ಅನಾನುಕೂಲತೆ ಮತ್ತು ಅಪಾಯದಲ್ಲಿಯೂ ಅವರು ಬಂದರು
ತಾರೀಕು ಜನವರಿ 2, 1992 ಆಗಿತ್ತು. ಸ್ಥಳ—ಇನಿಬಾನ್ ಪ್ರಾಂತ್ಯದ ಮಾಕಿಕ್. ಮೋಸಂಬೀಕ್ನ ಆಫ್ರಿಕನ್ ರಾತ್ರಿ-ಸದ್ದುಗಳು ರೇಡಿಯೊವನ್ನು ತಿರುಗಿಸಿದಾಗ, ತೀವ್ರವಾಗಿ ಭಂಗಗೊಳಿಸಲ್ಪಟ್ಟವು. “ಯೆಹೋವನ ಸಾಕ್ಷಿಗಳು ಅವರ ‘ಸ್ವಾತಂತ್ರ್ಯ ಪ್ರಿಯರು’ ಅಧಿವೇಶನವನ್ನು ನಮ್ಮ ಪ್ರಾಂತ್ಯದಲ್ಲಿ ಜರುಗಿಸುತ್ತಾರೆ,” ಎಂದು ಪ್ರಸಾರಕನು ಪ್ರಕಟಿಸಿದನು. “ಇಂದಿನ ಲೋಕದಲ್ಲಿ ನಿಜ ಸ್ವಾತಂತ್ರ್ಯವನ್ನು ಹೇಗೆ ಕಂಡುಕೊಳ್ಳಸಾಧ್ಯವಿದೆ ಎಂದು ಜನರಿಗೆ ಕಲಿಸುವುದು ಅವರ ಉದ್ದೇಶವಾಗಿದೆ. ಎಲ್ಲರೂ ಹಾಜರಾಗುವಂತೆ ಆಮಂತ್ರಿಸಲ್ಪಟ್ಟಿದ್ದಾರೆ.”
ಆಫ್ರಿಕದ ಆ ದೂರದ ಮೂಲೆಯಲ್ಲಿ ಒಂದು ಇತಿಹಾಸವನ್ನೇ ನಿರ್ಮಿಸಲಾಯಿತು! ಮೊದಲ ಬಾರಿ, ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನವು ನಡಿಸಲ್ಪಟ್ಟಿತು, ಮತ್ತು ಅದರಲ್ಲಿ ಸಂತೋಷ ಪಡಲು 1,024 ಮಂದಿ ಅಲ್ಲಿ ಹಾಜರಿದ್ದರು. ಕೆಲವು ವರ್ಷಗಳ ಹಿಂದೆ, ಮೋಸಂಬೀಕ್ನಲ್ಲಿ ಅಂಥ ಒಂದು ಘಟನೆಯು ಅಷ್ಟೊಂದು ಬಹಿರಂಗವಾಗಿ ಎಂದಿಗೂ ಸಂಭವಿಸುವ ಸಾಧ್ಯತೆಯೇ ಇರಲಿಲ್ಲ, ಯಾಕಂದರೆ ಯೆಹೋವನ ಸಾಕ್ಷಿಗಳ ಕಾರ್ಯವು ನಿಷೇಧದ ಕೆಳಗಿತ್ತು. ಈ ಅಧಿವೇಶನದಲ್ಲಿ ಹಾಜರಿರಲು ಮಾಡಲ್ಪಟ್ಟ ನಿರ್ಭೀತಿಯ ತ್ಯಾಗಗಳನ್ನು ಕೇಳಲು ನೀವು ಇಚ್ಛಿಸುವಿರೋ?
ಇನಿಬಾನ್ ಪ್ರಾಂತ್ಯವು, ಆಫ್ರಿಕದ ಇತರ ಭಾಗಗಳಂತೆ, ಪರಮ ಸುಂದರವಾಗಿದೆ. ಹಾಯಿಹಡಗದಂಥ ಮೀನು ಹಿಡಿಯುವ ದೋಣಿಗಳು ಅವುಗಳ ತ್ರಿಕೋಣಾಕಾರದ ಹಾಯಿಗಳೊಂದಿಗೆ ಅದರ ತೀರದಿಂದ ದೂರಸಮುದ್ರದಲ್ಲಿ ಸಂಚರಿಸುತ್ತವೆ. ತೆಂಗಿನ ಮರಗಳು ಹೇರಳವಾಗಿವೆ. ಆದರೆ ಗ್ರಾಮಪ್ರದೇಶದಲ್ಲಿ ಒಂದು ಕರಾಳ ಭೂತವು ಗತ್ತಿನ ನಡಗೆಯನ್ನು ಮುಂದರಿಸುತ್ತದೆ: ಆಂತರಿಕ ಯುದ್ಧ!
ಹತ್ತಿರದ ಗ್ರಾಮೀಣ ಪ್ರದೇಶದಿಂದ ಕಾಡುಗಳಲ್ಲಿ ಇಡೀ ರಾತ್ರಿ ನಡೆಯುವ ಯುದ್ಧದಿಂದ ಮಂದವಾದ ಬೂಮ್-ಬೂಮ್-ಬೂಮ್ ಎಂಬ ಫಿರಂಗಿ ಗುಂಡುಗಳ ಶಬ್ದದಿಂದ, ತಾಳೆಯ ಪರ್ಣಾಂಗಗಳ ಗುಡಿಸಲುಗಳಲ್ಲಿ ಪ್ರಾತಃಕಾಲದ ಮೊದಲ ತಾಸುಗಳಲ್ಲಿ ನಿದ್ದೆಮಾಡುವವರು, ಎಬ್ಬಿಸಲ್ಪಡುವದೇನೂ ಅಸಾಮಾನ್ಯವಲ್ಲ. ಆಗಿಂದಾಗ್ಗೆ ನಿರಪರಾಧಿ ನಾಗರಿಕರು ಹೆಚ್ಚಾಗಿ ಗಾಸಿಗೊಳ್ಳುತ್ತಾರೆ. ಕೆಲವು ಸಾರಿ, ಅಂಗಾಂಗಗಳು ಇರದಂತಹ ಯಾ ನ್ಯೂನತೆಯಿರುವ ಮಕ್ಕಳು ಓಡಾಡುವದನ್ನು ಕಾಣಬಹುದು. ಯೆಹೋವನ ಸಾಕ್ಷಿಗಳಲ್ಲಿಯೂ ಕೂಡ ಕೆಲವರು ಅನುಭವಿಸಿದ ಪಾಶವೀವರ್ತನೆಗಳಿಂದಾದ ಗಾಯದ ಕಲೆಗಳನ್ನು ಅವರ ಮುಖಗಳಲ್ಲಿ ಮತ್ತು ದೇಹಗಳಲ್ಲಿ ಕಾಣಬಹುದು.
ಈ ಪರಿಸ್ಥಿತಿಗಳಲ್ಲಿ “ಸ್ವಾತಂತ್ರ್ಯ ಪ್ರಿಯರು” ಅಧಿವೇಶನವು ಹಾಜರಾದವರೆಲ್ಲರಿಂದ ಆಳವಾಗಿ ಗಣ್ಯಮಾಡಲ್ಪಟ್ಟಿತು. ಅಧಿವೇಶನಕ್ಕೆ ಹೋಗುವ ದಾರಿಯಲ್ಲಿ ಹೊಂಚುದಾಳಿಯ ಸಾಧ್ಯತೆಯ ನಡುವೆಯೂ, ಗ್ರಾಮೀಣ ಪ್ರದೇಶಗಳಲ್ಲಿದ್ದ ಅನೇಕ ಕುಟುಂಬ ಗುಂಪುಗಳು ಹಾಜರಾಗಲು ದೃಢನಿಶ್ಚಯ ಮಾಡಿದ್ದರು. ಸಾರ್ವಜನಿಕ ಸಂಚಾರವು ಹೆಚ್ಚಾಗಿ ತೆರೆದಿರುವ ಆವರಣವಿಲ್ಲದ ದೊಡ್ಡ ಟ್ರಕ್ಗಳ ಹಿಂಬದಿಯಲ್ಲಿ ಆಗಿದ್ದುದರಿಂದ, ಅಲ್ಲಿಗೆ ಹೋಗುವದು ಅಷ್ಟೇನೂ ಸುಖಕರವಾಗಿರಲಿಲ್ಲ. ಕೆಲವೊಮ್ಮೆ ಒಂದು ಟ್ರಕ್ನಲ್ಲಿ 400 ಪ್ರಯಾಣಿಕರುಗಳನ್ನು ತುರುಕುತ್ತಿದ್ದರು! ಒಂದು ಮಿಲಿಟರಿ ಮೈಗಾವಲಿನೊಟ್ಟಿಗೆ ಇಂಥ ಅನೇಕ ಟ್ರಕ್ಗಳು ಸಾಲಾಗಿ ಒಯ್ಯಲ್ಪಡುತ್ತಿದ್ದವು.
ನೊರ್ಇ ಮತ್ತು ಅವಳ ಒಂದು, ಮೂರು, ಮತ್ತು ಆರು ವರ್ಷ ಪ್ರಾಯದ ಮೂವರು ಪುತ್ರಿಯರು ಈ ರೀತಿಯಲ್ಲಿ ತಮ್ಮ ಪ್ರಾಣಗಳನ್ನು ಗಂಡಾಂತರದಲ್ಲಿಟ್ಟು ಪ್ರಯಾಣಿಸಿದ ಒಂದು ಕುಟುಂಬವಾಗಿತ್ತು. ಈ ಪ್ರಯಾಣವನ್ನು ಮಾಡಲು ಸಾಧ್ಯವಾಗುವಂತೆ ಅವಳು ತಿಂಗಳುಗಟ್ಟೆಯಿಂದ ಮೊದಲೇ ಹಣವನ್ನು ಕೂಡಿಸಿಟ್ಟಿದ್ದಳು. ಅಧಿವೇಶನದಲ್ಲಿ ಉಳಿದು ಕೊಳ್ಳಲು ಯಾವುದೇ ಒಂದು ಗೊತ್ತಾದ ನಿವಾಸ ದೊರೆಯದಿರುವ ನಿಜಾಂಶವು ಕೂಡ, ಅವಳನ್ನು ಹಿಂಜರಿಯುವಂತೆ ಮಾಡಲಿಲ್ಲ. ಇತರ ಅನೇಕರೊಂದಿಗೆ, ನೊರ್ಇ ಮತ್ತು ಅವಳ ಕುಟುಂಬವು ಸರಳವಾಗಿ ಊಟ ತಯಾರಿಸಿದರು, ಉಂಡರು, ಮತ್ತು ಸಮ್ಮೇಳನದ ನಿವೇಶನದಲ್ಲಿಯೇ ತೆರೆದ ಬಯಲಿನಲ್ಲಿ ಮಲಗಿದರು.
ಧಾರಾಕಾರದ ಬಿರುಮಳೆಯ ನಂತರ ಹಿಂಬಾಲಿಸುವ ಉಷ್ಣವಲಯದ ಸೆಖೆಯು ಸಹ, ಒಟ್ಟಿಗೆ ಆತ್ಮಿಕ ರಸದೌತಣದಲ್ಲಿ ಆನಂದಿಸುವುದರಲ್ಲಿ ಸಹೋದರರ ಅನಿರ್ಬಂಧಿತ ಆಹ್ಲಾದವನ್ನು ನಿರುತ್ಸಾಹಗೊಳಿಸಲು ಶಕ್ಯವಾಗಲಿಲ್ಲ. ಆ ಅಧಿವೇಶನದಲ್ಲಿರುವದಕ್ಕಿಂತ ಬೇರೆ ಯಾವುದೇ ವಿಷಯವು ಅವರಿಗೆ ಅಧಿಕ ಪ್ರಾಮುಖ್ಯತೆಯದ್ದಾಗಿರಲಿಲ್ಲವೆಂದವರು ಎಣಿಸಿದರು. ಒಟ್ಟಿಗೆ 17 ವ್ಯಕ್ತಿಗಳು ಹಿಂದೂ ಮಹಾಸಾಗರದ ಬೆಚ್ಚಗೆನ ನೀರಿನಲ್ಲಿ ಅವರ ಸಮರ್ಪಣೆಯನ್ನು ಸಾಂಕೇತಿಕವಾಗಿ ತೋರಿಸಿದರು. ದೀಕ್ಷಾಸ್ನಾನವು ನಡೆಯಲ್ಪಡುತ್ತಿದ್ದಂತೆ, ಆನಂದಭರಿತ ವೀಕ್ಷಕರ ಒಂದು ದೊಡ್ಡ ಸಮೂಹವು ಸ್ವಪ್ರೇರಣೆಯಿಂದ ಯೆಹೋವನಿಗೆ ಸಂಗೀತ ಹಾಡುವಂತೆ ಪ್ರಚೋದಿಸಲ್ಪಟ್ಟರು.
ದಿವ್ಯ ಸ್ವಾತಂತ್ರ್ಯದ ಪ್ರಿಯರಾಗುವದೆಂದರೆ ಅರ್ಥವೇನು ಎಂದು ಈ ಆರಾಧಕರ ಗುಂಪು ನಿಜವಾಗಿಯೂ ಕಂಡುಹಿಡಿದಿದ್ದರು. ರಾಜಧಾನಿ ಮಪುಟೊವಿನ ಒಬ್ಬ ಪ್ರತಿನಿಧಿಯಾದ ಹನ್ಸ್ ಹೇಳಿದ್ದು: “ಆಫ್ರಿಕದ ಈ ಭಾಗದಲ್ಲಿ ಯೆಹೋವನ ಸಾಕ್ಷಿಗಳ ಕಾರ್ಯದ ಒಂದು ಹೊಸ ಅಧ್ಯಾಯದ ಆರಂಭವನ್ನು ಈಗ ತಾನೇ ನಾವು ನೋಡಿದೆವು.”