ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 6/1 ಪು. 32
  • ಯೆಹೋವನ ಸಾಕ್ಷಿಗಳೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಸಾಕ್ಷಿಗಳೋ?
  • ಕಾವಲಿನಬುರುಜು—1992
ಕಾವಲಿನಬುರುಜು—1992
w92 6/1 ಪು. 32

ಯೆಹೋವನ ಸಾಕ್ಷಿಗಳೋ?

ಮೇಲಿನ ಪ್ರಶ್ನೆಯು ಫಿನ್ನಿಷ್‌ ಭಾಷೆಯ ಬುಲೆಟಿನ್‌ ಆಫ್‌ ದ ಯೂನಿರ್ವಸಿಟಿ ಆಫ್‌ ಹೆಲ್ಸಿಂಕಿಯಲ್ಲಿ ಒಂದು ಮೇಲ್ಬರಹವಾಗಿ ಪ್ರಕಟವಾಗಿತ್ತು. ಮೇಲ್ಬರದ ಕೆಳಗೆ ಪ್ರೊಫೆಸರ್‌ ಯೋರ್ಮ ಪಾಲೊ ಇವರಿಂದ ಬರೆಯಲ್ಪಟ್ಟ ಒಂದು ಪತ್ರವಿತ್ತು, ಅದು ಅಂಶಿಕವಾಗಿ ಅಂದದ್ದು: “ಬುಲೆಟಿನ್‌ನ ಮುಖಪುಟದಲ್ಲಿ ಮುದ್ರಿಸಲ್ಪಟ್ಟ ನಮ್ಮ ಯೂನಿರ್ವಸಿಟಿಯ ಮುದ್ರೆಯನ್ನು ನಾನು ಹತ್ತಿರದಿಂದ ನೋಡಿದೆ. ಮೇಲ್ಭಾಗದ ಅರ್ಧದ ನಡುವಿನಲ್ಲಿ ಹಿಬ್ರೂ ಪದವೊಂದು ನನಗೆ ಕಂಡಿತು, ಅದರ ಅರ್ಥವೇನೆಂದು ನನ್ನ ಒಬ್ಬ ಯೆಹೂದಿ ಅತಿಥಿಯನ್ನು ನಾನು ಕೇಳಿದೆ. ಹಿಬ್ರೂ ಭಾಷೆ ತಿಳಿದಿರುವ ಈ ಪಂಡಿತರಿಗೆ ಅನುಸಾರವಾಗಿ, ಆ ಶಬ್ದವು ಫಿನ್ನಿಷ್‌ ಭಾಷೆಯಲ್ಲಿ ‘ಯೆಹೋವ’ ಎಂದಾಗಿದೆ.

ಈ ಫಿನ್ನಿಫಷ್‌ ಯೂನಿರ್ವಸಿಟಿ ಮುದ್ರೆಯ ಮೇಲೆ ದೇವರ ವೈಯಕ್ತಿಕ ಹೆಸರಿನ ಇರುವಿಕೆಯು ಕೆಲವರನ್ನು ಆಶ್ಚರ್ಯಗೊಳಿಸಿದೆ. ವಾಸ್ತವದಲ್ಲಿ ಯೂನಿರ್ವಸಿಟಿಯು 350 ವರ್ಷ ಹಳೆಯದ್ದಾಗಿದ್ದರೂ, ಅದು ಸ್ಥಾಪನೆಗೊಂಡಾಗ ಯೆಹೋವ ಎಂಬ ಹೆಸರು ವಿಸ್ತಾರವಾಗಿ ಪ್ರಸಿದ್ಧವಾಗಿತ್ತು ಮತ್ತು ಯೂರೋಪಿನಲ್ಲೆಲ್ಲೂ ಉಪಯೋಗಿಸಲ್ಪಡುತ್ತಿತ್ತು. ಆ ಹೆಸರು ಆ ಕಾಲಾವಧಿಯ ತಾರೀಕಿನ ಅಗಣಿತ ಸಾರ್ವಜನಿಕ ಕಟ್ಟಡಗಳ ಮೇಲೆ, ನಾಣ್ಯಗಳ ಮೇಲೆ ಮತ್ತು ಮುದ್ರೆಗಳಲ್ಲಿ ಕಂಡುಬರುತ್ತದೆ.—ಡಿವೈನ್‌ ನೇಮ್‌ ದ್ಯಾಟ್‌ ವಿಲ್ಲ್‌ ಎಂಡ್ಯೂರ್‌ ಫಾರೆವರ್‌ ಬ್ರೊಷರ್‌ ನೋಡಿರಿ.

ನಮ್ಮ ಶತಮಾನದಲ್ಲಿ, ಕ್ರೈಸ್ತ ಪ್ರಪಂಚವು ದೇವರ ಹೆಸರನ್ನು ಇನ್ನು ಮುಂದೆ ಉಪಯೋಗಿಸುವುದಿಲ್ಲ, ಮತ್ತು ಅದರಲ್ಲಿದ್ದ ಆ ಆರಂಭದ ಆಸಕ್ತಿ ಬಹುಮಟ್ಟಿಗೆ ಮರೆತುಹೋಗಿದೆ. “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ” ಎಂಬ ಕರ್ತನ ಪ್ರಾರ್ಥನೆಗೆ ಹೊಂದಿಕೆಯಲ್ಲಿ, ಕೇವಲ ಒಂದು ಗುಂಪು ಮಾತ್ರ ಆ ದೈವಿಕ ನಾಮವನ್ನು ಆರಾಧನೆಯಲ್ಲಿ ಉಪಯೋಗಿಸುತ್ತದೆ ಮತ್ತು ಎಲ್ಲಾಕಡೆ ಪ್ರಕಟಪಡಿಸುತ್ತದೆ. (ಮತ್ತಾಯ 6:9) ಆದುದರಿಂದಲೇ ಯೂನಿರ್ವಸಿಟಿ ಮುದ್ರೆಯಲ್ಲಿ ಆ ಹೆಸರು ಗುರುತಿಸಲ್ಪಟ್ಟಾಗ, ಜನರು ಕೂಡಲೇ ನೆನಸಿದ್ದು ಯೆಹೋವನ ಸಾಕ್ಷಿಗಳನ್ನು.

[ಪುಟ 32 ರಲ್ಲಿರುವ ಚಿತ್ರ ಕೃಪೆ]

Yliopisto

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ