ನೀವು ತ್ರಯೈಕ್ಯವನ್ನು ನಂಬಬೇಕೋ?
ದಿ ಸಂಡೇ ಗೀಮ್ಲರ್, ಜಮೈಕ, ವೆಸ್ಟ್ ಇಂಡೀಸ್ನ ಧಾರ್ಮಿಕ ಲೇಖಕನಾದ ಇಯನ್ ಬೇಯ್ನ್, ಯೆಹೋವನ ಸಾಕ್ಷಿಗಳಿಂದ ಇತ್ತೀಚೆಗೆ ಪ್ರಕಟವಾದ ಒಂದು ಬ್ರೋಷರನ್ನು ಚರ್ಚಿಸುತ್ತಾ, ಅಂಶಿಕವಾಗಿ ಅಂದದ್ದು:
“ಸಾಕ್ಷಿಗಳು ಈ ದಸ್ತವೈಜಿಗಾಗಿ ‘ಎ’ ರ್ಯಾಂಕ್ಗೆ ಅರ್ಹರು, ಇದೆಷ್ಟು ಸರಳವಾಗಿ ಬರೆಯಲ್ಪಟ್ಟಿದೆಯೆಂದರೆ ಒಬ್ಬ ಹದಿಹರೆಯದವನೂ ಅದನ್ನು ಓದಶಕ್ತನು—ಅದು ಅತಿಶಯೋಕ್ತಿ ವಿರಹಿತವಾಗಿದ್ದು—ಪ್ರಸಿದ್ಧ ಪಂಡಿತರ ಮತ್ತು ಮೂಲಗಳ ಉದ್ಧರಣೆಗಳಿಂದ ಪೋಣಿಸಲ್ಪಟ್ಟಿದೆ. . . . ನೀವು ತ್ರಯೈಕ್ಯವನ್ನು ನಂಬಬೇಕೋ? ಎಂಬ ಪ್ರಕಾಶನವು ಸಾಕ್ಷಿಗಳ ಒಂದು ಬಹುಚಾತುರ್ಯದ ಹೊಡೆತ ಮತ್ತು ಈಗ ಯಾವ ತ್ರಯೈಕ್ಯವಾದಿಯೂ—ಯಾ ದಯ್ವತವ್ವಾದಿಯೂ—ಸುರಕ್ಷಿತನಲ್ಲ. ತ್ರಯೈಕ್ಯ ಬೋಧನೆಯು ಬೈಬಲ್ನಿಂದ ಬಂದದಲ್ಲ ಎಂದು ತೋರಿಸಲು ಈ ಕಿರುಪುಸ್ತಕವು ಐತಿಹಾಸಿಕ ಮತ್ತು ದೇವಶಾಸ್ತ್ರದ ಮೂಲಗಳಿಂದ ಉಲ್ಲೇಖಗಳ ಮೇಲೆ ಉಲ್ಲೇಖಗಳ ರಾಶಿಯನ್ನೇ ಒದಗಿಸಿಯದೆ. ಅದು ಅಧಿಕೃತ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಹೀಗನ್ನುತ್ತದೆಂದು ಉಲ್ಲೇಖಿಸಿದೆ: ‘ಹೊಸ ಒಡಂಬಡಿಕೆಯಲ್ಲಿ ಸಹಾ ತ್ರಯೈಕ್ಯದ ಸ್ವಷ್ಟ ಬೋಧನೆ ಅಡಕವಾಗಿಲ್ಲವೆಂದು ದೇವಶಾಸ್ತ್ರಜ್ಞರು ಒಪ್ಪುತ್ತಾರೆ.’”
ಬೇಯ್ನ್ ಕೂಡಾ ಅವಲೋಕಿಸಿದ್ದು: “ಮಧ್ಯಮ ಪ್ರಮಾಣದ—ಅಥವಾ ಅದಕ್ಕಿಂತಲೂ ಮೇಲಿನ ಚರ್ಚ್ ಸದಸ್ಯನು ಸಹಾ—ಯೇಸು ದೇವರೆಂಬ ನೋಟದ ವಿರುದ್ಧ ಸಾಕ್ಷಿಗಳಿಂದ ಹೂಡಲ್ಪಟ್ಟ ಈ ಬಲವತ್ತಾದ ಮತ್ತು ಅಧಿಕಾರಯುಕ್ತ ವಾದಗಳನ್ನು ಹೇಗೆ ಉತ್ತರಿಸಬಲ್ಲನೆಂಬದನ್ನು ಕಾಣುವದೇ ಈ ಧಾರ್ಮಿಕ ಲೇಖಕನಿಗೆ ಅತ್ಯಂತ ಕಷ್ಟಕರವು.”
ಈ ಬ್ರೋಷರ್ನ ಪ್ರತಿಯನ್ನು ಪಡೆಯಲು ನೀವು ಇಷ್ಟೈಸುವದಾದರೆ, ದಯವಿಟ್ಟು ಜತೆಯಲ್ಲಿರುವ ಕೂಪನನ್ನು ತುಂಬಿಸಿ ಟಪ್ಪಾಲಿಗೆ ಹಾಕಿರಿ.
ನೀವು ತ್ರಯೈಕ್ಯವನ್ನು ನಂಬಬೇಕೋ? ಎಂಬ 32-ಪುಟದ ಬ್ರೋಷರನ್ನು ಪಡೆಯಲು ನನಗೆ ಇಷ್ಟವಿದೆ. ರೂ.3ನ್ನು ಜತೆಗೂಡಿಸಿದ್ದೇನೆ.
[ಪುಟ 32 ರಲ್ಲಿರುವ ಚಿತ್ರ ಕೃಪೆ]
Musée du Louvre, Paris
Museo Egizio, Turin
Musée des Beaux-Arts de Troyes
Museo Bardini, Florence
Musée du Louvre, Paris