ರಾಜ್ಯ ಘೋಷಕರ ವರದಿ
‘ಆತ್ಮಿಕ ಹಸಿವೆಯುಳ್ಳವರು ಧನ್ಯರು’
ಯೇಸು ಅಂದದ್ದು: “ಆತ್ಮಿಕ ಅಗತ್ಯತೆಯ ಪ್ರಜ್ಞೆಯುಳ್ಳವರು ಧನ್ಯರು.” (ಮತ್ತಾಯ 5:3, NW) ಅಂಥವರು ದೇವರ ವಾಕ್ಯವಾದ ಬೈಬಲಿನಿಂದ ಜೀವದಾಯಕ ಸಮಾಚಾರವನ್ನು ಹುಡುಕುವರು, ಮತ್ತು ಆ ಜ್ಞಾನವನ್ನು ಪಡೆಯುವ ಮೂಲಕ ಅವರು ನಿತ್ಯಜೀವದ ಕಡೆಗೆ ನಡಿಸಲ್ಪಡುವರು.—ಮತ್ತಾಯ 4:4; ಯೋಹಾನ 17:3.
▫ ಆಫ್ರಿಕದ ಒಂದು ದೇಶದಲ್ಲಿ ಆತ್ಮಿಕವಾಗಿ ಹಸಿದ ವ್ಯಕ್ತಿಯೊಬ್ಬನು, ಮೈ ಬುಕ್ ಆಫ್ ಬೈಬಲ್ ಸ್ಟೋರೀಸ್ ಪುಸ್ತಕದ ಒಂದು ಪ್ರತಿಯನ್ನು ಪಡೆಯುವುದಕ್ಕಾಗಿ ನಾಲ್ಕು ತಾಸುಗಳ ತನಕ ಚಳಿ ಮತ್ತು ಕತ್ತಲೆಯಲ್ಲಿ ನಡೆದನು. ಯೆಹೋವನ ಸಾಕ್ಷಿಗಳು ಸಾರುತ್ತಿದ್ದ ಆ ಹಳ್ಳಿಯನ್ನು ಅವನು ಮುಟ್ಟಿದಾಗ, ಉಳಿದಿದ್ದ ಕಡೇ ಪುಸ್ತಕವೂ ನೀಡಲ್ಪಟ್ಟಿದ್ದನ್ನು ಕಂಡು ತೀರಾ ನಿರಾಶೆಗೊಂಡನು. ಪುಸ್ತಕದ ಅಧಿಕ ಸಂಗ್ರಹವು ತರಲ್ಪಡುವ ತನಕ ಅವನು ಆ ಹಳ್ಳಿಯಲ್ಲಿ ಮೂರು ದಿನಗಳ ತನಕ ಉಳಿದನು. ಮತ್ತು ಕೊನೆಗೆ, ಆ ಉತ್ತಮ ಆತ್ಮಿಕ ಸಮಾಚಾರವು ತನಗೆ ಸಿಕ್ಕಿದ್ದಕ್ಕಾಗಿ ಅವನು ಅತ್ಯಂತ ಸಂತೋಷಗೊಂಡನು.
ಈ ಏಕಾಂತ ಹಳ್ಳಿಯಲ್ಲಿ ತಾವು ತಂಗಿದ್ದ ತಿಂಗಳಲ್ಲಿ ಸಾಕ್ಷಿಗಳು 55 ಪುಸ್ತಕಗಳನ್ನು, 365 ಬ್ರೊಷರುಗಳನ್ನು ಮತ್ತು 145 ಪತ್ರಿಕೆಗಳನ್ನು ನೀಡಿದರು ಮತ್ತು ಅವರಿಗೆ 5 ಚಂದಾಗಳು ದೊರೆತವು. ಅವರು ಅಲ್ಲಿಂದ ಹೊರಟಾಗ, ಅಲ್ಲಿನ ಪ್ರಾಯಸ್ಥರೂ ಮಕ್ಕಳೂ ಇಬ್ಬರೂ ಕೂಡಿ ತಮ್ಮ ಕೆಪೆಲೆ ಬಾಷೆಯಲ್ಲಿ, “ಯೆಹೋವನು ನಿಮ್ಮೊಂದಿಗಿರಲಿ” ಎಂದು ಕೂಗಿ ಕರೆದಾಗ ಅವರು ಭಾವನಾತ್ಮಕವಾಗಿ ಪ್ರೇರಿಸಲ್ಪಟ್ಟರು. ಆಸಕ್ತಿಯನ್ನು ಪುನಃ ಸಂದರ್ಶಿಸುವಂತೆ ಪ್ರಯತ್ನಗಳು ಮಾಡಲ್ಪಡುತ್ತಿವೆ.
ಅದೇ ದೇಶದಲ್ಲಿ ಇನ್ನೊಬ್ಬ ವ್ಯಕ್ತಿ ಸಹಾ ಆತ್ಮಿಕವಾಗಿ ಹಸಿದಿದಳ್ದು. ಆಕೆ ತನ್ನ ಚರ್ಚಿನಲ್ಲಿ ಕೋಶಾಧಿಕಾರಿಯಾಗಿದ್ದಳು ಮತ್ತು ಆ ದೇಶದ ಮನೋರಂಜನೆಯ ಇಲಾಖೆಯ ಅಧಿಕಾರಿಯೂ ಆಗಿದ್ದಳು. ಸಾಕ್ಷಿಗಳು ಅವಳನ್ನು ಸಂದರ್ಶಿಸಿದಾಗ ಆಕೆ, ಕ್ರೈಸ್ತತ್ವಕ್ಕಾಗಿರುವ ಬೈಬಲಿನ ಆವಶ್ಯಕತೆಗಳಲ್ಲಿ ಚರ್ಚು ಹೇಗೆ ತೀರಾ ಹಿಂದೆ ಬಿದದ್ದೆ ಎಂಬದನ್ನು ದುಃಖದಿಂದ ಒಪ್ಪಿಕೊಂಡಳು. ಸತ್ಯಧರ್ಮವನ್ನು ಕಂಡುಕೊಳ್ಳುವದು ಹೇಗೆಂದು ಸಾಕ್ಷಿಗಳು ಅವಳ ಸ್ವಂತ ಬೈಬಲಿನಿಂದ ಆಕೆಗೆ ತೋರಿಸಿಕೊಟ್ಟರು. ಅನಂತರ ಅವಳು ರಾಜ್ಯ ಸಭಾಗೃಹದ ಎರಡು ಕೂಟಗಳಿಗೆ ಹಾಜರಾದಳು. “ನಾನು ಅಲ್ಲಿ ನೋಡಿದ ಮತ್ತು ಕೇಳಿದ ವಿಷಯಗಳು ನಿಜವಾಗಿ ಇದೇ ಸತ್ಯವೆಂಬದನ್ನು ನನಗೆ ಖಾತರಿ ಪಡಿಸಿದವು,” ಎಂದಳಾಕೆ ಆನಂತರ. ಕೂಟಗಳಿಂದ ಮತ್ತು ಅದಕ್ಕೆ ಹಾಜರಾಗಿದ್ದ ಜನರ ನಡವಳಿಕೆಯಿಂದ ಅವಳು ಪ್ರಭಾವಿತಳಾದಳು. ತನಗೆ ಭೇಟಿಕೊಟ್ಟ ಆ ಸಾಕ್ಷಿಗಳು ಹೇಳಿದ ವಿಷಯಗಳು ಅವರು ಕಲ್ಪಿಸಿ ಹೇಳಿದವುಗಳಲ್ಲ, ಬದಲಾಗಿ ನಿಜಸಂಗತಿಗಳೇ ಎಂಬದನ್ನು ಆಕೆ ಕಂಡುಕೊಂಡಳು. ಅಂದಿನಿಂದ ಆಕೆ ಚರ್ಚಿನೊಂದಿಗಿನ ಸಂಬಂಧವನ್ನು ಕಡಿಯಲು ಹೆಜ್ಜೆ ತಕ್ಕೊಂಡಿದ್ದಾಳೆ ಮತ್ತು ಇದು ಆ ಸಮಾಜದಲ್ಲಿ ಒಂದು ಒಳ್ಳೇ ಸಾಕ್ಷಿಯಾಗಿ ಪರಿಣಮಿಸಿದೆ.
▫ ನ್ಯೂ ಕ್ಯಾಲೆಡೊನದ ಒಬ್ಬ ಯುವ ಮಲೆನೇಶ್ಯನ್ ಪ್ರಶ್ನೋತ್ತರ ಉಪದೇಶಿ ಕೂಡಾ ಆತ್ಮಿಕವಾಗಿ ಹಸಿದಿದ್ದನು. ಅವನ ತಾಯಿಯ ಮನೆಯ ಮೇಜಿನ ಮೇಲೆ ದ ಟ್ರುಥ್ ದೇಟ್ ಲೀಡ್ಸ್ ಟು ಇಟರ್ನಲ್ ಲೈಫ್ [ನಿತ್ಯಜೀವಕ್ಕೆ ನಡಿಸುವ ಸತ್ಯ] ಪುಸ್ತಕವು ಅವನಿಗೆ ಸಿಕ್ಕಿತು ಮತ್ತು ಅದರ 2ನೇ ಮತ್ತು 3ನೇ ಅಧ್ಯಾಯಗಳನ್ನು ಅವನು ಓದಿದನು. ಅಲ್ಲಿ ಚರ್ಚಿಸಲ್ಪಟ್ಟ ಬೈಬಲ್ ವಚನಗಳಾದ ವಿಮೋಚನಕಾಂಡ 20:4, 5 ಮತ್ತು ಯೋಹಾನ 4:23, 24 ಅವನ ಹೃದಯವನ್ನು ಸ್ಪರ್ಶಿಸಿದವು. ಆ ವಚನಗಳ ವೀಕ್ಷಣೆಗನುಸಾರ, ಕ್ಯಾಥ್ಲಿಕ್ ಚರ್ಚು ಆರಾಧನೆಯಲ್ಲಿ ಮೂರ್ತಿಗಳ ಉಪಯೋಗವನ್ನು ಮಾಡುವದೇಕೆಂದು ಅವನು ತನ್ನ ಪಾದ್ರಿಯನ್ನು ಕೇಳಿದನು. ಪಾದ್ರಿಯು ಪ್ರಶ್ನೆಗೆ ಉತ್ತರಕೊಡದೆ ಜಾರಿಕೊಳ್ಳ ಪ್ರಯತ್ನಿಸಿದನು. ವ್ಯಕ್ತಿಯು ಬೇರೆ ಹಲವಾರು “ಕ್ರೈಸ್ತ” ಪಂಗಡಗಳನ್ನು ವಿಚಾರಿಸಿ ನೋಡಿದನು ಆದರೆ ಅವನ ಪ್ರಶ್ನೆಗೆ ತೃಪ್ತಿಕರ ಉತ್ತರವು ಸಿಗಲಿಲ್ಲ. ಕೊನೆಗೆ ಅವನು ತನ್ನ ತಾಯಿಯೊಂದಿಗೆ ಯೆಹೋವನ ಸಾಕ್ಷಿಗಳ ಕೂಟವೊಂದಕ್ಕೆ ಹಾಜರಾಗಲು ನಿರ್ಧರಿಸಿದನು, ಆಕೆ ಈವಾಗಲೇ ಸತ್ಯದಲ್ಲಿ ಆಸಕ್ತಿ ತೋರಿಸ ತೊಡಗಿದಳ್ದು. ಸಾಕ್ಷಿಗಳ ನಡುವೆ ಇದ್ದ ಪ್ರೀತಿ ಮತ್ತು ಅವರ ಬೈಬಲಾಧಾರಿತ ಬೋಧನೆಗಳು ಅವನನ್ನು ಅತಿಯಾಗಿ ಪ್ರಭಾವಿಸಿದವು.
ಬಹಳ ದೂರ ಪ್ರಯಾಣಿಸಲಿದ್ದರೂ, ಅವನು ಕ್ರಮವಾಗಿ ಕೂಟಕ್ಕೆ ಬರತೊಡಗಿದನು, ಬೇಗನೇ ಸತ್ಯಕ್ಕಾಗಿ ತನ್ನ ನಿಲುವನ್ನು ತಕ್ಕೊಂಡನು, ಮತ್ತು ದೀಕ್ಷಾಸ್ನಾನವನ್ನೂ ಪಡಕೊಂಡನು. ಅವನೀಗ ಒಬ್ಬ ಶುಶ್ರೂಷಕಾ ಸೇವಕನಾಗಿದ್ದಾನೆ. ಅವನ ತಾಯಿ ಮತ್ತು ಅವನ ಇಬ್ಬರು ಸಹೋದರಿಯರು ಕೂಡಾ ಯೆಹೋವನ ಸಾಕ್ಷಿಗಳಾಗಿದ್ದಾರೆ. ಆ ಯುವಕನು ತನ್ನ ಸ್ವಂತ ಕುಲದ ಜನರಿಗೂ ಸಾರಿದನು ಮತ್ತು ಹಲವಾರು ಬೈಬಲಧ್ಯಯನಗಳನ್ನು ಪ್ರಾರಂಭಿಸಿದನು. ಈಗ ಅವನ ಕುಲದ ಹಲವಾರು ಜನರು ಆ ಕ್ಷೇತ್ರದ ಕೂಟಗಳಿಗೆ ಹಾಜರಾಗುತ್ತಿದ್ದಾರೆ. ಇವೆಲ್ಲಾ ಆದದ್ದು, ಒಬ್ಬ ಯುವಕನು ಮೇಜಿನ ಮೇಲೆ ಬೈಬಲನ್ನು ವಿವರಿಸುವ ಪುಸ್ತಕವನ್ನು ಕಂಡದರ್ದಿಂದ, ಅದನ್ನು ಅಧ್ಯಯನಿಸಿದ್ದರಿಂದ ಮತ್ತು ತಾನು ಕಲಿತ ವಿಷಯಗಳನ್ನು ಗಂಭೀರವಾಗಿ ಅನ್ವಯಿಸಿದರಿಂದಲೇ.
ಒಂದು ಮಹಾ ಆತ್ಮಿಕ ಉಣಿಸುವಿಕೆಯ ಕಾರ್ಯಭಾರವನ್ನು ಯೆಹೋವನು ಇಂದು ನಡಿಸುತ್ತಿದ್ದಾನೆ ಮತ್ತು ಜನ ಸಮುದಾಯವು ಅದರಿಂದ ಪ್ರಯೋಜನ ಪಡೆಯುತ್ತಾ ಇದೆ. ಯೆಶಾಯನು ಇದರ ಕುರಿತು ತಕ್ಕದ್ದಾಗಿಯೇ ಪ್ರವಾದಿಸಿ ಅಂದದ್ದು: “ಇಗೋ, ನನ್ನ ಸೇವಕರು ಊಟ ಮಾಡುವರು, ನೀವು [ಸುಳ್ಳು ಧರ್ಮದ ಸದಸ್ಯರು] ಹಸಿದಿರುವಿರಿ.” (ಯೆಶಾಯ 65:13) ನಮ್ಮ ಆತ್ಮಿಕ ಹಸಿವನ್ನು ತೃಪ್ತಿಪಡಿಸುವುದಕ್ಕಾಗಿ ಯೆಹೋವನ ಒದಗಿಸುವಿಕೆಯಿಂದ ನಾವು ಪ್ರಯೋಜನ ಪಡೆಯುವುದಾದರೆ, ಧನ್ಯರೇ ಸರಿ. (w91 10/1)