ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 7/15 ಪು. 30
  • ನಿಮಗೆ ನೆನಪಿದೆಯೇ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ನೆನಪಿದೆಯೇ?
  • ಕಾವಲಿನಬುರುಜು—1992
  • ಅನುರೂಪ ಮಾಹಿತಿ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು—1992
  • ದೇಶವನ್ನು ಸಂದರ್ಶಿಸಿರಿ, ಕುರಿಗಳನ್ನು ಸಂದರ್ಶಿಸಿರಿ!
    ಕಾವಲಿನಬುರುಜು—1992
  • “ಸತ್ಯವನ್ನೂ ಶಾಂತಿಯನ್ನೂ ಪ್ರೀತಿಸಿರಿ”!
    ಕಾವಲಿನಬುರುಜು—1996
  • ಎಲಿಸಬೆತಳಿಗೆ ಮಗುವಾಯಿತು
    ಬೈಬಲ್‌ ನಮಗೆ ಕಲಿಸುವ ಪಾಠಗಳು
ಇನ್ನಷ್ಟು
ಕಾವಲಿನಬುರುಜು—1992
w92 7/15 ಪು. 30

ನಿಮಗೆ ನೆನಪಿದೆಯೇ?

ಇತ್ತೀಚಿಗಿನ ಕಾವಲಿನಬುರುಜು ಸಂಚಿಕೆಗಳು ನಿಮಗೆ ವ್ಯಾವಹಾರ್ಯ ಮೂಲ್ಯತೆಯವುಗಳಾಗಿ ಕಂಡಿವೆಯೋ? ಹಾಗಿದ್ದರೆ ಕೆಳಗಿನವುಗಳೊಂದಿಗೆ ನಿಮ್ಮ ಸ್ಮರಣಶಕ್ತಿಯನ್ನು ಏಕೆ ಪರೀಕ್ಷಿಸಬಾರದು?

▫ ಯೇಸುವಿನ ವಾಸಿಮಾಡುವಿಕೆಗಳ ಒಂದು ಮುಖ್ಯ ಉದ್ದೇಶವು ಯಾವುದು?

ಇಂದಿನ ಕುರಿಸದೃಶರಾದ ಮಹಾ ಸಮೂಹದವರ ಉತ್ತೇಜನಕ್ಕಾಗಿ, ಅವು ಹರ್ಮಗೆದೋನ್ದನ್ನು ಪಾರಾಗುವವರು ಹರ್ಮಗೆದೋನ್ದಿನ ನಂತರ ಬಲು ಬೇಗನೆ ವಾಸಿಮಾಡಲ್ಪಡುವರು ಎಂಬದನ್ನು ಚಿತ್ರಿಸಿಯದೆ. (ಯೆಶಾಯ 33:24; 35:5, 6)—3⁄15 ಪುಟ 12.

▫ “ಪ್ರಾರ್ಥನೆಯಲ್ಲಿ ನಿರತರಾಗಿರಿ” ಎಂಬದರ ಮರುಜ್ಞಾಪಕವು ನಮಗೆ ಸದಾ ಬೇಕು ಯಾಕೆ? (ರೋಮಾಪುರ 12:12)

ಏಕೆಂದರೆ ಜೀವಿತದ ಒತ್ತಡಗಳು ಮತ್ತು ಜವಾಬ್ದಾರಿಕೆಗಳು ನಮ್ಮನ್ನು ಎಷ್ಟು ಹೆಚ್ಚಾಗಿ ದಬ್ಬಬಲ್ಲವೆಂದರೆ ನಾವು ಪ್ರಾರ್ಥನೆ ಮಾಡುವುದನ್ನು ಸಹ ಮರೆತು ಬಿಡಸಾಧ್ಯವಿದೆ. ಅಥವಾ ಸಮಸ್ಯೆಗಳು ನಮ್ಮನ್ನು ಜಜ್ಜಿ ಬಿಡಲೂಬಹುದು ಮತ್ತು ನಿರೀಕ್ಷೆಯಲ್ಲಿ ಉಲ್ಲಾಸಪಡುವುದನ್ನು ಮತ್ತು ಪ್ರಾರ್ಥಿಸುವುದನ್ನು ನಿಲ್ಲಿಸಿಬಿಡಲೂಬಹುದು. ಹೀಗೆ ಪ್ರಾರ್ಥನೆ ಮಾಡಲು ಪ್ರೋತ್ಸಾಹಿಸಲಿಕ್ಕಾಗಿ ಮತ್ತು ಈ ರೀತಿಯಲ್ಲಿ ಯೆಹೋವನಿಗೆ ಸದಾ ಸಮೀಪವಾಗಿರಲಿಕ್ಕೆ ಮರುಜ್ಞಾಪಕಗಳು ನಮಗೆ ಬೇಕು.—3⁄15, ಪುಟ 14.

▫ ನೋಹನ ದಿನದ ಜಲಪ್ರಲಯವು ಮಾನವ ಜಾತಿಯ ಮೇಲೆ ಅಳಿಸಲಾರದ ಅಚ್ಚೊತ್ತನ್ನು ಮಾಡಿತ್ತೆಂಬದನ್ನು ಯಾವುದು ರುಜುಪಡಿಸುತ್ತದೆ?

ಸುಮಾರು 500 ಕ್ಕಿಂತಲೂ ಹೆಚ್ಚು ಪ್ರಲಯದ ಕಥೆಗಳು 250 ಕ್ಕಿಂತಲೂ ಹೆಚ್ಚು ಕುಲಗಳಿಂದ ಮತ್ತು ಜನರಿಂದ ಹೇಳಲ್ಪಡುತ್ತಿವೆಯೆಂದು ಅಂದಾಜು ಮಾಡಲಾಗಿದೆ. ಈ ಎಲ್ಲಾ ಐಹಿತ್ಯಗಳಲ್ಲಿ ಕೆಲವು ಮೂಲಭೂತ ಸಾಮ್ಯತೆಗಳನ್ನು ಕಾಣಸಾಧ್ಯವಿದೆ.—4⁄15, ಪುಟ 5.

▫ ಇಂದಿನ ಸುಳ್ಳು ಪ್ರವಾದಿಗಳು ಯೆರೆಮೀಯನ ಕಾಲದವರಂತಿರುವುದು ಹೇಗೆ?

ಇಂದಿನ ಸುಳ್ಳು ಪ್ರವಾದಿಗಳು ತಾವು ದೇವರನ್ನು ಪ್ರತಿನಿಧಿಸುತ್ತೇವೆ ಎಂದು ಹೇಳುತ್ತಾರೆ, ಆದರೆ ಬೈಬಲ್‌ ನಿಜವಾಗಿ ಏನನ್ನುತ್ತದೋ ಅದರಿಂದ ಜನರನ್ನು ಅಪಕರ್ಷಿಸುವ ವಿಷಯಗಳನ್ನು ಸಾರುವ ಮೂಲಕ ಅವರು ದೇವರ ವಾಕ್ಯಗಳನ್ನು ಕದಿಯುತ್ತಾರೆ. ದೇವರ ರಾಜ್ಯದ ಬೋಧನೆಯ ಸಂಬಂಧದಲ್ಲಿ ಇದು ವಿಶೇಷವಾಗಿ ಸತ್ಯವು. (ಯೆರೆಮೀಯ 23:30)—5⁄1, ಪುಟ 4.

▫ ಒಬ್ಬನು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನವಾಗುವಾಗ ಏನು ಸೂಚಿಸಲ್ಪಡುತ್ತದೆ?

ದೀಕ್ಷಾಸ್ನಾನವಾಗುವ ಒಬ್ಬನು ಆತ್ಮದೊಂದಿಗೆ ಸಹಕರಿಸಲು ನಿರ್ಧಾರ ಮಾಡಿದ್ದಾನೆ ಮತ್ತು ಯೆಹೋವನ ಜನರ ನಡುವೆ ಅದರ ಕಾರ್ಯಗತಿಯನ್ನು ತಡೆಯಲು ಏನನ್ನೂ ಮಾಡಲಾರನು ಎಂಬದನ್ನು ಅದು ಸೂಚಿಸುತ್ತದೆ. ಆದಕಾರಣ, ಒಬ್ಬನು ನಂಬಿಗಸ್ತನೂ ವಿವೇಕಿಯೂ ಆದ ಆಳಿನೊಂದಿಗೆ ಮತ್ತು ಸಭೆಯ ಹಿರಿಯರ ಏರ್ಪಾಡಿನೊಂದಿಗೆ ಸಹಕರಿಸಲೇಬೇಕು. (ಇಬ್ರಿಯ 13:7, 17; 1 ಪೇತ್ರ 5:1-4)—5⁄1, ಪುಟ 18.

▫ ವಿಗ್ರಹಾರಾಧನೆಯು ಆರಾಧಕನಿಗೆ ಅಷ್ಟು ಹಾನಿಕಾರಕವಾಗಿರುವುದೇಕೆ?

ವಿಗ್ರಹಗಳು ಯೆಹೋವ ದೇವರಿಗೆ ಅಸಹ್ಯಕರವೆಂದು ಬೈಬಲ್‌ ತೋರಿಸುತ್ತದೆ ಮತ್ತು ದೇವರನ್ನು ಸಮೀಪಿಸಲು ತಮ್ಮ ಆರಾಧಕರಿಗೆ ಅವು ಸಹಾಯ ಮಾಡಶಕ್ತವಲ್ಲ. (ಧರ್ಮೋಪದೇಶಕಾಂಡ 7:25; ಕೀರ್ತನೆ 115:4-8) “ಸತ್ಯವು ಉದಯವಾಗಬಾರದೆಂದು” ಪಿಶಾಚನಾದ ಸೈತಾನನು ಜನರ “ಮನಸ್ಸನ್ನು ಮಂಕು” ಮಾಡಿದ್ದಾನೆ. (2 ಕೊರಿಂಥ 4:4) ಹೀಗೆ ವಿಗ್ರಹದ ಕಡೆಗೆ ಒಬ್ಬನು ಪೂಜ್ಯ ಭಾವನೆ ತೋರಿಸುವಾಗ, ಅವನು ಕಾರ್ಯತಃ ದೆವ್ವಗಳ ಅಭಿರುಚಿಗಳನ್ನು ಸೇವಿಸುವವನಾಗುತ್ತಾನೆ. (1 ಕೊರಿಂಥ 10:19, 20)—5⁄15, ಪುಟ 6-7.

▫ ಕುರಿಗಳು ಬೈಬಲ್‌ ಕಾಲದಲ್ಲಿ ಬೆಲೆಯುಳ್ಳ ಸೊತ್ತಾಗಿ ಪರಿಗಣಿಸಲ್ಪಟ್ಟದ್ದೇಕೆ?

ಉಣ್ಣೆಯು ಮರಳಿ ಮರಳಿ ದೊರೆಯುವ ಒಂದು ಸೊತ್ತಾಗಿತ್ತು ಮತ್ತು ಕುಟುಂಬದ ಬಟ್ಟೆಬರೆಗಾಗಿ ಅದನ್ನು ಬಳಸಲಾಗುತ್ತಿತ್ತು ಹಾಗೂ ಮಾರಲು ಸಾಧ್ಯತೆಯಿತ್ತು. ಟಗರುಗಳ ಕೊಂಬುಗಳನ್ನು ಜ್ಯೂಬಿಲಿಯನ್ನು ಪ್ರಕಟಿಸಲಿಕ್ಕಾಗಿ ಉಪಯೋಗಿಸಿದ್ದರು ಅಥವಾ ಅಪಾಯ ಸೂಚಕ ಸಂಜ್ಞೆಗಳನ್ನು ಕೊಡುವುದರಲ್ಲಿ ಅಥವಾ ನೇರವಾದ ಯುದ್ಧವ್ಯೂಹಗಳನ್ನು ನಡಿಸುವುದರಲ್ಲಿ ಬಳಸ ಸಾಧ್ಯವಿತ್ತು. ಇಸ್ರಾಯೇಲ್ಯರು ತಿನ್ನಬಹುದಾಗಿದ್ದ ಶುದ್ಧಪಶುಗಳಲ್ಲಿ ಕುರಿಗಳು ಸೇರಿದ್ದರಿಂದ, ಕುರಿ ಮಂದೆಯು ಒಂದು ಆಹಾರ ಸಂಗ್ರಹದ ಮೂಲವಾಗಿತ್ತು ಮತ್ತು ಕುಡಿಯಲು ಮತ್ತು ಗಿಣ್ಣುಮಾಡಲು ಕ್ರಮದ ಹಾಲಿನ ಸಂಗ್ರಹವನ್ನು ಅದು ಒದಗಿಸುತ್ತಿತ್ತು.—6⁄1, ಪುಟ 24-5.

▫ ದೇವರನ್ನು ಪ್ರೀತಿಸುವವರು ದೇವರ ರಾಜ್ಯವು ಬರಲಿ ಎಂದು ಪ್ರಾರ್ಥಿಸುವಾಗ ಯಾವುದಕ್ಕಾಗಿ ವಿನಂತಿಸುತ್ತಿದ್ದಾರೆ? (ಮತ್ತಾಯ 6:10)

ಶಾಂತಿ ಮತ್ತು ಭದ್ರತೆಯನ್ನು ತರುವ ತಮ್ಮ ವಾಗ್ದಾನವನ್ನು ಪೂರೈಸಲು ಸೋತಿರುವ ಮಾನವ-ನಿರ್ಮಿತ ಸರಕಾರಿ ವ್ಯವಸ್ಥೆಯನ್ನು ನಾಶಮಾಡುವ ಮೂಲಕ ದೇವರ ಸ್ವರ್ಗೀಯ ರಾಜ್ಯವು ನಿರ್ಣಾಯಕ ಕ್ರಿಯೆಯನ್ನು ಕೈಕೊಳ್ಳುವಂತೆ ಅವರು ವಿನಂತಿಸುತ್ತಿದ್ದಾರೆ. (ದಾನಿಯೇಲ 2:44)—6⁄15, ಪುಟ 6.

▫ ಕ್ರೈಸ್ತ ಮತ ಸಮರ್ಥಕರು ಯಾರು ಮತ್ತು ಅವರು ತ್ರಯೈಕ್ಯವನ್ನು ಕಲಿಸಿದ್ದರೋ?

ಕ್ರೈಸ್ತ ಮತ ಸಮರ್ಥಕರು ಎರಡನೆಯ ಶತಮಾನದ ಕೊನೆಯ ಭಾಗದಲ್ಲಿ ಜೀವಿಸಿದ್ದ ಚರ್ಚ್‌ ಪ್ರಮುಖರಾಗಿದ್ದರು. ರೋಮನ್‌ ಜಗತ್ತಿನಲ್ಲಿ ನೆಲೆಸಿದ್ದ ದ್ವೇಷಕಾರಕ ತತ್ವಜ್ಞಾನಗಳ ವಿರುದ್ಧ ತಮ್ಮ ಪರಿಚಯದ ಕ್ರೈಸ್ತತ್ವವನ್ನು ಅವರು ಸಮರ್ಥಿಸಿ ಬರೆದರು. ಅವರಲ್ಲಿ ಯಾರೂ ತ್ರಯೈಕ್ಯವನ್ನು ಕಲಿಸಿರಲಿಲ್ಲ.—7⁄1, ಪುಟ 24-9.

▫ ಲೂಕ 1:62 ಸೂಚಿಸುವಂತೆ ತೋರುವ ಪ್ರಕಾರ, ಸ್ನಾನಿಕನಾದ ಯೋಹಾನನ ತಂದೆಯಾದ ಜಕರೀಯನು ಮೂಕನೂ ಕಿವುಡನೂ ಆಗಿ ಮಾಡಲ್ಪಟ್ಟಿದ್ದನೋ?

ಜಕರೀಯನ ಮಾತಿನ ಮೇಲೆ ಪರಿಣಾಮವಾಗುವುದು, ಅವನ ಶ್ರವಣ ಶಕ್ತಿಯ ಮೇಲಲ್ಲ ಎಂದು ಗಬ್ರಿಯೇಲನು ಹೇಳಿದ್ದನು. (ಲೂಕ 1:18-20) ಲೂಕ 1:64 ಹೇಳುವುದು: “ಕೂಡಲೇ ಅವನಿಗೆ [ಜಕರೀಯನಿಗೆ] ಬಾಯಿ ಬಂತು, ನಾಲಿಗೆ ಸಡಿಲವಾಯಿತು, ಅವನು ಮಾತಾಡುವ ಶಕ್ತಿಯುಳ್ಳವನಾದನು.” ಅವನ ಶ್ರವಣ ಶಕ್ತಿಯು ಯಾವ ರೀತಿಯಲ್ಲಾದರೂ ನಷ್ಟವಾಗಿತ್ತೆಂದು ಇಲ್ಲಿ ಏನೂ ತಿಳಿಸಿರುವುದಿಲ್ಲ ಎಂಬದನ್ನು ಗಮನಿಸಿರಿ. ಲೂಕ 1:62 ರಲ್ಲಿ “ಸನ್ನೆಗಳ” ತಿಳಿಸುವಿಕೆಯು ಜಕರೀಯನ ನಿರ್ಣಯವನ್ನು ಹೊರದೆಗೆಯಲು ಮಾಡಲ್ಪಟ್ಟ ಕೊಂಚ ಭಾವಾಭಿನಯದ ಅರ್ಥದಲ್ಲಿರಬಹುದು.—7⁄1, ಪುಟ 31.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ