‘ಮಣಿಯುವ ನಂಬಿಕೆ’ಯುಳ್ಳ ಧರ್ಮ
“ಪ್ರಗತಿಪರ ಪ್ರಜಾಪ್ರಭುತ್ವಗಳಲ್ಲಿ ಮತ್ತು ಸರ್ವಾಧಿಪತ್ಯದ ಸಮಾಜಗಳಲ್ಲಿ ಎರಡರಲ್ಲೂ ಕಾಲೂರೆಯನ್ನು ಗಳಿಸಲು ಮಾರ್ಮನ್ ಪಂಥಕ್ಕಿರುವ ಸಾಮರ್ಥ್ಯವು ಒಂದು ಅಚ್ಚರಿಯೇ ಸರಿ.” ಹೀಗೆಂದು ದ ವಾಲ್ ಸ್ಟ್ರೀಟ್ ಜರ್ನಲ್ ಅವಲೋಕಿಸಿದ್ದು, ಹಂಗೆರಿಯ ಸರಕಾರವು ಚರ್ಚ್ ಆಫ್ ಜೀಸಸ್ ಕ್ರೈಸ್ಟ್ ಆಫ್ ಲ್ಯಾಟರ್-ಡೇ ಸೈಂಟ್ಸ್ಗೆ ಪೂರ್ಣ ಅಂಗೀಕಾರವನ್ನು ಕೊಟ್ಟಾಗ. ಚರ್ಚ್ಗೆ ಇದನ್ನು ಗಳಿಸಲು ಶಕ್ಯವಾದದ್ದು ಹೇಗೆ? “ಕೀಲಿಕೈಯು,” ಜರ್ನಲ್ಗೆ ಅನುಸಾರ, “ಮಾರ್ಮನ್ರ ಅಧಿಕ ಜನಸಂಖ್ಯಾ ಪ್ರಮಾಣವಲ್ಲ ಅಥವಾ ಅವರ ಸುವಾರ್ತೆಯ ಆಕ್ರಮಣಕಾರಿ ಹಬ್ಬಿಸುವಿಕೆಯೂ ಅಲ್ಲ. ಬದಲಿಗೆ ಅವರ ನಂಬಿಕೆಯೊಳಗೆ ಕಟ್ಟಲ್ಪಟ್ಟ ಮಣನೀಯತೆಯೇ ಅದಕ್ಕೆ ಕಾರಣ.” ಅದು ಹೇಗೆ?
ಪೂರ್ವ ಯೂರೋಪಿನಲ್ಲಿ ಇತ್ತೀಚಿಗಿನ ರಾಜಕೀಯ ಬದಲಾವಣೆಗಳ ಮುಂಚಿನ ಅವಧಿಯ ಕುರಿತು ಮಾತನಾಡುತ್ತಾ, ಜರ್ನಲ್ ಹೇಳಿದ್ದು: “ಬ್ರಿಗ್ಹಾಮ್ ಯಂಗ್ ಯೂನಿರ್ವಸಿಟಿಯಿಂದ ಸಂಗೀತ ಮತ್ತು ಜನಪದ-ನೃತ್ಯ ಗುಂಪುಗಳ ಮೂಲಕ, ಮಾರ್ಮನ್ ಪಂಥವು ಹೆಚ್ಚಿನ ಕಮ್ಯೂನಿಸ್ಟ್ ದೇಶಗಳಲ್ಲಿ ಮಿಶನೆರಿಗಳಿಂದ ಸಾಮಾನ್ಯವಾಗಿ ಎದುರಿಸಲ್ಪಡುವ ಅದುಮು ಮತ್ತು ಅಸಹಕಾರವನ್ನು ದಾಟಿಹೋಗಲು ಶಕವ್ತಾಗಿದೆ.” ಅವರ ನೃತ್ಯ ಮಂಡಲಿಗಳು ರುಮೇನಿಯ, ಚೆಕಸ್ಲೊವೇಕಿಯ, ಹಂಗೆರಿ, ಪೋಲೆಂಡ್, ರಶ್ಯಾ ಮತ್ತು ಚೈನಾ ಹಾಗೂ ಸೌದಿ ಅರೇಬಿಯ, ಲಿಬಿಯ, ಈಜಿಪ್ಟ್, ಜೋರ್ಡನ್, ಸೊಮಾಲಿಯ ಮತ್ತು ಇಸ್ರೇಲಿಗೂ ಹೋಗಿವೆ. ಅದಲ್ಲದೆ, “ಮಾರ್ಮನ್ ಚರ್ಚು ತನ್ನ ಐಶ್ವರ್ಯವನ್ನು ಮಾರ್ಕ್ಸಿಸ್ಟ್ ಮತ್ತು ತೃತೀಯ-ಜಗತ್ತಿನ ದೇಶಗಳೊಳಗೆ ಪ್ರವೇಶಿಸುವ ಸಾಧನೋಪಾಯವಾಗಿ ಉಪಯೋಗಿಸಿದೆ.” ಮಾರ್ಮನ್ ದಾನಗಳಿಂದ ಬೆಂಬಲಿಸಲ್ಪಟ್ಟ ಯೋಜನೆಗಳಲ್ಲಿ ಅಣೆಕಟ್ಟು-ಕಟ್ಟುವಿಕೆ ಮತ್ತು ಬಾವಿ-ತೋಡುವಿಕೆಗಳು ಸೇರಿರುತ್ತವೆ.
ಇಂದಿನ ಭೋಗಪ್ರಿಯ ಮತ್ತು ಹಣದಾಸೆಯುಳ್ಳ ಲೋಕದಲ್ಲಿ, ಅಂಥ ಸಂಗೀತ-ನಾಟ್ಯ ಮತ್ತು ತೆರೆದ-ಹಣಚೀಲ ತಂತ್ರಗಳಿಗೆ ಬಲವಾದ ಆಕರ್ಷಣೆ ಇರುವುದೇನೂ ಆಶ್ಚರ್ಯವಲ್ಲ. (2 ತಿಮೊಥಿ 3:2, 4) ಆದರೆ ನಿಜವಾದ ಕುರಿಸದೃಶರಾದರೋ ಒಳ್ಳೇ ಕುರುಬನಾದ ಯೇಸು ಕ್ರಿಸ್ತನ ದ್ವನಿಯಿಂದ ಆಕರ್ಷಿಸಲ್ಪಡುತ್ತಾರೆ. (ಯೋಹಾನ 10:27) ಆದುದರಿಂದಲೇ ಆತನು ತನ್ನ ಹಿಂಬಾಲಕರಿಗೆ, “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಆಜ್ಞೆಯನ್ನು ಕೊಟ್ಟಾಗ, ಯಾವುದೇ ಸಾಧನದ ಮೂಲಕ ಅಥವಾ ಎಷ್ಟೇ ಖರ್ಚಿನ ಮೂಲಕ ಅದನ್ನು ಮಾಡುವಂತೆ ಹೇಳಲಿಲ್ಲ, ಬದಲಿಗೆ ‘ತಾನು ಆಜ್ಞಾಪಿಸಿದ್ದನ್ನೆಲ್ಲಾ ಪಾಲಿಸುವುದಕ್ಕೆ ಅವರಿಗೆ ಕಲಿಸಿರಿ’ ಎಂದು ಹೇಳಿದನು. (ಮತ್ತಾಯ 28:19, 20) ಈ ಆಜ್ಞೆಯನ್ನು ನಿರ್ವಹಿಸುವುದರಲ್ಲಿ, ಬೈಬಲ್ ಮಟ್ಟಗಳಲ್ಲಿ ಒಪ್ಪಂದಮಾಡಿಕೊಳ್ಳಲು ಆಸ್ಪದವಿರುವುದಿಲ್ಲ. (w92 4/1)