ವಿಜ್ಞಾನವು ಅದ್ಭುತಗಳನ್ನು ಸುಳ್ಳುಮಾಡಬಲ್ಲದೋ?
ಬೈಬಲಿನ ಅದ್ಭುತಗಳು ನಿಜವಾಗಿ ಸಂಭವಿಸಿದವೋ? ಅನೇಕರು, ಹಲವಾರು ವಿಜ್ಞಾನಿಗಳೂ ಧರ್ಮ ಮುಖಂಡರೂ ಸೇರಿ, ಇಲ್ಲವೆಂದು ಉತ್ತರ ಕೊಡುತ್ತಾರೆ. ಅದ್ಭುತಗಳಲ್ಲಿನ ನಂಬಿಕೆಯು ಹೆಚ್ಚು ಮೂಢಭಕ್ತಿಯ ಯುಗಕ್ಕೆ ಸೇರಿದೆಯೆಂದೂ ಮತ್ತು ಆಧುನಿಕ ವಿಜ್ಞಾನವು ಅವುಗಳ ಸಂಭವನೀಯತೆಯ ಸಾಧ್ಯತೆಯನ್ನು ಸುಳ್ಳೆಂದು ತೋರಿಸಿದೆ ಎಂದೂ ಅವರ ಅನಿಸಿಕೆ. ಆದಕಾರಣ, ಲಂಡನಿನ ದ ಟೈಮ್ಸ್ನಿಂದ ಪ್ರಕಾಶಿತವಾದ ಮತ್ತು ಹಲವಾರು ವಿಜ್ಞಾನಿಗಳಿಂದ ಸಹಿಮಾಡಲ್ಪಟ್ಟ ಕೆಳಗಿನ ಪತ್ರವು ಗಮನಕ್ಕೆ ಅರ್ಹವಾಗಿದೆ. ಅದು ಹೇಳುವುದು:
“ವಿಜ್ಞಾನವನ್ನು ಅದ್ಭುತಗಳ ವಿರುದ್ಧದ ಒಂದು ವಾದವಾಗಿ ಉಪಯೋಗಿಸುವುದು ನ್ಯಾಯ ಸಮ್ಮತವಲ್ಲ. ಅದ್ಭುತಗಳು ಸಂಭವಿಸ ಸಾಧ್ಯವಿಲ್ಲವೆಂದು ನಂಬುವುದು ಅವು ಸಂಭವಿಸಬಲ್ಲವೆಂದು ನಂಬುವಷ್ಟೇ ಸಮವಾದ ಒಂದು ನಂಬಿಕೆಯ ಕ್ರಿಯೆಯಾಗಿದೆ. . . ಅದ್ಭುತಗಳು ಅಭೂತಪೂರ್ವ ಫಟನೆಗಳು. ತತ್ವಜ್ಞಾನದ ಪ್ರಚಲಿತ ಶೈಲಿಗಳು ಅಥವಾ ಅಭಿಪ್ರಾಯ ಮತಗಟೆಗ್ಟಳ ಪ್ರಕಟನೆಗಳು ಏನೇ ಇರಲಿ, (ಪೂರ್ವ ನಿದರ್ಶನೆಗಳ ಅವಲೋಕನೆಯ ಮೇಲೆ ಅಧರಿಸಿರುವ) ವಿಜ್ಞಾನಕ್ಕೆ ಈ ವಿಷಯದ ಮೇಲೆ ಏನೂ ಹೇಳಲಿಕ್ಕಿರದೆಂದು ಒತ್ತಿಹೇಳುವುದು ಪ್ರಾಮುಖ್ಯ. ಅದರ ‘ನಿಯಮಗಳು’ ನಮ್ಮ ಅನುಭವದ ಕೇವಲ ಒಂದು ಸಾಮಾನ್ಯ ಸೂತ್ರ ನಿರೂಪಣೆಗಳು. ನಂಬಿಕೆಯಾದರೋ ಬೇರೆ ಆಧಾರಗಳ ಮೇಲೆ ನೆಲೆಸಿರುತ್ತದೆ.” (ಒತ್ತು ನಮ್ಮದು.) ಹೀಗೆ, ಬೈಬಲಲ್ಲಿ ದಾಖಲೆಯಾಗಿರುವ ಅದ್ಭುತಗಳ ವೃತ್ತಾಂತವನ್ನು ಆಧುನಿಕ ವಿಜ್ಞಾನವು ಸುಳ್ಳೆಂದು ತೋರಿಸಬಲ್ಲ ಯಾವ ಮಾರ್ಗವೂ ಇರಲಾರದು, ನಿಶ್ಚಯ. (w91 10/1)