ಗಿಬ್ಯೋನ್ಯರು—ಅವರು ಶಾಂತಿಯನ್ನು ಹುಡುಕಿದರು
ಮೇಲಿನ ಬೆಟ್ಟದ-ನೆತ್ತಿ ಶಹರವು, ಯೆರೂಸಲೇಮಿನ ಉತ್ತರಕ್ಕೆ ಸುಮಾರು ಹತ್ತು ಕಿಲೊಮೀಟರ್ ದೂರದಲ್ಲಿದ್ದು, ಪುರಾತನ ಗಿಬ್ಯೋನ್ ನೆಲೆಸಿದ ಸ್ಥಳವೆಂಬದಾಗಿ ಗುರುತಿಸಲ್ಪಡುತ್ತದೆ.
ಗಿಬ್ಯೋನ್ ಪ್ರಾಧಾನ್ಯತೆಗೆ ಬಂದದ್ದು ಯೆಹೋಶುವನು ಇಸ್ರಾಯೇಲ್ಯರನ್ನು ವಾಗ್ದತ್ತ ದೇಶದೊಳಗೆ ನಡಿಸಿದ ಮತ್ತು ಯೆರಿಕೋವನ್ನು ಸೋಲಿಸಿದ ತುಸು ಸಮಯದೊಳಗೆ ಎಂದು ನಿಮಗೆ ತಿಳಿದಿರಬಹುದು. ಸ್ಪಷ್ಟವಾಗಿಗಿ ದೈವಿಕ ಬೆಂಬಲವಿದ್ದ ಇಸ್ರಾಯೇಲ್ಯರನ್ನು ತಾವು ಎದುರಿಸ ಶಕ್ತರಲ್ಲವೆಂದು ಗಿಬ್ಯೋನಿನ ಕಾನಾನ್ಯರಿಗೆ ಮನವರಿಕೆಯಾಗಿತ್ತು. ಮಾಡುವುದೇನು? ಒಂದು ಹಂಚಿಕೆಯನ್ನು ಮಾಡುತ್ತಾ, ಗಿಬ್ಯೋನ್ಯರು ದೂರದೇಶದಿಂದ ಬಂದ ಪ್ರಯಾಣಿಕರಂತೆ ವೇಷಮರೆಸಿದ್ದ ಪ್ರತಿನಿಧಿಗಳನ್ನು ಕಳುಹಿಸಿದರು. ಶಾಂತಿಗಾಗಿ ಮಾಡಲ್ಪಟ್ಟ ಈ ಪ್ರಯತ್ನವು ಯಶಸ್ವಿಯಾಯಿತು ಯಾಕಂದರೆ ಇಸ್ರಾಯೇಲು ಅವರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿತು. ಅವರ ಹಂಚಿಕೆಯು ಬಯಲಾದಾಗ, ಗಿಬ್ಯೋನ್ಯರು ಕಟ್ಟಿಗೆ ಒಡೆಯುವವರೂ ನೀರು ತರುವವರೂ ಆಗಿ ಪರಿಣಮಿಸಿದರು.
ಶಾಂತಿಯನ್ನು ಹುಡುಕಿದವರಾದ ಈ ಜನರೊಂದಿಗೆ ದೇವರು ಅಪ್ರಸನ್ನತೆ ತೋರಿಸಲ್ಲಿಲ್ಲ. ಗಿಬ್ಯೋನ್ಯರು ಐದು ಅರಸರಿಂದ ಆಕ್ರಮಿಸಲ್ಪಟ್ಟಾಗ ಯೆಹೋಶುವನು ಅವರ ಪರವಾಗಿ ಹೋರಾಡಿದ್ದನ್ನು ದೇವರು ಬೆಂಬಲಿಸಿದ್ದನು. ಆ ಯುದ್ಧಕ್ಕಾಗಿ ದಿನದ ಬೆಳಕನ್ನು ಉದಮ್ದಾಡಿದ ಅದ್ಭುತವನ್ನೂ ಯೆಹೋವನು ನಡಿಸಿದ್ಧನು.—ಯೆಹೋಶುವ 9:3-27; 10:1-14.
ಅಗೆತ ಶಾಸ್ತ್ರಜ್ಞರು ಈ ದಿಬ್ಬದಲ್ಲಿ ಗಟ್ಟಿಯಾದ ಬಂಡೆಯಲ್ಲಿ ಕೊರೆದ ಒಂದು ಆಳವಾದ ಹೊಂಡ, ಅಥವಾ ಕೊಳವನ್ನು ಕಂಡುಕೊಂಡರು. ಗಿಬ್ಯೋನ್ಯರು ಇದರ ಮೆಟ್ಟಲುಗಳಿಗೆ ಇಳಿದು ಒಂದು ಭೂಗತ ಅರೆಯೊಳಗಿಂದ ನೀರನ್ನು ಪಡಕೊಳ್ಳಸಾಧ್ಯವಿತ್ತು. 2 ಸಮುವೇಲ 2:13 ರಲ್ಲಿ ತಿಳಿಸಲ್ಪಟ್ಟ “ಗಿಬ್ಯೋನಿನ ಕೆರೆ” ಇದೇ ಆಗಿದ್ದಿರಬಹುದೇ? ಭೂಗರ್ಭಶಾಸ್ತ್ರಜ್ಞರು ಬಂಡೆಯೊಳಗೆ ಕೊರೆಯಲ್ಪಟ್ಟ ಸಾರಾಯಿಯ ಉಗ್ರಾಣಗಳನ್ನು ಮತ್ತು ದಾಕ್ಷಾಮದ್ಯ ಮಾಡುವ ಅನೇಕ ಉಪಕರಣವನ್ನು ಸಂಶೋಧಿಸಿದ್ದಾರೆ. ಹೌದು, ಗಿಬ್ಯೋನ್ ದ್ರಾಕ್ಷಾಮದ್ಯದ ಉದ್ಯಮದ ಒಂದು ಕೇಂದ್ರವಾಗಿತ್ತೆಂದು ತೋರುತ್ತದೆ.
ದಾವೀದನ ಕಾಲದಲ್ಲಿ ಸತ್ಯ ದೇವರ ಡೇರೆ ಅಥವಾ ಗುಡಾರವು ಇಲ್ಲಿ ನೆಲೆಸಿತ್ತು. ಅರಸ ಸೊಲೊಮೋನನು ಯಜ್ಞಗಳನ್ನು ಅರ್ಪಿಸಲು ಇಲ್ಲಿಗೆ ಬಂದಿದ್ದನು. ಯೆಹೋವನು ಸೊಲೊಮೋನನಿಗೆ ಒಂದು ಸ್ವಪ್ನದಲ್ಲಿ ಕಾಣಿಸಿಕೊಂಡು, “ಜ್ಞಾನವನ್ನೂ ವಿವೇಕವನ್ನೂ” ಹಾಗೂ ಐಶ್ವರ್ಯವನ್ನು ಕೊಡುವೆನೆಂದು ವಚನವಿತ್ತನು. (1 ಅರಸು 3:4-14; 2 ಪೂರ್ವಕಾಲ 1:3) ಈ ಸಂಚಿಕೆಯ ಪುಟ 12-17ರ ಲೇಖನವು, ಇಲ್ಲಿ ಗಿಬ್ಯೋನಿನಲ್ಲಿ ನೆಲೆಸಿದ್ದ ಜನರ ವಂಶಜರು ತದನಂತರ ದೇವರ ಜನಾಂಗದೊಂದಿಗೆ ಕೂಡಿಬರುವ ವಿಶೇಷ ಸುಯೋಗವನ್ನು ಪಡೆದರೆಂದು ತೋರಿಸುತ್ತದೆ. ಅದು ಹೇಗೆಂದು ನಿಮಗೆ ಗೊತ್ತೇ?
[ಪುಟ 32 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.