ಅವೇಕ್! ಇಟಿಲಿಯಲ್ಲಿ ಇನಾಮು ಗಳಿಸಲು ನೆರವಾಯಿತು
ಕಳೆದ ವರ್ಷ ಇಟೆಲಿಯ ಒಬ್ಬ ಹತ್ತು ವಯಸ್ಸಿನ ಶಾಲಾ ಹುಡುಗಿ, “ಭೂಮಿಯು ಮಾತನಾಡ ಶಕವ್ತಾಗಿದ್ದರೆ” ಎಂಬ ಮುಖ್ಯ ವಿಷಯದ ಮೇಲೆ ಒಂದ ಪ್ರಬಂಧ ಬರೆದಳು. ಮುಖ್ಯ ವಿಷಯವು, ಭೂಮಿ ಮತ್ತು ಒಂದು ಮಗುವಿನ ನಡುವಣ ಸಂವಾದದ ರೂಪದಲ್ಲಿ ವಿಕಾಸಮಾಡಲ್ಪಟ್ಟಿತ್ತು, ಭೂಮಿಯು ಅಳುತ್ತಿರುವುದೇಕೆಂದು ಆ ಮಗು ಪ್ರಶ್ನಿಸಿತ್ತು. ಆ ಶಾಲಾ ಹುಡುಗಿ ಉತ್ತರಿಸಿದ್ದು:
“ಭೂಮಿ ಪ್ರತಿಕ್ರಿಯಿಸುತ್ತಾ, ಗಾಜಿನಮನೆಯ ಪರಿಣಾಮವನ್ನು ಉತ್ಪಾದಿಸಿರುವ ಧೂಮಮಬ್ಬಿನಿಂದ ತಾನು ಮಾಲಿನ್ಯಗೊಂಡಿದ್ದೇನೆಂದು ಹೇಳುತ್ತದೆ. ಮಗುವಿನೊಂದಿಗೆ ಮಾತಾಡುವುದನ್ನು ಮುಂದುವರಿಸುತ್ತಾ, ಶೀಘ್ರದಲ್ಲೇ ವಿಷಯಗಳು ಬದಲಾಗುವದೆಂದೂ, ಅದರ ಭವಿಷ್ಯತ್ತು ಉತ್ತಮಗೊಳ್ಳುವದೆಂದೂ ಭೂಮಿ ಹೇಳುತ್ತದೆ, ಆದರೆ ಮನುಷ್ಯನಿಂದಾಗಿ ಅಲ್ಲ. ಭೂಮಿಯ ನಿರೀಕ್ಷೆಯು ಅದರ ನಿರ್ಮಾಣಿಕನಾದ ಸರ್ವಶಕ್ತ ದೇವರಲ್ಲೇ ಇದೆ, ಆತನು ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು.”—ಯೆಶಾಯ 45:18.”
ಆ ಶಾಲಾ ಹುಡುಗಿ ಮತ್ತೂ ಹೇಳಿದ್ದು: “ನಾನು ಈ ಮಾಹಿತಿಯನ್ನು ಅವೇಕ್! ಪತ್ರಿಕೆಯ ಜುಲೈ 22, 1989; ಸಪ್ಟಂಬರ 8, 1989; ಮತ್ತು ಸಪ್ಟಂಬರ 22, 1989ರ ಸಂಚಿಕೆಗಳಿಂದ ಪಡೆದೆ. ಈ ಪತ್ರಿಕೆಗಳಿಗಾಗಿ ನಾನು ಆಭಾರಿ. ದ್ವಿತೀಯ ಇನಾಮು ನನ್ನ ಸಹಪಾಠಿಗೆ ಸಿಕ್ಕಿತು; ಅವನ ತಾಯಿ ನನ್ನ ತಾಯಿಗೆ ಆ ಪತ್ರಿಕೆ ಒದಗಿಸುತ್ತಿದ್ದಳು. ಅವನು ಸಹಾ ಇವೇ ಅವೇಕ್! ಪತ್ರಿಕೆಗಳಿಂದ ಮಾಹಿತಿಯನ್ನು ಹುಡುಕಿ ತೆಗೆದನು.
“ನಮಗೆ ಜ್ಞಾನವನ್ನು ಕೊಡುವ ಈ ಉತ್ತಮ, ನಿಷ್ಕ್ರಷ್ಟ ಹಾಗೂ ಸರಳವಾದ ಸಮಾಚಾರಕ್ಕಾಗಿ ನಾನು ನಿಮಗೆ ಉಪಕಾರ ಹೇಳುತ್ತೇನೆ. ನಾನು ಗಳಿಸಿದ ಇನಾಮಿನ ಮೊತ್ತ 100,000 ಲೀರ [ಸುಮಾರು ರೂ.2,000]. ನಾನೀ ಹಣವನ್ನು ಹೆಚ್ಚು ಪತ್ರಿಕೆಗಳನ್ನು ಮುದ್ರಿಸಲು ಉಪಯೋಗಿಸುವಂತೆ ನಿಮಗೆ ಕಳುಹಿಸುತ್ತೇನೆ.”
ನಿಮ್ಮ ಧಾರ್ಮಿಕ ಮೂಲಗಳು ಯಾವುದೇ ಇರಲಿ, ಅವೇಕ್! ಪತ್ರಿಕೆಯಲ್ಲಿರುವ ಆಕರ್ಷಕ ಲೇಖನಗಳಿಂದ ನೀವೂ ಪ್ರಯೋಜನ ಪಡೆಯುವಿರಿ ಎಂದು ನಮ್ಮ ಅನಿಸಿಕೆ.
ದಯವಿಟ್ಟು ಎಚ್ಚರ! ಪತ್ರಿಕೆಯ ವಾರ್ಷಿಕ ಚಂದಾವನ್ನು ನನಗೆ ಕಳುಹಿಸಿಕೊಡಿರಿ