ್ಯ ಆಹಾರವಾದ ರೊಟ್ಟಿಯನ್ನು ಮಾಡಲು—ಸಿದ್ಧವಾಗುತ್ತದೆ.—ಮತ್ತಾಯ 6:11.

ಆ ಕೆಲಸ ಮಾಡುವ ಗೃಹಿಣಿ ನೀವಾಗಿರುವಲ್ಲಿ, ಧಾನ್ಯವನ್ನು ಹಿಟ್ಟಾಗಿ ಮಾಡಲು, ಪ್ರಾಯಶಃ ಸ್ವಲ್ಪ ದೊರಗಾದ ಹಿಟ್ಟನ್ನು ಮಾಡಲು ನೀವು ಪ್ರತಿದಿನ ಒಂದು ಒರಳು ಕುಟ್ಟಣಿಯನ್ನು ಉಪಯೋಗಿಸುವಿರಿ. ಅಥವಾ ನೀವು ಸಾರಳು ದೇಹತಾಳಿ ಬಂದ ದೇವದೂತರಿಗೆ ಮಾಡಿದಂತೆ ಯಾ ಇಸ್ರಾಯೇಲ್ಯರು ಯೆಹೋವನಿಗೆ ಧಾನ್ಯನೈವೇದ್ಯ ಮಾಡುತ್ತಿದ್ದಾಗ ಅರ್ಪಿಸುತ್ತಿದ್ದಂತೆ, “ಹಸನಾದ . . . ಹಿಟ್ಟು” ಮಾಡಿ “[ಉರುಟಾದ, NW] ರೊಟ್ಟಿ” ಯನ್ನು ಮಾಡಬಹುದು. (ಆದಿಕಾಂಡ 18:6; ವಿಮೋಚನಕಾಂಡ 29:2; ಯಾಜಕಕಾಂಡ 2:1-5; ಅರಣ್ಯಕಾಂಡ 28:12) ಸಾರಳು ಗೋಧಿಹಿಟ್ಟನ್ನು ನೀರಿನಿಂದ ನೆನೆಯಿಸಿ ಅದನ್ನು ಹುದುಗು ಹಿಟ್ಟಾಗಿ ನಾದಿದಳು.

ಈ ಕೆಳಗೆ, ನೀವು ಹಿಟ್ಟಿನ ಚಿಕ್ಕ ಮುದ್ದೆಗಳನ್ನು ಮತ್ತು ಒಂದು ಚಪ್ಪಟೆಯೂ ತೆಳುವೂ ಆದ ಕಾಯಿಸಲ್ಪಡಲು ಕಾಯುತ್ತಿರುವ ರೊಟ್ಟಿ ಹರಡಿರುವುದನ್ನು ನೋಡಬಲ್ಲಿರಿ. ಇಂಥ ದೊಡ್ಡ, ಉರುಟಾದ ರೊಟ್ಟಿಗಳನ್ನು, ಈ ಹೆಂಗಸು ಮಾಡುತ್ತಿರುವಂತೆ, ಕಲ್ಲಿನ ಮೇಲೆ ಯಾ ಕಬ್ಬಿಣದ ಕಾವಲಿನ ಮೇಲೆ ಸುಡಸಾಧ್ಯವಿದೆ. ಸಾರಳು ಮತ್ತು ಲೋಟನ ಕುಟುಂಬವು ದೇವದೂತ ಭೇಟಿಗಾರರಿಗೆ ಮುಂದೇನು ಮಾಡಿದರೆಂದು ಚಿತ್ರಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆಯೆ? ನಾವು ಓದುವುದು: “ಅವರು [ದೇವದೂತರು] ಮನೆಗೆ ಬಂದಾಗ ಅವರು ಹುಳಿಯಿಲ್ಲದ ರೊಟ್ಟಿಗಳನ್ನು ಸುಡಿಸಿ ಔತಣವನ್ನು ಮಾಡಿಸಲು ಅವರು ಊಟಮಾಡಿದರು.”—ಆದಿಕಾಂಡ 19:3.

[ಅಧ್ಯಯನ ಪ್ರಶ್ನೆಗಳು]

a  ಹೋಲಿಸಿರಿ 1992 ಕ್ಯಾಲೆಂಡರ್‌ ಆಫ್‌ ಜೆಹೋವಸ್‌ ವಿಟ್ನೆಸೆಸ್‌.

[ಪುಟ 24 ರಲ್ಲಿರುವ ಚಿತ್ರ ಕೃಪೆ]

Pictorial Archive (Near Eastern History) Est.

[ಪುಟ 24 ರಲ್ಲಿರುವ ಚಿತ್ರ ಕೃಪೆ]

Pictorial Archive (Near Eastern History) Est.

[ಪುಟ 25 ರಲ್ಲಿರುವ ಚಿತ್ರ ಕೃಪೆ]

Pictorial Archive (Near Eastern History) Est.

[ಪುಟ 25 ರಲ್ಲಿರುವ ಚಿತ್ರ ಕೃಪೆ]

Garo Nalbandian

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ