ರಾಜ್ಯ ಘೋಷಕರ ವರದಿ
ವೆನಿಜುವೆಲಾದಲ್ಲಿ “ಕೊಯ್ಲು”
ಯೇಸು ಒಂದು ಸಂದರ್ಭದಲ್ಲಿ ಸಾರುವ ಕೆಲಸವನ್ನು ವಾರ್ಷಿಕ ಕೊಯ್ಲಿಗೆ ಹೋಲಿಸಿದನು. (ಮತ್ತಾಯ 9:36-38) ಕೊಯ್ಲಿನ ಯಜಮಾನನು ಯೆಹೋವ ದೇವರು, ಮತ್ತು ಭೂಗೋಲದ ಸುತ್ತಲೂ ಕೊಯ್ಲು ನಿಜವಾಗಿಯೂ ಮಹತ್ತಾಗಿದೆ. ಇದರಲ್ಲಿ ಆಗಿಂದಾಗ್ಯೆ ಸೇವೆಯಾಗುತ್ತಿರುವ ವೆನಿಜುವೆಲಾದ ಕ್ಷೇತ್ರವೂ ಸೇರಿದೆ.
ವಾಚ್ಟವರ್ ಸೊಸೈಟಿಯ ಬ್ರಾಂಚ್ ಆಫೀಸು, ಗ್ವಾರಿಕೊ ರಾಜ್ಯದ ಸಬಾನ ಗ್ರಾಂಡೆ ಕ್ಷೇತ್ರದಲ್ಲಿ ಸಾಕ್ಷಿಗಳ ಒಂದು ಗುಂಪು ಕಾರ್ಯನಡಿಸಿದಾಗ ಏನು ಸಂಭವಿಸಿತೆಂದು ವರದಿ ಮಾಡಿದೆ. ಸಾಕ್ಷಿಗಳು ಹೇಳುವುದು: “ನಾವು ಉಳುಕೊಳ್ಳಲಿದ್ದ ಮನೆಯು ಕೂಟಗಳನ್ನು ನಡಿಸಲು ಒಳ್ಳೇ ಸ್ಥಳವಾಗಿದದ್ದರಿಂದ, ಕೂಡಲೇ ಜನರನ್ನು ಅಲ್ಲಿ ಕೂಟಗಳಿಗೆ ಹಾಜರಾಗಲು ನಾವು ಆಮಂತ್ರಿಸ ತೊಡಗಿದೆವು. ಜನರಿಗೆ ಯೆಹೋವನ ಸಾಕ್ಷಿಗಳ ಕುರಿತು ತಿಳಿದಿರಲಿಲ್ಲ. ಶಹರದಲ್ಲಿ ನಾಲ್ಕು ಸೌವಾರ್ತಿಕ ಪಂಗಡಗಳಿದ್ದರೂ, ಬೈಬಲಿಂದ ಕಲಿಯಲು ಜನರು ಆತುರದಿಂದಿದ್ದರು.
“ನಾವು ಬೆಳಗ್ಗೆ ಮೂರು ತಾಸು ಮತ್ತು ಮಧ್ಯಾಹ್ನ ಮೂರು ತಾಸುಗಳ ತನಕ ಸೇವೆ ಮಾಡುತ್ತಾ, ಮನೆಯಿಂದ ಮನೆಗೆ ಸಂದರ್ಶಿಸಿ, ಜನರನ್ನು ಮರುದಿನ ಒಂದು ಕೂಟಕ್ಕೆ ಬರಲು ಆಮಂತ್ರಿಸಿದೆವು. ನಮ್ಮಲ್ಲಿ ಕುರ್ಚಿಗಳಿರಲಿಲ್ಲವಾದ್ದರಿಂದ ಅವರು ತಮ್ಮ ಕುರ್ಚಿಗಳನ್ನು ತರುವಂತೆ ನಾವು ಆಮಂತ್ರಿಸಿದೆವು. ಕೂಟ ಆರಂಭಿಸುವ ಸಮಯವಾದಾಗ, ಜನರು ಬರತೊಡಗಿದರು, ಪ್ರತಿಯೊಬ್ಬನು ಒಂದೊಂದು ಕುರ್ಚಿಯನ್ನು ಹೊತ್ತುಕೊಂಡು ಬಂದರು. ಕೂಟವು ಮುಗಿದಾಗ, ಯಾರು ಉಚಿತ ಮನೆ ಬೈಬಲಭ್ಯಾಸವನ್ನು ಬಯಸುತ್ತಾರೋ ಅವರ ಹೆಸರನ್ನು ಬರೆದಿಡಲು ನಾವು ಬಯಸುತ್ತೇವೆಂದು ಹೇಳಿದೆವು. ಹಾಜರಾದ ಎಲ್ಲಾ 29 ಮಂದಿಯೂ ತಮ್ಮ ಹೆಸರುಗಳನ್ನು ಕೊಡ ಬಯಸಿದರು.
“ಕೊನೆಯ ಸಂದರ್ಶಕನ ಹಿಂದೆ ನಾವು ಬಾಗಲನ್ನು ಮುಚ್ಚುತ್ತಿರುವಾಗ, ಮನೆಯ ಮೂಲೆಯಲ್ಲಿ ಮೂವರು ಪುರುಷರು ನಿಂತಿರುವುದನ್ನು ನಾವು ಗಮನಿಸಿದೆವು. ಸುಮಾರು 9 ಗಂಟೆಯ ಹೊತ್ತಿಗೆ, ನಾವು ಊಟಮಾಡಲು ಸಿದ್ಧಮಾಡುತ್ತಿದ್ದಾಗ, ಅವರು ಮನೇ ಬಾಗಲು ತಟ್ಟಿದರು. ‘ಈ ಊರಿನಲ್ಲಿ ನೀವು ಮಾಡುತ್ತಿರುವ ಸಾರುವ ಕೆಲಸ ಅದೇನು? ಈ ರಾತ್ರಿ ನೀವು ಕೂಟವನ್ನು ನಡಿಸಿದ್ದು ಯಾವ ಕಾರಣಕ್ಕಾಗಿ?’ ಮುಂತಾದ ಪ್ರಶ್ನೆಗಳನ್ನು ಅವರು ಹಾಕಿದರು.
“ಯಾವುದೇ ನಿಯಮನ್ನು ನಾವು ಮೀರಿದೆವೂ ಎಂದು ಕೇಳಿದೆವು ನಾವು. ಇಲ್ಲವೆಂದರು ಅವರು, ಶಹರದ ಮೂರು ಸೌವಾರ್ತಿಕ ಚರ್ಚುಗಳ ಪಾದ್ರಿಗಳು ತಾವು ಎಂದರು. ಆ ಸಂಜೆ ಅವರ ಚರ್ಚುಗಳು ಖಾಲಿಯಾಗಿದ್ದ ಕಾರಣ ಅವರು ಚಿಂತಿತರಾಗಿದ್ದರು. ಅವರನ್ನು ನಾವು ಒಳಗೆ ಕರೆದೆವು ಮತ್ತು ನಮ್ಮ ಕಾರ್ಯವನ್ನು ವಿವರಿಸಿದೆವು. ಕೆಲವು ಸಾಹಿತ್ಯವನ್ನು ಅವರಿಗೆ ನೀಡಿದೆವು ಮತ್ತು ಮುಂದಿನ ಗುರುವಾರ ಹಿಂದೆ ಬರುವಂತೆ ಕೇಳಿಕೊಂಡೆವು.
ಮುಂದಿನ ಗುರುವಾರ ಪಾದ್ರಿಗಳು ಪುನಃ ಬಂದರು ಮತ್ತು ಅವರೊಂದಿಗೆ 22 ಬೇರೆ ವ್ಯಕ್ತಿಗಳು ನಾವೇನನ್ನುತ್ತೇವೋ ಅದಕ್ಕೆ ಕಿವಿಗೊಡಲು ಬಂದಿದ್ದರು. ಪಾದ್ರಿಗಳು ನೆನಸಿದ್ದೇನಂದರೆ ನಾವು ಹೆಂಗಸರಾಗಿದ್ದರಿಂದ ಚರ್ಚಿಸುವುದರಲ್ಲಿ ಅವರಷ್ಟು ಯೋಗ್ಯತೆ ನಮಗಿರಲಿಕ್ಕಿಲ್ಲ ಎಂಬದಾಗಿ. ಆದಾಗ್ಯೂ ನಮ್ಮ ದೃಷ್ಟಿಕೋನದಲ್ಲಿ ಕೂಟವು ಯಶಸ್ವಿಯಾಯಿತು. ಕೊನೆಯಲ್ಲಿ ಬೈಬಲ್ನಿಂದ ಹೆಚ್ಚನ್ನು ಕಲಿಯ ಬಯಸುವವರ ಪಟ್ಟಿಯನ್ನು ನಾವು ಮಾಡ ಬಯಸುತ್ತೇವೆಂದು ವಿವರಿಸಿದೆವು. ಪಾದ್ರಿಗಳ ಸಂಗಡಿಗರಲ್ಲಿ ಹಲವಾರು ಮಂದಿ ಪಟ್ಟಿಯಲ್ಲಿ ಹೆಸರು ಹಾಕಲು ಬಯಸಿದರು, ಮತ್ತು ಕೆಲವರು ನಮ್ಮೊಂದಿಗೆ ಸಾರುವ ಕಾರ್ಯದಲ್ಲಿ ಬರಲೂ ಇಷ್ಟಪಟ್ಟರು!
“ಸಾರುವ ಕಾರ್ಯದಲ್ಲಿ ನಮ್ಮೊಂದಿಗೆ ಭಾಗಿಗಳಾಗುವ ಮುಂಚೆ ಹೆಚ್ಚಿನ ಬೈಬಲ್ ಜ್ಞಾನ ಮತ್ತು ತರಬೇತಿಯು ಅವರಿಗೆ ಬೇಕು ಎಂದು ನಾವು ವಿವರಿಸಿದೆವು. ಪ್ರತಿದಿನವೂ ಜನರು ಮನೆಗೆ ಬರುತ್ತಿದ್ದರು, ಬೈಬಲನ್ನು ತಮಗೆ ವಿವರಿಸುವಂತೆ ಕೇಳಿಕೊಳ್ಳುತ್ತಿದ್ದರು. ಕೆಲವು ಸಾರಿ ರಾತ್ರಿ ಬಹು ವೇಳೆಯ ತನಕ ಅವರೊಂದಿಗೆ ಮಾತಾಡಿಯಾದ ಮೇಲೆ, ಅವರನ್ನು ಮನೆಗೆ ಹೋಗುವಂತೆ ನಾವೇ ಹೇಳಬೇಕಾಗುತ್ತಿತ್ತು. ಕೊನೆಗೆ ನಾವು ಆ ಕ್ಷೇತ್ರವನ್ನು ಬಿಟ್ಟುಹೋಗಬೇಕಾದಾಗ, ಅವರಿಗೆ ತುಂಬಾ ಬೇಸರವಾಯಿತು. ನಾವು ಪುನಃ ಹಿಂದೆಬಂದಾಗ ನಮ್ಮೊಂದಿಗೆ ಸಾರಲು ಬರುವೆವು ಅಂದರು. ಅಷ್ಟರೊಳಗೆ ಬೇಕಾದ ಅವಶ್ಯಕ ಪ್ರಗತಿಗಳನ್ನು ಮಾಡುವೆವೆಂದು ವಚನವಿತ್ತರು.”
ಈ ಸಾಕ್ಷಿಗಳು ಆ ಕ್ಷೇತ್ರವನ್ನು ಬಿಟ್ಟು ಹೋದಾಗ, ಬೈಬಲನ್ನು ಅಭ್ಯಾಸ ಮಾಡ ಬಯಸಿದ್ದ 40 ವ್ಯಕ್ತಿಗಳು ಅಲಿದ್ದರು. ಈ ಆಸಕ್ತ ಜನರ ಹೆಸರುಗಳನ್ನು ಅತಿ ಹತ್ತಿರದ ಅಂದರೆ ಸುಮಾರು 50 ಕಿಲೊಮೀಟರ್ ದೂರದ ಒಂದು ಸಭೆಗೆ ಕೊಡಲಾಯಿತು. ತರುವಾಯ ಇನ್ನೊಂದು ಶಹರದ ಕೆಲವು ಸಾಕ್ಷಿಗಳು ಈ ಊರಿಗೆ ಸ್ಥಳಾಂತರಿಸಿದರು, ಮತ್ತು ಹೀಗೆ ಸುವಾರ್ತೆ ಸಾರುವವರ ಒಂದು ಆಸಕ್ತ ಗುಂಪು ಅಲ್ಲಿ ರೂಪುಗೊಂಡಿದೆ. (w92 2/1)