ದೇವರ ಹೆಸರು ಪುನಃಸ್ಥಾಪಿಸಲ್ಪಟ್ಟಿತು
“ಯೆಹೂದ್ಯರ ದೇವರು ಮಾತ್ರವಲ್ಲ ಕ್ರೈಸ್ತರ ದೇವರೂ ಆಗಿರುವ ‘JHWH’ ಎಂಬ ದೇವರ ನಾಮವನ್ನು ಒಬ್ಬ ಚಿತ್ರಕಾರನು ಮೂಲತಃ ಎಲ್ಲಿ ಚಿತ್ರಿಸಿದ್ದನೋ ಅಲ್ಲಿಗೆ ಹಿಂತಿರುಗಿಸಲು ಬಹುತರ 60 ವರ್ಷಗಳು ತಗಲಿದವು.” ದಕ್ಷಿಣ ಜರ್ಮನಿಯ ಹೋರ್ಬ್ನಲ್ಲಿರುವ ಪುರಭವನದ ಮುಂಭಾಗದಲ್ಲಿ ದೇವರ ಹೆಸರನ್ನು ಪುನಃಸ್ಥಾಪಿಸುವ ವಿಷಯದಲ್ಲಿ ಹೀಗೆ ಹೇಳಿಕೆಯನ್ನು ಕೊಟ್ಟದ್ದು ಜರ್ಮನ್ ವಾರ್ತಾಪತ್ರಿಕೆ ಷವರ್ಟ್ಸ್ವೆಲರ್ಡ್ ಬೋಟ್. ಆದರೆ ಆ ಹೆಸರನ್ನು ತೆಗೆದದ್ದು ಯಾಕೆ?
ಪುರಭವನದ ಹೊರಭಾಗವನ್ನು ಅಲಂಕೃತಗೊಳಿಸಲು ಅದರ ಮುಂಭಾಗವನ್ನು ಚಿತ್ರಾತ್ಮಕ ದೃಶ್ಯಗಳಿಂದ ಶೃಂಗರಿಸಲಾಯಿತು ಎಂದು ಆ ವಾರ್ತಾಪತ್ರ ವರದಿ ಮಾಡಿದೆ. ಅದರಲ್ಲಿ ದೇವರ ಹೆಸರನ್ನು ಸಂಯೋಜಿಸುವ ನಾಲ್ಕು ಇಬ್ರಿಯ ಅಕ್ಷರಗಳಾದ ಚತುರಕ್ಷರಿ ಪವಿತ್ರಪದವೂ ಸೇರಿತ್ತು.
“ಬೈಬಲ್ನಲ್ಲಿ 6,000 ಕ್ಕಿಂತಲೂ ಹೆಚ್ಚು ಸಾರಿ ಬರುವ ಈ ಹೆಸರು,” ವಾರ್ತಾಪತ್ರವು ಮತ್ತೂ ಹೇಳಿದ್ದು, “‘ಯೆಹೋವ’ ಅಥವಾ ಜರ್ಮನಿಯಲ್ಲಿ ಅದಕ್ಕೆ ಸಮಾನರೂಪದ ಪದವಾಗಿದೆ. ಅದರ ಸರಿಯಾದ ಉಚ್ಚಾರವು ಅಸ್ಪಷ್ಟ ಯಾಕಂದರೆ ಲಿಖಿತ ಹಿಬ್ರೂ ಭಾಷೆಯಲ್ಲಿ ವ್ಯಂಜನಗಳು ಮಾತ್ರವೇ ಅಡಕವಾಗಿದ್ದವು. ಸರ್ವಗಳು ವಾಚಕನಿಂದ ಕೂಡಿಸಲ್ಪಡುತಿದ್ದವು.”
ಆದರೂ 1934ರಲ್ಲಿ, ಆ ಚತುರಕ್ಷರಿಯು “ಪ್ರಸ್ತುತ ಭಾವಾನಶಾಸ್ತ್ರಕ್ಕೆ ಹೊಂದಿಕೆಯಿಲ್ಲದ್ದು,” ಆದಕಾರಣ ಅದನ್ನು ಬಣ್ಣಬಳಿದು ಮುಚ್ಚುವಂತೆ ನಾಝೀ ಪಕ್ಷವು ನಿಶ್ಚೈಸಿತು. ಸಂತೋಷಕರವಾಗಿ, ಆ ಚತುರಕ್ಷರಿಯು ಈಗ ಪುನಃಸ್ಥಾಪಿಸಲ್ಪಟ್ಟಿದೆ. ವಾರ್ತಾಪತ್ರವು ಹೇಳಿದ್ದು: “ಇಂದು ಚಾರಿತ್ರಿಕ ದೃಶ್ಯಗಳಿಂದ, ನಗರದ ಬಿರುದಾವಳಿಗಳ ಫಲಕಗಳಿಂದ ಮತ್ತು ಭಾವಚಿತ್ರಗಳಿಂದ ಅಲಂಕೃತವಾಗಿರುವ [ಪುರಭವನ] ದ ಮುಂಭಾಗವು ಹೋರ್ಬ್ನಲ್ಲಿ ಒಬ್ಬನು ನೋಡಲೇಬೇಕಾದ ದೃಶ್ಯವು.” (w92 2/15)